ಬುದ್ಧನ ಬಗ್ಗೆ ಮಾಯಾವತಿಯ ಡೋಂಗಿ ಕಾಳಜಿಗೆ ಯೋಗಿ ಉತ್ತರ, ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗೆ ಹೊಸ ತಂತ್ರ
ಲಖನೌ: ಬಿಜೆಪಿ ದಲಿತ ವಿರೋಧಿ, ಬೌದ್ಧ ವಿರೋಧಿ ಎಂಬಂತೆ ವಿನಾಕಾರಣ ಬಿಂಬಿಸುತ್ತಿದ್ದ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿಗೆ ಉತ್ತರ ಪ್ರದೇಶದ ಯೋಗಿ ಸರ್ಕಾರ ತಕ್ಕ ಉತ್ತರವನ್ನು ತನ್ನ ಕಾರ್ಯದ ಮೂಲಕವೇ ನೀಡಿದೆ. ಉತ್ತರ ಪ್ರದೇಶದಲ್ಲಿರುವ ಪ್ರಮುಖ ಆರು ಬೌದ್ಧ ಕ್ಷೇತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋಧ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸಲು ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬೌದ್ಧನನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ಮಾಯಾವತಿ ಸೇರಿ ಹಲವು ಮುಖಂಡರಿಗೆ ಯೋಗಿ ದೊಡ್ಡ ಶಾಕ್ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿರುವ ತಾಜಮಹಲ್ ಮತ್ತು ವಾರಣಾಸಿ ಮಾದರಿಯಲ್ಲಿ, ವಿಶ್ವಖ್ಯಾತಿಯ ಹಲವು ತಾಣಗಳಿದ್ದು, ಅವುಗಳ ಅಭಿವೃದ್ಧಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಇದೀಗ ಬೌದ್ಧ ಕ್ಷೇತ್ರಗಳನ್ನು ಯೋಗಿ ಆದಿತ್ಯನಾಥ ಸರ್ಕಾರ ಕಣ್ಣಿಟ್ಟಿದ್ದು, ಹೊಸ ಬದಲಾವಣೆಗೆ ತೆರೆದುಕೊಂಡಿದೆ. ಬೌದ್ಧನ ಕ್ಷೇತ್ರಗಳ ಅಭಿವೃದ್ಧಿಗೆ ನೂತನ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಈ ಯೋಜನೆ ಕಾಮಗಾರಿ ಆರಂಭವಾಗಿಲಿದೆ. ಈ ಯೋಜನೆ ಪೂರ್ಣಗೊಂಡರೆ ಉತ್ತರ ಪ್ರದೇಶದಲ್ಲಿ ಪ್ರವಾಸೋಧ್ಯಮದ ವಿಶೇಷವಾಗಿ ಬೌದ್ಧರ ತಾಣಗಳಿಗೆ ಲಕ್ಷಾಂತರ ಜನರು ಭೇಟಿ ನೀಡುವಂತೆ ಮಾಡುವುದು ನಿಶ್ಚಿತ ಎಂಬುದು ಸರ್ಕಾರದ ಲೆಕ್ಕಾಚಾರ.
ಮಾಯಾವತಿ ಅಧಿಕಾರದಲ್ಲಿದ್ದಾಗ ಕೇವಲ ಕೆಲವು ನಗರಗಳಿಗೆ ಗೌತಮ ನಗರ, ಸಿದ್ಧಾರ್ಥ ನಗರ, ಬುದ್ಧ ನಗರ ಎಂದು ನಾಮಕರಣ ಮಾಡಿ ಬುದ್ಧನ ಸಾರಥಿಯಂತೆ ಬಿಂಬಿಸಿಕೊಂಡಿದ್ದರು. ಆದರೆ ಬೌದ್ಧ ಧರ್ಮದ ಪ್ರಸಿದ್ಧ ಕ್ಷೇತ್ರಗಳ ಅಭಿವೃದ್ಧಿ ಮರೆತ್ತಿದ್ದರು. ಆದರೆ ಇದೀಗ ಪ್ರಸಿದ್ಧ ಬೌದ್ಧ ಕ್ಷೇತ್ರಗಳಾದ ಸಾರಾನಾಥ, ಖುಷಿ ನಗರ, ಸ್ರವಸ್ತಿ, ಸಂಕಿಸಾ, ಕೌಷಂಬಿ ಮತ್ತು ಕಪಿಲವಸ್ತು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದಾರೆ, ಅಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಸರಣಿಯಾಗಿ ಭೇಟಿನೀಡುವಂತ ಯೋಜನೆಯನ್ನು ರೂಪಿಸಿದ್ದಾರೆ.
Leave A Reply