ಪ್ರಧಾನಿ ನರೇಂದ್ರ ಮೋದಿ ಅವರ ರಕ್ಷಾ ಬಂಧನದ ಸಹೋದರಿ ಶಾರ್ಬತಿ ದೇವಿ ನಿಧನ
ಮುಂಬೈ: ತನ್ನ ಸಹೋದರನನ್ನು ಕಳೆದುಕೊಂಡು ದುಖಃದಲ್ಲಿದ್ದ ಮಹಿಳೆಯೊಬ್ಬರು ಕಳೆದ ವರ್ಷದ ರಕ್ಷಾ ಬಂಧನದ ದಿನ ಭಾರಿ ಸುದ್ದಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವ ಮೂಲಕ 100 ವರ್ಷದ ಮಹಿಳೆ ದೇಶದ ಗಮನ ಸೆಳೆದಿದ್ದರು. ಸಹೋದರನ ಅಗಲಿಕೆಯಿಂದ ದುಖಃದಲ್ಲಿ ಮಹಿಳೆ ನೋವಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯೊಂದಿಗೆ ರಕ್ಷಾ ಬಂಧನ ಆಚರಿಸುವ ಮೂಲಕ ಇಳಿ ವಯಸ್ಸಿನ ಮಹಿಳೆಯ ಆಸೆ ಪೂರೈಸಿದ್ದರು.
ಇದೀಗ ಸಹೋದರನ ಕಳೆದುಕೊಂಡ ನೋವನ್ನು ಮರೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಾ ಬಂಧನ ಕಟ್ಟಿದ್ದ ಶಾರ್ಬತಿ ದೇವಿ (103) ಶನಿವಾರ ನಿಧನರಾಗಿದ್ದಾರೆ. ಕಳೆದ ವರ್ಷ ರಕ್ಷಾ ಬಂಧನದಂದು ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಶಾರ್ಬತಿ ದೇವಿ ಮೋದಿ ಅವರೊಂದಿಗೆ ರಕ್ಷಾ ಬಂಧನ ಆಚರಿಸಿದ್ದರು.
ಕೆಲ ವರ್ಷಗಳ ಹಿಂದೆ ಸಹೋದರನನ್ನು ಕಳೆದುಕೊಂಡಿದ್ದ ಶಾರ್ಬತಿ ದೇವಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಾ ಬಂಧನ ಆಚರಿಸಲು ನಿರ್ಧರಿಸಿದ್ದರು. ಅವರ ಮಗ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಸ್ಪಂದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಶಾರ್ಬತಿ ದೇವಿ ಅವರೊಂದಿಗೆ ಕಳೆದ ವರ್ಷ ರಕ್ಷಾ ಬಂಧನ ಆಚರಿಸಿದರು.
Leave A Reply