ಕನ್ನಡಪರ ಸಂಘಟನೆಗಳಿಗೇ ರಾಜ್ಯದ ಇತಿಹಾಸ ಗೊತ್ತಿಲ್ಲ ಎಂದು ಅವಮಾನ ಮಾಡಿದ ಕಾಂಗ್ರೆಸ್ ಸಚಿವ!
ಕಲಬುರಗಿ: ಇತ್ತೀಚೆಗಷ್ಟೇ ಸರ್ಕಾರದಿಂದಲೇ ಬಹಮನಿ ಸುಲ್ತಾನರ ಉತ್ಸವ ಆಯೋಜಿಸಿ ರಾಜ್ಯದ ಜನ ಹಾಗೂ ಸ್ವತಃ ಮುಖ್ಯಮಂತ್ರಿಯವರಿಂದಲೇ ಟೀಕೆಗೆ ಒಳಗಾದ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮತ್ತೊಂದು ಹೇಳಿಕೆ ನೀಡುವ ಮೂಲಕ ಕನ್ನಡಪರ ಸಂಘಟನೆಗಳಿಗೆ ಅವಮಾನ ಮಾಡಿದ್ದಾರೆ.
ಬಹುಮನಿ ಸುಲ್ತಾನರ ಉತ್ಸವ ಆಚರಣೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ವಿರುದ್ಧ ಕೆಂಡಾಮಂಡಲವಾದ ಶರಣ ಪ್ರಕಾಶ್ ಪಾಟೀಲ್, “ಕನ್ನಡಪರ ಸಂಘಟನೆಗಳಿಗೆ ಇತಿಹಾಸದ ಅರಿವೇ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಇದಕ್ಕೆ ಹಲವು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಾನು ಇತಿಹಾಸ ಅರಿತಿದ್ದು, ಕನ್ನಡ ಪರ ಸಂಘಟನೆಗಳು ಹಾಗೂ ಹೋರಾಟಗಾರರು ರಾಜ್ಯದ ಇತಿಹಾಸವನ್ನು ಅರಿತೇ ಸಂಘಟನೆ ಕಟ್ಟಿದ್ದಾರೆ. ಇದು ಗೊತ್ತಿದ್ದರೂ ಸಚಿವ ಕನ್ನಡ ಪರ ಸಂಘಟನೆಗಳಿಗೆ ಅವಮಾನ ಮಾಡಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಹಸಿರು ಸೇನೆ (ಕಲಬುರಗಿ)ಸಂಸ್ಥಾಪಕ ಅಧ್ಯಕ್ಷ ವೀರಣ್ಣ ಕೊರಳಿ ಆಗ್ರಹಿಸಿದ್ದಾರೆ.
ಹಸನಗಂಗು, ಬಹುಮನ್ ಶಾ ಅವರಿಂದ ಹಿಡಿದು ಕಲೀ ಅಲ್ಲಾ ಶಾ ವರೆಗಿನ ಇತಿಹಾಸ ನಮಗೆ ಗೊತ್ತಿದೆ. 13 ರಿಂದ 15ನೇ ಶತಮಾನದವರೆಗೆ ಆಳ್ವಿಕೆ ನಡೆಸಿದ ಬಹುಮನಿ ಸುಲ್ತಾನರು 17 ಅರಸರನ್ನು ಕಂಡಿದ್ದು, ಅವರಲ್ಲಿ ಮೂವರು ಬಾಲ್ಯಾವಸ್ಥೆಯಲ್ಲೇ ಅಧಿಕಾರದ ಗದ್ದುಗೆಯೇರಿದ್ದರು ಎಂಬುದು ತಿಳಿದಿದೆ ಎಂದು ಕೊರಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ಹಿಂದೂ ಹಾಗೂ ಮುಸ್ಲಿಮರಿಗೆ ಬಹುಮನಿ ಸುಲ್ತಾನರು ಯಾವುದೇ ಕೊಡುಗೆ ನೀಡಿಲ್ಲ. ಅವರ ಅವಧಿಯಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಲಾಗಿದೆ. ಹಿಂದೂಗಳನ್ನು ಕೊಂದಿದ್ದಾರೆ. ಅಂತಹವರ ಜಯಂತಿ ಆಚರಿಸುವ ಹಾಗೂ ಕನ್ನಡಪರ ಹೋರಾಟಗಾರರಿಗೆ ಕರುನಾಡಿನ ಇತಿಹಾಸ ತಿಳಿಸುವ ಯಾವ ಅವಶ್ಯಕತೆಯೂ ಸಚಿವರಿಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Leave A Reply