• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಿಮ್ಮ ಮನೆಯ ನೀರಿನ ಬಿಲ್ ಮತ್ತು ಮೀಟರ್ ಸರಿ ಇದೆಯಾ ಅಥವಾ..?

Hanumantha Kamath Posted On October 29, 2018
0


0
Shares
  • Share On Facebook
  • Tweet It

ನೀವು ಅಥವಾ ನಿಮ್ಮ ಪಕ್ಕದ ಮನೆಯವರು ಅಥವಾ ಸಂಬಂಧಿಗಳು ಅಥವಾ ಹಿತೈಷಿಗಳು ಅಥವಾ ಗೆಳೆಯರು ಯಾರಾದರೂ ಇರಬಹುದು, ತಮ್ಮ ಮನೆಗೆ ಬಂದಿರುವ ನೀರಿನ ಬಿಲ್ ಬಗ್ಗೆ ಒಂದಾದರೂ ದೂರು ಅಥವಾ ಅಸಮಾಧಾನ ಇರದೇ ಇರಲು ಸಾಧ್ಯವಿಲ್ಲ. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಬಗ್ಗೆ ಇದ್ದಷ್ಟು ಗೊಂದಲ ಬೇರೆಯದ್ದರಲ್ಲಿ ಇರಲಿಕ್ಕಿಲ್ಲ. ಕೆಲವು ನಾಗರಿಕರಿಗೆ ಬಂದ ಬಿಲ್ ನಲ್ಲಿ ಒಂದಕ್ಕೆ ನಾಲ್ಕು ಪಟ್ಟು ಮೊತ್ತ ಹಾಕಿರಬಹುದು. ಕೆಲವರಿಗೆ ಹಲವು ತಿಂಗಳುಗಳಿಂದ ಬಿಲ್ ಕೊಡುವವರೇ ಬರದಿರಬಹುದು. ಆದ್ದರಿಂದ ಬಿಲ್ ಬಗ್ಗೆ ಒಂದಲ್ಲ ಒಂದು ಅಸಮಾಧಾನ ಇದ್ದೇ ಇರುತ್ತದೆ. ಇದಕ್ಕೆಲ್ಲ ಏನು ಕಾರಣ ಇತ್ತು ಎಂದರೆ ನಿಮಗೆ ಬರುತ್ತಿದ್ದ ನೀರಿನ ಬಿಲ್ ಅನ್ನು ಕೊಡುವ ಜವಾಬ್ದಾರಿಯನ್ನು ಪಾಲಿಕೆ ಹೊರಗುತ್ತಿಗೆ ಆಧಾರದ ಮೇಲೆ ಹಿಂದೆ ಕೊಟ್ಟಿತ್ತು.
ಹೊರಗುತ್ತಿಗೆಗೆ ತೆಗೆದುಕೊಂಡ ವ್ಯಕ್ತಿಗಳಾದರೂ ಅದನ್ನು ಸರಿಯಾಗಿ ನಿರ್ವಹಿಸಿದ್ದಾರಾ ಎಂದು ನೋಡಿದರೆ ಅದು ಇಲ್ಲ. ಅವರು ಏನು ಮಾಡುತ್ತಿದ್ದರು ಎಂದರೆ ಅನೇಕ ಏರಿಯಾಗಳಲ್ಲಿರುವ ಮನೆಗಳಿಗೆ ಹೋಗುತ್ತಲೇ ಇರಲಿಲ್ಲ. ಆಫೀಸಿನಲ್ಲಿ ಕುಳಿತು ಎನ್ ಎಲ್ (ನಾಟ್ ಲಿಜಿಬಲ್) ಎಂದೋ ಅಥವಾ ಮೀಟರ್ ನಾಟ್ ರೀಡಿಂಗ್ ಎಂದೋ ಬರೆದು ಬಿಲ್ ಹರಿದುಬಿಡುತ್ತಿದ್ದರು. ಇದು ಮೊದಲ ಮತ್ತು ದೊಡ್ಡ ಆಲಸ್ಯ ಮತ್ತು ಏನೂ ಆಗುವುದಿಲ್ಲ ಎನ್ನುವ ನಿರ್ಲಕ್ಷ್ಯ. ಗುತ್ತಿಗೆದಾರರ ಬಳಿ ಕೆಲಸ ಮಾಡುವವರಿಗೆ ನಾಗರಿಕರ ಮನೆಯ ತನಕ ಹೋಗಿ ಅಲ್ಲಿ ಬಿಲ್ ಕೊಡುವಷ್ಟು ಸೋಮಾರಿತನ ಇರುವುದರಿಂದ ಅವರು ಹೀಗೆ ಮಾಡುತ್ತಿದ್ದರು. ಇದರಿಂದ ಏನು ಆಗುತ್ತಿತ್ತು ಎಂದರೆ ತುಂಬಾ ಜನ ತಮ್ಮ ಮನೆಗೆ ನೀರಿನ ಬಿಲ್ ಬರುತ್ತಿಲ್ಲ ಎಂದೇ ಅಂದುಕೊಳ್ಳುತ್ತಿದ್ದರು.
ಮೂರು ಸಾವಿರ ಬಂದರೆ ಒಂದು ಸಾವಿರ ಮಾಡಬಹುದಿತ್ತು…
ಇವರು ಮಾಡುತ್ತಿರುವ ಇನ್ನೊಂದು ಗೋಲ್ ಮಾಲ್ ಎಂದರೆ ಒಂದು ಮನೆಯವರು ಸಿಕ್ಕಾಪಟ್ಟೆ ನೀರು ಖರ್ಚು ಮಾಡುತ್ತಿದ್ದಾರೆ ಎಂದುಕೊಳ್ಳೋಣ. ಉದಾಹರಣೆಗೆ ಹಲವು ಜನರು ಮನೆಯಲ್ಲಿಯೇ ಆಹಾರ, ತಿಂಡಿ ತಯಾರಿಸಿ ಕ್ಯಾಂಟೀನ್ ನಡೆಸುತ್ತಾರೆ, ಕೆಲವರು ಮನೆಯಲ್ಲಿ ಆಹಾರ ತಯಾರಿಸಿ ಹೋಟೆಲುಗಳಿಗೆ ಕೊಡುತ್ತಾರೆ, ಇನ್ನು ಕೆಲವರು ಮನೆಯಲ್ಲಿಯೇ ಸಣ್ಣಮಟ್ಟದಲ್ಲಿ ಕ್ಯಾಟರಿಂಗ್ ನಡೆಸುತ್ತಾರೆ. ಇನ್ನು ಕೆಲವರು ಮನೆಯಲ್ಲಿಯೇ ಪೇಯಿಂಗ್ ಗೆಸ್ಟ್ ನಡೆಸುತ್ತಾರೆ. ಇಂತಹ ಕಡೆ ನೀರಿನ ಬಿಲ್ ಸಹಜವಾಗಿ ಜಾಸ್ತಿ ಬಂದಿರುತ್ತದೆ. ಈ ಬಿಲ್ ಕಲೆಕ್ಟರ್ ಅಂತಹ ಮನೆಗಳಿಗೆ ಹೋಗಿ ನೋಡುವಾಗ ಬಿಲ್ ಮೂರ್ನಾಕು ಸಾವಿರ ಬಂದಿರುತ್ತದೆ ಎಂದು ಅಂದುಕೊಳ್ಳೋಣ. ಆಗ ಬಿಲ್ ಕೊಡುವವರ ಕಿಸೆಗೆ ಒಂದಿಷ್ಟು ಚಿಲ್ಲರೆ ಹಾಕಿದರೆ ಅವರು ಬಿಲ್ ಅನ್ನು ಎಷ್ಟು ಬೇಕಾದರೂ ಅಷ್ಟು ಕಡಿಮೆ ಹಾಕಿ ನಿಮ್ಮನ್ನು ಉಳಿಸುತ್ತಾರೆ. ನೀವು ಸಮ್ ಥಿಂಗ್ ಕೊಟ್ಟು ಮ್ಯಾನಿ ಥಿಂಗ್ ಉಳಿಸುತ್ತೀರಿ.
ಕೊನೆ ಕೊನೆಗೆ ಇದೆಲ್ಲಾ ಪಾಲಿಕೆಯ ಗಮನಕ್ಕೆ ಬಂದಾಗ ಕೆಲವು ಕಡೆ ಅನ್ಯಾಯವಾಗಿ ಹೆಚ್ಚು ಬಿಲ್ ಬಂದಿರುವವರು ಪಾಲಿಕೆಗೆ ಬಂದು ನೋವು ತೋಡಿಗೊಂಡಾಗ ಪಾಲಿಕೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆಯುವ ನಿರ್ಧಾರ ಮಾಡಿದೆ.
ಈಗ ಮೀಟರ್ ದುರಸ್ತಿಯ ನೆಪದಲ್ಲಿ ನೀರು ಪೋಲು…
ಪಾಲಿಕೆಯಲ್ಲಿ ಮಲೇರಿಯಾ ನಿರ್ಮೂಲನ ಕಾರ್ಯಕರ್ತರು ಎಂದು ಇದ್ದಾರೆ. ಅವರು ಮನೆಮನೆಗಳಿಗೆ ಹೋಗಿ ಅಲ್ಲಿ ಮಲೇರಿಯಾ ಬಗ್ಗೆ ಸಮೀಕ್ಷೆ ಮಾಡುತ್ತಾರೆ. ಈಗ ಅವರ ಕೈಯಲ್ಲಿ ನೀರಿನ ಬಿಲ್ ಕೊಡುವ ಕೆಲಸ ಮಾಡಲಾಗಿದೆ. ಈ ಮೂಲಕ ಒಂದೇ ಖರ್ಚಿನಲ್ಲಿ ಪಾಲಿಕೆ ಎರಡು ಕೆಲಸಗಳನ್ನು ಮಾಡಿಸುವ ಮೂಲಕ ಉಳಿತಾಯದ ಯೋಜನೆಗೆ ಕೈ ಹಾಕಿದೆ. ಹಣವನ್ನು ಇದರಲ್ಲಿ ಉಳಿಸಬಹುದು. ಆದರೆ ವಿಷಯ ಇರುವುದು ಹೀಗೆ ಮಾಡಿರುವುದರಿಂದ ಸಮಸ್ಯೆ ಪರಿಹಾರವಾಗಿದೆಯಾ ಎಂದು ನೋಡಿದರೆ ಇಲ್ಲವೇ ಇಲ್ಲ. ಏಕೆಂದರೆ ಹಿಂದಿನ ಗುತ್ತಿಗೆದಾರರು ಮಾಡಿ ಹೋದ ಕರ್ಮಕಾಂಡ ಈಗ ಬೆಳಕಿಗೆ ಬರುತ್ತದೆ. ಈ ಮಲೇರಿಯಾ ನಿರ್ಮೂಲನ ಕಾರ್ಯಕರ್ತರಲ್ಲಿ ಹೆಚ್ಚಿನವರು ಮಹಿಳೆಯರು. ಇವರು ಬಿಲ್ ಕೊಡಲು ಶುರುವಾದ ಕೂಡಲೇ ಹೆಚ್ಚಿನ ಕಡೆ ಮೀಟರ್ ನಾಟ್ ರಿಚೇಬಲ್ ಬಿಲ್ ಬರತೊಡಗಿದೆ. ಇನ್ನು ಹಲವು ಕಡೆ ಹಿಂದಿನವರು ಹೋಗದೆ ಇದ್ದ ಕಾರಣ ಅಲ್ಲಿಂದ ಬಿಲ್ ಪಾಲಿಕೆಗೆ ಆದಾಯ ರೂಪದಲ್ಲಿ ಬರದೇ ನಷ್ಟವಾಗುತ್ತಿತ್ತು. ಈಗ ಅಂತಹ ಹಲವು ಕಡೆ ಈಗಿನವರು ಹೋಗುವುದರಿಂದ ಪಾಲಿಕೆಗೆ ನೀರಿನ ಬಿಲ್ ಆದಾಯ ಹೆಚ್ಚಾಗಿ ಹರಿದು ಬರುತ್ತಿದೆ. ಇದು ಒಂದು ರೀತಿಯಲ್ಲಿ ಲಾಭ ಎಂದು ಕಾಣಿಸುತ್ತಿದ್ದರೂ ಮತ್ತೊಂದು ಕಡೆ ಹಲವು ವಾರ್ಡುಗಳಲ್ಲಿ ಮೀಟರ್ ಸರಿ ಇಲ್ಲ ಎಂದು ಅದನ್ನು ದುರಸ್ತಿ ಮಾಡಲು ಅವರಿಗೆ ಚೀಟಿ ಕೊಡಲಾಗುತ್ತಿದೆ. ಸರಿಯಾಗಿ ನೋಡಿದರೆ ದುರಸ್ತಿ ಮಾಡಿಸುವ ಅಗತ್ಯ ಇದ್ದಿರಲಿಲ್ಲ. ಹಿಂದಿನವರು ಮೀಟರ್ ನಾಟ್ ರೀಡಿಂಗ್ ಎಂದು ಕೊಟ್ಟಿದ್ದು ಮತ್ತು ಹೆಚ್ಚು ಬಿಲ್ ಬರುವ ಕಡೆ ಲಂಚ ತೆಗೆದುಕೊಂಡು ಕಡಿಮೆ ಬಿಲ್ ಕೊಟ್ಟ ಕಾರಣ ಅದರಲ್ಲಿ ಆಗಿರುವ ಮೀಟರ್ ರೀಡಿಂಗ್ ವ್ಯತ್ಯಾಸ ಬಿಲ್ ನಲ್ಲಿ ತೋರಿಸಿದ ಕಾರಣ ಅದು ಕೂಡ ದುರಸ್ತಿ ಆಗಬೇಕು ಎಂದು ಚೀಟಿ ಪಡೆದುಕೊಂಡವರು ಇದ್ದಾರೆ. ಒಂದು ಹೊಸ ಮೀಟರಿಗೆ 900 ರೂಪಾಯಿ ಇದ್ದರೆ ರಿಪೇರಿಗೆ ನೂರೈವತ್ತು ರೂಪಾಯಿ ಇರುತ್ತದೆ. ಮಧ್ಯಮ ವರ್ಗದವರು 900 ರೂಪಾಯಿ ಖರ್ಚು ಮಾಡುವುದು ಕಷ್ಟವಾಗಿ ರಿಪೇರಿ ಮಾಡುವ ಅಂಗಡಿಯಲ್ಲಿ ಕೊಟ್ಟು ಬರುತ್ತಾರೆ. ಇದರಿಂದ ಏನಾಗುತ್ತಿದೆ ಎಂದರೆ ರಿಪೇರಿ ಮಾಡುವ ಅನೇಕ ಅಂಗಡಿಗಳಲ್ಲಿ ನೀರಿನ ಮೀಟರ್ ಗಳ ರಾಶಿ ಬಂದು ಬಿದ್ದಿದೆ. ಒಬ್ಬೊಬ್ಬರದ್ದು ಮೀಟರ್ ಸಿಗಬೇಕಾದರೆ 20 ರಿಂದ 25 ದಿನ ಆಗಬಹುದು. ಅಷ್ಟರಲ್ಲಿ ಆ ಮನೆಯವರು ಉಪಯೋಗಿಸುವ ನೀರಿಗೆ ಲೆಕ್ಕ ಇಡುವವರ್ಯಾರು?
ಒಟ್ಟಿನಲ್ಲಿ ಹಿಂದಿನ ಗುತ್ತಿಗೆದಾರರು ಮಾಡಿರುವ ಅಷ್ಟೂ ಗೋಲ್ ಮಾಲ್ ನಿಂದ ಆಗಿರುವ ಮತ್ತು ಆಗುತ್ತಿರುವ ನಷ್ಟವನ್ನು ತುಂಬುವುದು ಎಲ್ಲಿಂದ? ನಮ್ಮ ನಿಮ್ಮ ತೆರಿಗೆಯ ಹಣದಿಂದ. ಹಾಗಂತ ಹಿಂದಿನ ಗುತ್ತಿಗೆದಾರರ ತಪ್ಪನ್ನು ಎತ್ತಿ ಹಿಡಿದು ಹೋರಾಡಬೇಕಾದ ಪಾಲಿಕೆ ಸದಸ್ಯರು ಮೌನಕ್ಕೆ ಶರಣಾಗಿದ್ದಾರೆ. ಏಕೆಂದರೆ ಗುತ್ತಿಗೆ ಕೊಟ್ಟು ತಪ್ಪು ಮಾಡಿದ್ದು ಇವರೆ ಅಲ್ವಾ? ತಮ್ಮ ತಪ್ಪನ್ನು ತಾವೇ ಎತ್ತಿ ತೋರಿಸಿದ ಹಾಗೆ ಆಗುತ್ತದೆ ಎಂದು ಮೇಲೆ ನೋಡಿ ಉಗಿಯಲು ಹೋಗುತ್ತಿಲ್ಲ!
0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Hanumantha Kamath February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search