ಉಗ್ರರಿಂದ 9 ಗುಂಡು ತಿಂದು 2 ತಿಂಗಳು ಕೋಮಾದಲ್ಲಿದ್ದ ಗಟ್ಟಿಗುಂಡಿಗೆಯ ಚಿರತೆ ಡ್ಯೂಟಿಗೆ ಹಾಜರ್
ದೆಹಲಿ: 2017ರ ಫೆಬ್ರವರಿ 14ರಂದು ಉಗ್ರರ ದಾಳಿಯಲ್ಲಿ 9 ಗುಂಡು ತಿಂದು, ಎರಡು ತಿಂಗಳು ಕೋಮಾಕ್ಕೆ ಜಾರಿದ ಸಿಆರ್ ಫಿಎಫ್ ಕಮಾಂಡಿಗ್ ಆಫಿಸರ್ 45 ವರ್ಷದ ಚೇತನ ಕುಮಾರ್ (ಚೀತಾ) ಇದೀಗ ಕಣಕ್ಕೆ ಮರಳಿದ್ದಾರೆ. ಕಾಶ್ಮೀರದ ಹಜ್ಜಿನ ಪ್ರದೇಶದ ಬಂಡಿಪೂರದಲ್ಲಿ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಸ್ವರ್ಗಕ್ಕೆ ಕಳುಹಿಸಿದ್ದ ಚೇತನ ಕುಮಾರ್ ಅವರ ದೇಹಕ್ಕೆ ಒಟ್ಟು ಒಂಬತ್ತು ಗುಂಡುಗಳು ಹೊಕ್ಕಿದ್ದವು.
ಎಲ್ಲ ಉಗ್ರರನ್ನು ಎದುರಿಸಿ, ಪ್ರಜ್ಞಾಹೀನವಲ್ಲ, ಕೋಮಾ ಸ್ಥಿತಿಗೆ ಚೇತನಕುಮಾರ್ ತಲುಪಿದ್ದರು. ಕೋಮಾ ಸ್ಥಿತಿಗೆ ತಲುಪಿದ್ದರೂ, ಬೆಂಬಿಡದೇ ಸಹಪಾಠಿ ಯೋಧರು, ಚಿರತೆಯನ್ನು ಆಸ್ಪತ್ರೆಗೆ ಸೇರಿಸಿದರು. ಗಟ್ಟಿ ಗುಂಡಿಗೆಯ ಚಿರತೆ ಎರಡು ತಿಂಗಳ ನಂತರ, ಸೂಕ್ತ ಚಿಕಿತ್ಸೆಯಿಂದ ಕೋಮಾ ಸ್ಥಿತಿಯಿಂದ ಹೊರ ಬಂದಿತ್ತು. ತನ್ನದ್ದು ಗಟ್ಟಿಗುಂಡಿಗೆ ಎಂಬುದನ್ನು ಹಂದಿಗಳಿಗೆ ತೋರಿಸಿತು. ಆದರೆ ಹಂದಿಗಳ ಗುಂಡಿಗೆ ಅವರ ಒಂದು ಕಣ್ಣು ಮರಳಿ ಬಾರದು ಎಂದು ವೈದ್ಯರು ಹೇಳಿದ್ದರು.
ಕೋಮಾದಿಂದ ಮರಳಿ ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ ಚಿರತೆ ಇದೀಗ ಮತ್ತೆ ಡ್ಯೂಟಿಗೆ ಹಾಜರಾಗಿದೆ. ದೆಹಲಿ ಸೈನ್ಯದ ಕಚೇರಿಯಲ್ಲಿ ಕಮಾಂಡೆಂಟ್ ಆಗಿ ಕಾರ್ಯ ನಿರ್ವಹಿಸಲು ಚೇತನ ಕುಮಾರ ಹಾಜರಾಗಿದ್ದಾರೆ.
Leave A Reply