ಬಿಜೆಪಿ ಕಾರ್ಯಕರ್ತರೊಬ್ಬರ ಕೊಂದ ಸಿಪಿಎಂ 11 ಕಾರ್ಯಕರ್ತರ ಗತಿ ಏನಾಗಿದೆ ಗೊತ್ತಾ?
ತಿರುವನಂತಪುರ: ಕೇರಳದ ಕಣ್ಣೂರು ಸಿಪಿಎಂ ಕಾರ್ಯಕರ್ತರಿಗೆ ಹಿಂದೂಗಳು, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಪ್ರಾಯೋಗಿಕ ಕ್ಷೇತ್ರವಾಗಿದೆ ಎನ್ನುಷ್ಟರಮಟ್ಟಿಗೆ ಪ್ರತಿವರ್ಷ ಅಲ್ಲಿ ಹತ್ಯೆಗಳು ನಡೆಯುತ್ತವೆ. ಅದರಲ್ಲೂ ಸಿಪಿಎಂನ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವೇ ಇರುವುದರಿಂದ ಈ ಹಲ್ಲೆ, ಹತ್ಯೆಗಳಿಗೆ ಯಾವಾಗಲೂ ಉತ್ತೇಜನ ಇದೆ ಎಂಬ ಮಾತುಗಳು ಸಹ ಕೇಳಿಬರುತ್ತವೆ.
ಇಂಥಾದ್ದೇ ಪ್ರಕರಣವೊಂದರಲ್ಲಿ, ಬಿಜೆಪಿ ಕಾರ್ಯಕರ್ತರೊಬ್ಬರನ್ನು ಹತ್ಯೆ ಮಾಡಿದ ಆರೋಪದಲ್ಲಿ ಸಿಪಿಎಂನ ಹನ್ನೊಂದು ಕಾರ್ಯಕರ್ತರಿಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಆ ಮೂಲಕ ಹತ್ಯೆ ಮಾಡಿದ ಆರೋಪಿಗಳಿಗೆ ಪಾಠ ಕಲಿಸಿದ್ದು, ಇನ್ನು ಮುಂದಾದರೂ ಹತ್ಯೆಗಳು ನಿಲ್ಲುತ್ತಾವಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
2008ರಲ್ಲಿ ಮಹೇಶ್ ಎಂಬುವವರು ಭಾರತೀಯ ಕಮ್ಯುನಿಸ್ಟ್ ಪಾರ್ಟಿ ತೊರೆದು ಭಾರತೀಯ ಜನತಾ ಪಾರ್ಟಿ ಸೇರಿದ್ದರು. ಆದರೆ ಇದನ್ನೇ ಮಹಾಪರಾಧ ಎಂಬಂತೆ ಭಾವಿಸಿದ್ದ ಹಲವು ಸಿಪಿಎಂ ಕಾರ್ಯಕರ್ತರು ಇದೇ ವರ್ಷ ಮಹೇಶ್ ಅವರನ್ನು ಹತ್ಯೆ ಮಾಡಿದ್ದರು. ಈ ಆರೋಪದಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹೇಶ್ ಒಬ್ಬ ಆಟೋ ಚಾಲಕರಾಗಿದ್ದು, ಬಿಜೆಪಿ ಪಕ್ಷ ಸಂಘಟನೆಯಲ್ಲೂ ತೊಡಗಿದ್ದರು. ಒಂದು ದಿನ ಆಟೋ ಪ್ರಯಾಣಿಕರಿಗೆ ಕಾಯುತ್ತಿದ್ದಾಗ ಸಿಪಿಎಂ ಕಾರ್ಯಕರ್ತರು ದಾಳಿ ಮಾಡಿ ಹತ್ಯೆಗೈದಿದ್ದರು. ಮಾಡಿದ ಪಾಪಕ್ಕೆ ಈಗ ನ್ಯಾಯದೇವತೆ ಸರಿಯಾಗಿಯೇ ಪಾಠ ಕಲಿಸಿದ್ದು, ಇನ್ನಾದರೂ ಸಿಪಿಎಂ ಕಾರ್ಯಕರ್ತರು ಪಾಠ ಕಲಿತು, ಶಾಂತಿಯುತವಾಗಿ ಜೀವನ ನಡೆಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.
Leave A Reply