ಕೇಂದ್ರದ ಉಜ್ವಲ ಯೋಜನೆಯಡಿ ಇದುವರೆಗೆ ಉಳಿತಾಯವಾದ ಇಂಧನ ಎಷ್ಟು ಗೊತ್ತೆ?
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಜಾರಿಗೆ ತಂದಿರುವ ದೂರದೃಷ್ಟಿಯ ಯೋಜನೆಗಳು ನಾಲ್ಕು ವರ್ಷದ ನಂತರ ಇದೀಗ ಸಾರ್ಥಕತೆಯನ್ನು ಕಾಣುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಜಾರಿಗೆ ತಂದಿರುವ ಉಜ್ವಲ ಯೋಜನೆಯಿಂದ ದೇಶಕ್ಕೆ ಭಾರಿ ಲಾಭವಾಗುತ್ತಿದ್ದು, ವಾರ್ಷಿಕ 38,952 ದಶಲಕ್ಷ ಕಿಲೋ ವ್ಯಾಟ ಇಂಧನ ಉಳಿತಾಯವಾಗಿದೆ.
ದೇಶಾದ್ಯಂತ ಸಾರ್ವಜನಿಕ ವಲಯದ ಎನರ್ಜಿ ಎಫೀಶಿಯನ್ಸಿ ಸರ್ವೀಸ್ ಲಿಮಿಟೆಡ್ (ಇಇಎಸ್‌ಎಲ್) ದೇಶಾದ್ಯಂತ 30 ಕೋಟಿಗೂ ಅಧಿಕ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಿದ್ದು, ಇದರಿಂದ ವಾರ್ಷಿಕ 15,581 ಕೋಟಿ ರೂ. ಇಂಧನ ಉಳಿತಾಯವಾಗಿದೆ ಇಇಎಸ್ ಎಲ್ ಸಂಸ್ಥೆ ತಿಳಿಸಿದೆ.
ಕಡಿಮೆ ದರದ ಎಲ್‌ಇಡಿ ಬಲ್ಬ್ಗಳನ್ನು ಜನರಿಗೆ ದೊರಕಿಸಿ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯನ್ನು ಜಾತಿಗೆ ತಂದಿತ್ತು. 2015ರ ಜನವರಿಯಲ್ಲಿ ಈ ಯೋಜನೆ ಘೋಷಿಸಲಾಗಿತ್ತು. ಪ್ರಸ್ತುತ ಉಜ್ವಲ್ ಯೋಜನೆ ದೇಶದಲ್ಲೇ ಅತಿ ದೊಡ್ಡ ಯೋಜನೆಯಾಗಿ ದಾಖಲೆ ಬರೆದಿದ್ದಲ್ಲೇ, ದೇಶಕ್ಕೆ ಭಾರಿ ಪ್ರಮಾಣದ ವಿದ್ಯುತ್ ಉಳಿತಾಯ ಮಾಡಿದೆ.
ಎಲ್ ಇಡಿ ಬಲ್ಬ್ ಗಳನ್ನು ವಿತರಿಸುವುದರಿಂದ ದೇಶದಲ್ಲಿ ವಾರ್ಷಿಕ 38,952 ದಶಲಕ್ಷ ಕಿಲೊವ್ಯಾಟ್ ಇಂಧನ ಉಳಿತಾಯವಾಗಿದ್ದು, ಭಾರತ ಇಂಗಾಲದ ಮಾಲಿನ್ಯವನ್ನು ಸಾಧ್ಯವಾದಷ್ಟು ತಗ್ಗಿಸಲು ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳ ಸಾಲಿನಲ್ಲಿ ಉಜ್ವಲ ಯೋಜನೆಯೂ ಒಂದಾಗಿದ್ದು, ಇದರಿಂದಲೂ ಮಾಲಿನ್ಯವನ್ನು ತಗ್ಗಿಸಲು ಮಹತ್ವದ ಕೊಡುಗೆ ನೀಡುತ್ತದೆ ಎಂದು ಇಇಎಸ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಕುಮಾರ್ ತಿಳಿಸಿದ್ದಾರೆ.
Leave A Reply