ಮಂಗಳೂರು ಸಹಿತ ಕರಾವಳಿಯ ಮೈದಾನಗಳಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದಾಗ ನಿಮಗೆ ಅಲ್ಲಿ ಹಿಂದಿ ಭಾಷೆಯ ಕಮೆಂಟರಿ ಕೇಳಿರಬಹುದು. ಅಸ್ಬಲಿತ ಹಿಂದಿ, ರಾಷ್ಟ್ರೀಯ ವಾಹಿನಿಗಳಲ್ಲಿ ಅಲ್ಲಿನ ಕಮೆಂಟೆಂಟರ್ಸ್ ಮಾತನಾಡುವ ಶೈಲಿ ಕೇಳಿ ರೋಮಾಂಚನ ಆಗಿರಬಹುದು. ಮ್ಯಾಚ್ ನಡೆಯುತ್ತಿರುವುದು ಮಂಗಳೂರಿನಲ್ಲಾದರೂ ಕಮೆಂಟರಿಯಲ್ಲಿ ಹಿಂದಿಯ ಉತ್ಕ್ರಷ್ಟ ಶಬ್ದಗಳ ಮೂಲಕ ಕಮೆಂಟರಿಗೆ ತನ್ನದೇ ಹಿರಿಮೆ ತಂದುಕೊಟ್ಟ ಆ ಧ್ವನಿಯ ಒಡೆಯನ ಹೆಸರು ಅಜಯ್ ಪಿ ರಾವ್.
ಅಜಯ್ ರಾವ್ ಹುಟ್ಟಿದ್ದು ಮುಂಬೈಯಲ್ಲಿ ನಲ್ವತ್ತು ವರ್ಷಗಳ ಹಿಂದೆ. ಅವರಿಗೂ ಹಿಂದಿಗೂ ಇರುವ ನೇರ ಸಂಬಂಧ ಅಷ್ಟು ಮಾತ್ರ. ತಮ್ಮ ಜೀವಿತಾವಧಿಯ 30 ವರ್ಷಗಳನ್ನು ಅವರು ಕಳೆದಿರುವುದು ತುಳುನಾಡಿನಲ್ಲಿ. ಆದರೆ ಕ್ರಿಕೆಟ್ ಮ್ಯಾಚ್ ಗಳು ನಡೆಯುವಾಗ ಅವರ ಕಮೆಂಟರಿ ಇಲ್ಲದೇ ಇದ್ದರೆ ಪಂದ್ಯಗಳಿಗೆ ಜೀವಕಳೆ ಬರುವುದಿಲ್ಲ ಎನ್ನುವ ಮಟ್ಟಿಗೆ ಅವರ ಕಮೆಂಟರಿ ಫೇಮಸ್. 20 ವರ್ಷಗಳ ಹಿಂದೆ ಎಲ್ಲಾ ಯುವಕರಂತೆ ಅವರು ಕೂಡ ಕ್ರಿಕೆಟಿನತ್ತ ಆಕರ್ಷಿತರಾಗಿದ್ದರು. ಕ್ರಿಕೆಟ್ ಆಡಲು ಮೈದಾನದಲ್ಲಿ ಇಳಿಯುತ್ತಿದ್ದ ಅಜಯ್ ರಾವ್ ಒಂದು ದಿನ ಹವ್ಯಾಸಕ್ಕೆನ್ನುವಂತೆ ಕಮೆಂಟರಿ ಮಾಡಲು ಶುರು ಮಾಡಿದರು. ಆವತ್ತು ಅವರ ಕಮೆಂಟರಿಗೆ ಮೆಚ್ಚುಗೆಯ ನುಡಿಗಳು ಬಂದವು. ಅವರು ಮೊತ್ತ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಮೆಂಟರಿ ಮಾಡಲು ಪ್ರಾರಂಭಿಸಿದ್ದು ಮಂಗಳೂರಿನ ಮರೋಳಿ ಮೈದಾನದಲ್ಲಿ. ಅಲ್ಲಿ ಅವರೊಂದಿಗೆ ಇದ್ದ ಆಗಿನ ದಿನಗಳ ಖ್ಯಾತ ಹಿಂದಿ ಕಮೆಂಟರ್ ಖಾಲಿದ್ ಅವರು ಯುವಕ ಅಜಯ್ ಹಿಂದಿಯಲ್ಲಿ ಕಮೆಂಟರಿ ಹೇಳುವುದು ಕೇಳಿ ಆಶ್ಚರ್ಯಗೊಂಡರು. ಅವರಿಗೆ ಒಂದಿಷ್ಟು ಸಲಹೆಗಳನ್ನು ನೀಡಿದರು. ಅಲ್ಲಿಂದ ಅಜಯ್ ಕಮೆಂಟರಿಯನ್ನು ಗಂಭೀರವಾಗಿ ತೆಗೆದುಕೊಂಡರು.
ಹಿಂದಿ ಕಮೆಂಟರಿ ಇಲ್ಲಿ ಅಪರೂಪ…
ಹಿಂದಿಯಲ್ಲಿ ಕಮೆಂಟರಿ ಮಾಡುವವರು ಆಗ ಕಡಿಮೆ ಇದ್ದರು. ಅಷ್ಟೇ ಅಲ್ಲ, ಹಿಂದಿ ಮಾತನಾಡುವ ಕಮೆಂಟೆಟರ್ಸ್ ಅವರು ಮಾತನಾಡಿದ್ದೇ ಹಿಂದಿ ಎನ್ನುವಂತಾಗಿತ್ತು. ವೈವಿಧ್ಯತೆ ಇರಲಿಲ್ಲ. ಅದನ್ನು ಗಮನಿಸಿದ ಅಜಯ್ ರಾವ್ ತಾನು ವಿಭಿನ್ನವಾಗಿ ನಿಲ್ಲಬೇಕಾದರೆ ಹಿಂದಿ ಭಾಷೆಯ ಮೇಲೆ ಇನ್ನೂ ಹೆಚ್ಚಿನ ಹಿಡಿತ ಬೇಕು ಎನ್ನುವುದನ್ನು ಅರಿತುಕೊಂಡರು. ಹಿಂದಿ ಭಾಷೆಯ ಪುಸ್ತಕಗಳನ್ನು ಓದಲು ಶುರು ಮಾಡಿದರು. ಆ ಕಾಲದಲ್ಲಿ ರೇಡಿಯೋಗಳಲ್ಲಿ ಬರುತ್ತಿದ್ದ ಕಮೆಂಟರಿಗಳನ್ನು ಕೇಳಿದರು. ಯಾವ ಶಬ್ದವನ್ನು ಎಲ್ಲಿ ಬಳಸಿದರೆ ಜನರಿಗೆ ಖುಷಿಯಾಗುತ್ತದೆ ಎಂದು ಅರ್ಥ ಮಾಡಿಕೊಂಡರು. ತಾವು ಒಂದು ಪಂದ್ಯದಲ್ಲಿ ಹೇಳಿದ್ದನ್ನು ರೆಕಾರ್ಡ್ ಮಾಡಿಕೊಂಡು ನಂತರ ಕೇಳಲು ಶುರು ಮಾಡಿದರು. ಎಲ್ಲಿ ಬದಲಾವಣೆ ತರಬೇಕಿದೆ, ಎಲ್ಲಿ ಸುಧಾರಣೆ ತರಬೇಕಿದೆ ಎಂದು ಅಭ್ಯಸಿಸಿದರು. ಬರಬರುತ್ತಾ ಅಜಯ್ ಪಿ ರಾವ್ ಒಳಗಿರುವ ಕಮೆಂಟರ್ ಒಂದು ಸ್ಪಷ್ಟರೂಪಕ್ಕೆ ಬರಲು ಶುರು ಮಾಡಿದ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹುಲ್ಲು ಹಾಸಿನ ಮೈದಾನದಲ್ಲಿ ನಡೆದ ಜಿಪಿಎಲ್2018 ಸಮಾರೋಪ ಸಮಾರಂಭದಲ್ಲಿ ವೇದಿಕೆಯ ಮೇಲೆ ಗೌರವ ಸ್ವೀಕರಿಸಿದ ನಂತರ ತುಳುನಾಡು ನ್ಯೂಸ್ ನೊಂದಿಗೆ ಮಾತನಾಡಿದ ಅಜಯ್, ಮಂಗಳೂರಿನಲ್ಲಿ ದೊಡ್ಡ ದೊಡ್ಡ ಕ್ರಿಕೆಟ್ ಪಂದ್ಯಾಟಗಳು ನಡೆಯುವಾಗ ಆಯೋಜಕರು ನೆನಪಿಟ್ಟು ಕರೆಯುತ್ತಾರೆ. ಆದರೆ ಅನೇಕ ಬಾರಿ ಅವಕಾಶಗಳು ಕೈತಪ್ಪಿ ಹೋಗಿವೆ. ಮಂಗಳೂರಿನಲ್ಲಿ ಮ್ಯಾಚ್ ಗಳು ಇಲ್ಲದಿರುವಾಗ ಬೆಂಗಳೂರಿಗೂ ಹೋಗಿ ಕಮೆಂಟರಿ ಮಾಡಿದುಂಟು. ಕುಂದಾಪುರ, ಉಡುಪಿಯಲ್ಲಿಯೂ ಕ್ರಿಕೆಟ್ ಪಂದ್ಯಾವಳಿಗಳು ನಡೆಯುವಾಗ ಹೋಗಿ ಕಮೆಂಟರಿ ಮಾಡಿದ್ದೇನೆ ಎಂದು ಹೇಳಿದರು.
“ಇತ್ತೀಚೆಗೆ ನನ್ನ ಕಮೆಂಟರಿ ಶೈಲಿಯಿಂದ ಪ್ರಭಾವಿತರಾಗಿರುವ ಅನೇಕರು ಅದನ್ನೇ ನಕಲು ಮಾಡುತ್ತಿದ್ದಾರೆ. ಕೆಲವರು ನನ್ನೊಂದಿಗೆ ಕಮೆಂಟರಿ ಬಾಕ್ಸ್ ಹಂಚಿಕೊಳ್ಳುವಾಗ ನನ್ನ ಸಲಹೆಗಳನ್ನು ಕೇಳುತ್ತಾರೆ. ಯಾರಾದರೂ ಕಮೆಂಟರಿ ಮಾಡುವಾಗ ತಪ್ಪು ಮಾಡಿದರೆ ನಾನು ತಿದ್ದಿದ್ದು ಇದೆ. ಎಂಪಿಎಲ್, ಸಿಪಿಎಲ್, ಜಿಪಿಎಲ್, ಯುಪಿಎಲ್ ಸಹಿತ ವಿವಿಧ ಸಂಘ, ಸಂಸ್ಥೆ, ಒಕ್ಕೂಟಗಳು ಕ್ರಿಕೆಟ್ ಪಂದ್ಯಾಟ ಮಾಡಿದಾಗ ಕಮೆಂಟರಿ ಮಾಡಿದ್ದೇನೆ. ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಒಮ್ಮೆ ನನ್ನ ಕಮೆಂಟರಿ ಕೇಳಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ.
ಅಜಯ್ ತೈಲವರ್ಣ ಕಲಾವಿದ…
ಮೂಲತ: ತೈಲವರ್ಣ ಕಲಾವಿದರಾದ ಅಜಯ್ ಬಿಡಿಸುವ ತೈಲಚಿತ್ರಗಳು ಅದ್ಭುತವಾಗಿ ಮೂಡಿಬರುತ್ತವೆ. ಅನೇಕರು ಆರ್ಡರ್ ಕೊಟ್ಟು ಮಾಡಿಸುವುದೂ ಇದೆ. ಅಜಯ್ ಅವರ ಹವ್ಯಾಸ ಬಾಡಿ ಬಿಲ್ಡಿಂಗ್. ದೇಹವನ್ನು ಕಡೆದಿಟ್ಟ ಮೂರ್ತಿಯಂತೆ ಕೆತ್ತಿಕೊಂಡಿರುವ ಅಜಯ್ ಇಲ್ಲಿಯ ತನಕ ವಿವಿಧ ದೇಹಧಾಡ್ಯ ಸ್ಪರ್ಧೆಗಳಲ್ಲಿ 14 ಕ್ಕೂ ಹೆಚ್ಚಿನ ಚಿನ್ನದ ಪದಕಗಳನ್ನು ಮತ್ತು ವಿವಿಧ ರೀತಿಯ ಪ್ರೋತ್ಸಾಹವನ್ನು ಗಳಿಸಿದ್ದಾರೆ. ಎಂಟು ಮತ್ತು ಆರನೇ ತರಗತಿಯಲ್ಲಿ ಕಲಿಯುತ್ತಿರುವ ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿರುವ ಅಜಯ್ ಅವರದ್ದು ಸಂತೃಪ್ತ ಸಂಸಾರ. ಆಕಾಶವಾಣಿಯಲ್ಲಿ ಫುಟ್ ಬಾಲ್ ಕಮೆಂಟರಿ ಮಾಡುವ ಪ್ಯಾನಲ್ ನಲ್ಲಿ ಸದಸ್ಯರಾಗಿರುವ ಅಜಯ್ ಅವಕಾಶ ಸಿಕ್ಕಾಗ ಫುಟ್ ಬಾಲ್ ಪಂದ್ಯಾಟಗಳಿಗೂ ಕಮೆಂಟರಿ ಮಾಡುತ್ತಾರೆ. ಆದರೆ ಕರಾವಳಿಯಲ್ಲಿ ಫುಟ್ ಬಾಲ್ ಪಂದ್ಯಾಟಗಳು ನಡೆಯುವುದು ವಿರಳಾತೀವಿರಳವಾಗಿರುವುದರಿಂದ ಅವರಿಗೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಆಕಾಶವಾಣಿಯಲ್ಲಿ ಅವರ ಸಂದರ್ಶನ ಪ್ರಸಾರವಾಗಿದೆ. ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಹಾರ್ಡ್ ಬಾಲ್ ಕ್ರಿಕೆಟ್ ಪಂದ್ಯದಲ್ಲಿಯೂ ಅವರು ಕಮೆಂಟರಿ ಮಾಡಿದ್ದಾರೆ. ಅವರಿಗೆ ರಾಷ್ಟ್ರಮಟ್ಟದಲ್ಲಿ ಆಕಾಶವಾಣಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಸ್ಫೋರ್ಟ್ ವಾಹಿನಿಗಳಲ್ಲಿ ಕಮೆಂಟರಿ ಮಾಡುವ ಆಸೆ ಇದೆ. ಬಿಜೈ ನಿವಾಸಿಯಾಗಿರುವ ಅಜಯ್ ಪಿ ರಾವ್ ಅವರ ಬಗ್ಗೆ ಕೊನೆಯದಾಗಿ ಏನು ಹೇಳುವುದೆಂದರೆ ಅವರಿಗೆ ಏಳು ವರ್ಷ ವಯಸ್ಸಾದಾಗ ಜ್ವರ ಬಂದು ನಂತರ ಆರೋಗ್ಯದಲ್ಲಿ ಏರುಪೇರಾಗಿ ಅವತ್ತಿನಿಂದ ಪೋಲಿಯೋ ಪೀಡಿತರಾಗಿದ್ದಾರೆ. ನಡೆಯಲು ಕಷ್ಟಪಡುವ ಅಜಯ್ ತಮ್ಮ ದೈಹಿಕ ಅಸಮರ್ಥತೆಯನ್ನು ಶಪಿಸುತ್ತಾ ಮನೆಯಲ್ಲಿಯೇ ಕುಳಿತುಕೊಂಡಿಲ್ಲ. ಕಾಲುಗಳಲ್ಲಿ ಶಕ್ತಿ ಇಲ್ಲದಿದ್ದರೆ ಏನಂತೆ ದೇವರು ಕೊಟ್ಟಿರುವ ಧ್ವನಿಯನ್ನೇ ಬಳಸಿ ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆ ಗಮನಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಭಿನ್ನ ಸಾಮರ್ತ್ಯದ ವ್ಯಕ್ತಿಗಳಿಗೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮ್ಯಾಚುಗಳಿಗೆ ಕಮೆಂಟರಿ ಮಾಡಲು ಹೋದಾಗ ಜನ ಅಲ್ಲಿ ಗುರುತಿಸಿ ಗೌರವಿಸುವುದೇ ದೊಡ್ಡ ಪ್ರಶಸ್ತಿ ಎಂದು ಹೇಳುವ ಅಜಯ್ ಅವರ ಸಾಧನೆಗಳು ಹೀಗೆ ಅಜರಾಮರವಾಗಿರಲಿ ಎನ್ನುವುದೇ ತುಳುನಾಡು ನ್ಯೂಸ್ ಆಶಯ!!
ಮಂಗಳೂರಿನಲ್ಲಿ ಪೋಲಿಯೊ ಪೀಡಿತನ ಪವರ್ ಫುಲ್ ಸಾಧನೆ!!

Trending Now
ಪಿ.ವಿ.ಸಿಂಧೂ ಮದುವೆಯಾಗುತ್ತಿರುವ ಗಂಡು ಯಾರು?
ಪ್ರಧಾನಿಯಾದ ಬಳಿಕ ಮೋದಿ ನೋಡಿದ ಮೊದಲ ಸಿನೆಮಾ ಇದು!