ಗೋಮೂತ್ರದಿಂದ ಔಷಧಿ ತಯಾರಿಸಲು ಮುಂದಾದ ಯೋಗಿ ಸರ್ಕಾರ
ಲಖನೌ: ಹಲವು ರೋಗಗಳಿಗೆ ರಾಮಬಾಣವಾಗಿರುವ ಗೋಮೂತ್ರದ ಮೂಲಕ ಔಷಧ ತಯಾರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ನಾನಾ ರೋಗಗಳಿಗೆ ಚಿಕಿತ್ಸೆ ನೀಡುವ ಎಂಟು ಔಷಧಗಳನ್ನು ಈಗಾಗಲೇ ಯೋಗಿ ಸರ್ಕಾರ ಸಿದ್ಧಪಡಿಸಿದೆ. ದೇಶದ ಹಲವು ಖಾಸಗಿ ಸಂಸ್ಥೆಗಳು ಮತ್ತು ಫಾರ್ಮಸಿಗಳು ಗೋಮೂತ್ರದಿಂದ ಔಷಧ ತಯಾರಿಸುತ್ತಿವೆಯಾದರೂ ಸರಕಾರವೇ ಪ್ರೋತ್ಸಾಹಿಸುತ್ತಿರುವುದು ಇದೇ ಮೊದಲು.
ಆಯುಷ್ ಇಲಾಖೆ ನಿರ್ದೇಶಕ ಡಾ. ಆರ್.ಆರ್. ಚೌಧರಿ ಮಾತಾಡಿ, ಆರಂಭದಲ್ಲಿ ಗೋಮೂತ್ರದಿಂದ ಸ್ವಚ್ಛತೆ ಮಾಡುವ ವಸ್ತುಗಳನ್ನು ತಯಾರಿಸುವ ಪ್ರಸ್ತಾವನೆ ಹೊಂದಲಾಗಿತ್ತು. ಆದರೆ ನಂತರ ಔಷಧಗಳನ್ನು ಸಿದ್ಧಡಿಸಲು ಮುಂಎದಾಗಿದೆ ಎಂದು ತಿಳಿಸಿದ್ದಾರೆ. ಆಯುರ್ವೇದ ಇಲಾಖೆಯು ಲಖನೌ ಮತ್ತು ಪಿಲಿಭಿತ್‌ನಲ್ಲಿರುವ ಎರಡು ಸರಕಾರಿ ಫಾರ್ಮಸಿ ಮತ್ತು ಖಾಸಗಿ ಘಟಕಗಳ ಸಹಯೋಗದಲ್ಲಿ ಔಷಧಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಬಾಂಡಾ, ಝಾನ್ಸಿ, ಮುಜಫ್ಫರ್ ನಗರ, ಅಲಹಾಬಾದ್, ವಾರಾಣಸಿ, ಬರೇಲಿ, ಲಖನೌ ಮತ್ತು ಪಿಲಿಭಿತ್‌ಗಳಲ್ಲಿ ರುವ ಎಂಟು ಮೆಡಿಕಲ್ ಕಾಲೇಜುಗಳಲ್ಲಿ ಆಯುರ್ವೇದ ಕೋರ್ಸ್ ಆರಂಭಿಸಲಾಗಿದ್ದು, ಇಲ್ಲಿಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಬರುತ್ತಾರೆ. ಲೌಖನೌ ಆಸ್ಪತ್ರೆಯಗೆ ನಿತ್ಯ 700 ಜನರು ಔಷಧ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದುವರೆಗೆ ಲಿವರ್ ಸಮಸ್ಯೆ, ಗಂಟು ನೋವು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ 8 ಔಷಧ ತಯಾರಿಸಿದ್ದೇವೆ. ಇತರ ಸಮಸ್ಯೆ ಮತ್ತು ರೋಗಗಳಿಗೆ ಗೋಮೂತ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಆರ್.ಆರ್. ಚೌಧರಿ ತಿಳಿಸಿದ್ದಾರೆ.
ಆದಿತ್ಯನಾಥ ಸರಕಾರ ಏಳು ಜಿಲ್ಲೆಗಳು ಮತ್ತು 16 ನಗರ ಪ್ರದೇಶಗಳಲ್ಲಿ ತಲಾ 1000 ಸಾಮರ್ಥ್ಯದ ಗೋಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮುಂದೆ ಪ್ರತಿ ಬ್ಲಾಕ್‌ನಲ್ಲಿ ಒಂದು ಗೋಶಾಲೆ ನಿರ್ಮಾಣವಾಗಲಿದೆ. ಸರಕಾರಿ ಭೂಮಿಯ ಅತಿಕ್ರಮಣವನ್ನು ತೆರವುಗೊಳಿಸಿ ಗೋಶಾಲೆಗೆ ನೀಡಲು ಆದಿತ್ಯನಾಥ್ ಸರಕಾರ ಚಿಂತಿಸುತ್ತಿದೆ.
Leave A Reply