ಅಂಟಾರ್ಟಿಕಾದಲ್ಲಿ 400 ದಿನ ವಾಸವಿದ್ದು, ದಾಖಲೆ ಬರೆದ ಇಸ್ರೋದ ಮೊದಲ ಮಹಿಳಾ ವಿಜ್ಞಾನಿ
ದೆಹಲಿ: ಭಾರತೀಯ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂಬುದನ್ನು ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ಮಿಗ್ -21 ವಿಮಾನವನ್ನು ಯಶಸ್ವಿಯಾಗಿ ಚಲಾಯಿಸುವ ಮೂಲಕ ಮಹಿಳಾ ಪೈಲಟ್ ಅವನಿ ಚತುರ್ವೇದಿ ಗಮನ ಸೆಳೆದಿದ್ದರು. ಇದೀಗ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹಿಳಾ ವಿಜ್ಞಾನಿ ಅಂಟಾರ್ಟಿಕಾದಲ್ಲಿ 400 ದಿನ ವಾಸ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇಸ್ರೋದಲ್ಲಿ ವಿಜ್ಞಾನಿಯಾಗಿರುವ 56 ವಯಸ್ಸಿನ ಮಂಗಲಾ ಮಣಿ 90 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಅಂಟಾರ್ಟಿಕಾದಲ್ಲಿ ವಾಸವಿರುವ ಮೂಲಕ ಗಮನ ಸೆಳೆದಿದ್ದಾರೆ. ಭಾರತ ‘ಇಂಡಿಯಾ ಭಾರತಿ’ ಸಂಘಟನೆಯಿಂದ 2016ರಲ್ಲಿ ಅಂಟಾರ್ಟಿಕಾಕ್ಕೆ ಸಂಶೋಧನೆಗೆ ಹೋಗಿದ್ದ 23 ಜನರ ತಂಡದಲ್ಲಿ ಮಂಗಲಾ ಮಣಿಯೊಬ್ಬರೇ ಮಹಿಳೆಯಾಗಿದ್ದು ವಿಶೇಷ.
ಅಂಟಾರ್ಟಿಕಾ ವಾಸ್ತವ್ಯ ಮಾಡುವುದು ಸವಾಲಿನ ಕೆಲವಾಗಿತ್ತು. ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿತ್ತು. ನಮ್ಮ ನಿಯಂತ್ರಣ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡು ದಿನ ದೂಡುತ್ತಿದ್ದೇವು. ಪ್ರತಿ ಕ್ಷಣವೂ ಸವಾಲು ಎದುರಿಸುತ್ತಿದೆ. 2 ರಿಂದ 3 ಗಂಟೆಗಿಂತ ಹೆಚ್ಚು ಅವಧಿಯಲ್ಲಿ ನಾವು ಸಾಮಾನ್ಯ ಧಿರಿಸಿನಲ್ಲಿ ಇರಲು ಆಗುತ್ತಿರಲಿಲ್ಲ ಎಂದು ಮಣಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
2016 ರಿಂದ 2017 ರವರೆಗೆ ಸುಮಾರು 400 ದಿನ ನಾವು ಅಂಟಾರ್ಟಿಕಾದಲ್ಲಿ ವಾಸ ಮಾಡಿದ್ದೇವು. ನಮ್ಮ ಇಡೀ ತಂಡ ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವು. ನನ್ನ ಜನ್ಮದಿನವನ್ನು ನಮ್ಮ ತಂಡ ಆಚರಿಸಿದ್ದು, ಅವಿಸ್ಮರಣೀಯ ಎನ್ನುತ್ತಾರೆ ಮಣಿ.
ಈ ಮಹತ್ವದ ಸಂಶೋಧನೆಗೆ ತೆರಳುವ ಮುಂಚೆ ಮಂಗಲಾ ಮಣಿ ಅವರಿಗೆ ಭಾರತದ ಬದ್ರಿನಾಥ, ಚಮೋಲಿಗಳಲ್ಲಿ ತರಬೇತಿ ನೀಡಲಾಗಿತ್ತು. ಅಲ್ಲದೇ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗಿತ್ತು. ಮಹಿಳೆಯರಲ್ಲು ಸಾಮರ್ಥ್ಯವಿದ್ದು, ಆತ್ಮಬಲದೊಂದಿಗೆ ಮುನ್ನುಗಿದ್ದರೇ ಯಾವುದೇ ಸಾಧನೆ ಮಾಡಬಹುದು ಎಂಬುದು ಮಂಗಲಾ ಮಣಿ ಅವರ ಸಲಹೆ.
Leave A Reply