ಬದಲಾಗುತ್ತಿದೆ ಉತ್ತರ ಪ್ರದೇಶ, ನಮಾಜ್ ಸಮಯ ಬದಲಾಯಿಸಿ ಸೌಹಾರ್ದತೆ ಮೆರೆದ ಮುಸ್ಲಿಂ ಧರ್ಮಗುರುಗಳು
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಸ್ಥಾನ ವಹಿಸಿಕೊಂಡಾಗಿನಿಂದ ಆ ರಾಜ್ಯದ ಚಹರೆಯೇ ಬದಲಾಗುತ್ತಿದೆ. ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಅಪರಾಧಿಗಳನ್ನು ಸದೆ ಬಡೆದಿದ್ದಾರೆ. ಅಲ್ಲದೇ ಸರ್ವರಿಗೂ ಸಮಾನತೆ ನೀಡುವ ಮೂಲಕ ತುಷ್ಟೀಕರಣ ರಾಜಕಾರಣಕ್ಕೆ ಬ್ರೇಕ್ ಹಾಕಿದ್ದಾರೆ. ಇದರಿಂದ ಇದೀಗ ಉತ್ತರ ಪ್ರದೇಶ ಶಾಂತಿಯತ್ತ ಹೊರಳುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ ಉತ್ತರ ಪ್ರದೇಶದ ಮುಸ್ಲಿಂ ಧರ್ಮಗುರುಗಳು ಸೌಹಾರ್ದತೆ ಮೆರೆದಿದ್ದಾರೆ.
ಮಾರ್ಚ್ 2 ಉತ್ತರ ಪ್ರದೇಶದಲ್ಲಿ ನಡೆಯಲಿರುವ ಹೋಳಿ ಹಬ್ಬದ ನಿಮಿತ್ತ ಮುಸ್ಲಿಂ ಧರ್ಮಗುರುಗಳು ಅಸಫಿ (ಬಾದಾ) ಇಮಾಂಬರಾದಲ್ಲಿ ಶುಕ್ರವಾರ ನಡೆಯುವ ನಮಾಜ್ ಸಮಯವನ್ನು ಶಿಯಾ ಧರ್ಮ ಗುರುಗಳಾದ ಮೌಲಾನಾ ಕಲ್ಬೆ ಜವಾದ್ 30 ನಿಮಿಷ ಮುಂದೂಡುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಮಧ್ಯಾಹ್ನ ಬಣ್ಣದೋಕುಳಿ ಆಡುವ ಹಿಂದೂ ಬಾಂಧವರಿಗೆ ತೊಂದರೆಯಾಗಬಾರದು ಎಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ ಧರ್ಮಗುರು 0ಮೌಲಾನಾ ಕಲ್ಬೆ ಜವಾದ್ ತಿಳಿಸಿದ್ದಾರೆ. ಸಾಮಾನ್ಯವಾಗಿ 12-1 ಗಂಟೆಯವರೆಗೆ ನಡೆಯುವ ಶುಕ್ರವಾರದ ನಮಾಜ್ ಸಮಯವನ್ನು 12.45 ರಿಂದ 1.45ಕ್ಕೆ ಮುಂದೂಡಲಾಗಿದೆ.
ಸಂಭ್ರಮದ ಹೋಳಿ ಆಚರಿಸಲು ಮಧ್ಯಾಹ್ನ 12 ಗಂಟೆಯವರೆಗೂ ಅವಕಾಶವಿರುತ್ತದೆ. ಆದರೆ, ನಿಗದಿತ ಸಮಯ ಮೀರುವುದು ಸಾಮಾನ್ಯ. ಉಭಯ ಸಮುದಾಯಗಳ ಮಧ್ಯೆ ಕೋಮ ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮಾಜ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೌಲಾನಾ ತಿಳಿಸಿದ್ದಾರೆ. ನಮಾಜ್ ಸಮಯ ಮುಂದೂಡುವ ಮೂಲಕ ಸೌಹಾರ್ದತೆಯ ಹೊಸ ಶಕೆ ಆರಂಭಿಸಲಾಗಿದೆ. ಯೋಗಿ ಆದಿತ್ಯನಾಥ್ ಕೈಗೊಂಡಿರುವ ತುಷ್ಟೀಕರಣವಲ್ಲದ ನಿರ್ಧಾರಗಳು ಇಂತಹ ವಾತಾವರಣ ಸೃಷ್ಟಿಯಾಗಲು ಕಾರಣ ಎನ್ನಲಾಗುತ್ತಿದೆ.
Leave A Reply