• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಿಂಗಲ್ ಸೈಟ್ ಮರೆತುಬಿಟ್ಟಿದ್ದು ಕಾಂಗ್ರೆಸ್ಸಿಗೆ ಈ ಬಾರಿ ದೊಡ್ಡ ಮೈನಸ್ ಆಗಲಿಕ್ಕಿದೆ!!

Hanumantha Kamath Posted On October 29, 2019


  • Share On Facebook
  • Tweet It

ಸಿಂಗಲ್ ಸೈಟ್ ಎನ್ನುವ ಶಬ್ದ ಕೇಳಿದರೆ ಸಾಕು ಎಷ್ಟೋ ಜನರ ಹೊಟ್ಟೆಯಲ್ಲಿ ಸಂಕಟ ಚುರುಗುಟ್ಟುತ್ತದೆ. ಯಾಕೆಂದರೆ ಪ್ರಪಂಚದ ಯಾವುದೇ ಪ್ರದೇಶದಲ್ಲಿಯೂ ಇರದ ಒಂದು ನಿಯಮ ನಮ್ಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೆ. ಅದನ್ನು ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆಯಾಗಿ ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟದ್ದು ಕಾಂಗ್ರೆಸ್. ಜನರು ಕಾಂಗ್ರೆಸ್ಸಿನ ಉಳಿದ ಭರವಸೆಯಂತೆ ಇದನ್ನು ಕೂಡ ನಂಬಿ ಬಿಟ್ಟಿದ್ದರು. ಆದರೆ ಐದು ವರ್ಷಗಳ ತನಕ ಪಾಲಿಕೆಯಲ್ಲಿ ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಸಿಂಗಲ್ ಸೈಟ್ ಸಮಸ್ಯೆಯನ್ನು ಪರಿಹರಿಸಲೇ ಇಲ್ಲ. ಇವತ್ತಿಗೂ ಆ ಸಮಸ್ಯೆ ಜೀವಂತವಾಗಿ ಇದೆ. ಅಷ್ಟಕ್ಕೂ ಸಿಂಗಲ್ ಸೈಟ್ ಎಂದರೇನು? ನಿಮಗೆ ನಿಮ್ಮ ತಂದೆಯಿಂದಲೋ, ತಾಯಿಯಿಂದಲೋ ಬಂದ ಒಂದಿಷ್ಟು ಜಾಗ ಪಾಲಿಕೆ ವ್ಯಾಪ್ತಿಯಲ್ಲಿ ಇದೆ ಎಂದು ಇಟ್ಟುಕೊಳ್ಳೋಣ. ಅಲ್ಲಿ ನೀವು ಒಂದು ಮನೆಯನ್ನು ಕಟ್ಟಲು ಹೊರಡುತ್ತೀರಿ. ಅದಕ್ಕಾಗಿ ಸಿಂಗಲ್ ಸೈಟ್ ಮಾಡಬೇಕಾಗುತ್ತದೆ. ಸಿಂಗಲ್ ಸೈಟ್ ಎಂದರೆ ಕನ್ನಡದಲ್ಲಿ ಏಕನಿವೇಶನ ಎನ್ನುತ್ತಾರೆ.

ಮಂಗಳೂರು ಅವೈಜ್ಞಾನಿಕವಾಗಿ ಅಡ್ಡಾದಿಡ್ಡಿ ಬೆಳೆಯುತ್ತಿರುವುದರಿಂದ ಅದಕ್ಕೊಂದು ರೂಪುರೇಶೆ ಕೊಡಬೇಕು ಎನ್ನುವ ಕಾರಣದಿಂದ ಮಂಗಳೂರನ್ನು ಭವಿಷ್ಯದಲ್ಲಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಒಂದು ಸ್ಕೆಚ್ ಹಾಕಲಾಗಿದ್ದು ಅದರ ಒಂದು ಭಾಗವೇ ಏಕನಿವೇಶನ ಪದ್ಧತಿ. ಆದರೆ ಸಿಂಗಲ್ ಸೈಟ್ ಮಾಡಿಸಲು ನೀವು ಮೂಡಾಕ್ಕೆ ಹೋದಾಗ ನಿಮ್ಮ ಏರಿಯಾವನ್ನು ನಕ್ಷೆಯಲ್ಲಿ ನೋಡಿ ನೀವು ಮನೆ ಕಟ್ಟುವ ರಸ್ತೆ ಭವಿಷ್ಯದಲ್ಲಿ ಯಾವತ್ತೋ ಅಗಲವಾಗುವುದಿದ್ದರೆ ಅದಕ್ಕಾಗಿ ಮನೆಯ ಎದುರಿನ ರಸ್ತೆ ಅಗಲ ಮಾಡುವುದಕ್ಕಾಗಿ ಇಂತಿಷ್ಟು ಜಾಗವನ್ನು ದಾನಪತ್ರದ ಮೂಲಕ ಸರಕಾರಕ್ಕೆ ಬಿಟ್ಟುಕೊಡಿ ಎಂದು ಹೇಳಲಾಗುತ್ತದೆ. ಒಂದು ವೇಳೆ ರಸ್ತೆ ಅಗಲಕ್ಕೆ ಎನ್ನುವ ಕಾರಣಕ್ಕೆ ನೀವು ಬಿಟ್ಟುಕೊಡಲು ಮುಂದಾದರೂ ನಿಮಗೆ ಒಂದು ಬಿಡಿಕಾಸು ಪರಿಹಾರವನ್ನು ಕೊಡುವ ಕ್ರಮ ಈ ಸಿಂಗಲ್ ಸೈಟ್ ನಿಯಮದಲ್ಲಿ ಇಲ್ಲ. ನೀವು ಮನೆ ಕಟ್ಟುವ ಓಣಿ ಈಗ ಮೂರು ಮೀಟರ್ ಇದ್ದರೆ ಇವರ ನಕ್ಷೆಯಲ್ಲಿ ಅದನ್ನು ಯಾವತ್ತಾದರೂ ಆರು ಮೀಟರ್ ಮಾಡಲು ಇದ್ದರೆ ಆಗ ನೀವು ಒಂದು ಬದಿಯಲ್ಲಿ ಒಂದೂವರೆ ಮೀಟರ್ ಬಿಟ್ಟುಕೊಡಬೇಕಾಗುತ್ತದೆ. ಆದರೆ ನೀವು ಒಂದೂವರೆ ಮೀಟರ್ ಜಾಗ ಬಿಟ್ಟುಕೊಟ್ಟರೂ ಅದಕ್ಕೆ ಸಿಗುವ ಮೊತ್ತ ದೊಡ್ಡ ಶೂನ್ಯ.

ಅದೇ ಒಂದು ವೇಳೆ ಸರಕಾರಕ್ಕೆ ಒಂದು ರಸ್ತೆಯನ್ನು ಅಗಲ ಮಾಡುವ ಅವಶ್ಯಕತೆ ಬಂದು ಇಟ್ಟುಕೊಳ್ಳಿ. ಸಾಮಾನ್ಯವಾಗಿ ಇವರಿಗೆ ಅವಶ್ಯಕತೆ ಬರುವುದು ಯಾವುದಾದರೂ ರಸ್ತೆಯಲ್ಲಿ ಪಾಲಿಕೆಯವರಿಗೆ ಬೇಕಾಗಿರುವ ಯಾವುದಾದರೂ ದೊಡ್ಡ ಬಿಲ್ಡರ್ ದೊಡ್ಡ ವಸತಿ ಸಮುಚ್ಚಯ ಕಟ್ಟಲು ಹೊರಟಿದ್ದಾರೆ ಎಂದು ಇಟ್ಟುಕೊಂಡರೆ ಆಗ ಅಂತಹ ರಸ್ತೆಯನ್ನು ಅಗಲ ಮಾಡುವ ಪ್ರಕ್ರಿಯೆಗೆ ಪಾಲಿಕೆ ಕೈ ಹಾಕುತ್ತದೆ. ಆಗ ಒಂದು ವೇಳೆ ಆ ರಸ್ತೆಯಲ್ಲಿ ಅಗಲ ಮಾಡುವ ಕಡೆ ನಿಮ್ಮ ಮನೆ, ಆವರಣ ಗೋಡೆ ಏನಾದರೂ ಇದ್ದರೆ ಆಗ ಪಾಲಿಕೆ ರಿಕ್ವೆಸ್ಟ್ ಮಾಡಿ ನಿಮ್ಮಿಂದ ಜಾಗ ಸ್ವಾಧೀನಪಡಿಸಿಕೊಂಡು ನಿಮಗೆ ಟಿಡಿಆರ್ ಕೊಡುತ್ತದೆ. ಉದಾಹರಣೆಗೆ ಬೋಜರಾವ್ ಲೇನ್, ಶಾರದಾನಿಕೇತನ ರಸ್ತೆ, ಹ್ಯಾಟ್ ಹಿಲ್ ರಸ್ತೆಯಲ್ಲಿ ಯಾರದ್ದೋ ದೊಡ್ಡ ವಸತಿ ಸಮುಚ್ಚಯ ಕಟ್ಟಲು ಇದೆ ಎಂದು ಆ ರಸ್ತೆಯ ನಿವಾಸಿಗಳಿಗೆ ರಸ್ತೆ ಅಗಲ ಮಾಡಲು ಸೂಚನೆ ಕೊಡಲಾಗಿದೆ. ಕೆಲವು ಕಡೆ ರಸ್ತೆ ಅಗಲ ಮಾಡುವ ಮೊದಲೇ ಬಿಲ್ಡರ್ ತನ್ನ ಬೃಹದಾಕಾರದ ವಸತಿ ಸಮುಚ್ಚಯ ಕಟ್ಟಿ ಕೂಡ ಆಗಿದೆ. ಪಾಲಿಕೆ ತಮ್ಮವರಿಗೆ ಬೇಕಾದರೆ ರಸ್ತೆ ಅಗಲ ಮಾಡಲು ಹೊರಟಾಗ ನಿಮಗೆ ಟಿಡಿಆರ್ ಕೊಡಲು ಸಿದ್ಧ. ಅದೇ ನೀವು ನಿಮ್ಮದೇ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಹೊರಟರೆ ಸಿಂಗಲ್ ಸೈಟ್ ಗಾಗಿ ಇಂತಿಷ್ಟು ಜಾಗವನ್ನು ಬಿಟ್ಟುಕೊಡಿ ಎಂದು ಸೂಚನೆ ಕೊಡುತ್ತದೆ. ಬಿಟ್ಟು ಕೊಡದೇ ಇದ್ದರೆ ನೀವು ಮನೆ ಕಟ್ಟಲು ಸಾಧ್ಯವಿಲ್ಲ. ಕಟ್ಟಿದರೂ ಅದು ಅಕ್ರಮ ಎನಿಸಿಕೊಳ್ಳುತ್ತದೆ.

ಕಾಂಗ್ರೆಸ್ ನವರು ಐದು ವರ್ಷ ಒಂಭತ್ತು ತಿಂಗಳ ಹಿಂದೆ ನಡೆದ ಚುನಾವಣೆಯ ಮೊದಲು ಪ್ರಣಾಳಿಕೆಯಲ್ಲಿ ಜನರಿಗೆ ಏನು ಭರವಸೆ ಕೊಟ್ಟಿದ್ದರು ಎಂದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಸಿಂಗಲ್ ಸೈಟ್ ಎಂದರೆ ಏಕನಿವೇಶನದ ನಿಯಮವನ್ನು ಸರಳೀಕರಣ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಇನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕನಿವೇಶನ ಮಾಡಲು ಹೋಗುವ ನಾಗರಿಕರಿಂದ ಸುಲಿಗೆ ಮಾಡಲಾಗುತ್ತದೆ ಎಂದು ಅದನ್ನು ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೇ ಮಾಡಿಕೊಡುತ್ತೇವೆ ಎಂದು ಕೂಡ ಭರವಸೆ ಕೊಟ್ಟಿದ್ದರು. ಭರವಸೆ ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಮಾಜಿ ಕೇಂದ್ರ ಸಚಿವ ಸನ್ಮಾನ್ಯ ಜನಾರ್ಧನ ಪೂಜಾರಿ. ಅವರ ಬಾಯಿಂದ ಇಂತಹ ಭರವಸೆ ಕೊಡಿಸಿದ್ದ ಕಾಂಗ್ರೆಸ್ ನಾಯಕರು ಜನಾರ್ಧನ ಪೂಜಾರಿಯವರನ್ನೇ ಮರೆತುಬಿಟ್ಟಿರುವಾಗ ಅವರಿಗೆ ಪ್ರಣಾಳಿಕೆಯಲ್ಲಿರುವ ಭರವಸೆಗಳು ನೆನಪಿನಲ್ಲಿ ಇರುತ್ತವೆಯಾ? ಇನ್ನು ನೀರಿನ ಹೆಚ್ಚಳವಾಗಿರುವ ದರದ ಬಗ್ಗೆ ಇನ್ನಷ್ಟು ಬರೆಯಲಿಕ್ಕಿದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search