ವಂದೇ ಮಾತರಂ ಸಂಪೂರ್ಣ ಕೇಳಿದರೆ ಏನು ಸಿಗುತ್ತೆ ಅಲ್ವಾ ರಾಹುಲ್ ಗಾಂಧಿ!
ಇದೆಲ್ಲವೂ ಬಂಟ್ವಾಳದಲ್ಲಿಯೇ ಆಗ್ಬೇಕಾ? ಇದನ್ನೇ ಭಾರತೀಯ ಜನತಾ ಪಾರ್ಟಿಯವರು ಮಾಡಿದಿದ್ರೆ “ಅವರಿಗೆ ದೇಶದ ಮೇಲೆ ಭಕ್ತಿ ಇಲ್ಲ, ವಂದೇ ಮಾತರಂ ಹಾಡನ್ನು ಅರ್ಧಕ್ಕೆ ತುಂಡರಿಸಿದ್ದಾರೆ, ಹೀಗೆ ಬಿಟ್ಟರೆ ದೇಶದ ಸಂವಿಧಾನವನ್ನು ಕೂಡ ಬದಲಾಯಿಸುತ್ತಾರೆ, ದಲಿತರನ್ನು ಹಿಂಸಿಸುತ್ತಾರೆ, ಮೋದಿಯ ಆಜ್ಞೆಯ ಮೇಲೆನೆ ಇದೆಲ್ಲಾ ಆಗುತ್ತಿದೆ” ಎಂದು ಕಾಂಗ್ರೆಸ್ ನಾಯಕರು ಹೇಳಿ ದೇಶದಲ್ಲಿ ಒಂದು ಮಗು ಅತ್ತರೆ ಅದಕ್ಕೆ ಮೋದಿ ಕಾರಣ ಎನ್ನುವ ಮಟ್ಟಿಗೆ ಬಂದು ತಲುಪಿದ್ದಾರೆ. ಇವತ್ತೆಲ್ಲೋ ನಡೆದ ಕಾಂಗ್ರೆಸ್ಸಿಗರ ಜನಾಕ್ರೋಶ್ ಸಭೆಯಲ್ಲಿ ರಾಹುಲ್ ಗಾಂಧಿ ತಮ್ಮ 46 ನಿಮಿಷಗಳ ಭಾಷಣದಲ್ಲಿ 55 ಬಾರಿ ಮೋದಿಯವರ ಹೆಸರನ್ನು ಉಲ್ಲೇಖ ಮಾಡಿರುವುದಾಗಿ ಟೌಮ್ಸ್ ನೌ ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ.
ರಾಷ್ಟ್ರಗೀತೆ ಕೇಳಲು ಕಾಂಗ್ರೆಸ್ಸಿಗರಿಗೆ ಸಮಯ ಇಲ್ಲ..
ಇವರಿಗೆ ತಮ್ಮ ಅದೇ ರಾಗ, ಅದೇ ಹಾಡು ಹಾಡುತ್ತಾ ಪ್ರಧಾನ ಮಂತ್ರಿ ಮೋದಿಯವರನ್ನು ಬೈಯುವಾಗ ಎಷ್ಟು ಹೊತ್ತಾದರೂ ಪರವಾಗಿಲ್ಲ. ಅದೇ ದೇಶಕ್ಕೆ ದೇಶವೇ ಎದ್ದು ನಿಂತು ಗೌರವ ಸಲ್ಲಿಸುವ ವಂದೇ ಮಾತರಂ ಹಾಡನ್ನು ನಿಂತು ಸಂಪೂರ್ಣ ಆಲಿಸಿ ಗೌರವ ಸಲ್ಲಿಸಲು ಸಮಯ ಇಲ್ಲ. ಕಾರ್ಯಕ್ರಮದ ಕೊನೆಯಲ್ಲಿ ವಂದೇ ಮಾತರಂ ಹಾಡನ್ನು ವೇದಿಕೆಯ ಮೇಲೆ ನಿಂತ ಗಾಯಕಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಒಂದೇ ಲೈನ್ ಹಾಡಿ ಮುಗಿಸಲು ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ವಾಚ್ ತೋರಿಸಿ ರಾಹುಲ್ ಗಾಂಧಿ ಲೇಟ್ ಆಯಿತು ಎಂದು ತೋರಿಸುತ್ತಿರುವ ದೃಶ್ಯ ಅದೇ ವಿಡಿಯೋದಲ್ಲಿದೆ. ಗಾಯಕಿ ಒಂದೇ ಲೈನ್ ಹಾಡಿ ನಿಲ್ಲಿಸಿದಾಗ ಕೆಳಗಿದ್ದ ಎಲ್ಲರಿಗೂ ಅನಿಸಿದ್ದು ಏನೆಂದರೆ ಬಹುಶ: ವೇದಿಕೆಯಲ್ಲಿದ್ದ ಘಟಾನುಘಟಿ ನಾಯಕರನ್ನು ನೋಡಿ ಹಾಡುವವರಿಗೆ ಗಂಟಲಪಸೆ ಆರಿದೆ ಎಂದೇ ಅಂದುಕೊಂಡಿದ್ದರು. ಆದರೆ ನಮ್ಮ ರಾಷ್ಟ್ರಭಕ್ತಿ ಗೀತೆಯನ್ನು ಸಂಪೂರ್ಣವಾಗಿ ಕೇಳಲು ಕಾಂಗ್ರೆಸ್ ನಾಯಕರಿಗೆ ಧಮ್ ಇಲ್ಲ ಎಂದು ಗೊತ್ತಾದಾಗ ತಮ್ಮ ನಾಯಕರ ಬಗ್ಗೆ ಅಸಹ್ಯಪಟ್ಟುಕೊಂಡಿರಬಹುದು.
ವಂದೇ ಮಾತರಂ ಹಾಡನ್ನು ಒಂದೇ ಲೈನಿಗೆ ಹಾಡಿಸುವ ಕ್ರಮ ಯಾರು ಪ್ರಾರಂಭಿಸಿದರು ಎಂದು ಭವಿಷ್ಯದಲ್ಲಿ ಯಾವುದಾದರೂ ತರಗತಿಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿದರೆ ರಾಹುಲ್ ಗಾಂಧಿ ಎಂದು ಸುಲಭವಾಗಿ ಉತ್ತರಿಸಬಹುದು. ಇನ್ನು ಮುಂದೆ ಕಾಂಗ್ರೆಸ್ಸಿಗರು ತಮ್ಮ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡನ್ನು ಒಂದೇ ಲೈನಿಗೆ ಹಾಡಿಸುವ ಸಂಪ್ರದಾಯ ಆರಂಭಿಸಬಹುದು. ಹೇಗೂ ತಮ್ಮ ಅಧಿನಾಯಕನೇ ಹೀಗೆ ಮಾಡಲು ಶುರು ಮಾಡಿದ ಮೇಲೆ ಉಳಿದವರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು?
ನೆಹರೂ ಕೂಡ ಹೀಗೆ ಮಾಡಿದ್ದರು…
ಇನ್ನು ಇದರೊಂದಿಗೆ ರಾಹುಲ್ ಗಾಂಧಿ ಇನ್ನೊಂದು ವಿಷಯವನ್ನು ಕೂಡ ಸಾಬೀತು ಪಡಿಸಿದ್ದಾರೆ. ತಾವು ಜವಾಹರ್ ಲಾಲ್ ನೆಹರೂ ಅವರ ಮರಿ ಮೊಮ್ಮೊಗ ಎಂದು ಖಾತ್ರಿ ನೀಡಿದ್ದಾರೆ. ತಮ್ಮ ಮೈಯಲ್ಲಿ ಕೂಡ ಹರಿಯುತ್ತಿರುವುದು ನೆಹರೂ ರಕ್ತವೇ ಎಂದು ಸಾಬೀತು ಪಡಿಸಿದ್ದಾರೆ. ಏಕೆಂದರೆ 1937 ರಲ್ಲಿ ನೆಹರೂ ಕಾರ್ಯಕ್ರಮವೊಂದರಲ್ಲಿ ವಂದೇ ಮಾತರಂ ಹಾಡಿನ ಕೊನೆಯ ಮೂರು ಚರಣವನ್ನೇ ಕಟ್ ಮಾಡಲು ಸೂಚಿಸಿದ್ದರು. ಯಾಕೆಂದರೆ ಸಭೆಯಲ್ಲಿದ್ದ ಮೊಹಮ್ಮದ್ ಜಿನ್ನಾ ಅವರಿಗೆ ಮುಜುಗರ ಉಂಟಾಗುತ್ತದೆ ಎಂದು ನೆಹರೂ ಅವರಿಗೆ ಅನಿಸಿತ್ತು. ಈಗ ಅವರ ಮರಿ ಮೊಮ್ಮೊಗ ಅದನ್ನು ಮುಂದುವರೆಸಿದ್ದಾರೆ. ಪಿಜ್ಜನಿಗಿಂತ ತಾನು ಇನ್ನೂ ಫಾಸ್ಟ್ ಎಂದು ಸಾಬೀತುಪಡಿಸಿದ್ದಾರೆ. ಬಹುಶ: ಬಂಟ್ವಾಳದ ಮುಸಲ್ಮಾನ ಬಂಧುಗಳಿಗೆ ತುಂಬಾ ಖುಷಿಯಾಗಿರಬಹುದು. ನೀವು ವೇದಿಕೆಯಲ್ಲಿ ರಾಹುಲ್ ಗಾಂಧಿ ವಂದೆ ಮಾತರಂ ಪ್ರಾರಂಭವಾಗುವ ಹೊತ್ತಿನಲ್ಲಿ ತೋರಿಸುತ್ತಿದ್ದ ಅಸಹನೆಯನ್ನು ಗಮನಿಸಿರಬಹುದು. ಯಾವುದೋ ಅನಾವಶ್ಯಕ ವಿಷಯಕ್ಕೆ ಸಮಯ ವ್ಯರ್ಥ ಮಾಡುವುದು ಬೇಡಾ ಎನ್ನುವ ಬಾಡಿ ಲ್ಯಾಂಗ್ವೇಜ್ ಅವರು ಹೊಂದಿದ್ದಂತೆ ಕಾಣುತ್ತಿತ್ತು. ಕೊನೆಗೆ ಒಂದು ಲೈನ್ ಹಾಡುವುದಕ್ಕೆ ಪ್ರಾರಂಭವಾದಾಗ ವೇಣುಗೋಪಾಲ್ ರಾಹುಲ್ ಭುಜ ಹಿಡಿದು ನಿಲ್ಲಿಸಿಬಿಟ್ಟರು. ಇಲ್ಲದಿದ್ದರೆ ರಾಹುಲ್ ಗಾಂಧಿ ನಿಲ್ಲದಿದ್ದರೆ ಅದು ಮೀಡಿಯಾಗೆ ಚರ್ಚೆಗೆ ವಿಷಯವಾಗುತ್ತಿತ್ತು ಎಂದುಕೊಂಡ ವೇಣುಗೋಪಾಲ ಬುದ್ಧಿವಂತಿಕೆ ಮೆರೆದರು. ಆದರೆ ಅಷ್ಟೊತ್ತಿಗೆ ಕ್ಯಾಮೆರಾ ಕಣ್ಣುಗಳಿಗೆ ಏನು ಬೇಕೋ ಅದು ಸಿಕ್ಕಿ ಆಗಿತ್ತು.
ಮೇಲ್ನೋಟಕ್ಕೆ ಇದು ಹಲವರಿಗೆ ವಂದೇ ಮಾತರಂ ಮಹತ್ವ ಗೊತ್ತಿಲ್ಲದವರಿಗೆ ತುಂಬಾ ಸಣ್ಣ ವಿಷಯ ಅನಿಸಬಹುದು. ಆದರೆ ರಾಷ್ಟ್ರಭಕ್ತಿ ಗೀತೆಯನ್ನು ಸಂಪೂರ್ಣ ಕೇಳುವುದಕ್ಕೆ ವ್ಯವಧಾನ ಇಲ್ಲದವರು ನಮ್ಮ ರಾಷ್ಟ್ರವನ್ನು ಹೇಗೆ ಮುನ್ನಡೆಸಿಕೊಂಡು ಹೋಗುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಕಾಂಗ್ರೆಸ್ಸಿಗರಿಗೆ ಅಧಿಕಾರ ಕೊಟ್ಟರೆ ವಂದೇ ಮಾತರಂ ತನ್ನ ಅಸ್ತಿತ್ವಕ್ಕೆ ಸಂಚಕಾರ ತಂದುಕೊಡುತ್ತಾ? ಏಕೆಂದರೆ ಮೊಹಮ್ಮದ್ ಆಲಿ ಜಿನ್ನಾ ಅವರಿಗೆ ಮುಜುಗರ ಆಗುತ್ತೆ ಎಂದು ಆವತ್ತು ನೆಹರೂ ಅವರಿಗೆ ಅನಿಸಿದಂತೆ ಮುಂದೆ ರಾಹುಲ್ ಗಾಂಧಿಗೆ ಅನಿಸಿದರೆ!
Leave A Reply