• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಿಶ್ವಗುರುವಾಗುವತ್ತ ಭಾರತ, ರಾಹುಲ್ ಗೆ ಇಲ್ಲಿ ಕಾಣುವುದು 70 ವರ್ಷದ ಕಾಂಗ್ರೆಸ್ ಆಡಳಿತದ ದಾರಿದ್ರ್ಯ ಮಾತ್ರ

ಮನೋರಂಜನ್, ಮಂಗಳೂರು Posted On January 12, 2018


  • Share On Facebook
  • Tweet It

ವಿಶ್ವದಲ್ಲೇ ಭಾರತದ ಕೀರ್ತಿ ಪತಾಕೆ ಹಾರುತ್ತಿದೆ.. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ವಿಶ್ವಾಸಾರ್ಹ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳು, ಅಧ್ಯಯನಗಳೇ ಸಾರುತ್ತಿವೆ. ಆದರೆ ದುರಂತರವೆಂದರೇ ಭಾರತದಲ್ಲಿ 70 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಎಂಬ ಕುಟುಂಬ ಆಧರಿತ ಪಕ್ಷದ ನೇತೃತ್ವ ವಹಿಸಿಕೊಂಡಿರುವ ರಾಹುಲ್ ಗಾಂಧಿ ಎಂಬ ನಾಯಕನಿಗೆ ದೇಶದಲ್ಲಿ ಬರೀ ದಾರಿದ್ರ್ಯವೇ ಕಣ್ಣಿಗೆ ಕಾಣುತ್ತದೆ. ಆದರೆ ಅದನ್ನು ಜವಾಬ್ದಾರಿಯುತ ವಿರೋಧ ಪಕ್ಷದಲ್ಲಿದ್ದುಕೊಂಡು ಸೃಜನಾತ್ಮಕ ಸಲಹೆಗಳನ್ನು ನೀಡುವುದನ್ನು ಬಿಟ್ಟು, ದೇಶದ ಮಾನವನ್ನು ವಿಶ್ವಾದ್ಯಂತ ಹರಾಜು ಹಾಕುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ.

ರಾಹುಲ್ ಗಾಂಧಿ ತಮ್ಮ ರಾಜಕೀಯ ದುರಾಸೆಗಾಗಿ ಇತ್ತೀಚೆಗೆ ಬೆಹ್ರೇನ್ ಗೆ ಭೇಟಿ ನೀಡಿದ್ದ ವೇಳೆ ದೇಶದ ಮಾನವನ್ನು ಮತ್ತೊಮ್ಮೆ ಹರಾಜು ಹಾಕುವ ಮೂಲಕ ತಮ್ಮ ತೆವಲು ತೀರಿಸಿಕೊಂಡಿದ್ದರು. ಭಾರತದಲ್ಲಿ ಗಂಭೀರ ಸಮಸ್ಯೆಗಳಿವೆ ಅವುಗಳನ್ನು ಹೊಡೆದೊಡಿಸಬೇಕಿದೆ ಎಂದು ಅನಿವಾಸಿ ಭಾರತೀಯರ ಸಭೆಯಲ್ಲಿ ಮಾತನಾಡುವ ಮೂಲಕ ಅಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ಮನದಾಳದ ವಿಷ ಕಾರಿದ್ದರು. ಇವರು ದೇಶಕ್ಕೆ ಒಳ್ಳೆಯದಂತೂ ಮಾಡಲಿಲ್ಲ, ಆದರೆ ದೇಶದ ಹೆಸರನ್ನು ಕೆಡಿಸುವ ಎಲ್ಲ ದುಷ್ಕೃತ್ಯಕ್ಕೆ ಕೈ ಹಾಕಿದ್ದಾರೆ ರಾಹುಲ್ ಗಾಂಧಿ.

ಭಾರತದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದು ಬೊಗಳೆ ಬಿಟ್ಟಿದ್ದ ಕಾಂಗ್ರೆಸ್ ಬೆಂಬಲಿತ ಸ್ವಘೋಷಿತ ಬುದ್ಧಿ ಜೀವಿಗಳು ದೇಶದ ಸೌರ್ವಭೌಮತ್ವವನ್ನೇ ಪ್ರಶ್ನಿಸುತ್ತಾರೆ. ಕಾಶ್ಮೀರ ಸ್ವಾತಂತ್ರ್ಯವಾಗಬೇಕು ಎನ್ನುತ್ತಾರೆ, ದೇಶದ ಆತ್ಮ ಸಂಸತ್ ಮೇಲೆ ದಾಳಿ ಮಾಡಿದ ಉಗ್ರ ಅಫ್ಜಲ್ ಗುರುವಿಗೆ ಗಲ್ಲು ಏರಿಸಿದನ್ನು, ಹಿಂಸೆ ಎಂದು ತೌಡು ಕುಟ್ಟುತ್ತಾರೆ.. ಇಂತಹವರ ಬೆಂಬಲಕ್ಕೆ ನಿಂತು ರಾಹುಲ್ ಗಾಂಧಿ ಜೈ ಕಾರ ಹಾಕುತ್ತಾರೆ. ರಾಹುಲ್ ಗೆ ದೇಶದ ಮಾನ ಮರ್ಯಾದೆಗಿಂತ ತನ್ನ ಕೊಳಕು ರಾಜಕೀಯವೇ ಹೆಚ್ಚು ಎಂಬಂತಾಗಿದೆ.

ಮೋದಿ ಸಾಧನೆ ಸಾರುತ್ತಿವೆ ಈ ಅಂಶಗಳು

  • ವಿಶ್ವದ ಪ್ರಬಲ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.
  • ಮೋದಿ ಆರ್ಥಿಕ ನೀತಿಗಳು ಭವಿಷ್ಯದ ದೃಷ್ಟಿಯಿಂದ ಭಾರತಕ್ಕೆ ಬಲ ತರುತ್ತಿವೆ: ಐಎಂಎಫ್ ಅಧ್ಯಕ್ಷ
  • ಜಿಎಸ್ ಟಿ, ನೋಟ್ಯಂತರ ಕ್ರಾಂತಿಕಾರಿ ನಿರ್ಧಾರಗಳು, ಭವಿಷ್ಯದಲ್ಲಿ ಆರ್ಥಿಕ ಬಲ ನೀಡಲಿವೆ
  • ಮೋದಿ ಜತೆ ಸಂಬಂಧ ಬೆಳೆಸುವುದು ಉತ್ತಮ ವಿಚಾರ : ಡೊನಾಲ್ಡ್ ಟ್ರಂಪ್
  • ಮೋದಿ ಪ್ರಭಾವಕ್ಕೆ ಒಳಗಾಗಿ ಅಮೆರಿಕದಲ್ಲಿ ಸಂಕ್ರಾಂತ್ರಿಗೆ ರಜೆ ಘೋಷಿಸಿದ ಅಮೆರಿಕ ಸಂಸತ್
  • ಅಮೆರಿಕ ಭಾರತದ ಮುಖವಾಣಿ ಎನ್ನುವ ಹೇಳಿಕೆ ವಿರೋಧಿ ಪಾಕ್ ಸಚಿವನ ಬಾಯಿಯಿಂದ ಬರುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ.
  • ಕೇಂದ್ರ ಸರ್ಕಾರದ ಕಟ್ಟು ನಿಟ್ಟಿನ ಕ್ರಮಗಳಿಂದ ಭಯೋತ್ಪಾದನೆಯನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
  • ಜನವರಿ 26 ಗಣರಾಜ್ಯೋತ್ಸವದಂದು 10 ಏಷಿಯಾನ ರಾಷ್ಟ್ರಗಳ ಪ್ರಮುಖರನ್ನು ಆಹ್ವಾನಿಸಿ, ಭಾರತದ ಕೀರ್ತಿ ವಿಶ್ವಕ್ಕೆ ಸಾರುತ್ತಿದ್ದಾರೆ.
  • ಭಾರತದ ಸರ್ಕಾರದ ಒತ್ತಡ ಮತ್ತು ಸಂದೇಶಕ್ಕೆ ಹೆದರಿರುವ ಪಾಕಿಸ್ತಾನ ಸರ್ಕಾರ ಭಯೋತ್ಪಾದನೆ ನಿಯಂತ್ರಣಕ್ಕೆ ಕಾರ್ಯ ನಿರ್ವಹಿಸುತ್ತಿದೆ.

ಹೀಗೆ ಸಾಲು ಸಾಲು ಶ್ಲಾಘನೆಗಳು ಭಾರತಕ್ಕೆ ಮತ್ತು ಮೋದಿ ನೇತೃತ್ವದ ಸರ್ಕಾರಕ್ಕೆ ಬರುತ್ತಿದ್ದರೆ, ರಾಹುಲ್ ಗಾಂಧಿ ಮತ್ತು ಸ್ವಘೋಷಿತ ಬುದ್ಧಿ ಜೀವಿಗಳು ದೇಶದಲ್ಲಿ ಅಶಾಂತಿ ಇದೆ, ಅಸಹಿಷ್ಣುತೆ ಇದೆ, ಮಾನವ ಹಕ್ಕುಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಬೊಬ್ಬಿರಿಯುತ್ತಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಂತ ಅಪ್ರಬುದ್ಧ ರಾಜಕಾರಣಿ ಮೋದಿ ವಿರುದ್ಧ ಮಾತನಾಡುವ ಮೂಲಕ ತನ್ನ ಮಾತಿನ ತೆವಲು ತೀರಿಸಿಕೊಳ್ಳುತ್ತಿದ್ದರೇ, ಅತ್ತ ವಿಶ್ವ ಸಮುದಾಯ ಮೋದಿಗೆ ಜೈ ಕಾರ ಹಾಕುತ್ತಾರೆ.

ದೇಶದಲ್ಲಿ ತಮ್ಮ ರಾಜಕೀಯದ ದುರಾಸೆಗಾಗಿ ದೇಶದ ಮಾನ ಮರ್ಯಾದೆ ಹಾಕುವವರಿಗೆ ದೇಶದ ಜನ ತಕ್ಕ ಉತ್ತರ ನೀಡುತ್ತಿದ್ದು, ವಿಶ್ವ ಸಮುದಾಯವೂ ಜೈ ಕಾರ ಹಾಕುತ್ತಿದೆ. ಇದೇ ಅಲ್ಲವೇ ಮೋದಿ ಕಾರ್ಯಗಳಿಗಿರುವ ತಾಕತ್ತು.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ಮನೋರಂಜನ್, ಮಂಗಳೂರು May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ಮನೋರಂಜನ್, ಮಂಗಳೂರು May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search