ಮೋದಿ ಅವರನ್ನು ಟೀಕಿಸುವವರು ಈ ಸಂದರ್ಶನ ಓದಿ, ಮೋದಿ ಮಾತು ಕೇಳಿ!
ದೇಶದಲ್ಲಿ ಯಾವುದೇ ಅನಿಷ್ಟವಾದರೂ, ಯಾವುದೇ ಅವಘಡ ಸಂಭವಿಸಿದರೂ ಪ್ರತಿಪಕ್ಷಗಳ ಒಂದೇ ಕೂಗು ಪ್ರಧಾನಿ ನರೇಂದ್ರ ಮೋದಿ ಅವರು ಯಾವುದರ ಬಗ್ಗೆಯೂ ಮಾತೇ ಆಡುವುದಿಲ್ಲ ಎಂದು. ಆದರೆ ದೇಶದಲ್ಲಿ ಅತ್ಯಾಚಾರ ಪ್ರಕರಣ ಜಾಸ್ತಿಯಾದಾಗ, ಬಾಲಕಿಯರ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾಯಿದೆ ಜಾರಿಗೆ ತಂದವರು ನರೇಂದ್ರ ಮೋದಿ. ಅಲ್ಲದೆ ಇತ್ತೀಚೆಗೆ ಸ್ವರಾಜ್ಯ ಮ್ಯಾಗಜಿನ್ ಗೆ ಸಂದರ್ಶನ ನೀಡಿದ್ದು, ಅದರಲ್ಲಿ ದೇಶದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಇದರಲ್ಲಿ ವಿರೋಧಪಕ್ಷಗಳಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಅಭಿವೃದ್ಧಿ ಕುರಿತು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದ್ದಾರೆ. ಅವರು ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರತಿಪಕ್ಷಗಳು ಯಾವಾಗಲೂ ನೀವು ಉದ್ಯೋಗ ಸೃಷ್ಟಿಸಿಲ್ಲ ಎನ್ನುತ್ತವೆ. ಈ ಕುರಿತು ನಿಮ್ಮ ಅಭಿಪ್ರಾಯವೇನು? ಉದ್ಯೋಗ ಸೃಷ್ಟಿ ಆಗಿದೆಯಾ ದೇಶದಲ್ಲಿ?
ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಎನ್‌ಡಿಎ ಸರ್ಕಾರ ರಚನೆಯಾದ ಬಳಿಕ ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ಉದ್ಯಮ ಸೃಷ್ಟಿಯಾಗಿವೆ.. 15 ಸಾವಿರ ನೂತನ ಉದ್ಯಮ ನೋಂದಣಿಯಾಗಿವೆ. ಇಪಿಎಎಫ್ಒ ಮಾಹಿತಿ ಅನ್ವಯ 2017ರ ಸೆಪ್ಟೆಂಬರ್‌ನಿಂದ ಪ್ರಸಕ್ತ ವರ್ಷದ ಏಪ್ರಿಲ್ ವೇಳೆಗೆ 41 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಕಳೆದ ಜುಲೈ ವರೆಗೆ ದೇಶಾದ್ಯಂತ 66 ಲಕ್ಷ ಉದ್ಯಮಗಳ ನೋಂದಣಿಯಾಗಿದೆ. ಆದರೆ ಕಳೆದ ಒಂದು ವರ್ಷದಲ್ಲೇ 48 ಲಕ್ಷ ನವೋದ್ಯಮ ನೋಂದಣಿಯಾಗಿದೆ. ಮುದ್ರಾ ಬ್ಯಾಂಕ್ ಯೋಜನೆ ಅನ್ವಯ 12 ಕೋಟಿ ಜನರಿಗೆ ಸಾಲ ನೀಡಲಾಗಿದೆ. ರಸ್ತೆ ಕಾಮಗಾರಿ ತಿಂಗಳಿಂದ ತಿಂಗಳಿಗೆ ದ್ವಿಗುಣವಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಿದೆ.
ನೀವು ಅಧಿಕಾರಕ್ಕೆ ಬಂದನ ನಂತರ ದೇಶದ ವಿತ್ತೀಯ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುತ್ತೀರಿ ಎಂಬ ಮಾತು ಕೇಳಿಬಂದಿತ್ತು. ಆದರೆ ನೀವು ಶ್ವೇತಪತ್ರ ಹೊರಡಿಸಲಿಲ್ಲ. ಏಕೆ?
ಖಂಡಿತವಾಗಿಯೂ, ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವ ಬಗ್ಗೆ ಹಲವು ಆರ್ಥಿಕ ತಜ್ಞರು ಹಾಗೂ ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದರು. ಆದರೆ ಯುಪಿಎ ಸರ್ಕಾರದ 10 ವರ್ಷದ ಆಡಳಿತ ದೇಶದ ವಿತ್ತೀಯ ಸ್ಥಿತಿ ಹದಗೆಟ್ಟಿತ್ತುಘಿ. ಆರ್ಥಿಕ ತಜ್ಞರೇ ಪ್ರಧಾನಿಯಾಗಿದ್ದರೂ, ವಿತ್ತಲೋಕದ ಪಂಡಿತರು ಹಣಕಾಸು ಸಚಿವರಾಗಿದ್ದರೂ ಪರಿಸ್ಥಿತಿ ಬಿಗಡಾಯಿಸಿತ್ತು. ಇಂಥ ಪರಿಸ್ಥಿತಿಯಲ್ಲಿ ಶ್ವೇತಪತ್ರ ಹೊರಡಿಸುವುದಕ್ಕಿಂತ, ದೇಶದ ವಿತ್ತೀಯ ಪರಿಸ್ಥಿತಿ ಸುಧಾರಿಸುವುದೇ ನಮ್ಮ ಉದ್ದೇಶವಾಗಿತ್ತು. ಹಾಗಾಗಿ ನಾವು ಶ್ವೇತಪತ್ರದ ಬದಲಿಗೆ, ಆರ್ಥಿಕ ಸುಧಾರಣೆಯತ್ತ ದಾಪುಗಾಲು ಇಟ್ಟೆವು.
ಎಲ್ಲ ಸರ್ಕಾರಗಳೂ ರೈತರ ನಮ್ಮ ಆದ್ಯತೆ ಎನ್ನುತ್ತಾರೆ. ಆದರೆ ಕಳೆದ ಸರ್ಕಾರಗಳಿಗಿಂತ, ನಿಮ್ಮ ಸರ್ಕಾರ ಹೇಗೆ ರೈತಸ್ನೇಹಿಯಾಗಿದೆ?
2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದೇ ನಮ್ಮ ಗುರಿಯಾಗಿದೆ. ರೈತರ ಆದಾಯ ಹೆಚ್ಚಿಸಿ, ಅವರ ಸುತ್ತ ಆವರಿಸಿರುವ ಸಮಸ್ಯೆ ತೊಲಗಿಸುವುದು ನಮ್ಮ ಆದ್ಯತೆ. ಕಳೆದ ಸರ್ಕಾರ ಕೃಷಿಗೆ 1.21 ಲಕ್ಷ ಕೋಟಿ ಮೀಸಲಿಟ್ಟರೆ, ನಮ್ಮ ಸರ್ಕಾರ ಕೇವಲ ಐದು ವರ್ಷಕ್ಕೆ 2.12 ಲಕ್ಷ ಕೋಟಿ ವ್ಯಯಿಸುತ್ತಿದೆ. ನಮ್ಮ ಬದ್ಧತೆ ಬರೀ ದಾಖಲೆಗೆ ಸೀಮಿತವಾಗಿಲ್ಲಘಿ, ಕ್ಷೇತ್ರದ ಆಳಕ್ಕೆ ಇಳಿದು ಕೆಲಸ ಮಾಡುತ್ತಿದ್ದೇವೆ. ರೈತರ ಮಣ್ಣಿನ ಆರೋಗ್ಯದ ಕುರಿತು ಅವರ ಬಳಿ ಈಗ ದಾಖಲೆ ಇದೆ, ಬೆಳೆಗೆ ವಿಮೆ ಮಾಡಿಸಿ ಅವರಿಗೆ ‘ದ್ರತೆ ಒದಗಿಸಿದ್ದೇವೆ.
ಜಿಎಸ್‌ಟಿ ಬಗ್ಗೆ ನೀವೇನು ಹೇಳುತ್ತೀರಿ?
ಜಿಎಸ್‌ಟಿ ಜಾರಿಯಾದ ಬಳಿಕ ದೇಶದ ವಿತ್ತೀಯ ಸ್ಥಿತಿ ಸುಧಾರಣೆಯಾಗುತ್ತಿದೆ ಎಂಬುದಕ್ಕೆ ಜಿಡಿಪಿ ಬೆಳವಣಿಗೆಯೇ ಸಾಕ್ಷಿಯಾಗಿದೆ. ಅಷ್ಟೇ ಏಕೆ, ಉದ್ಯಮ ಕ್ಷೇತ್ರದ ತಜ್ಞರ ಜತೆ ಸಭೆ ನಡೆಸಿದ್ದು, ಉದ್ಯಮ ಕೈಗೊಳ್ಳಲು ಜಿಎಸ್‌ಟಿ ಅನುಕೂಲಕರ ಎಂದಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸುಧಾರಣೆಗೆ ಜಿಎಸ್‌ಟಿ ಏಣಿ ಇದ್ದಂತೆ.
ತೆರಿಗೆ ದರಗಳ ವಿಚಾರಕ್ಕೆ ಬರುವುದಾದರೆ, ಮೊದಲು ತುಂಬ ಪದಾರ್ಥಗಳಿಗೆ ನೀಡುತ್ತಿದ್ದ ತೆರಿಗೆ ಎಷ್ಟು ಎಂಬುದೇ ಗೊತ್ತಿರುತ್ತಿರಲಿಲ್ಲ. ಆದರೆ ಈಗ ಪಾರದರ್ಶಕತೆ ಬಂದಿದೆ. ಸುಮಾರು 400 ಉತ್ಪನ್ನಗಳ ಮೇಲಿಗೆ ತೆರಿಗೆ ಪ್ರಮಾಣ ಕಡಿತಗೊಳಿಸಿದ್ದೇವೆ. 150 ಉತ್ಪನ್ನಗಳಿಗೆ ತೆರಿಗೆಯೇ ಇಲ್ಲಘಿ. ಅಕ್ಕಿ, ಗೋ, ಸಕ್ಕರೆ ಸೇರಿ ನಿತ್ಯ ಬಳಕೆಯ ಉತ್ಪನ್ನಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ. ಮಧ್ಯಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡೇ ದರ ನಿಗದಿಪಡಿಸಲಾಗಿದೆ.
ಏರ್ ಇಂಡಿಯಾ ಖಾಸಗೀಕರಣದಲ್ಲಿ ಸರ್ಕಾರಕ್ಕೆ ಹಿನ್ನಡೆಯಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ನೀವೇನು ಹೇಳುತ್ತೀರಿ?
ಖಂಡಿತವಾಗಿಯೂ ಇಲ್ಲಘ. ಏರ್ ಇಂಡಿಯಾ ಸುಧಾರಣೆಗೆ ಸರ್ಕಾರ ಗರಿಷ್ಠ ಪ್ರಯತ್ನ ಮಾಡಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೂ, ಅದಕ್ಕಿರುವ ಪ್ರಕ್ರಿಯೆಗೂ ಇರುವ ವ್ಯತ್ಯಾಸ ಅರಿಯುವುದು ಮುಖ್ಯವಾಗುತ್ತದೆ. ಏರ್ ಇಂಡಿಯಾ ಮಾರುವ ಮೂಲಕ ಖಾಸಗೀಕರಣಕ್ಕೆ ನೀಡಲು ಮುಂದಾಗಿದ್ದುಘಿ, ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.
ಜಿಎಸ್‌ಟಿಯಿಂದ ದೇಶಕ್ಕೆ ಹೇಗೆ ಲಾಭವಾಗಿದೆ?
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದಿಂದ, ಇದುವರೆಗೆ 66 ಲಕ್ಷ ಉದ್ಯಮ ನೋಂದಣಿಯಾಗಿದೆ. ಆದರೆ ಜಿಎಸ್‌ಟಿ ಜಾರಿಯಾದ ಈ ಒಂದು ವರ್ಷದಲ್ಲಿ 48 ಲಕ್ಷ ಉದ್ಯಮ ಸೃಷ್ಟಿಯಾಗಿದೆ. ಸುಮಾರು 11 ಕೋಟಿ ಜನ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಏಕರೂಪ ತೆರಿಗೆಯಿಂದ ಗಡಿ‘ಾಗದಲ್ಲಿ ಬೃಹತ್ ಲಾರಿಗಳು ಸಾಲುಗಟ್ಟಿ ನಿಲ್ಲುವುದು ತಪ್ಪಿದೆ. ದೇಶಾದ್ಯಂತ 17 ರೀತಿಯ ತೆರಿಗೆ ಇದ್ದವು. ದಲ್ಲಾಳಿಗಳು ಬಲಿತಿದ್ದರು. ಆದರೆ ಜಿಎಸ್‌ಟಿಯಿಂದ ಒಂದೇ ತೆರಿಗೆ ಇದೆ, ಜನರಿಗಾಗುವ ಮೋಸವೂ ನಿಂತಿದೆ.
Leave A Reply