ವಿವಾಹೇತರ ಸಂಬಂಧದ ಬಗ್ಗೆ ಡಿಗ್ರಿ ಪಾಠ, ಸುದ್ದಿಯಲ್ಲಿದೆ ಮಂಗಳೂರು ವಿವಿ
ದ್ವಿತೀಯ ಬಿಕಾಂ ಪದವಿಗೆ ಅಳವಡಿಸಿರುವ ಕನ್ನಡ ಪಠ್ಯ ಪುಸ್ತಕ ‘ನುಡಿ ನೂಪುರ’ದಲ್ಲಿ ‘ಮಗುವಿನ ತಂದೆ ‘ ಎಂಬ ಪಾಠ ಈಗ ವಿವಾದಕ್ಕೆ ಗುರಿಯಾಗಿದೆ. ಇದರಲ್ಲಿ ಆಶ್ಲೀಲತೆಯನ್ನು ಬಿಂಬಿಸಲಾಗಿದೆ ಎಂದು ಭಾರೀ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಈ ಪಾಠದಲ್ಲಿ ಅಕ್ರಮ ಸಂಬಂಧದಲ್ಲಿ ತಪ್ಪಿಲ್ಲ ಎಂಬಂತೆ ಬಿಂಬಿಸುವ ಕಥೆಯನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಪಾಠದಲ್ಲಿ ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಿದ್ದು, ಇದನ್ನು ಬೋಧಿಸುವ ಉಪನ್ಯಾಸಕರಿಗೆ ಮುಜುಗರ ಸೃಷ್ಟಿಸುವಂತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ .ವೈದ್ಯರೊಬ್ಬರ ಪತ್ನಿಗೆ ಪತಿಯಿಂದ ಶಾರೀರಿಕ ಸುಖ ದೊರೆಯದ ಕಾರಣ ಅನ್ಯ ಯುವಕನೊಂದಿಗೆ ಅನೈತಿಕ ಸಂಬಂಧವನ್ನು ಹೊಂದುತ್ತಾಳೆ. ಬಳಿಕ ಈ ಅನೈತಿಕ ಸಂಬಂಧದಿಂದ ಮಗುವೊಂದನ್ನು ಪಡೆಯುತ್ತಾಳೆ. ಆ ಮಗು ತನ್ನ ಗಂಡನದೇ ಅಥವಾ ಅನೈತಿಕ ಸಂಬಂಧದಿಂದ ಹುಟ್ಟಿದ್ದೇ ಎನ್ನುವ ಗೊಂದಲದಲ್ಲಿರುವ ಹೆಣ್ಣಿನ ಕಥೆ ಇದಾಗಿದೆ.
ಈ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಯುದ್ಧ’ ಎನ್ನುವ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲಾಗಿತ್ತು. ಅದರಲ್ಲಿ ಸೈನಿಕರನ್ನು ಶತ್ರುಗಳಂತೆ ಬಿಂಬಿಸಿದ ಆರೋಪ ಬಂದು, ಮಂಗಳೂರು ವಿಶ್ವವಿದ್ಯಾನಿಲಯ ವಿವಾದಕ್ಕೆ ಕಾರಣವಾಗಿತ್ತು. ಈಗ ‘ಮಗುವಿನ ತಂದೆ’ ಎಂಬ ಲೇಖನವನ್ನು ಪಠ್ಯವಾಗಿ ಅಳವಡಿಸಿ, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
Leave A Reply