• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೀರಿನ ವಿಷಯದಲ್ಲಿ ಶಾಸಕರುಗಳ ಹೆಸರು ಹಾಳು ಮಾಡಲು ಪ್ರಯತ್ನವಾಗಿತ್ತಾ?

Hanumantha Kamath Posted On April 27, 2019


  • Share On Facebook
  • Tweet It

ಕೊನೆಗೂ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ಅವರಿಗೆ ತುಂಬೆ ವೆಂಟೆಂಡ್ ಡ್ಯಾಂಗೆ ಭೇಟಿ ಕೊಡಲು ಸಮಯ ಸಿಕ್ಕಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ಚುನಾಯಿತ ಸರಕಾರ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಒಂದು ಯೋಗ್ಯ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತಿತ್ತು. ಮಾರ್ಚ್ ಒಳಗೆ ಚುನಾವಣೆ ನಡೆದು ಮಾರ್ಚ್ ಮೊದಲ ವಾರದಲ್ಲಿ ಹೊಸ ಸರಕಾರ ಪಾಲಿಕೆಯಲ್ಲಿ ಬರಬೇಕಿತ್ತು. ಆದರೆ ಯುಟಿ ಖಾದರ್ ಅವರು ಅದನ್ನು ಮಾಡಲಿಲ್ಲ. ಮೀಸಲಾತಿ ಪಟ್ಟಿಯಲ್ಲಿ ಗೊಂದಲ ಇಟ್ಟ ಕಾರಣ ಪಾಲಿಕೆಯ ಚುನಾವಣೆ ಇನ್ನೂ ಚೌತಿ ಮುಗಿದ ಮೇಲೆಯೇ ಆಯಿತು. ಆದ್ದರಿಂದ ಸದ್ಯ ಪಾಲಿಕೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಅವರು ತಮಗೆ ಮನಸ್ಸಿಗೆ ಬಂದ ನಿರ್ಧಾರ ಕೈಗೊಳ್ಳುತ್ತಾರೆ. ಕೇಳುವವರು, ಹೇಳುವವರು ಯಾರೂ ಇಲ್ಲ. ಮೇಯರ್, ಕಾರ್ಪೋರೇಟರ್ ಗಳು ಇಲ್ಲದೇ ಇದ್ದ ಕಾರಣ ಅಲ್ಲಿನ ವ್ಯವಸ್ಥೆ ನೋಡಿಕೊಳ್ಳುವವರು ಮಾನ್ಯ ಜಿಲ್ಲಾಧಿಕಾರಿ.

ನೀರು ಕೊಡಬೇಕಾದವರು ಯಾರು?

ಸದ್ಯ ಪಾಲಿಕೆಯ ಆಡಳಿತಾಧಿಕಾರಿಯಾಗಿರುವವರು ಜಿಲ್ಲಾಧಿಕಾರಿಯವರು. ಅವರು ಡಿಸಿ ಕಚೇರಿಯಲ್ಲಿ ಕುಳಿತು ಈಗಾಗಲೇ ಹತ್ತಾರು ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಅದರ ನಡುವೆ ಸಚಿವರ ರಣತಂತ್ರದ ಪರಿಣಾಮ ಪಾಲಿಕೆ ಚುನಾವಣೆ ಮುಂದೆ ಹೋಗಿ ಪಾಲಿಕೆಯ ಜವಾಬ್ದಾರಿ ಕೂಡ ಜಿಲ್ಲಾಧಿಕಾರಿಗಳ ಹೆಗಲ ಮೇಲೆರಿದೆ. ಅತ್ತ ಪಾಲಿಕೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಮೀಷನರ್ ಕೂಡ ಇಲ್ಲ. ಇರುವುದು ಪ್ರಭಾರ ಕಮೀಷನರ್ ಮಾತ್ರ. ಅವರು ಕೂಡ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದು. ಅವರು ಮಂಗಳೂರನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮಳೆಗಾಲ ಕಳೆದುಹೋಗಲಿದೆ. ಆದ್ದರಿಂದ ಸದ್ಯ ಇರುವ ನೀರಿನ ಸಮಸ್ಯೆಯನ್ನು ಪರಿಹರಿಸುವುದು ಯಾರು ಎಂದು ಗೊಂದಲ ಮುಂದುವರೆದಿದೆ. ಕಾಂಗ್ರೆಸ್ಸಿಗರಿಗೆ ಇದೇ ಸಿಕ್ಕಿದ ಅವಕಾಶ ಎಂದು ಅವರ ವಾರ್ಡಿನ ಜನ ನೀರಿನ ಬಗ್ಗೆ ಕೇಳಿದ್ದಾಗ “ಬಿಜೆಪಿಯ ಶಾಸಕರಿಗೆ ಮತ ಹಾಕಿ ಗೆಲ್ಲಿಸಿದ್ದಿರಲ್ಲ, ಅವರಿಗೆ ನೀರಿನ ಬಗ್ಗೆ ಕೇಳಿ” ಎಂದು ಉತ್ತರ ಕೊಡುತ್ತಿದ್ದಾರೆ. ಆ ಮೂಲಕ ಎಷ್ಟಾಗುತ್ತದೆಯೋ ಅಷ್ಟು ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಶಾಸಕರ ಇಮೇಜ್ ಹಾಳಾಗುವ ಹಾಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವಾಸ್ತವ ಸ್ಥಿತಿ ಏನೆಂದರೆ ಪಾಲಿಕೆಯ ಅಧಿಕಾರಿಗಳು ನೀರನ್ನು ರೇಶನಿಂಗ್ ರೀತಿಯಲ್ಲಿ ಕೊಡುವ ಬಗ್ಗೆ ನಗರದ ಶಾಸಕರುಗಳ ಬಳಿ ಒಂದು ಮಾತು ಕೂಡ ಕೇಳಿರಲಿಲ್ಲ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಅಧಿಕಾರಿಗಳು ಜನಪ್ರತಿನಿಧಿಗಳ ಮಾತುಗಳನ್ನು ಕೇಳಬೇಕಿಲ್ಲ, ನಿಜ. ಆದರೆ ಒಂದು ಮಾತು ತಿಳಿಸಿ ಅಭಿಪ್ರಾಯವನ್ನಾದರೂ ಆಲಿಸಬಹುದಿತ್ತು. ಹೋಗಲಿ, ರೇಶನಿಂಗ್ ಕುರಿತು ಕನಿಷ್ಟ ಮಾಹಿತಿಯನ್ನಾದರೂ ಕೊಡಬಹುದಿತ್ತು. ಯಾಕೆಂದರೆ ನೀರಿನ ಸಮಸ್ಯೆ ಆದಾಗ ಯಾವ ನಾಗರಿಕ ಕೂಡ ಪಾಲಿಕೆಯ ಕಮೀಷನರ್ ಅವರಿಗೆ ಫೋನ್ ಮಾಡಿ ನೀರು ಬಂದಿಲ್ಲ ಎಂದು ಕೇಳುವುದಿಲ್ಲ. ಅವರು ಕೇಳುವುದು ಮೊದಲಿಗೆ ತಮ್ಮ ವಾರ್ಡ್ ನ ಮನಪಾ ಸದಸ್ಯರ ಬಳಿ. ಸದ್ಯ ಪಾಲಿಕೆಯಲ್ಲಿ ಸರಕಾರ ಇಲ್ಲವಾದರೂ ಇಲ್ಲಿಯ ತನಕ ಆರವತ್ತು ವಾರ್ಡ್ ಗಳಲ್ಲಿ ಮೂವತ್ತೈದರಲ್ಲಿ ಇದ್ದವರು ಇದೇ ಕಾಂಗ್ರೆಸ್ಸಿಗರು. ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್ ಬಳಿ ಆ ವಾರ್ಡಿನ ಜನ ನೀರು ಕೇಳಿದರೆ “ೆ ಏನು ಮಾಡುವುದು ನಮಗೆ ಅಧಿಕಾರ ಇಲ್ಲ, ನಮ್ಮ ಮಾಜಿ ಶಾಸಕರನ್ನು ನೀವೆಲ್ಲ ಸೋಲಿಸಿಬಿಟ್ಟಿದ್ದೀರಿ. ಈಗ ಇರುವ ಶಾಸಕರಿಗೆ ಕೇಳಿ” ಎಂದು ಹೇಳುತ್ತಾರೆ. ಹಾಲಿ ಶಾಸಕರಿಗೆ ಜನ ನಿರಂತರ ಫೋನ್ ಮಾಡಿ ನೀರಿನ ತೊಂದರೆಯ ಬಗ್ಗೆ ಹೇಳುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗುವುದನ್ನು ತಪ್ಪಿಸಲು ಉಭಯ ಕ್ಷೇತ್ರಗಳ ಶಾಸಕರು ತಕ್ಷಣ ತುಂಬೆ ಮತ್ತು ಎಎಂಆರ್ ಡ್ಯಾಂಗೆ ಹೋಗಿ ವಾಸ್ತವ ನೋಡಿ ಬಂದಿದ್ದಾರೆ.

ಜಿಲ್ಲಾಧಿಕಾರಿಗಳನ್ನು ದಾರಿ ತಪ್ಪಿಸಲಾಯಿತಾ?

ಅಲ್ಲಿ ನೀರಿದೆ. ಆದರೆ ಅಧಿಕಾರಿಗಳು ರೇಶನಿಂಗ್ ಎನ್ನುವ ಹೆಸರಿನಲ್ಲಿ ವಾರದಲ್ಲಿ ಎರಡು ದಿನ ನೀರು ಬಂದ್ ಮಾಡುತ್ತಿದ್ದಾರೆ. ಸೋಮವಾರದಿಂದ ಗುರುವಾರದ ತನಕ ನೀರು ಕೊಟ್ಟು ಶುಕ್ರವಾರ, ಶನಿವಾರ ನೀರು ಪಂಪ್ ಮಾಡುವುದು ಬಂದ್ ಮಾಡುತ್ತಿದ್ದಾರೆ. ಇದರಿಂದ ಇವರು ಪಂಪ್ ಮಾಡಲು ಶುರು ಮಾಡಿ ಅದು ಮನೆಗಳಿಗೆ ಕನಿಷ್ಟ ಭಾನುವಾರ ಸಂಜೆಯೊಳಗೆ ತಲುಪಲೇಬೇಕು. ಅನೇಕ ಕಡೆ ಮಂಗಳವಾರದ ತನಕವೂ ನೀರು ಹೋಗುತ್ತಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ವಿಷಯ ಇರುವುದು ಏನೆಂದರೆ “ಹಾಗಾದರೆ ಇದು ಸುಮ್ಮ ಸುಮ್ಮನೆ ಶಾಸಕರುಗಳ ಹೆಸರು ಹಾಳು ಮಾಡಲು ತೆಗೆದುಕೊಂಡ ನಿರ್ಧಾರವಾ?” ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಅಧಿಕಾರಿಗಳು ಹೇಳುವ ವಿಷಯವೇ ಮುಖ್ಯವಾಗಿರುತ್ತದೆ. “ಸರ್, ನಾಲ್ಕು ದಿನ ಕೊಡೋಣ, ರೇಶನಿಂಗ್ ಮಾಡೋಣ” ಎಂದು ಹೇಳಿದರೆ ಅವರು ಒಕೆ ಎನ್ನುತ್ತಾರೆ. ಆದರೆ ಅಧಿಕಾರಿಗಳು ಸೂಕ್ತ ಮಾಹಿತಿಯನ್ನು ಕೊಡಬೇಕು ತಾನೇ. ಕೊಡದಿದ್ದರೆ ಶಾಸಕರುಗಳ ಹೆಸರು ಕೆಡುತ್ತದೆ. ಅಧಿಕಾರಿಗಳು ಅದನ್ನೇ ಬಯಸುತ್ತಿದ್ದಾರಾ

  • Share On Facebook
  • Tweet It


- Advertisement -


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Hanumantha Kamath March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Hanumantha Kamath March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search