ಪ್ರಧಾನಿ ಹತ್ಯೆಗೆ ಪ್ಲಾನ್ ಎಂದರೂ ಪ್ರಚಾರದ ತಂತ್ರ ಎನ್ನುವ ಹೀನ ರಾಜಕೀಯಕ್ಕಿಳಿದಿರುವುದು ದುರಂತವಲ್ಲವೇ?
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಛತ್ತಿಸಗಢದ ಅಬುಜಮಡ್ ಎಂಬ ನಕ್ಸಲರ ಬಲಿಷ್ಠ ಹಿಡಿತದಲ್ಲಿದ್ದ ಪ್ರದೇಶಕ್ಕೆ ಇದೀಗ ಸೈನಿಕರು ನುಗ್ಗಿ ಕೆಂಪು ಉಗ್ರರನ್ನು ಸದೆ ಬಡೆಯುತ್ತಿದ್ದಾರೆ. ಏಳು ದಶಕಗಳಾದರೂ ಆ ಪ್ರದೇಶದಲ್ಲಿ ಇದುವರೆಗೆ ಒಮ್ಮೆಯೂ ರಾಷ್ಟ್ರ ಧ್ವಜವೇ ಹಾರಿಸಿಲ್ಲ ಎಂದರೆ ಅಲ್ಲಿ ನಕ್ಸಲರ ಪ್ರಭಾವ ಎಂಥಾದ್ದಿರಬೇಕು ಯೋಚಿಸಿ. ನಕ್ಸಲರ ಕಪಿಮುಷ್ಠಿಯಲ್ಲಿರುವ ಅಬುಜಮಡ್ ಎಂಬ ಪ್ರದೇಶಕ್ಕೆ ಭಾರತೀಯ ಸೈನಿಕರು ನುಗ್ಗಿದ್ದಾರೆ. ಅಲ್ಲಿನ ಮುಗ್ದ ಜನರಿಗೆ ಸ್ವಾತಂತ್ರ್ಯದ ಸ್ವಾಧ ಉಣಬಡಿಸಿದ್ದಾರೆ. ಇಷ್ಟು ವರ್ಷ ದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಾಡದ ಕಾರ್ಯವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಲ್ಕು ವರ್ಷದಲ್ಲೇ ಮಾಡಿದೆ.
ನಿರಂತರವಾಗಿ ದೇಶದಲ್ಲಿನ ಕೆಂಪು ಉಗ್ರರನ್ನು ಯಶಸ್ವಿಯಾಗಿ ಹತ್ತಿಕ್ಕಲಾಗುತ್ತಿದೆ. ನೂರಾರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಹಲವು ನಕ್ಸಲರು ಮುಖ್ಯವಾಹಿನಿಗೆ ಬರತೊಡಗಿದ್ದಾರೆ. ಆದರೆ ನಕ್ಸಲರನ್ನು ಮುನ್ನೆಲೆಯಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿರುವ ಮುಖಂಡರು ಇದೀಗ ಬೀದಿಗೆ ಬಂದಿದ್ದಾರೆ, ಬಲವಿಲ್ಲದೇ ಕುಗ್ಗಿ ಹೋಗಿದ್ದಾರೆ. ಅದಕ್ಕಾಗಿ ಅವರಿಗೆ ಕಂಟಕವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹತ್ಯೆ ಮಾಡುವ ಪ್ಲಾನ್ ರೂಪಿಸಿರುವುದು ಇದೀಗ ಬಹಿರಂಗವಾಗಿದೆ.
ದೇಶದ ಪ್ರಧಾನ ಮಂತ್ರಿಯವರನ್ನೇ ಮುಗಿಸುವ ಸಂಚು ರೂಪಿಸುವ ಹಿಂದಿರುವ ಸ್ಪಷ್ಟ ಕಾರಣ ಮೋದಿ ಕೆಂಪು ಉಗ್ರರ ವಿರುದ್ಧ ಕೈಗೊಂಡಿರುವ ಕಠಿಣ ನಿರ್ಧಾರಗಳು ಇದೀಗ ಅವರ ಜೀವಕ್ಕೆ ಕುತ್ತು ತಂದಿರುವುದು ಸ್ಪಷ್ಟವಾಗುತ್ತಿದೆ. ಆದರೆ ದುರಂತವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ವಿಚಾರ ಒಂದು ಪ್ರಚಾರದ ತಂತ್ರ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರೂಪಮ ಹೇಳಿರುವುದು ದೇಶದ ರಾಜಕೀಯ ಹೀನಸ್ಥಿತಿಗೆ ಇಳಿಸಿರುವುದರ ಸಂಕೇತ. ದೇಶ, ರಾಷ್ಟ್ರಭಿಮಾನ, ರಾಷ್ಟ್ರದ ಹಿತ ಮರೆತವರಿಂದ ಮಾತ್ರ ಇಂತಹ ಹೇಳಿಕೆಗಳು ಹೊರ ಬರಲು ಸಾಧ್ಯ.
ದೇಶದ ಪ್ರಧಾನಿ ಹತ್ಯೆಗೆ ಬೆದರಿಕೆ ಬಂದರೂ ಅದರಲ್ಲೂ ರಾಜಕೀಯ ಹುಡುಕಾಡುವ ಹೀನ ಮನಸ್ಥಿತಿಗೆ ಇಳಿದಿರುವುದು ದೇಶಕ್ಕಂಟಿದ ದುರಂತ. ಇದೇ ಕಾಂಗ್ರೆಸ್ಸಿಗರು ಇಂದಿರಾ ಗಾಂಧಿ ಹತ್ಯೆಯಾದಾಗ, ರಾಜೀವ್ ಗಾಂಧಿ ಹತ್ಯೆಯಾದಾಗ ಕಣ್ಣಿರಿಟ್ಟು ದುಖಿಃಸಿದ್ದು ಇಡೀ ದೇಶವೇ ನೋಡಿದೆ. ಇಂದಿರಾ, ರಾಜೀವ್ ಹತ್ಯೆಯ ಹೇಯ ಕೃತ್ಯವನ್ನು ಇಡೀ ದೇಶವೇ ಖಂಡಿಸಿದ್ದು, ಅಶೃತರ್ಪಣ ಸಲ್ಲಿಸಿತ್ತು. ಇದೀಗ ಅಧಿಕಾರವಿಲ್ಲದೇ ಅನಾಥರಾಗಿರುವ ಕಾಂಗ್ರೆಸ್ಸಿಗರು ಹತಾಶರಾಗಿ, ತಮ್ಮ ಹೀನ ಮನಸ್ಥಿತಿಯನ್ನು ದೇಶದ ಪ್ರಧಾನಿಯ ಹತ್ಯೆಯ ಯೋಜನೆ ರೂಪಿಸಿದರೂ ತೋರ್ಪಡಿಸುತ್ತಿರುವುದು ಕಾಂಗ್ರೆಸ್ ನ ಅವನತಿಗೆ ಮತ್ತೊಂದು ಸ್ಪಷ್ಟ ಉದಾಹರಣೆ ಬಿಟ್ಟರೇ ಬೇರೆನಿಲ್ಲ.
ರಾಷ್ಟ್ರದ ನೇತಾರನ ಹತ್ಯೆಯ ವಿಷಯವನ್ನು ಪ್ರಚಾರದ ತಂತ್ರ ಎನ್ನುವ ಮೂಲಕ ತನಿಖಾ ಸಂಸ್ಥೆಗಳ ತನಿಖೆಯ ದಿಕ್ಕು ತಪ್ಪಿಸುವ ಕೆಲಸಕ್ಕೂ ಕಾಂಗ್ರೆಸ್ಸ ಮುಖಂಡರು ಕೈ ಹಾಕಿರುವುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪಕ್ಷಕ್ಕಿಂತ ಮೊದಲು ದೇಶದ ಪ್ರತಿನಿಧಿ ಎಂಬ ಸಣ್ಣ ಪರಿಜ್ಞಾನವೂ ಕಾಂಗ್ರೆಸ್ ಮುಖಂಡರಿಗಲ್ಲವಲ್ಲ ಎಂಬುದೇ ದೇಶಕ್ಕೆ ಎದುರಾದ ಸಂಕಟ.
ದೇಶದಲ್ಲಿ ಬಿಜೆಪಿ ಸರಣಿ ಗೆಲುವು ಸಾಧಿಸುತ್ತಿದೆ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಮಾವೋವಾದಿಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ಇದೀಗ ಅವನತಿ ಅಂಚಿನಲ್ಲಿರುವ ಕಾಂಗ್ರೆಸ್ ಮತ್ತು ಮಾವೋವಾದಿಗಳ ಮನಸ್ಥಿತಿಗೆ ವ್ಯತ್ಯಾಸ ಇಲ್ಲದ ರೀತಿ ಕಾಂಗ್ರೆಸ್ ಮುಖಂಡರು ವರ್ತಿಸದೇ ಇರುವುದು ಒಳಿತು. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನಿಯಲ್ಲ ದೇಶದ ಪ್ರಧಾನಿ ಎಂಬ ಪರಿಜ್ಞಾನ ಇಟ್ಟುಕೊಂಡು ಮಾತನಾಡಬೇಕು. ಇಲ್ಲದಿದ್ದರೆ ಸೋಲುಣ್ಣುತ್ತಿರುವ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಆದರೆ ಅಚ್ಚರಿಯಿಲ್ಲ.
Leave A Reply