ಉತ್ತರ ಪ್ರದೇಶದಲ್ಲಿ ಮೂಲಭೂತವಾದ ಭೂತವಾಗಿ ಕಾಡುವ ಹಿಂದೆ ಮದರಸಾಗಳ ಕೈವಾಡವಿದೆ ಎಂದಿದ್ದು ಯಾರು ಗೊತ್ತಾ?
ಲಖನೌ: ಉತ್ತರ ಪ್ರದೇಶದಲ್ಲಿ ಅಪರಾಧ, ಬಲವಂತದ ಮತಾಂತರ, ಲವ್ ಜಿಹಾದ್ ಸೇರಿ ಹಲವು ಮೂಲಭೂತವಾದಿ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಉತ್ತರ ಪ್ರದೇಶ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ಆಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿದ್ದು, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮೂಲಭೂತವಾದಿ ಚಟುವಟಿಕೆಗಳ ಹಿಂದೆ ಮದರಸಾಗಳ ಕೈವಾಡವಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವು ಮದರಸಾಗಳು ಹಾಗೂ ದಿಯೋಬಂದ್ ನಲ್ಲಿರುವ ದಾರುಲ್ ಉಲೂಮ್ ಇಸ್ಲಾಂ ಸಂಸ್ಥೆಯು ಹಿಂದೂಗಳು ಹಾಗೂ ಶಿಯಾ ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಿವೆ, ಕೋಮುವಾದ ಬಿತ್ತುತ್ತಿವೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗಿರುವ ಹಿಂದೆಯೂ ಇವರ ಕೈವಾಡವಿದ್ದು, ಎರಡೂ ಸಮುದಾಯಗಳ ಜನರ ನಡುವೆ ವಿಷಬೀಜ ಬಿತ್ತುವ ಮೂಲಕ ಇಬ್ಬರ ನಡುವೆಯೂ ಕಂದಕ ಸೃಷ್ಟಿಸುತ್ತಿದ್ದಾರೆ. ಹಾಗಾಗಿಯೇ ಮೂಲಭೂತವಾದ ಜಾಸ್ತಿಯಾಗುತ್ತಿದೆ ಎಂದು ರಿಜ್ವಿ ತಿಳಿಸಿದ್ದಾರೆ.
ಈ ಹಿಂದೆಯೂ ಮದರಸಾಗಳ ಬಗ್ಗೆ ರಿಜ್ವಿ ಇಂತಹುದೇ ಅಭಿಪ್ರಾಯವನ್ನುವ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ಎಲ್ಲ ಮದರಸಾಗಳನ್ನು ಮುಚ್ಚಿಸಬೇಕು ಎಂದು ಶಿಯಾ ವಕ್ಫ್ ಬೋರ್ಡ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದರು.
Leave A Reply