ಕಾಶ್ಮೀರದಲ್ಲಿ ಕಲ್ಲೆಸೆಯುವವರ ಮಧ್ಯೆ ಅರಳಿದ ಅಂತಾರಾಷ್ಟ್ರೀಯ ಪ್ರತಿಭೆ ಮಾರಿಯಾ ಜಾನ್
ಕಾಶ್ಮೀರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಪ್ರತ್ಯೇಕವಾದಿಗಳ ಕಿರುಕುಳ, ಬೆಂಕು ಹಚ್ಚುವ ಕಾರ್ಯ. ಭಯೋತ್ಪಾದಕರ ಕರಿನೆರಳು, ಮೂಲಭೂತವಾದಿ ಧರ್ಮಾಂಧರ ಅಟ್ಟಹಾಸ, ಪಾಕಿಸ್ತಾನದ ನಿರಂತರ ಕುತಂತ್ರದ ಮಧ್ಯೆ ಅಲ್ಲಿನ ಯುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಅದೇಷ್ಟೋ ಯುವಕರು ಧರ್ಮಾಂಧರ ಮೋಹ ಪಾಶಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಕಲ್ಲೆಸುವುದರಲ್ಲೇ ವ್ಯರ್ಥ ಮಾಡುತ್ತಿದ್ದಾರೆ. ಆದರೆ ಇಂತಹ ಸಂಕಷ್ಟದ, ಧರ್ಮಂಧತೆಯ ಪಾಶಕ್ಕೆ ಸಿಲುಕಿರುವ ಜಮ್ಮು ಕಾಶ್ಮೀರದಿಂದಲೇ ಯುವತಿಯೊಬ್ಬಳು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ನೇಮಕವಾಗಿದ್ದಾಳೆ.
ಜಮ್ಮು ಕಾಶ್ಮೀರದಲ್ಲಿ ಜಲಕ್ರೀಡೆಯ ಮೂಲಕ ಹೆಸರುವಾಸಿಯಾಗಿರುವ ಮಾರಿಯಾ ಜಾನ್ ಇದೀಗ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಧಿನಿಧಿಸಲಿದ್ದಾರೆ. ಶ್ರೀನಗರದ ಖನ್ಯಾರ್ ಪ್ರದೇಶದ ನಿವಾಸಿಯಾಗಿರುವ ಮಾರಿಯಾ ಕಿರಿಯರ ಮತ್ತು ಹಿರಿಯರ ವಿಭಾಗ ರಾಷ್ಟ್ರಮಟ್ಟದ ಪೋಲೋ ಮತ್ತು ಡ್ರ್ಯಾಗನ್ ಬೋಟ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾಳೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ ಯುವತಿಯನ್ನು ನೋಡಿ ನಾನು ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ನಿರ್ಧರಿಸಿದ್ದೆ. ಅದಕ್ಕಾಗಿ ನೆಹರು ಪಾರ್ಕನಲ್ಲಿರುವ ಜಲಕ್ರೀಡೆ ವಿಭಾಗದಲ್ಲಿ ತರಬೇತಿಗೆ ಸೇರ್ಪಡೆಯಾದೆ. ನನ್ನ ಕುಟುಂಬವನ್ನು ಒಪ್ಪಿಸುವುದೇ ಕಷ್ಟವಾಗಿತ್ತು. ನಾನು ಮಹಿಳೆ ಅದನ್ನೇಲ್ಲಾ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದರು. ನಂತರ ನನ್ನ ಕುಟುಂಬದವರನ್ನು ಒಪ್ಪಿಸಿದೆ.
ಸಾಮಾಜಿಕ ಕಟ್ಟುಪಾಡು: ಕೆಲವು ಮೂಲಭೂತವಾದಿಗಳಿಂದ ಮಾರಿಯಾ ಕ್ರೀಡೆಗೆ ವಿರೋಧ ವ್ಯಕ್ತವಾಗಿತ್ತು. ಮಾರಿಯಾ ಕ್ರೀಡೆ ಆಡುವುದು ಸರಿಯಲ್ಲ ಎಂಬ ವಿತಂಡವಾದಗಳು ಕೇಳಿ ಬಂದಿದ್ದವು. ಆದರೆ ಮಾರಿಯಾ ಎಲ್ಲವನ್ನು ಎದುರು ಹಾಕಿಕೊಂಡು ತನ್ನ ಗುರಿಯನ್ನು ಮುಟ್ಟಲು ಸಫಲರಾಗಿದ್ದಾರೆ.
ಪಿವಿ ಸಿಂಧು ಸ್ಫೂರ್ತಿ: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ನನಗೆ ಮಾದರಿ. ಸಿಂಧು ಒಲಿಪಿಂಕ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದು, ನನ್ನಲ್ಲಿ ಹೊಸ ಸ್ಫೂರ್ತಿ ನೀಡಿತ್ತು. ಇದೀಗ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದಕ್ಕೆ ಮಾರಿಯಾ ಖುಷಿ ವ್ಯಕ್ತಪಡಿಸಿದ್ದಾರೆ.
ಯುವತಿಯರೇ ಮುಂದೆ ಬನ್ನಿ: ಯುವತಿಯರು ಯಾವುದೇ ಕ್ರೀಡೆಯಲ್ಲೂ ಹಿಂದುಳಿದಿಲ್ಲ ಎಂಬುದನ್ನು ತೋರಿಸಬೇಕು. ಯುವತಿಯರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನಮ್ಮ ಕಾಶ್ಮೀರದ ಮುಖ್ಯಮಂತ್ರಿ ಮಹೆಬೂಬಾ ಮುಫ್ತಿ ಕೂಡಾ ಮಹಿಳೆಯೆ. ಜಲಕ್ರೀಡೆಗಳಲ್ಲಿ ಮಹಿಳೆಯರು ಉತ್ತರ ಪ್ರದರ್ಶನ ತೋರಬಹುದು. ಯುವತಿಯರು ಮುಂದೆ ಬರಬೇಕು ಎಂದು ಮಾರಿಯಾ ಮನವಿ ಮಾಡಿದ್ದಾರೆ.
Leave A Reply