3 ರಾಜ್ಯಗಳಲ್ಲಿ ಸೋಲುಂಡು ಹತಾಶರಾದ ರಾಹುಲ್ ಗಾಂಧಿ ಮತ್ತೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ ಗೊತ್ತಾ?
ದೆಹಲಿ: ಪಾಪ ರಾಹುಲ್ ಗಾಂಧಿಯವರ ನಸೀಬು ಅಷ್ಟರಮಟ್ಟಿಗೆ ಕೆಟ್ಟಿದೆಯೋ ಅಥವಾ ಅವರು ನಾಯಕರಲ್ಲ ಎಂದು ತೀರ್ಮಾನಿಸಿದ್ದಾರೋ ಗೊತ್ತಿಲ್ಲ, ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಪ್ರತ್ಯಕ್ಷವಾಗಿ ಕಾಂಗ್ರೆಸ್ಸಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಹುಲ್ ಗಾಂಧಿಯವರ ಮೇಲೆಯೇ ಆಗುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಗುಜರಾತಿನಲ್ಲಿ ಕಾಂಗ್ರೆಸ್ಸಿಗೆ ಸೋಲಾಯಿತು, ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಕೈಯಿಂದ ಜಾರಿತು. ಅಷ್ಟೇ ಏಕೆ, ಮೊನ್ನೆಯಷ್ಟೇ ನಡೆದ ತ್ರಿಪುರಾ, ನಾಗಾಲೆಂಡ್, ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಪಾರ ಹಿನ್ನಡೆಯಾಯಿತು. ಒಟ್ಟಿನಲ್ಲಿ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದತ್ತ ದೇಶ ಮುನ್ನಡೆಯುತ್ತಿದೆ ಎಂಬುದೂ ಖಾತ್ರಿಯಾಯಿತು.
ಆದರೆ ಹೀಗೆ, ಕಾಂಗ್ರೆಸ್ ಸಾಲು ಸಾಲು ಚುನಾವಣೆಗಳಲ್ಲಿ ಸೋತು ಸುಣ್ಣವಾಗುತ್ತಿರುವುದು ರಾಹುಲ್ ಗಾಂಧಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆಯೇ? ಈ ಸೋಲಿನಿಂದ ರಾಹುಲ್ ಹತಾಶರಾಗಿದ್ದಾರೆಯೇ? ತಮ್ಮ ಮೇಲೆಯೇ ತಾವು ನಂಬಿಕೆ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ಕಾಡಲು ಶುರುವಾಗಿದೆ.
ಅದಕ್ಕೆ ಕಾರಣಗಳೂ ಇವೆ, ತ್ರಿಪುರಾ, ನಾಗಾಲೆಂಡ್ ನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಕೂಡಲೇ ರಾಹುಲ್ ಗಾಂಧಿಯವರು ಇಟಲಿ ಪ್ರವಾಸ ಮಾಡಿದರು. ಎಲ್ಲರೂ ಸೋಲಿನಿಂದ ಹತಾಶರಾಗಿಯೇ ರಾಹುಲ್ ಗಾಂಧಿ ಇಟಲಿ ಪ್ರವಾಸ ಮಾಡಿದ್ದಾರೆ ಎಂದು ಸಹ ಟೀಕಿಸಿದರು.
ಇಂತಹ ಟೀಕೆಗೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು, ಇಟಲಿಯಿಂದ ಆಗಮಿಸಿರುವ ರಾಹುಲ್ ಗಾಂಧಿ ಇಂದಿನಿಂದ (ಮಾ.8) ಮಾರ್ಚ್ 12ರವರೆಗೆ ಸಿಂಗಾಪುರ ಹಾಗೂ ಮಲೇಷ್ಯಾ ಪ್ರವಾಸ ಕೈಗೊಂಡಿದ್ದು, ರಾಹುಲ್ ಸೋಲಿನಿಂದ ಕಂಗೆಟ್ಟು ಹೀಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
Leave A Reply