ಬಾಂಗ್ಲಾ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ ತಮಿಳು ಹಿಂದೂ ಯುವತಿ ಅನುಮಾನಾಸ್ಪದ ಸಾವು
ಢಾಕಾ: ಬಾಂಗ್ಲಾದೇಶದ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ ತಮಿಳುನಾಡಿನ ಹಿಂದೂ ಯುವತಿ ಬಾಂಗ್ಲಾದೇಶಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾಳೆ. ಕೇಂದ್ರ ಬಾಂಗ್ಲಾದೇಶದ ಮುನ್ಶಿಗಂಜ್ ಜಿಲ್ಲೆಯ ಲೋಹಗಂಜ್ ಠಾಣಾದ ಹಟ್ ವೋಗ್ಡಿಯಾ ಗ್ರಾಮದಲ್ಲಿ ಮೃತಪಟ್ಟಿದ್ದು, ಹಲವು ಅನುಮಾನಗಳನ್ನು ಮೂಡಿಸಿದೆ. ಈ ಘಟನೆ ಶುಕ್ರವಾರ ನಡೆದಿದೆ. ಯುವತಿ ಭಾರತೀಯ ನಾಗರೀಕತ್ವವವನ್ನು ಹೊಂದಿದ್ದು, ತಮಿಳುನಾಡಿನ ಮೂಲದವಳಾಗಿದ್ದಾಳೆ.
ಯುವತಿ ದೇವಿ (ಫಾತೀಮಾ) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗುತ್ತಿದೆ. ಆದರೆ ಯುವತಿಯ ಅಕ್ಕಪಕ್ಕದವರು ಹೇಳುವ ಪ್ರಕಾರ ವಾಸ್ತವವ ಬೇರೆಯೇ ಇದೆ. ಯುವತಿಯ ಪತಿ ಮಾಧಕ ವ್ಯಸನಿಯಾಗಿದ್ದ, ನಿತ್ಯ ಯುವತಿಗೆ ಕಿರುಕುಳ ನೀಡುತ್ತಿದ್ದ. ಯುವತಿ ಸಾಯುವ ಮುನ್ನಾದಿನವೇ ನೆರೆಹೊರೆಯವರು ಇಬ್ಬರ ಜಗಳವನ್ನು ಕೇಳಿಸಿಕೊಂಡಿದ್ದರು ಎನ್ನಲಾಗಿದೆ.
ಯುವತಿ ಮರಣ ಹೊಂದಿದ ತಕ್ಷಣ ಅವಳ ಅತ್ತೆ ಶವವನ್ನು ಹೂತು ಹಾಕಲು ಸಿದ್ಧತೆ ನಡೆಸಿದ್ದಳು. ಆದರೆ ಅನುಮಾನಸ್ಪದ ಸಾವು ಎಂದು ಅರಿತ ಲೋಹಗಂಜ್ ಠಾಣೆ ಪೊಲೀಸರು ಬಿಕ್ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಢಾಕಾ ಮೂಲದ ಅಂತರ್ಜಾಲ ಪತ್ರಿಕೆ eibela.com ವರದಿ ಮಾಡಿದೆ.
ಕೆಲ ದಿನಗಳ ಹಿಂದೆ ಕೆಲಸ ಅರಸಿ ತಮಿಳುನಾಡಿಗೆ ಬಂದಿದ್ದ ರೀಮು ಎಂಬಾತ ಹಿಂದೂ ಯುವತಿಯನ್ನು ಪ್ರೀತಿಸಿ, ಮತಾಂತರಿಸಿ ಮದುವೆಯಾಗಿ. ದೇವಿಯ ಹೆಸರನ್ನು ಫಾತೀಮಾ ಎಂದು ಬದಲಾಯಿಸಿದ್ದ. ಅಲ್ಲದೇ ವಿಸಾ ಇಲ್ಲದೇ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಈ ಕುರಿತು ತನಿಖೆ ನಡೆಸುತ್ತಿರುವ ಲೋಹಗಂಜ್ ಪೊಲೀಸ್ ಠಾಣೆ ಎಂಡಿ ಅನಿಚುರ್ ರೆಹೆಮಾನ್ ‘ತಮಿಳುನಾಡಿನಲ್ಲಿರುವ ಯುವತಿಯ ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅವರಿಗೆ ಮಾಹಿತಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
Leave A Reply