35 ದಿನದಲ್ಲೇ 240 ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಪಿ ಪಾಕಿಸ್ತಾನ!
ಶ್ರೀನಗರ: ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವ ಹಾಗೂ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಬೆಂಬಲದಿಂದ ಪಿಡಿಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಉಗ್ರರ ಸಂಹಾರವಾಗುತ್ತಿದೆ ಎನ್ನುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ತನ್ನ ಎಂದಿನ ಕುತುಂತ್ರ ಬುದ್ಧಿಯನ್ನು ಮುಂದುವರಿಸಿದೆ.
ಹೌದು, ಕಳೆದ 35 ದಿನಗಳಲ್ಲಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಇನ್ನಿಲ್ಲದ ಕುತಂತ್ರ ಮಾಡುತ್ತಿದ್ದು, ಈ ಕಿರು ಅವಧಿಯಲ್ಲೇ ಸುಮಾರು 240 ಬಾರಿ ಕದನ ವಿರಾಮ ಉಲ್ಲಂಘಿಸಿ ಭಾರತದೊಳಕ್ಕೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಇದು ಕಳೆದ ವರ್ಷಗಳಲ್ಲೇ ಅತಿ ಕಡಿಮೆ ಅವಧಿಯಲ್ಲೇ ಹೆಚ್ಚು ಬಾರಿ ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿದೆ ಎಂದು ದಾಖಲಾಗಿದೆ. 2016ರಲ್ಲಿ ಪಾಕಿಸ್ತಾನ 228 ಬಾರಿ ಹಾಗೂ 2017ರಲ್ಲಿ ಬರೊಬ್ಬರಿ 860 ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಅಂದರೆ, ಈ 35 ದಿನದಲ್ಲೇ ಪಾಕಿಸ್ತಾನ 240 ಬಾರಿ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ ಎಂದು ತಿಳಿದುಬಂದಿದೆ.
ಆದರೂ ಭಾರತೀಯ ಸೈನ್ಯ ಪಾಕಿಸ್ತಾನದ ಯಾವ ದಾಳಿಗೂ ಜಗ್ಗದೇ ಪ್ರತಿ ದಾಳಿ ಮಾಡುತ್ತಿದ್ದು, ಮುಂದೆ ಮಾಡುವ ಯಾವ ದಾಳಿಯನ್ನೂ ನಾವು ಹಿಮ್ಮೆಟ್ಟಿಸದೆ ಬಿಡುವುದಿಲ್ಲ ಎಂದು ಸೇನೆಯ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕದನ ವಿರಾಮ ಉಲ್ಲಂಘಿಸಿ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಮಾಡಿದ್ದ ದಾಳಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ದರು. 2017ರಲ್ಲಿ ಭಾರತ 209ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ. ಇಷ್ಟಾದರೂ ಪಾಕಿಸ್ತಾನ ಪಾಠ ಕಲಿತಿಲ್ಲ.
Leave A Reply