ಫಾರಂ ಮಾಲ್ ನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳ ಬಂಧನ!
Posted On September 25, 2019
0
ಮಂಗಳೂರು ನಗರದ ಫಾರಂ ಮಾಲ್ ನಲ್ಲಿ ಇಂದು ಸಂಜೆ (ಸೆ 25) ನಡೆದ ಮುಸ್ಲಿಂ ಯುವಕರ ಗುಂಪೊಂದು ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷ ತಿಳಿಸಿದ್ದಾರೆ.
ಆರೋಪಿಗಳಾದ ಅಬ್ದುಲ್ ರಹೀಂ, ಸಫ್ವಾನ್ ಹಾಗೂ ಮತ್ತೋರ್ವ ಬಾಲಾಪರಾಧಿಯನ್ನು ಬಂಧಿಸಲಾಗಿದೆ.
ಮಂಗಳೂರಿನ ಫಾರಂ ಮಾಲ್ ನಲ್ಲಿ ಯುವತಿಯೋರ್ವಳನ್ನು ಚುಡಾಯಿಸುತ್ತಿದ್ದ ಗುಂಪನ್ನು ತಡೆದು ಪ್ರಶ್ನಿಸಿದ ಬಂಟ್ವಾಳದ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಇದಲ್ಲದೆ ಹಲ್ಲೆ ಸಂದರ್ಭ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದು. ಕಾನೂನು ಸುವ್ಯವಸ್ತೆಗೆ ದಕ್ಕೆ ತಂದು ಕೋಮುಸೌಹಾರ್ದತೆ ಹಾಳುಗೆಡವಲು ಯತ್ನಿಸುತ್ತಿರುವ ಯುವಕರನ್ನ ಬಂಧಿಸುವಲ್ಲಿ ಮಂಗಳೂರು ಪೋಲಿಸರು ಸಫಲರಾಗಿದ್ದರೆ.


Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
March 11, 2026









