ಅಮೆರಿಕ ಡ್ರೋನ್ ದಾಳಿಗೆ ತಾಲೀಬಾನ್ ಮುಖ್ಯಸ್ಥ ಮುಲ್ಲಾ ಫಸ್ಲುಲ್ಲಾ ಬಲಿ
ದೆಹಲಿ: ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದಕ ಸಂಘಟನೆ ತಾಲಿಬಾನ್ನ ಮುಖ್ಯಸ್ಥ ಮುಲ್ಲಾಫಸ್ಲುಲ್ಲಾ ಅಮೆರಿಕದ ಡ್ರೋನ್ ದಾಳಿಗೆ ಬಲಿಯಾಗಿರುವ ಶುಭ ಸುದ್ದಿಯೊಂದು ಅಮೆರಿಕಾದ ಸೇನಾಪಡೆ ನೀಡಿದೆ. ಅಮೆರಿಕಾದ ಸೈನ್ಯ ಅಫಘಾನಿಸ್ತಾನದಲ್ಲಿ ಗುರುವಾರ ನಡೆಸಿದ ಡ್ರೋನ್ ದಾಳಿಯಲ್ಲಿ ಮುಲ್ಲಾ ಫಸ್ಲುಲ್ಲಾ ಖಲ್ಲಾಸ್ ಆಗಿರುವ ಸುದ್ದಿಯನ್ನು ಅಮೆರಿಕ ಬಹಿರಂಗಪಡಿಸಿದೆ. ಈ ಮೂಲಕ ವಿಶ್ವಶಾಂತಿಕೆ ಕಂಟಕವಾಗಿರುವ ಮಹತ್ವದ ಭಯೋತ್ಪಾದಕ ಸಂಘಟನೆಯ ಮುಖಂಡನೊಬ್ಬನನ್ನು ಹತ್ಯೆ ಮಾಡಿರುವ ಶ್ರೇಯಸ್ಸು ಅಮೆರಿಕ ಪಡೆದಿದೆ.
ಅಮೆರಿಕದ ಸೈನ್ಯ ನಡೆಸಿದ ಭಯೋತ್ಪಾದನ ನಿಗ್ರಹ ದಾಳಿಯಲ್ಲಿ, ತಹ್ರಿಕ್ -ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥ ಫಸ್ಲುಲ್ಲ ಹಾಗೂ ಆತನ ಸಹಚರರು ಹತರಾಗಿದ್ದಾರೆ ಎಂಬ ಮಾಹಿತಿ ಅಮೆರಿಕ ಸೇನಾಪಡೆ ಅಧಿಕೃತವಾಗಿ ಹೊರಹಾಕಿದೆ.
ಅಫಘಾನಿಸ್ತಾನದ ಕುನ್ನಾರ್ ಪ್ರಾಂತ್ಯದಲ್ಲಿ ಭಯೋತ್ಪಾದನಾ ಸಂಘಟನೆಗಳ ಮುಖ್ಯಸ್ಥರನ್ನು ಗುರಿಯಾಗಿಸಿಕೊಂಡು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಮುಲ್ಲಾಫಸ್ಲುಲ್ಲಾ ಖಾನ್ ಹತರಾಗಿದ್ದಾರೆ ಎಂದು ಅಫಘಾನಿಸ್ತಾನದಲ್ಲಿರುವ ಅಮೆರಿಕದ ಲೆಫ್ಟಿನೆಂಟ್ ಕ.ಮಾರ್ಟಿನ್ ಮೆಕ್‌ಡೊನೆಲ್ ತಿಳಿಸಿದ್ದಾರೆ.
2014ರಲ್ಲಿ ತಾಲಿಬಾನ್ ಸಂಘಟನೆಯ ಮುಲ್ಲಾಫಸ್ಲುಲ್ಲಾ ಪಾಕಿಸ್ತಾನದಲ್ಲಿನ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ,130 ಮಕ್ಕಳನ್ನು ಬಲಿಪಡೆದುಕೊಂಡಿದ್ದ ಮತ್ತು 2012ರಲ್ಲಿ ನೋಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯುಸಫ್ ಝಾಯಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
Leave A Reply