ಸ್ಟೈಲಿಷ್ ಆಗಿ ಗಡ್ಡ ಬೋಳಿಸುವುದು ಮುಸ್ಲಿಂ ಧರ್ಮ ವಿರೋಧವಂತೆ
ಡೇರಾ ಘಾಜಿಖಾನ್: ಇಡೀ ವಿಶ್ವ ಆಧುನಿಕತೆಗೆ ವಾಲುತ್ತಿದ್ದರೇ, ಕೆಲ ಮುಸ್ಲಿಂ ಮೂಲಭೂತವಾದಿಗಳು ಇಂದಿಗೂ ತಮ್ಮದೇ ಹಳೆ ಪದ್ಧತಿಗಳಿಗೆ ಜೋತು ಬೀಳುವ ಮೂಲಕ ಅಂಧಕಾರದಲ್ಲೇ ಜೀವನ ಕಳೆಯುತ್ತಿವೆ. ಅದಕ್ಕೆ ಸಾಕ್ಷಿ ಪಾಕಿಸ್ತಾನ ಡೇರಾಘಾಜಿಖಾನ್ ಜಿಲ್ಲೆಯಲ್ಲಿ ಜಾರಿಗೆ ತಂದಿರುವ ನೂತನ ನಿಯಮ
ಪಾಕಿಸ್ತಾನದ ಡೇರಾಘಾಜಿಖಾನ್ ಜಿಲ್ಲೆಯಲ್ಲಿ ಸ್ಟೈಲಿಷ್ ಆಗಿ ಗಡ್ಡ ಬೋಳಿಸುವುದನ್ನು ನಿಷೇಧಿಸಬೇಕು, ಸ್ಟೈಲಿಷ್ ಆಗಿ ಗಡ್ಡ ಬೋಳಿಸುವುದು ಮುಸ್ಲಿಂ ಧರ್ಮದ ಪ್ರಕಾರ ಸರಿಯಲ್ಲ ಎಂದು ವಿತಂಡವಾದವೊಂದನ್ನು ಆಡಳಿತಾಂಗವೇ ಮಾಡಿದೆ. ಡೇರಾಘಾಜಿಖಾನ್ ಜಿಲ್ಲಾಡಳಿತದ ಸದಸ್ಯರು ಈ ನಿಷೇಧ ಹೇರಲು ಒತ್ತಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾರೂ ಕೂಡ ಸ್ಟೈಲಿಷ್ ಆಗಿ ಗಡ್ಡ ಬೋಳಿಸಿಕೊಳ್ಳಬಾರದು ಎಂಬ ನಿಯಮ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.
ನಿಷೇಧ ಕಾಯಿದೆ ಕುರಿತು ಮಾಹಿತಿ ನೀಡಿರುವ ಜಿಲ್ಲಾಡಳಿದ ಆಸೀಫ್ ಖಸ್ವಾ ಎಂಬಾತ ‘ಸ್ಟೈಲಿಷ್ ಆಗಿ ಗಡ್ಡ ಬಿಡುವುದು ಇಸ್ಲಾಂ ನಿಯಮಗಳಿಗೆ ವಿರುದ್ಧವಾದದದ್ದು. ಆದ್ದರಿಂದ ಸ್ಟೈಲಿಷ್ ಕಟ್ಟಿಂಗ್ ಮಾಡಿಕೊಳ್ಳುವುದನ್ನು ನಿಷೇಧಿಸುವ ಕಾನೂನು ಜಾರಿಗೆ ತರಬೇಕು ಎಂದು ತಿಳಿಸಿದ್ದಾರೆ.
ಈ ಕುರಿತು ಡೇರಾಘಾಜಿಖಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಒತ್ತಾಯಿಸಿರುವ ಜಿಲ್ಲಾಡಳಿದ ಜನಪ್ರತಿನಿಧಿಗಳು ‘ಪಾಕಿಸ್ತಾನದಲ್ಲಿ ಪ್ಯಾಷನ್ ಆಗಿರುವ ಗಡ್ಡ ಬೋಳಿಸುವ ಪ್ರಕ್ರಿಯೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ವಿಚಿತ್ರವಾಗಿ, ಗಡ್ಡ ಬೋಳಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕಾಯಿದೆ ಬಹುಮತದೊಂದಿಗೆ ಪಾಸ್ ಆಗಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ.
Leave A Reply