ಸಿಪಿಐಎಂ ಮುಖಂಡನ ಅಟ್ಟಹಾಸ: ಗರ್ಭೀಣಿಗೆ ಒದ್ದಿದ್ದರಿಂದ ಗರ್ಭಪಾತ
Posted On February 16, 2018
ಕೊಞಕೊಡೆ: ಕೇರಳದಲ್ಲಿ ಕೇವಲ ಮತೀಯ ಮತ್ತು ಪಕ್ಷ ದ್ವೇಷಿ ಕೊಲೆಗಳು, ಗಲಭೆಗಳು ನಡೆಯುವುದು ಸಾಮಾನ್ಯ. ಆದರೆ ಇದೀಗ ಕೇರಳದ ಕೋಇಕೊಡೆ ಎಂಬಲ್ಲಿ ಸಿಪಿಎಂ ನಾಯಕ ತುಂಬು ಗರ್ಭೀಣಿಯ ಹೊಟ್ಟೆಗೆ ಒದ್ದಿದ್ದರಿಂದ ಗರ್ಭಪಾತವಾಗಿ ಸಂಕಷ್ಟ ಪಸುವ ಸ್ಥಿತಿ ನಿರ್ಮಾಣವಾಗಿದೆ.
ಗರ್ಭಿಣಿ ಮಹಿಳೆ ತನ್ನ ಪತಿಯೊಂದಿಗೆ ನೆರೆಮನೆಯ ಇಬ್ಬರು ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ವೇಳೇ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಗರ್ಭಿಣಿ ಮಹಿಳೆ ಮುಂದಾಗಿದ್ದಾರೆ. ಈ ವೇಳೆ ಜಗಳ ತೆಗೆದ ಇಬ್ಬರಲ್ಲಿ ಒಬ್ಬಾತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ನಾಯಕನೂ ಇದ್ದ ಎಂದು ತಿಳಿದು ಬಂದಿದೆ. ಗಲಾಟೆ ತಡೆಯುವುದಕ್ಕೆ ಹೋದ 30 ವರ್ಷ ವಯಸ್ಸಿನ ಗರ್ಭಿಣಿಯ ಹೊಟ್ಟೆಗೆ ಒದ್ದಿದ್ದರಿಂದ ಗರ್ಭಿಣಿ ನೋವು ತಾಳದೇ ಬಿದ್ದು, ಒದ್ದಾಡಿದ್ದಾರೆ. ಅಲ್ಲದೇ ಗರ್ಭಪಾತವಾಗಿದೆ.
- Advertisement -
Leave A Reply