ನಮಾಜ್ ಮಾಡಲು ಒಪ್ಪಲಿಲ್ಲ ಎಂದು ಬಾಲಕಿಯನ್ನೇ ಕೊಲ್ಲುತ್ತಾರೆಂದರೆ ಇದೆಂತಹ ಅಸಹಿಷ್ಣುತೆ!
ಮುಂಬೈ: ಯಾವುದೇ ಧರ್ಮವಾಗಲಿ, ಧರ್ಮಗ್ರಂಥವಾಗಲಿ, ದೇವರನ್ನು ಪೂಜಿಸಿ, ಪ್ರಾರ್ಥಿಸಿ, ಕೊನೆಯ ಪಕ್ಷ ಮನದಲ್ಲಾದರೂ ನಮಿಸಿ ಎಂದು ಹೇಳುತ್ತದೆಯೇ ವಿನಾ ಕಡ್ಡಾಯವಾಗಿ ದೇವರ ಮುಂದೆ ಮಂಡಿಯೂರಿ ಎಂದು ಹೇಳುವುದಿಲ್ಲ. ದೇವರೂ ಸಹ ಎಂದೂ ನನ್ನ ಮುಂದೆ ಮಂಡಿಯೂರಿ ಪ್ರಾರ್ಥಿಸಿ ಎಂದು ಯಾರ ಕನಸಲ್ಲೂ ಬಂದು ಹೇಳಿಲ್ಲ.
ಆದರೆ ಮುಂಬೈಯ ಆಂಟಾಪ್ ಹಿಲ್ ಎಂಬ ಪ್ರದೇಶದಲ್ಲಿ ಬಾಲಕಿಯೊಬ್ಬಳು ನಮಾಜ್ ಮಾಡಲು ಒಪ್ಪಲಿಲ್ಲ, ಕರೆದಾಗ ಬರಲಿಲ್ಲ ಎಂದು ಬಾಲಕಿಯ ಚಿಕ್ಕಮ್ಮ ಹಾಗೂ ಇಬ್ಬರು ಸೇರಿ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹೌದು, ಬಾಲಕಿಯ ತಾಯಿ ತೀರಿ ಹೋದ ಕಾರಣ, ಮಗಳನ್ನು ಸಾಕಲು ಆಗದ ಅಪ್ಪ ಆಕೆಯನ್ನು ಚಿಕ್ಕಮ್ಮನ ಬಳಿ ಬಿಟ್ಟಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕಳೆದ ಶುಕ್ರವಾರ ಬಾಲಕಿಗೆ ನಮಾಜು ಮಾಡಲು ಬಾ ಎಂದಿದ್ದಾರೆ. ದೇವರು ಎಂದರೆ ಸ್ಪಷ್ಟ ಕಲ್ಪನೆಯನ್ನೇ ಇರದ, ಪ್ರಾರ್ಥನೆ ಎಂದರೆ ಸಂಪೂರ್ಣವಾಗಿ ಗೊತ್ತಿರದ ಬಾಲಕಿ ನಮಾಜಿಗೆ ಬರುವುದಿಲ್ಲ ಎಂದಿದ್ದಾಳೆ ಎಂದು ತಿಳಿದುಬಂದಿದೆ.
ಆಗ ಸುಮ್ಮನಿರದ ಚಿಕ್ಕಮ್ಮ ನಮಾಜಿಗೆ ಬರಲೇಬೇಕು ಎಂದು ಬಾಲಕಿಗೆ ಒತ್ತಾಯಿಸಿದ್ದಾಳೆ. ಆಗಲೂ ಬಾಲಕಿ ಬರದ ಕಾರಣ ತನ್ನ ಇಬ್ಬರು ಸಂಬಂಧಿಯನ್ನು ಕರೆಸಿ ಬಾಲಕಿಯ ಕತ್ತಿಗೆ ದುಪ್ಪಟ್ಟಾದಿಂದ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಬಾಲಕಿಯ ಉಸಿರು ನಿಂತ ಮೇಲೆ ಭೀತಿಗೊಳಗಾದ ಮೂವರೂ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು, ಬಚ್ಚಲಿನಲ್ಲಿ ಕಾಲು ಜಾರಿ ಬಿದ್ದಿದ್ದು, ಚಿಕಿತ್ಸೆ ನೀಡಿ ಎಂದಿದ್ದಾರೆ. ತಪಾಸಣೆ ಬಳಿಕ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಧ್ಯಮದವರ ಎದುರು ಬಾಲಕಿಯ ತಂದೆ ಅಳಲು ತೋಡಿಕೊಂಡಿದ್ದು, ನನ್ನ ಮಗಳನ್ನು ಸಾಕಿ ಎಂದು ಅವರ ಮನೆಯಲ್ಲಿ ಬಿಟ್ಟಿದ್ದೇ ತಪ್ಪಾಯಿತಾ? ನಮಾಜು ಮಾಡದಿದ್ದರೆ ನನಗೆ ಹೇಳಬಹುದಿತ್ತು, ಆದರೆ ಕೊಲೆಯನ್ನೇ ಏಕೆ ಮಾಡಬೇಕಿತ್ತು ಎಂದು ಅವಲತ್ತುಕೊಂಡಿದ್ದಾರೆ.
ಈಗ ಹೇಳಿ ಬಾಲಕಿ ನಮಾಜು ಮಾಡಲು ಒಪ್ಪದಿರುವುದೇ ತಪ್ಪಾಯಿತೇ? ಯಾವ ದೇವರು ತಾನೆ ನನಗೆ ಪ್ರಾರ್ಥನೆ ಮಾಡಲೇಬೇಕು ಎಂದು ಯಾವ ಧರ್ಮಗುರುವಿಗೆ ಹೇಳಿದ್ದಾನೆ? ಯಾವ ಧರ್ಮಗ್ರಂಥದಲ್ಲಿ ಪ್ರಾರ್ಥನೆ ಮಾಡದಿರುವುದು ಕೊಲೆ ಮಾಡುವಷ್ಟು ಅಪರಾಧ ಎಂದು ಉಲ್ಲೇಖಿಸಲಾಗಿದೆ? ಇಂತಹ ಧರ್ಮ ಅಸಹಿಷ್ಣುತೆಗೆ ಏನೆಂದು ಕರೆಯುವುದು? ಏಕೆ ಈ ಕುರಿತು ಯಾವ ಮಾಧ್ಯಮಗಳೂ ವರದಿ ಮಾಡುವುದಿಲ್ಲ?
Leave A Reply