• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ನಿಮ್ಮ ಮಗನೇ ಚಕ್ರವರ್ತಿ, ತೇಜಸ್ವಿ ಭಾಷಣ ಕದ್ದು ಮುಚ್ಚಿ ಕೇಳುತ್ತಾ ಇರಬಹುದು ಕುಮಾರ, ಚೆಕ್ ಮಾಡಿ!!

Hanumantha Kamath Posted On January 18, 2020
0


0
Shares
  • Share On Facebook
  • Tweet It

ಕುಮಾರಸ್ವಾಮಿಯವರಿಗೆ ಅವರ ತಂದೆ ದೇವೆಗೌಡರು ಅರ್ಜೆಂಟಾಗಿ ಕರೆದು ಅನಗತ್ಯವಾಗಿ ಮಾತನಾಡುವುದನ್ನು ಬಿಡಲು ಸೂಚಿಸಬೇಕು. ಇಲ್ಲದೇ ಹೋದ್ರೆ ಕುಮಾರಸ್ವಾಮಿ ಈಗ ಇರುವ ಒಂದೇ ಒಂದು ಲೋಕಸಭಾ ಸ್ಥಾನವನ್ನು ಕೂಡ ಕಳೆದುಕೊಂಡು ಬಿಡಲಿದ್ದಾರೆ.

ಬಹುಶ: ರೇವಣ್ಣ ಮಗ ಪ್ರಜ್ವಲ್ ಸಂಸತ್ತಿಗೆ ಆಯ್ಕೆಯಾಗಿರುವುದು ಕುಮಾರಸ್ವಾಮಿಗೆ ನೋಡಲು ಆಗದೇ ಪ್ರಜ್ವಲ್ ಕೂಡ ಮುಂದಿನ ಬಾರಿ ಸೋಲಲಿ ಎಂದು ಬಯಸಿಯೇ ಇಂತಹ ಹೇಳಿಕೆಯನ್ನು ಕುಮಾರಸ್ವಾಮಿ ಕೊಡುತ್ತಾ ಇರಬಹುದು‌. ಇಲ್ಲದೇ ಹೋದರೆ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯವರನ್ನು ಕೊಲ್ಲುವ ಸಂಚನ್ನು ಎಸ್ ಡಿಪಿಐ ಕಾರ್ಯಕರ್ತರು ಮಾಡಿದ್ದರು ಎನ್ನುವ ಮಾತನ್ನು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳುತ್ತಿದ್ದಂತೆ ಸಡನ್ನಾಗಿ ಎದ್ದು ಕುಳಿತ ಕುಮಾರಣ್ಣ ” ತೇಜಸ್ವಿ, ಸೂಲಿಬೆಲೆ ಏನು ದೊಡ್ಡ ದೇಶಭಕ್ತರಾ, ಅವರಿಬ್ಬರ ಕೊಡುಗೆ ಬೆಂಗಳೂರಿಗೆ ಏನು?” ಎನ್ನುವ ಪ್ರಶ್ನೆ ಕೇಳಿದ್ದಾರೆ. ಒಳ್ಳೆಯ ಪ್ರಶ್ನೆ. ಆದರೆ ಕೇಳಿದ್ದು ತುಂಬಾ ಬೇಗ ಆಯಿತು ಎನ್ನುವುದು ನನ್ನ ಅಭಿಪ್ರಾಯ.

ತೇಜಸ್ವಿ ಕೊಡುಗೆ ಬೆಂಗಳೂರಿಗೆ ಏನು ಎನ್ನುವುದನ್ನು ಕುಮಾರಸ್ವಾಮಿ ಕೇಳಿದ್ದು ತಪ್ಪು ಅಲ್ಲವೇ ಅಲ್ಲ. ಆದರೂ ಹತ್ತು ವರುಷ ಬಿಟ್ಟು ಕೇಳಿದ್ದರೆ ಆಗ ಉತ್ತರ ಸಿಗುತ್ತಿತ್ತು. ಅದು ಬಿಟ್ಟು ನಿಮ್ಮ ಸಹೋದರನ ಮಗ ಎಷ್ಟು ದಿನದಿಂದ ಸಂಸದನಾಗಿದ್ದಾನೋ ಅಷ್ಟೇ ದಿನದಿಂದ ತೇಜಸ್ವಿ ಕೂಡ ಸಂಸದನಾಗಿದ್ದಾನೆ. ಆದರೆ ತುಲನೆ ಮಾಡಿದರೆ ಸಂಸದನಾದ ಆರೇ ತಿಂಗಳಲ್ಲಿ ಪ್ರಜ್ವಲ್ ರೇವಣ್ಣ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ತೇಜಸ್ವಿಯಿಂದ ಆಗಿದೆ. ಇನ್ನು ಚಕ್ರವರ್ತಿ ಜನಪ್ರತಿನಿಧಿಯಲ್ಲ. ಅವರು ತಮ್ಮದೇ ಯುವ ಬ್ರಿಗೇಡ್ ತಂಡ ಕಟ್ಟಿಕೊಂಡು ಯಾವುದೇ ಸರಕಾರಿ ಇಲಾಖೆ ಮಾಡಲಾಗದ ಕೆಲಸವನ್ನು ಮಾಡುತ್ತಿದ್ದಾರೆ. ಯುವಕರನ್ನು ರಾಜ್ಯಾದ್ಯಂತ ಒಟ್ಟುಗೂಡಿಸಿ ಅವರು ರಾಜ್ಯದ ವಿವಿದೆಡೆ ಕಲ್ಯಾಣಿ ಸ್ವಚ್ಚ ಮಾಡುತ್ತಿರುವುದನ್ನು ನಾಡೇ ನೋಡಿದೆ. ಸುಬ್ರಹ್ಮಣ್ಯದಿಂದ ಹಿಡಿದು ಬೀದರ್ ತನಕ ಅವರ ಸಂಘಟನೆಯ ಯುವಕರು ಸ್ವಚ್ಚ ಭಾರತ ಯೋಜನೆಯನ್ನು ನನಸು ಮಾಡಲು ಮಾಡುತ್ತಿರುವ ಪ್ರಯತ್ನ ಚಿಕ್ಕದೇನಲ್ಲ. ಯುವ ಜನಾಂಗವನ್ನು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಹಚ್ಚುವ ಕೆಲಸವನ್ನು ಅವರ ಹಾಗೇ ಮಾಡಲು ನಿಮಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಕುಮಾರಸ್ವಾಮಿಗಳೇ.

ಅವರಿಬ್ಬರು ದೇಶಪ್ರೇಮಿಗಳಾ, ಯುಗಪುರುಷರಾ ಎಂದು ಕುಮಾರಸ್ವಾಮಿ ಹೀಯಾಳಿಸುವ ಮೂಲಕ ತಮ್ಮ ಪಕ್ಷದ ತಲೆಯ ಮೇಲೆ ತಾವೇ ಕಲ್ಲು ಎತ್ತಿ ಹಾಕಿದ್ದಾರೆ. ಕುಮಾರಸ್ವಾಮಿ ಹೀಗೆ ಮಾತನಾಡುವ ಕಾರಣದಿಂದ ಹಾಸನದಲ್ಲಿ ಬಿಜೆಪಿ ಖಾತೆ ತೆರೆದು ಪ್ರೀತಂ ಗೌಡ ಜಯಗಳಿಸಿದ್ದು. ಅದು ಕುಮಾರಣ್ಣನಿಗೆ ಅರ್ಥವಾಗುವುದಿಲ್ಲವೋ ಅಥವಾ ಜಾಣ ಮರೆವೋ ಯಾರಿಗೆ ಗೊತ್ತು. ಚಕ್ರವರ್ತಿ ಹಾಗೂ ತೇಜಸ್ವಿಯ ಜ್ಞಾನ ಒಟ್ಟು ಮಾಡಿದರೆ ಹತ್ತು ನಿಖಿಲ್ ಸ್ವಾಮಿ ಬೇಕಾಗಬಹುದು. ಅವರಿಗೆ ಇದ್ದಷ್ಟು ಜ್ಞಾನದ ಹತ್ತನೇ ಒಂದು ಭಾಗವೂ ನಿಮ್ಮ ಮಗನಿಗೆ ಇರಲಿಕ್ಕಿಲ್ಲ. ಅಷ್ಟೇ ಯಾಕೆ ನಿಮ್ಮ ಮಗ ಕೂಡ ಕದ್ದು ಮುಚ್ಚಿ ಚಕ್ರವರ್ತಿ ಮತ್ತು ತೇಜಸ್ವಿ ಭಾ಼ಷಣ ಕೇಳುತ್ತಾ ಇರಬಹುದು. ಯಾಕೆಂದರೆ ಅವರಿಗೆ ಗೊತ್ತು. ಇವತ್ತಿನ ಕಾಲಕ್ಕೆ ತಂದೆ, ಅಜ್ಜನ ರಾಜಕೀಯ ಭಾಷಣ ಮುಗಿದು ಹೋಗಿದೆ. ಈಗ ಏನಿದ್ದರೂ ಯುವಕರನ್ನು ಸೆಳೆಯಬಲ್ಲ ವಾಕ್ ಶಕ್ತಿ ಒಬ್ಬ ರಾಜಕಾರಣಿಗೆ ಬೇಕು. ಅದರಿಂದ ಮುಂದಿನ ಹತ್ತು ವರುಷಗಳಲ್ಲಿ ಜೆಡಿಎಸ್ ತನ್ನ ಅವನತಿಯ ಅಂಚಿಗೆ ಬಂದು ನಿಲ್ಲಲಿದೆ. ದೇವೆಗೌಡರು ಇರುವ ತನಕ ಹೇಗಾದರೂ ಮಾಡಿ ಪಕ್ಷ ಉಳಿಸಲು ಏನಾದರೂ ಮಾಡಬಲ್ಲರು. ಅವರ ಬಳಿಕ ಜೆಡಿಎಸ್ ಆಯುಷ್ಯ ಹೆಚ್ಚೆಂದರೆ ಬೆರಳೆಣಿಕೆಯ ವರ್ಷ. ಸಹೋದರರಿಬ್ಬರ ಹಿಂಬಾಲಕರು ಹೊಡೆದಾಡಿ ಪಕ್ಷ ವಿಧಾನಸೌಧದ ಎದುರು ಕೋಮಾಕ್ಕೆ ಹೋಗಲಿದೆ. ಅದು ಗೊತ್ತಿಲ್ಲದೆ ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಸ್ವಲ್ಪ ಬೇಗ ಎಚ್ಚೆತ್ತುಕೊಂಡವರು ಕಾಂಗ್ರೆಸ್ಸಿಗರು. ಸಿದ್ಧರಾಮಯ್ಯ ಧಾವಂತಕ್ಕೆ ಬಿದ್ದು ಒಂದಿಷ್ಟು ಹಗುರವಾಗಿ ವಿಪಕ್ಷದವರ ಬಗ್ಗೆ ಮಾತನಾಡುತ್ತಾರೆ ಬಿಟ್ಟರೆ ಅನೇಕ ನಾಯಕರು ಯಾವಾಗ ಹೇಗೆ ಮಾತನಾಡಬೇಕು ಎನ್ನುವುದರ ಟ್ಯೂಶನ್ ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಚಕ್ರವರ್ತಿ, ತೇಜಸ್ವಿ ಯುಗಪುರುಷರಾ ಎನ್ನುವ ಕುಮಾರಸ್ವಾಮಿಯ ಪ್ರಶ್ನೆಗೆ ಬರುತ್ತೇನೆ‌. ಯುಗಪುರುಷರು ಎಂದು ಬ್ರಾಂಡ್ ಮಾಡಬೇಕಾಗಿರುವುದು ಜನ. ಜೆಡಿಎಸ್ ಆಫೀಸ್ ಅಲ್ಲ. ಇನ್ನು ಕೊಲ್ಲಲು ಸ್ಕೆಚ್ ಹಾಕಿದ್ದ ಎಸ್ ಡಿಪಿಐ ಕಾರ್ಯಕರ್ತರು ನಿಮ್ಮ ಕುಟುಂಬದವರಾ ಕುಮಾರಸ್ವಾಮಿಗಳೇ. ನೀವು ಆರೋಪಿಗಳ ಪರ ಅಷ್ಟು ಫಾಸ್ಟಾಗಿ ಬ್ಯಾಟಿಂಗ್ ಮಾಡುವ ವೇಗ ನೋಡಿದರೆ ನಿಮಗೂ ಆರೋಪಿಗಳಿಗೂ ಜನ್ಮಜನ್ಮಾಂತರದ ಸಂಬಂಧ ಇರುವ ಹಾಗೆ ಇದೆ. ಒಂದು ವೇಳೆ ತೇಜಸ್ವಿ, ಚಕ್ರವರ್ತಿ ಯುಗಪುರುಷರು ಅಲ್ಲ ಎಂದಾದರೆ ಅವರನ್ನು ಕೊಲ್ಲಲು ಎಸ್ ಡಿಪಿಐ ಕಾರ್ಯಕರ್ತರಿಗೆ ರೈಟ್ ಇದೆಯಾ. ಹಾಗಾದರೆ ಎಸ್ ಡಿಪಿಐ ಪರ ವಾದಿಸಿ ಕುಮಾರಸ್ವಾಮಿಯವರೇ ನೀವು ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಾತನಾಡುವವರನ್ನು ಕೊಂದರೆ ಒಳ್ಳೆಯದು ಎನ್ನುವ ಸಂದೇಶ ಕೊಟ್ಟಂತೆ ಆಗಲಿಲ್ಲವೇ? ನೀವು ಅಥವಾ ನಿಮ್ಮ ಮಗ ನಾಳೆ ಅಚಾನಕ್ ಆಗಿ ಜ್ಞಾನೋದಯ ಆಗಿ ಸಿಎಎ ಪರ ಮಾತನಾಡಿದರೆ ಆಗ ಇದೇ ಎಸ್ ಡಿಪಿಐಯವರು ನಿಮ್ಮ ಅಥವಾ ನಿಮ್ಮ ಮಗನ ವಿರುದ್ಧ ಸಂಚು ನಡೆಸಿದರೆ ಆವಾಗಲೂ ನೀವು ಹೀಗೆ ಮಾತನಾಡುತ್ತೀರಾ? ನೀವು ಇವತ್ತು ಯಾರ ಪರವಾಗಿ ಇರುತ್ತಿರೋ ನಾಳೆನೂ ಅವರ ಪರವಾಗಿಯೇ ಇರಲ್ಲ ಎನ್ನುವುದು ಜನರಿಗೆ ಗೊತ್ತು. ಹಾಗಿರುವಾಗ ಸುಮ್ಮನೆ ಹೇಳಿಕೆ ಕೊಟ್ಟು ಇರುವ ಒಂದು ಲೋಕಸಭಾ ಸ್ಥಾನವನ್ನು ಕೂಡ ಕಳೆದುಕೊಳ್ಳದಿರಿ!!

0
Shares
  • Share On Facebook
  • Tweet It




Trending Now
ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
Hanumantha Kamath November 11, 2025
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
  • Popular Posts

    • 1
      ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!

  • Privacy Policy
  • Contact
© Tulunadu Infomedia.

Press enter/return to begin your search