ಭಯೋತ್ಪಾದಕರಿಗೆ ಗುಂಡಿನ ಭಾಷೆ ಅರ್ಥವಾಗುತ್ತೇ, ಉಗ್ರರು ಕಂಡಲ್ಲಿ ಗುಂಡು ಹಾರಿಸುವ ಅಧಿಕಾರ ನೀಡಬೇಕು: ಸುಬ್ರಮಣಿಯನ್ ಸ್ವಾಮಿ
ದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ನಲ್ಲೂ ಗಡಿನಿಮಯ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕಿಸ್ತಾನದ ಯೋಧರು ಮತ್ತು ಪಾಕ್ ಬೆಂಬಲಿತ ಭಯೋತ್ಪಾದಕರಿಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ತಕ್ಕ ಉತ್ತರ ನೀಡಿದ್ದು, ಭಯೋತ್ಪಾದಕರಿಗೆ ಕೇವಲ ಗುಂಡಿನ ಭಾಷೆಯಲ್ಲೇ ಉತ್ತರ ನೀಡಬೇಕು. ಗುಂಡಿನ ಭಾಷೆ ಮಾತ್ರ ಅವರಿಗೆ ಅರ್ಥವಾಗುತ್ತದೆ ಎಂದು ಖಡಕ್ ಮಾತುಗಳನ್ನು ಹೇಳಿದ್ದಾರೆ.
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಪವಿತ್ರ ರಂಜಾನ್ ಮಾಸದಲ್ಲಿ ಕೇಂದ್ರ ಸರ್ಕಾರ ಸೈನಿಕ ಕಾರ್ಯಾಚರಣೆ ನಡೆಸುವುದನ್ನು ಸ್ಥಗಿತಗೊಳಿಸಿದೆ. ಆದರೆ ಮುಸ್ಲಿಂ ದೇಶವಾದ ಪಾಕಿಸ್ತಾನ ರಂಜಾನ್ ಮಾಸದಲ್ಲೂ ತನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದೆ. ಗುರುವಾರ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಕೊಲೆ ಮತ್ತು ರೈಸಿಂಗ್ ಕಾಶ್ಮೀರ ಪತ್ರಿಕೆ ಸಂಪಾದಕ ಪತ್ರಕರ್ತ ಶುಜತ್ ಬುಕಾರಿ ಅವರ ಕೊಲೆ ಮಾಡಿರುವ ಭಯೋತ್ಪಾದಕರ ನಡೆಯನ್ನು ಖಂಡಿಸಿ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ ‘ದೇಶದ ರಕ್ಷಣಾ ಪಡೆಗಳಿಗೆ ಪೂರ್ಣಾಧಿಕಾರ ನೀಡಬೇಕು. ಭಯೋತ್ಪಾದಕರು ಕಂಡ ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲುವ ಅಧಿಕಾರ ನೀಡಬೇಕು. ಇಲ್ಲದಿದ್ದರೇ ಭಯೋತ್ಪಾದಕರಿಗೆ ಪಾಠ ಕಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಶ್ಮೀರದ ಸರ್ಕಾರವನ್ನು ಅಮಾನತ್ತಿನಲ್ಲಿಡಬೇಕು ಮತ್ತು ನೂತನ ರಾಜ್ಯಪಾಲರನ್ನು ನೇಮಿಸಬೇಕು. ಸೇನೆಗೆ ಕೇಂದ್ರ ಸರ್ಕಾರವಲ್ಲ ರಾಜ್ಯಪಾಲರೇ ನೇರವಾಗಿ ಸೂಚನೆಗಳನ್ನು ನೀಡುವ ಅಧಿಕಾರ ನೀಡಬೇಕು. ಅಲ್ಲದೇ ಜಮ್ಮು ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
Leave A Reply