ಗಲಭೆ, ಅರಾಜಕತೆ ಸೃಷ್ಟಿಸುತ್ತಿರುವ ಪಿಎಫ್ ಐ ಬ್ಯಾನ್ ಮಾಡಿದ ಜಾರ್ಖಂಡ್ ಸರ್ಕಾರ
ದೆಹಲಿ: ಕರ್ನಾಟಕ ಸೇರಿ ದೇಶದ ನಾನಾ ರಾಜ್ಯಗಳಲ್ಲಿ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ, ಪಿಎಫ್ ಐ ಮೂಲಭೂತವಾದಿ ಸಂಘಟನೆ ನಿಷೇಧಕ್ಕೆ ದೇಶಾದ್ಯಂತ ಒತ್ತಡ ಹೇರಲಾಗುತ್ತಿದೆ. ಸಹಸ್ರಾರು ಜನರು ಪಿಎಫ್ ಐ ನಿಷೇಧಕ್ಕೆ ಒತ್ತಾಯ ಹೇರಿದ್ದರು. ಜನರ ಒತ್ತಾಯಕ್ಕೆ ಮೊದಲ ಯಶಸ್ಸು ದೊರಕಿದ್ದು ಭಯೋತ್ಪಾದಕ ಸಂಘಟನೆ ಪಿಎಫ್ ಐ ನ್ನು ಜಾರ್ಖಂಡ್ ಸರ್ಕಾರ ನಿಷೇಧಿಸುವ ಮೂಲಕ ಕಠು ಮತ್ತು ದಿಟ್ಟ ನಿರ್ಧಾರ ಕೈಗೊಂಡಿದೆ.
ಗಲಭೆಗೆ ಪ್ರಚೋಧನೆ, ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಜಾರ್ಖಂಡ್ ರಾಜ್ಯ ಸರ್ಕಾರ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಸಂಘಟನೆಗೆ ನಿಷೇಧ ಹೇರುವ ಮೂಲಕ ಸಾಮಾಜಿಕ ಸಾಮರಸ್ಯ ರೂಪಿಸಲು ನಿರ್ಧರಿಸಿದೆ. ಗೃಹ ಇಲಾಖೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆಯ ಒಪ್ಪಿಗೆ ಮೇರೆಗೆ 1908ರ ಅಪರಾಧ ಕಾನೂನು ತಿದ್ದುಪಡಿ ಕಾಯಿದೆಯ 16ನೇ ಕಾಯಿದೆಯಲ್ಲಿ ನಿಷೇಧಿಸಲಾಗಿದೆ.
ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕ ಅನಂತ್ ಓಜಾ ಪ್ರಶಂಸಿಸಿದ್ದು, ರಾಜ್ಯದಲ್ಲಿ ಅಶಾಂತಿ. ಅರಾಜಕತೆ ಸೃಷ್ಟಿಸುತ್ತಿರುವ ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿಗಳನ್ನು ಅಭಿನಂಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಭಾಗದಲ್ಲಿ ಅನೇಕ ಬದಲಾವಣೆಗಳುಂಟಾಗುತ್ತವೆ’ ಎಂದು ತಿಳಿಸಿದರು.
ಫೆ.17ರಂದು ಜಾರ್ಖಂಡ್’ನ ಪಾಕುರ್ ಜಿಲ್ಲೆಯಲ್ಲಿ ಪಿಎಫ್’ಐ ಸಂಘಟನೆ ಸಂಸ್ಥಾಪಕ ದಿನವನ್ನಾಗಿ ಸಂಭ್ರಮಿಸಿತ್ತು. ಪಿಎಫ್ಐ ಭಾರತದಲ್ಲಿ ನ್ಯಾಷನಲ್ ಡೆವಲಪ್’ಮೆಂಟ್ ಪ್ರಂಟ್ ಗೆ ಉತ್ತರಾಧಿಕಾರಿಯಾಗಿ 2006ರಲ್ಲಿ ಸ್ತಾಪಿತವಾದ ಉಗ್ರವಾದಿ ಮತ್ತು ಉಗ್ರಗಾಮಿ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಯಾಗಿದೆ.
Leave A Reply