ಈ ಬಾರಿಯ ಕಾರ್ತಿಕ ಪೂರ್ಣಿಮ, ಕಾರ್ಪೋರೇಟರ್ ಪೂರ್ಣಿಮಾರವರ ಜೀವನದ ಬಲು ದೊಡ್ಡ ದಿನವಾಗಿತ್ತು!!
ಹೌದು,ನವೆಂಬರ್ 12 2019,ಕಾರ್ತಿಕ ಪೌರ್ಣಿಮೆಯ ಪರ್ವಕಾಲದಲ್ಲಿಯೇ ಮಹಾನಗರ ಪಾಲಿಕೆ ಚುನಾವಣೆ ನಡೆಯಿತು.ಸೆಂಟ್ರಲ್ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಶ್ರೀಮತಿ ಪೂರ್ಣಿಮಾ 1615 ಮತಗಳಿಂದ ಗೆಲುವು ಸಾಧಿಸುವ ಮೂಲಕ ಇಲ್ಲಿಯ ತನಕ ಸೆಂಟ್ರಲ್ ವಾರ್ಡ್ ನಲ್ಲಿ ದೊಡ್ಡ ಮಟ್ಟದ ಅಂತರದಲ್ಲಿ ವಿಜಯಶಾಲಿಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಮತದಾನ ಮಾಡಿದವರಲ್ಲಿ ಸರಿ ಸುಮಾರು 75% ಮತದಾರರು ಶ್ರೀಮತಿ ಪೂರ್ಣಿಮಾ ಪರವಾಗಿ ಮತ ಚಲಾಯಿಸಿದರು.ಈ ಮೂಲಕ ಎರಡನೇ ಬಾರಿ ಸ್ಪರ್ಧಿಸಿ ತನ್ನ ಮೊದಲ ಅವಧಿಯಲ್ಲಿ ತಾನು ಮಾಡಿದ ಕಾರ್ಯ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತೆಂದು ದೊಡ್ಡ ಸಂಖ್ಯೆಯ ಮತ ಪಡೆಯುವ ಮೂಲಕ ತನ್ನ ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದರು.ಗೆದ್ದ ತಕ್ಷಣ ತನ್ನ ಗೆಲುವನ್ನು ವಾರ್ಡ್ ಕಾರ್ಯಕರ್ತರ ಪರಿಶ್ರಮ,ಸಹಕಾರ ಮತ್ತು ಮತದಾರ ಪ್ರಭುಗಳ ಪ್ರೀತಿ, ಗುರು ಹಿರಿಯರ ಆಶೀರ್ವಾದ, ದೇವರ ಅನುಗ್ರಹ ಅಂತ ಕ್ರತಜ್ನ್ಯತೆ ಸಲ್ಲಿಸಲು ಮರೆಯಲಿಲ್ಲ.
ಪೂರ್ಣಿಮಾ ಬಗ್ಗೆ ತಮಗೆಷ್ಟು ಗೊತ್ತು?
ಅದು 2013 ರ ಪಾಲಿಕೆ ಚುನಾವಣೆ. ರಾಜ್ಯ ರಾಜಕಾರಣದಲ್ಲಿ ನಡೆದ ಕೆಲವು ಘಟನೆ ಬಿಜೆಪಿ ಪಕ್ಷಕ್ಕೆ ಮುಳುವಾಗಿತ್ತು.ಮಂಗಳೂರು ಮಹಾನರ ಪಾಲಿಕೆಯಲ್ಲಿಯೂ ಇದಕ್ಕೆ ಹೊರತಾಗಿರಲಿಲ್ಲ. ಸೆಂಟ್ರಲ್ ವಾರ್ಡ್ ನಲ್ಲಿ ಮೀಸಲಾತಿ ಘೋಷಣೆಯಾಗಿ ಬಿಜೆಪಿ ಯೋಗ್ಯ ಅಭ್ಯರ್ಥಿ ಹುಡುಕಾಟದಲ್ಲಿತ್ತು. ಅಚಾನಕ್ ಆಗಿ ಬಯಸದೇ ಬಂದ ಭಾಗ್ಯ ಎಂಬಂತೆ ಶ್ರೀಮತಿ ಪೂರ್ಣಿಮಾಗೆ ಬಿಜೆಪಿ ಅಭ್ಯರ್ಥಿಯಾಗುವ ಅವಕಾಶ ಅಭಿಸಿತು.ತಾನು ಹೊಸಬಳಾಗಿದ್ದರೂ ತನ್ನ ಗಂಡ ಮತ್ತು ಗಂಡನ ಅಣ್ಣ ತಮ್ಮಂದಿರು ಮತ್ತು ಇಡೀ ಪರಿವಾರ ಬಾಲ್ಯದಿಂದಲೂ ಸಂಘದ ಹಿನ್ನೆಲೆ ಉಳ್ಳವರಾಗಿದ್ದು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂಬುವುದನ್ನು ಅಲ್ಲಗಳೆಯುವಂತಿಲ್ಲ.ಅಂದು ನಡೆದ ಚುನಾವಣೆಯಲ್ಲಿ ಪಾಲಿಕೆ ಚುಕ್ಕಾಣಿ ಬಿಜೆಪಿ ಹಿಡಿಯುವಲ್ಲಿ ವಿಫಲವಾದರೂ ಸೆಂಟ್ರಲ್ ವಾರ್ಡ್ ನಲ್ಲಿ ಬಿಜೆಪಿ 500 ಮತಗಳಿಗೂ ಹೆಚ್ಚಿನ ಅಂತದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ವಿರೋಧ ಪಕ್ಷದಲ್ಲಿರುವ ಒಬ್ಬ ಪಾಲಿಕೆ ಸದಸ್ಯೆ ಅದರಲ್ಲಿಯೂ ಒಬ್ಬ ಹೆಣ್ಣಾಗಿ ಅಧಿಕಾರದಲ್ಲಿರುವ ಬಲಿಷ್ಠ ಕಾಂಗ್ರೆಸ್ ಸದಸ್ಯರ ಎದುರು ತನ್ನ ವಾರ್ಡ್ ಅಭಿವೃದ್ಧಿಗಾಗಿ ಶ್ರಮಿಸಬೇಕಾದರೆ, ಫಂಡ್ ತರಬೇಕಾದರೆ ಎಷ್ಟು ಚ್ಯಾಲೆಂಜಿಂಗ್ ಇದೆ ಪ್ರಬುದ್ಧ ನಾಗರಿಕರಿಗೆ ತಿಳಿದಿರುವ ವಿಚಾರ.ಆದರೂ ತನ್ನ ಪರಿಸರದ ನಾಗರಿಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಧ್ವನಿ ಎತ್ತಿ ಹೋರಾಟ ಮಾಡಿ ತನ್ನ ವಾರ್ಡ್ ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕವಾಗಿ ದುಡಿದರು.ಈ ನಡುವೆ ಅಪ್ರಬುದ್ಧ ನಾಗರಿಕರ ಅಸಹನೆಯ ಮಾತುಗಳು, ತಡರಾತ್ರಿ ಬರುವ ಸಮಸ್ಯೆ ಹೇಳುವ ಕರೆಗಳು, ಅಸಂಬದ್ಧ ಬೈಗುಳಗಳು, ತಲೆ ಬುಡ ಇಲ್ಲದ ಕೆಲವರ ವಾದಗಳು ಇವೆಲ್ಲವನ್ನು ತನ್ನ ಸಂಸಾರದ ತಾಪತ್ರಯ ನಡುವೆಯೂ ಹೊಂದಾಣಿಕೆ ಮಾಡಿ ಎಲ್ಲರ ಸಮಸ್ಯೆ ಪರಿಹಾರ ಮಾಡುವ ಪ್ರಾಮಾಣಿಕವಾದ ಪ್ರಯತ್ನ ಮಾಡಿದರು.ತೀವ್ರ ಮಳೆ ಬಂದು ಪರಿಸರದಲ್ಲಿ ಮರಗಳು ಉರುಳಿದಾಗ, ಮನೆಗಳು ಬಿದ್ದಾಗ,ಕರೆಂಟ್ ಕಂಬಗಳು ಬಿದ್ದಾಗ, ಇನ್ನಿತರ ಅವಘಡ ಸಂಭವಿಸಿದಾಗ ಮುಂಜಾನೆ, ತಡರಾತ್ರಿ ಎಂಬ ಸಮಯ ನೋಡದೇ ಸ್ಥಳಕ್ಕೆ ಧಾವಿಸಿ ನೊಂದವರ ಸಂಕಷ್ಟದಲ್ಲಿ ಭಾಗಿಯಾಗಿ ತೊಂದರೆ ನಿವಾರಿಸುವಲ್ಲಿ ಸಫಲರಾಗಿದ್ದಾರೆ. ಬಹುತೇಕ ಪ್ರತಿ ರಸ್ತೆಯಲ್ಲಿ ಹೊಸ ಕಾಂಕ್ರೀಟ್ ತೋಡುಗಳುಗಳು ನಿರ್ಮಾಣವಾಗಿವೆ, ರಸ್ತೆಗಳು,ಪರಿಸರ ಸ್ವಚ್ಛ ಸುಂದರವಾಗಿವೆ, ಬ್ರಿಟೀಷ್ ಕಾಲದ ಚರಂಡಿ ವ್ಯವಸ್ಥೆ ಬದಲಾಗಿ ಹೊಸ ಚರಂಡಿ ವ್ಯವಸ್ಥೆ ನಿರ್ಮಾಣವಾಗಿವೆ, ಪರಿಸರದಲ್ಲಿ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ.ಇಷ್ಟೆಲ್ಲ ಮೂಲಭೂತ ಸೌಕರ್ಯಗಳಾದರೆ ಇನ್ನೂ ಹತ್ತು ಹಲವು ಯೋಜನೆ ಜಾರಿಗೆ ಬಂದು ಸೆಂಟ್ರಲ್ ವಾರ್ಡ್ ಇತರ ವಾರ್ಡ್ ಗಳಿಗೂ ಮಾದರಿಯಾಗಿ ಮಾರ್ಪಾಡಾಗಲು ಕಾರಣ ಇದೇ ಮೊದಲ ಬಾರಿ ಪಾಲಿಕೆ ಪ್ರವೇಶಿಸಿದ್ದ ಹೆಣ್ಣು ಶ್ರೀಮತಿ ಪೂರ್ಣಿಮಾ.
ಪ್ರಭಾವಿ ಕಾಂಗ್ರೆಸ್ ನಾಯಕರೊಬ್ಬರು ನಿನಗೆ ನೀರು ಕುಡಿಸುತ್ತೇನೆ ನೋಡ್ತಾ ಇರು ಅಂತ ಬೆದರಿಕೆ ಹಾಕಿದ್ದರು
ಛೆ! ಮೊದಲ ಬಾರಿ ಆಯ್ಕೆಯಾಗಿ ಹೋಗಿದ್ದ ಸದಸ್ಯೆ, ಅದು ಕೂಡ ಹೆಣ್ಣು ಮಗಳು.ಬಿಜೆಪಿ ಸದಸ್ಯರಿಗಿಂತ ಮೂರು ಪಟ್ಟು ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಸದಸ್ಯರ ಎದುರು ತನ್ನ ಪರಿಸರದ ನಾಗರಿಕರಿಗೆ ನ್ಯಾಯ ದೊರಕಿಸಬೇಕಾದರೆ ದಿಟ್ಟತನ ಪ್ರದರ್ಶಿಸಿ ಹೋರಾಡಲೇ ಬೇಕು ಎಂಬ ಅನಿವಾರ್ಯತೆ ಇತ್ತು. ಆ ಒಂದು ದಿನ ನೀರಿನ ವಿಚಾರದಲ್ಲಿ ಪಾಲಿಕೆಯಲ್ಲಿ ಚರ್ಚೆ ನಡೆಯುತ್ತಿತ್ತು. ಪಾಲಿಕೆ ವ್ಯಾಪ್ತಿಯ ಜನತೆ ನೀರಿನ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿತ್ತು.ಇದರ ವಿರುದ್ಧ ಬಿಜೆಪಿ ಸದಸ್ಯರು ಧ್ವನಿ ಎತ್ತಿದ್ದರು.ಬಿಜೆಪಿ ವಾರ್ಡ್ ಗಳಿಗೆ ಕಾಂಗ್ರೆಸ್ ಮಾಡುತ್ತಿರುವ ಮಲತಾಯಿ ಧೋರಣೆಯಿಂದ ತನ್ನ ಸಹನೆ ಕಳೆದು ಕೊಂಡ ಶ್ರೀಮತಿ ಪೂರ್ಣಿಮಾ ಪಾಲಿಕೆ ಸದನದ ಬಾವಿಗಳಿದು ಕಾಂಗ್ರೆಸ್ ವಿರುದ್ಧ ಉಗ್ರ ಹೋರಾಟ ಮಾಡಿ ಕಾಂಗ್ರೆಸ್ ಮಾಡುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನೀರಿನ ವಿಚಾರದಲ್ಲಿ ತನ್ನ ಅಸಫಲತೆ ಬಯಲಾಗುತ್ತದೆ, ಅದು ಕೂಡ ಒಂದು ಹೆಣ್ಣು ಮಗಳಿಂದ ಎಂದು ಹೆದರಿದ ಕಾಂಗ್ರೆಸ್ ಕೆಲವು ಸದಸ್ಯರು ಶ್ರೀಮತಿ ಪೂರ್ಣಿಮಾ ವಿರುದ್ಧ ಹರಿಹಾಯಲು ಪ್ರಾರಂಭಿಸಿದರು.ಏನೇ ಆದರೂ ಪೂರ್ಣಿಮಾ ಹೆದರದೇ ಅನ್ಯಾಯದ ವಿರುದ್ಧ ತನ್ನ ಧ್ವನಿ ಮತ್ತಷ್ಟು ಗಟ್ಟಿ ಮಾಡಿದರು.ಇದರಿಂದ ವಿಚಲಿತರಾದ ಕಾಂಗ್ರೆಸ್ ಪ್ರಭಾವಿ ಮನಪಾ ಸದಸ್ಯರೊಬ್ಬರೂ ನಮ್ಮ ನೀರಿನ ವಿಚಾರ ಬಂಡವಾಳ ಬಯಲು ಮಾಡಿದಿಯಲ್ಲ ನಿನ್ನನ್ನು ಮುಂದಿನ ಚುನಾವಣೆಯಲ್ಲಿ ನೀರು ಕುಡಿಸದೇ ಬಿಡುವುದಿಲ್ಲ ಅಂದೇ ಬಿಟ್ಟರು, ಯಾರು ಯಾರಿಗೆ ನೀರು ಕುಡಿಸುತ್ತಾರೆ ಕಾಲವೇ ಉತ್ತರ ಕೊಡಲಿದೆಯಂತ ಪೂರ್ಣಿಮಾ ನೆಗಾಡುತ್ತಲೇ ಉತ್ತರ ಕೊಟ್ಟರು.ನಂತರ 2019 ರಲ್ಲಿ ಕಾಂಗ್ರೆಸ್ ಸ್ಥಿತಿ ಏನಾಯ್ತು? ಫಲಿತಾಂಶ ನಿಮ್ಮ ಮುಂದಿದೆ.
ಪರಿಸರದ ಪರಿಸ್ಥಿತಿ ಸುಧಾರಿಸಲು ಪ್ರಯತ್ನ ಪಟ್ಟರೂ ತನ್ನ ಸಂಸಾರದ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಲೇ ಇಲ್ಲ.
ನಿಮಗೆ ಆಶ್ಚರ್ಯ ಕಂಡರೂ ಇದು ಸತ್ಯ.ಬಹುತೇಕರ ಮನಸ್ಸಿನಲ್ಲಿ ಕಾರ್ಪೋರೇಟ್ ಎಂದರೆ ಕೋಟಿಗಟ್ಟಲೆ ಆಸ್ಥಿ ಮಾಡುತ್ತಾರೆ ಎಂಬ ಅನಿಸಿಕೆ.ಎಲ್ಲರೂ ಹಣ ಮಾಡಲೆಂದೇ ಕಾರ್ಪೋರೇಟರ್ ಆಗುತ್ತಾರೆ ಎಂಬ ಮಾತು ಸುಳ್ಳು ಅಂತ ಸಾಬೀತು ಪಡಿಸಿದವರಲ್ಲಿ ಶ್ರೀಮತಿ ಪೂರ್ಣಿಮಾ ಕೂಡ ಒಬ್ಬರು.ಬಡ ಕುಟುಂಬದಿಂದಲೇ ಬಂದ ಪೂರ್ಣಿಮಾ ಮದುವೆಯ ನಂತರವೂ ಸಾಮಾನ್ಯಳಾಗಿ ಜೀವನ ನಡೆಸುತ್ತಿದ್ದರು.ಗಂಡ ಒಬ್ಬ ರಿಕ್ಷಾ ಚಾಲಕ.ತನಗೆ ಬರುತ್ತಿದ್ದ ಸಣ್ಣ ಆದಾಯದಿಂದ ಗಂಡ ಮುರಳಿಯವರು ಸಂಸಾರ ನಡೆಸಿ ಬಜಿಲಕೇರಿಯ ಒಂದು ಸಣ್ಣ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದೇನೋ ಕಾರ್ಪೋಟರ್ ಆಗಿ 6 ವರ್ಷ ಕಳೆದರೂ ಪೂರ್ಣಿಮಾ ಅದೇ ಸಣ್ಣ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.ಗಂಡ ವಾರ್ಡ್ ನಲ್ಲಿ ತನ್ನ ಹೆಂಡತಿಗೆ ಸಹಕಾರ ನೀಡುವ ಜೊತೆಯಲ್ಲಿ ಬಿಡುವಿನ ಸಮಯದಲ್ಲಿ ಈಗಲೂ ರಿಕ್ಷಾ ಚಲಾಯಿಸಯತ್ತಾರೆ. ಪಾಲಿಕೆ ಸದಸ್ಯೆಯಾಗುವ ಹಿಂದೆ ಹೇಗಿತ್ತೂ ಅದೇ ರೀತಿ ಈಗಲೂ ಭಗವಾಧ್ವಜ, ಬಂಟಿಂಗ್ ಗೆ ಬಳಸುವ ಧ್ವಜಗಳು, ಬಟ್ಟೆಗಳನ್ನು ಹೊಲಿಯುವ ಮೂಲಕ ತನ್ನ ಸಂಸಾರವನ್ನು ನಡೆಸುತ್ತಿದ್ದಾರೆ. ಹೌದು ಇಂದಿಗೂ ಕೂಡ ಪಾಲಿಕೆ ಸದಸ್ಯೆ ಎಂಬ ಅಹಂಕಾರ ಇಲ್ಲದೇ ವಾರ್ಡ್ ಸುಧಾರಣೆಗೆ ಶ್ರಮಿಸುತ್ತಾ ಸಂಸಾರ ಜೀವನದಲ್ಲಿಯೂ ಶ್ರಮಿಸುತ್ತಿದ್ದಾರೆ.ಆಗಾಗ ಕಾಡುತ್ತಿರುವ ಶರೀರದ ಆರೋಗ್ಯ ಸಮಸ್ಯೆಯ ಹೊರತಾಗಿಯೂ ತನ್ನ ವಾರ್ಡ್ ನಲ್ಲಿರುವ ನಾಗರಿಕರು ಆರೋಗ್ಯದಿಂದ ಇರಬೇಕೆಂದು ಸ್ವಚ್ಛತೆಗೆ ಮತ್ತು ಮಲೇರಿಯಾ ಡೆಂಗ್ಯೂ ಮುಕ್ತ ಪರಿಸರಕ್ಕಾಗಿ ಮುತುವರ್ಜಿ ಬಹಿಸುತ್ತಿದ್ದಾರೆ, ಸೊಳ್ಳೆ ಪರದೆಗಳನ್ನು ಕೂಡ ಈಗಾಗಲೇ ನಾಗರಿಕರಿಗೆ ವಿತರಿಸಿದ್ದಾರೆ. ಬಹುಶಃ ಎಲ್ಲ ಪಾಲಿಕೆ ಸದಸ್ಯರ ಆರ್ಥಿಕ ಸ್ಥಿತಿಗತಿ ಗಮನಿಸಿದರೆ ಹೆಚ್ಚು ಆರ್ಥಿಕ ಸಮಸ್ಯೆ ಹೊಂದಿರುವ ಸದಸ್ಯೆ ಎಂದರೆ ಇಂದಿಗೂ ಹಳೆಯ ಸಣ್ಣ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಶ್ರೀಮತಿ ಪೂರ್ಣಿಮಾರವೇ ಇರಬಹುದೇನೋ. ಒಟ್ಟಾರೆಯಾಗಿ ಒಬ್ಬ ಹೆಣ್ಣಾಗಿ ಶ್ರೀಮತಿ ಪೂರ್ಣಿಮಾಗಿರುವ ಸಾಧಿಸುವ ಛಲ, ಆಶಾವಾದ, ಇಚ್ಛಾಶಕ್ತಿ, ನಾಗರಿಕರ ಬಗ್ಗೆ ಇರುವ ಕಾಳಜಿ ಶ್ಲಾಘನೀಯ.ಸಮಾಜ ಸುಧಾರಣೆಯ ಹಂಬಲಕ್ಕೆ ಸಿಗಬೇಕಾಗಿದೆ ಬೆಂಬಲ.ಶ್ರೀಮತಿ ಪೂರ್ಣಿಮಾ ತನ್ನ ಈ ಎರಡನೇ ಅವಧಿಯಲ್ಲಿಯೂ ಅಭೂತ ಪೂರ್ವ ಸಾಧನೆ ಮಾಡುವಂತಾಗಲಿ, ಮುಂದೊಂದು ದಿನ ಸೆಂಟ್ರಲ್ ವಾರ್ಡ್ ಮಾತ್ರವಲ್ಲ ಇವರ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಗುರುತಿಸಿ ಮಂಗಳೂರು ಮಹಾನಗರ ಪಾಲಿಕೆ ಜವಾಬ್ದಾರಿಯೂ ಇವರಿಗೆ ಸಿಗಲಿ, ಕಾರ್ಪೋರೇಟರ್ ಆಗುವಾಗ ಬಯಸದೇ ಭಾಗ್ಯ ಬಂದಿತ್ತು, ಈಗಲೂ ಭಾಗ್ಯ ಬಯಸದೇ ಬಂದು ಮಂಗಳೂರಿಗರಿಗೆ ಅಭಿವ್ರದ್ಧಿಯ ಭಾಗ್ಯ ದೊರೆಯಲಿ ಎಂದು ಆಶಿಸೋಣ. ಮತ್ತಷ್ಟು ಪೂರ್ಣಿಮಾರಂತಹ ಮತ್ತಷ್ಟು ಪ್ರಾಮಾಣಿಕ ಸದಸ್ಯರನ್ನು ಶಕ್ತಿ ತುಂಬುವ ಕೆಲಸ ಭಗವಂತನಿಂದ ಆಗಲಿ ಎಂಬ ಪ್ರಾರ್ಥನೆ.
Leave A Reply