• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಾಜಪೇಯಿ ಆರೋಗ್ಯವಂತರಾಗಿ ಮನೆಗೆ ಹಿಂತಿರುಗಲಿ ಎನ್ನುವ ಹಾರೈಕೆ..

Hanumantha Kamath Posted On June 12, 2018


  • Share On Facebook
  • Tweet It

ಭಾರತದಲ್ಲಿ ಪಕ್ಷಾತೀತವಾಗಿ ರಾಜಕೀಯ ವಲಯದಲ್ಲಿ ಅಜಾತಶತ್ರು ಎಂದೇ ನಿಜವಾದ ಅರ್ಥದಲ್ಲಿ ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ವೈದ್ಯರು ವಾಜಪೇಯಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಬದುಕಿರುವ ಮಾಜಿ ಪ್ರಧಾನ ಮಂತ್ರಿಗಳಲ್ಲಿ ಅತ್ಯಂತ ಹಿರಿಯರು ಎಂದರೆ ವಾಜಪೇಯಿ. ಭಾರತೀಯ ಜನತಾ ಪಾರ್ಟಿಗೆ ರಾಷ್ಟ್ರದಲ್ಲಿ ಎರಡೇ ಲೋಕಸಭಾ ಸ್ಥಾನಗಳು ಇರುವಾಗ ತಮ್ಮನ್ನು ಅಣಕಿಸುತ್ತಿದ್ದ ಕಾಂಗ್ರೆಸ್ಸಿಗೆ ತುಂಬಿದ ಲೋಕಸಭೆಯಲ್ಲಿ ನಿಂತು ಅವರು ಹೇಳಿದ ಮಾತನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ. “ನಾವು ಇವತ್ತು ಎರಡೇ ಸ್ಥಾನ ಮಾತ್ರ ಇದ್ದಿವಿ ಎಂದು ನೀವು ತಮಾಷೆ ಮಾಡ್ತಾ ಇದ್ದಿರಿ. ಒಂದು ಕಾಲ ಬರುತ್ತೆ, ಆವತ್ತು ಇಡೀ ಭಾರತದಲ್ಲಿ ಬಿಜೆಪಿ ಬಾವುಟ ಹಾರುತ್ತಿರುತ್ತದೆ” ಎಂದಿದ್ದರು ಅಟಲ್. ಇವತ್ತು ಆ ಮಾತು ನಿಜವಾಗಿದೆ. ಬಿಜೆಪಿ ಪಂಜಾಬ್, ಪುದುಚೇರಿ, ಕರ್ನಾಟಕದಲ್ಲಿ ಬಿಟ್ಟರೆ ಎಲ್ಲ ಕಡೆಗಳಲ್ಲಿ ಸ್ವಂತ ಬಲದಲ್ಲಿ ಅಥವಾ ಮಿತ್ರಪಕ್ಷಗಳೊಂದಿಗೆ ಆಳ್ವಿಕೆ ಮಾಡುತ್ತಿದೆ. 2004 ನೇ ಲೋಕಸಭಾ ಚುನಾವಣೆಯ ತನಕ ವಾಜಪೇಯಿ ಸಕ್ರಿಯವಾಗಿ ರಾಜಕೀಯದಲ್ಲಿ ತಮ್ಮ ಛಾಪನ್ನು ತೋರಿಸಿದ್ದರು.

ಅಟಲ್ ಆವತ್ತು ಆಪರೇಶನ್ ಕಮಲಕ್ಕೆ ಮುಂದಾಗಿದ್ದರೆ.

1996 ರಿಂದ 2004 ರ ತನಕ ವಾಜಪೇಯಿಯವರ ರಾಜಕೀಯ ಬದುಕಿನಲ್ಲಿ ಅತೀ ಹೆಚ್ಚು ಏಳು ಬೀಳುಗಳನ್ನು ಕಂಡ ವರ್ಷಗಳು. 1996 ರಲ್ಲಿ 13 ದಿನ ಪ್ರಧಾನಿಯಾಗಿದ್ದ ಅಟಲ್ ಜಿ, 1998 ರಲ್ಲಿ ಎರಡನೇ ಬಾರಿ ಪ್ರಧಾನಿಯಾದಾಗ 13 ತಿಂಗಳು ಪ್ರಧಾನಿಯಾಗಿದ್ದರು. 1999 ರ ಮಧ್ಯದಲ್ಲಿ ಜಯಲಲಿತಾ, ಎನ್ ಡಿಎಗೆ ಕೊಟ್ಟ ಬೆಂಬಲವನ್ನು ಹಿಂತೆಗೆಯುವ ಮೂಲಕ ಸರಕಾರ ಪತನಗೊಳಿಸಲು ಮುಂದಾಗಿದ್ದರು. ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಾಗ ವಾಜಪೇಯಿಯವರಿಗೆ ಒಂದು ಮತದ ಕೊರತೆ ಉಂಟಾಯಿತು. ತಮ್ಮ ಸರಕಾರವನ್ನು ಅನೈತಿಕ ಮಾರ್ಗದಿಂದ ಉಳಿಸಲು ಹೊರಟಿದ್ದರೆ ವಾಜಪೇಯಿಯವರು ಇವತ್ತು ನಮ್ಮ ನಿಮ್ಮ ಹೃದಯದಲ್ಲಿ ಸ್ಥಾನ ಪಡೆಯುತ್ತಿರಲಿಲ್ಲವೇನೋ. ವಾಜಪೇಯಿ ತಮ್ಮ ಸರಕಾರಕ್ಕೆ ಒಂದು ಸ್ಥಾನದ ಕೊರತೆ ಇದೆ ಎಂದು ಗೊತ್ತಾದ ತಕ್ಷಣ ಲೋಕಸಭೆಯನ್ನು ವಿಸರ್ಜಿಸಿದ್ದರು. ಈ ಮೂಲಕ ರಾಷ್ಟ್ರ ರಾಜಕೀಯದಲ್ಲಿ ತಮ್ಮ ವ್ಯಕ್ತಿತ್ವ ಏನು ಎನ್ನುವುದನ್ನು ತೋರಿಸಿದ್ದರು. ನಂತರ 1999 ರಲ್ಲಿ ಮತ್ತೆ ಚುನಾವಣೆ ನಡೆದು 543 ಸೀಟುಗಳಲ್ಲಿ 303 ಸೀಟುಗಳನ್ನು ಎನ್ ಡಿಎ ಗೆದ್ದಾಗ ಅಟಲ್ ಮೂರನೆ ಬಾರಿ ಪ್ರಧಾನಿಯಾದರು. ಅವರ ಅಭಿವೃದ್ಧಿ ಮಂತ್ರ ಮತ್ತು ದೇಶ ಕಂಡ ಪ್ರಗತಿಯನ್ನು 2004 ರಲ್ಲಿ ಜನ ಪುರಸ್ಕರಿಸದೇ ಹೋದದ್ದು ಕಂಡು ವಾಜಪೇಯಿಯವರಿಗೆ ಆಘಾತವಾಯಿತು. ಅವರು ಚುನಾವಣಾ ಸೋಲನ್ನು ಒಪ್ಪಿ ಲೋಕಸಭೆಯ ಪ್ರತಿಪಕ್ಷ ಸ್ಥಾನವನ್ನು ಅಡ್ವಾಣಿಯವರಿಗೆ ಕೊಟ್ಟು ಎನ್ ಡಿಎ ಚೇರ್ ಮೆನ್ ಆಗಿ ಉಳಿದುಬಿಟ್ಟರು.

1996-2004 ಅತೀ ಹೆಚ್ಚು ಏಳು ಬೀಳು.

ವಾಜಪೇಯಿಯವರ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗಳು ಯಾವತ್ತೂ ನೆನಪಿನಲ್ಲಿ ಉಳಿಯುವಂತಹ ಯೋಜನೆಗಳು. 2013, ಜುಲೈ 1 ರಂದು ಸುಪ್ರೀಂ ಕೋರ್ಟ್ ಎದುರು ಯುಪಿಎ ಸರಕಾರ ವಾಜಪೇಯಿಯವರ ರಾಷ್ಟ್ರೀಯ ಹೆದ್ದಾರಿ ಕಾರ್ಯಕ್ರಮಗಳ ಬಗ್ಗೆ, ಅಭಿವೃದ್ಧಿಯ ಬಗ್ಗೆ ಒಪ್ಪಿಕೊಂಡಿತ್ತು.
ವಿಮಾನ ಅಪಹರಣ, ಕಾರ್ಗಿಲ್ ಯುದ್ಧ ಮತ್ತು ಪಾರ್ಲಿಮೆಂಟ್ ದಾಳಿಗಳು ವಾಜಪೇಯಿ ಪ್ರಧಾನ ಮಂತ್ರಿಯಲ್ಲಿ ಆದ ದುರ್ಘಟನೆಗಳು. ಮೂರು ಘಟನೆಗಳ ಹಿಂದೆನೂ ಪಾಕಿಸ್ತಾನದ ನೆರಳಿದೆ. ಇದನ್ನು ಗಮನಿಸುವಾಗ ಎನ್ ಡಿಎ ಪ್ರಧಾನಿಯನ್ನು ಇಳಿಸಲು ಆವಾಗಲೂ ಪ್ರಯತ್ನ ಆಗಿತ್ತು ಎಂದು ಅನಿಸುತ್ತದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ಪಾಕಿಸ್ತಾನಕ್ಕೆ ಹೋಗಿ ನರೇಂದ್ರ ಮೋದಿಯವರನ್ನು ಇಳಿಸಲು ಬೆಂಬಲ ಕೋರಿದ್ದನ್ನು ಇಲ್ಲಿ ನೆನಪಿಸಬಹುದು.
ನ್ಯೂಕ್ಲಿಯರ್ ಟೆಸ್ಟ್ ಮಾಡುವ ಮೂಲಕ ತಮ್ಮ ಸಾಮರ್ತ್ಯವನ್ನು ಪ್ರಪಂಚಕ್ಕೆ ತೋರಿಸಿದ ಅಟಲ್, ತಮ್ಮ ವಿರೋಧಿಗಳು ಧೈರ್ಯ ಪ್ರದರ್ಶಿಸುವಾಗ ಬೆನ್ನು ತಟ್ಟಲು ಮರೆಯುತ್ತಿರಲಿಲ್ಲ. ಅವರು ಇಂದಿರಾ ಗಾಂಧಿಯವರನ್ನು 1971 ರ ಬಾಂಗ್ಲಾ ವಿಮೋಚನೆಯ ಯುದ್ಧದ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡುವಾಗ “ದುರ್ಗಾ” ಎಂದು ಹೊಗಳಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಅವರು ನಿಜವಾಗಿಯೂ ಹಾಗೆ ಹೇಳಿದ್ದಾರಾ ಅಥವಾ ಅದನ್ನು ಕಾಂಗ್ರೆಸ್ ಹುಟ್ಟು ಹಾಕಿ ತಮ್ಮ ನಾಯಕಿಯನ್ನು ಹೊಗಳಲು ಕ್ರಿಯೆಟ್ ಮಾಡಿದ ಸಂಗತಿನಾ ಎನ್ನುವ ಬಗ್ಗೆ ಇವತ್ತಿಗೂ ದೆಹಲಿ ಪತ್ರಕರ್ತರಲ್ಲಿ ಮತ್ತು ರಾಜಕಾರಣ ವಲಯದಲ್ಲಿ ಗೊಂದಲವಿದೆ. ಅದೇನೆ ಇರಲಿ, ಕವಿ, ಪಾಂಡಿತ್ಯದ ಘನಿ ಅಟಲ್ ತಮ್ಮ ವೈಯಕ್ತಿಕ ಜೀವನದಲ್ಲಿಯೂ ಮುಚ್ಚು ಮರೆ ಇಟ್ಟುಕೊಳ್ಳದೇ ಶುದ್ಧ ಚಾರಿತ್ರ್ಯ ಇಟ್ಟುಕೊಂಡಿದ್ದರು. ಅವರು ಆರೋಗ್ಯವಂತರಾಗಿ ಮನೆಗೆ ಹಿಂತಿರುಗಲಿ ಎನ್ನುವ ಅವರ ಕೋಟ್ಯಾಂತರ ಅಭಿಮಾನಿಗಳಂತೆ ನನ್ನದು ಕೂಡ ಹಾರೈಕೆ.

  • Share On Facebook
  • Tweet It


- Advertisement -


Trending Now
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
Hanumantha Kamath May 30, 2023
ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
Hanumantha Kamath May 29, 2023
Leave A Reply

  • Recent Posts

    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
  • Popular Posts

    • 1
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 2
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 3
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 4
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search