ಸಿಎಂ ಸಿದ್ದರಾಮಯ್ಯನವರೇ, ನಿಮಗೆಷ್ಟು ಹಿಂದೂಗಳ ಪ್ರಾಣ ಬೇಕು ಎಂದಾದರೂ ಹೇಳಿ!
ಬೆಂಗಳೂರು: ರಾಜ್ಯದಲ್ಲಿ ಏನಾಗುತ್ತಿದೆ? ರಾಜ್ಯ ಸರ್ಕಾರ ಯಾವ ಕಾನೂನು ಸುವ್ಯವಸ್ಥೆ ಕಾಪಾಡುತ್ತಿದೆ? ಎಷ್ಟರಮಟ್ಟಿಗೆ ಜನರ ಪ್ರಾಣಕ್ಕೆ ಬೆಲೆ, ಭದ್ರತೆ ನೀಡುತ್ತಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇನು ಮಲಗಿದ್ದಾರಾ?
ಹೌದು, ಹೀಗೆ ರಾಜ್ಯ ಸರ್ಕಾರವನ್ನು ನಾವು ತರಾಟೆಗೆ ತೆಗೆದುಕೊಳ್ಳಲೇಬೇಕಿದೆ. ಏಕೆಂದರೆ, ಬೆಂಗಳೂರಿನಲ್ಲಿ, ಇದೇ ರಾಜ್ಯದ ರಾಜಧಾನಿಯಲ್ಲಿ ಹಾಡಹಗಲೇ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ.
ಮೊನ್ನೆಯಷ್ಟೇ, ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಸ್ಕ್ರೂ ಡ್ರೈವರ್ ನಿಂದ ಹತ್ಯ ಮಾಡಿದ ಪ್ರಕರಣ ಮರೆಮಾಚುವ ಮುನ್ನವೇ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿದೆ. ಬಿಜೆಪಿ ಕಾರ್ಯಕರ್ತ ಶ್ರೀನಿವಾಸ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಸ್ತೆ ಕಾಮಗಾರಿ ವಿಚಾರದಲ್ಲಿ ಬಬ್ಲಿ ಅಲಿಯಾಸ್ ಅಬಿಲ್ ಎಂಬಾತನ ಗ್ಯಾಂಗೇ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದಿದೆ ಎಂದು ತಿಳಿದುಬಂದಿದೆ. ಈಗ ಪೊಲೀಸರೇನೋ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ, 20ಕ್ಕೂ ಅಧಿಕ ಹಿಂದೂಗಳನ್ನು ಹತ್ಯೆ ಮಾಡಲಾಗಿದ್ದರೂ, ಇನ್ನೂ ಹಲ್ಲೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಹಿಂದೂಗಳಿಗೆ ರಕ್ಷಣೆ ನೀಡುತ್ತಿಲ್ಲ ಎಂಬುದು ದಟ್ಟವಾಗಿದೆ.
ಇಂತಹ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಿಂದಲೇ ಏನೋ ದಿನಕ್ಕೊಬ್ಬರು ಹಿಂದೂ ಕಾರ್ಯಕರ್ತರು ಹಲ್ಲೆಗೊಳಗಾಗುತ್ತಿದ್ದಾರೆ. ಇನ್ನಾದರೂ ಸರ್ಕಾರ ಬುದ್ಧಿ ಕಲಿಯಲಿ, ಇಲ್ಲವೇ ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸರಿಯಾಗಿಯೇ ಬುದ್ಧಿ ಕಲಿಸುತ್ತಾರೆ ಎಂಬುದು ನೆನಪಿರಲಿ.
Leave A Reply