ನಡುಬೀದಿಯಲ್ಲಿ ಬಿಜೆಪಿ ಶಾಸಕರನ್ನು ಹೊಗಳಿದ ಕಾಂಗ್ರೆಸ್ಸ್ ಕಾರ್ಯಕರ್ತರು ಕೊಟ್ಟಿರುವ ಸಂದೇಶ ಏನು?
Posted On October 31, 2019
ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಮೇಲೆ ಅದೆಷ್ಟು ಭ್ರಮನಿರಸನಗೊಂಡಿದ್ದಾರೆ ಎಂದರೆ ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಿಂದ ಕೆಲವೇ ದೂರದಲ್ಲಿ ನಿಂತು ಮುಂದಿನ ಮೂವತ್ತು ವರ್ಷಕ್ಕೆ ಮಂಗಳೂರು ನಗರ ದಕ್ಷಿಣದ ಶಾಸಕರಾಗಿ ವೇದವ್ಯಾಸ ಕಾಮತ್ ಅವರೇ ಮುಂದುವರೆಯುತ್ತಾರೆ ಎಂದು ಚೀರಿ ಚೀರಿ ಹೇಳಿದ್ದಾರೆ. ಅದು ಕೂಡ ತಮ್ಮ ಪಕ್ಷದ ಜಿಲ್ಲಾ ನಾಯಕರ ಎದುರು ನಿಂತು. ಓಶಿಯನ್ ಪರ್ಲ್ ಹೋಟೇಲಿನಲ್ಲಿ ಸುದ್ದಿಗೋಷ್ಟಿಯನ್ನು ಮಾಡಿ ಕಾಂಗ್ರೆಸ್ಸಿನ 60 ವಾರ್ಡುಗಳ ಅಭ್ಯರ್ಥಿಗಳ ಹೆಸರನ್ನು ಓದಿ ಹೇಳಿ ಅಲ್ಲಿ ಊಟ ಮುಗಿಸಿ ಹೊರಬಂದ ಕಾಂಗ್ರೆಸ್ಸಿನ ಅತಿರಥ ಮಹಾರಥ ನಾಯಕರಿಗೆ ನಿಜಕ್ಕೂ ಶಾಕ್ ಕಾದಿತ್ತು. ಮೊದಲಿಗೆ ಬಿಸಿ ಮುಟ್ಟಿದ್ದು ಮಾಜಿ ಶಾಸಕ ಮೊಯ್ದೀನ್ ಬಾವ ಅವರಿಗೆ. ಮಾಜಿ ಮೇಯರ್ ಗುಲ್ಜಾರು ಬಾನು ಅವರ ಮಗ ತಮ್ಮ ತಾಯಿಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎನ್ನುವ ಕಾರಣಕ್ಕೆ ಮೊಯ್ದೀನ್ ಬಾವ ಅವರಿಗೆ ಕಪಾಳ ಮೋಕ್ಷ ಕೂಡ ಮಾಡಿದ ಘಟನೆ ನಡೆಯಿತು. ಗುಲ್ಜಾರು ಬಾನು ಅವರಿಗೆ ಟಿಕೆಟ್ ಕೊಡುವ ಭರವಸೆ ಮೊದಲು ನೀಡಲಾಗಿತ್ತು. ಅದರ ನಂತರ ಕೊನೆಕ್ಷಣದಲ್ಲಿ ನಿರಾಕರಿಸಲಾಗಿತ್ತು. ಇದರಿಂದ ಗುಲ್ಜಾರು ಬಾನು ಮಗ ಕೋಪಗೊಂಡು ತಮ್ಮ ತಾಯಿಗೆ ಟಿಕೆಟ್ ತಪ್ಪಿಸಿದ್ದು ಮೊಯ್ದೀನ್ ಬಾವ ಎಂದು ಅವರ ಮೈಮೇಲೆ ಏರಿ ಹೋಗುವಂತಹ ಘಟನೆ ನಡೆಯಿತು.
ಅದರ ನಂತರ ಇದೇ ಸಂದರ್ಭದಲ್ಲಿ ಪ್ರತಿಭಟನೆಯ ಬಿಸಿ ತಾಗಿದ್ದು ಮಂಗಳೂರು ನಗರ ದಕ್ಷಿಣದ ಮಾಜಿ ಶಾಸಕರಿಗೆ. ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದಾರೆ ಮತ್ತು ಕೆಲವು ಕಾರ್ಪೋರೇಟರ್ ಗಳು ಪಕ್ಷ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಲು ಈ ಮಾಜಿ ಶಾಸಕರೇ ಕಾರಣ ಎಂದು ಹೇಳಿ ಘೋಷಣೆ ಕೂಗಿದ್ದು ಯುವ ಕಾರ್ಯಕರ್ತರು. ಸ್ಥಳದಲ್ಲಿಯೇ ಇದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒಬ್ಬರೇ ನಿಜವಾದ ಅರ್ಥದಲ್ಲಿ ಈ ಪ್ರಹಸನ ದೊಡ್ಡದಾಗದಂತೆ ನೋಡಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತಿದ್ದರು ಬಿಟ್ಟರೆ ಉಳಿದ ನಾಯಕರು ನಮ್ಮಲ್ಲಿ ಇದು ಇದ್ದದ್ದೇ ಎಂದು ತಮಾಷೆ ನೋಡುತ್ತಿದ್ದರು. ಸ್ಥಳದಲ್ಲಿಯೇ ಇದ್ದ ಐವನ್ ಡಿಸೋಜಾ ಅವರು ಕಾಂಗ್ರೆಸ್ ಮಾಜಿ ಶಾಸಕರ ವಿರುದ್ಧ ಯುವಕರು ಘೋಷಣೆ ಹಾಕುತ್ತಿದ್ದರೆ ಮನಸ್ಸಿನಲ್ಲಿಯೇ ಸಂತೋಷ ಪಡುತ್ತಿದ್ದಂತೆ ವಿಡಿಯೋದಲ್ಲಿ ಗೋಚರವಾಗುತ್ತದೆ. ಮಾಜಿ ಸಚಿವ ರಮಾನಾಥ ರೈ ಅವರು ಸ್ಥಳದಲ್ಲಿಯೇ ಇದ್ದರೂ ಏನೂ ಮಾತನಾಡಲಿಲ್ಲ. ಒಟ್ಟಿನಲ್ಲಿ ಪಕ್ಷದ ಕಚೇರಿಯೊಳಗೆ ಆಗಬೇಕಿದ್ದ ಈ ವಿದ್ಯಮಾನಗಳು ನಟ್ಟನಡು ಬೀದಿಯಲ್ಲಿ ನಡೆದದ್ದು ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಕಾಂಗ್ರೆಸ್ಸಿಗರಿಗೆ ತೀವ್ರ ಮುಜುಗರ ತಂದಿರುವುದು ನಿಜ.
ಅದರಲ್ಲಿಯೂ ತಮ್ಮ ಪಕ್ಷದ ಮಾಜಿ ಶಾಸಕರೊಬ್ಬರು ರಾಜಕೀಯವಾಗಿ ಮಣ್ಣುಮುಕ್ಕಿ ಹೋಗುತ್ತಾರೆ ಎಂದು ನಡುಬೀದಿಯಲ್ಲಿ ನಿಂತು ಬೊಬ್ಬೆ ಹೊಡೆದ ಯುವ ಕಾಂಗ್ರೆಸ್ಸಿಗರು ತಮ್ಮ ಪಕ್ಷ ಈ ಬಾರಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಸೀಟು ಸೋತು ಹತಾಶೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ದಾಖಲೆಯ ಸೋಲು ಕೂಡ ದಕ್ಕಿದೆ. ಹಾಗಿರುವಾಗ ಉಳಿದಿರುವುದು ಪಾಲಿಕೆ ಮಾತ್ರ. ಅದನ್ನಾದರೂ ಉಳಿಸೋಣ ಎಂದು ಪ್ರಯತ್ನ ಮಾಡುತ್ತಾ ಇದ್ದರೆ ಅದಕ್ಕೆ ಕೂಡ ಈಗ ಕಂಟಕ ಬಂದಂತೆ ಕಾಣುತ್ತದೆ. ಅಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾಗ ಮೊದಲಿಗೆ ಕ್ಲಿಯರ್ ಆದ ವಿಚಾರ ಏನೆಂದರೆ ಮಾಜಿ ಶಾಸಕರಿಗೆ ಕಾರ್ಯಕರ್ತರ ನೋವು ಗೊತ್ತಾಗುವುದಿಲ್ಲ ಎನ್ನುವ ಅಂಶ. ಅಷ್ಟಕ್ಕೂ ಈ ಬಾರಿ ಟಿಕೆಟ್ ಹಂಚಿಕೆ ಕಾಂಗ್ರೆಸ್, ಬಿಜೆಪಿ ಪಾಲಿಗೆ ಸವಾಲಾಗಿಯೇ ಇತ್ತು. ಬಿಜೆಪಿಯಲ್ಲಿ ಅಸಮಾಧಾನ ಇದ್ರೂ ಅಲ್ಲೊಂದು ಶಿಸ್ತಿದೆ. ಅವರು ಮಾಜಿ ಶಾಸಕರ ಮೇಲೆ ಕೈ ಮಾಡುವುದಿಲ್ಲ. ನಡುಬೀದಿಯಲ್ಲಿ ಬೈಯುತ್ತಾ ನಿಲ್ಲುವುದಿಲ್ಲ. ಇನ್ನು ವಿರೋಧ ಪಕ್ಷದ ಶಾಸಕರನ್ನು ಹೊಗಳುವುದಿಲ್ಲ. ಇದನ್ನು ಮೂರನ್ನು ಕೂಡ ಬುಧವಾರ ರಾತ್ರಿ ಕಾಂಗ್ರೆಸ್ ಯುವ ನಾಯಕರು ಮಾಡಿದ್ದಾರೆ. ಇನ್ನೇನೂ ಉಳಿದಿದೆ. ಯುದ್ಧದ ಮೊದಲೇ ಕಾಂಗ್ರೆಸ್ ಬಾಣಗಳು ಟುಸ್ ಆಗಿವೆ!

- Advertisement -
Trending Now
ನೀವು ವಿಮಾನ ಯಾನ ಮಾಡುತ್ತೀರಾ? ವಿಮಾನ ನಿಲ್ದಾಣದಲ್ಲಿ ಸರಳ ವ್ಯಾಯಾಮ!
January 7, 2025
Leave A Reply