• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಚ್ಚನಾಡಿಗೆ ವಿಸಿಟ್ ಕೊಡುವ ಪೇರೆಡ್ ಮುಂದುವರೆದಿದೆ!!

Hanumantha Kamath Posted On February 29, 2020
0


0
Shares
  • Share On Facebook
  • Tweet It

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸ್ಮಾರಕವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಬೆಂಗಳೂರಿನಿಂದ ಗಣ್ಯಾತೀಗಣ್ಯರು ಬಂದು ಅದನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಬಹುಶ: ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವುದು ಮಾತ್ರ ಬಾಕಿ. ಉಳಿದವರೆಲ್ಲ ಬಂದು ನೋಡಿ ಹೋಗಿದ್ದಾರೆ. ಇವತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬಂದು ನೋಡಿ ಹೋಗಿದ್ದಾರೆ. “ನಮಗೆ ಕೆಲಸ ಇಲ್ಲ ಎಂದು ನಾವು ನೋಡಿ ಹೋಗುವುದಲ್ಲ, ನೀವು ಆದಷ್ಟು ಬೇಗ ಏನು ಕೆಲಸ ಆಗಬೇಕೋ ಅದನ್ನು ಮುಗಿಸಿಕೊಡಬೇಕು. ನಾನು ಮುಂದಿನ ಸಲ ಬಂದಾಗ ಯಾವುದೇ ಕೆಲಸ ಬಾಕಿ ಇರಬಾರದು” ಎಂದು ಪಾಲಿಕೆಯ ಆಯುಕ್ತರಿಗೆ ಹಾಗೂ ಇಂಜಿನಿಯರ್ ಗಳಿಗೆ ತಾಕೀತು ಮಾಡಿ ಹೋಗಿದ್ದಾರೆ. ಅದರೊಂದಿಗೆ ಮುಂದಿನ ತಿಂಗಳೊಳಗೆ ಡಂಪಿಂಗ್ ಯಾರ್ಡ್ ಗೆ ಮುಕ್ತಿ ಸಿಗುತ್ತದಾ ಎನ್ನುವುದಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಬಹುದು ಎನ್ನುವ ನಿರೀಕ್ಷೆ ಇಲ್ಲಿಯ ಜನರಲ್ಲಿ ಇದೆ. ಪಚ್ಚನಾಡಿಯ ಮಂದಾರದ ಜನರ ಸಂಕಷ್ಟಕ್ಕೆ ಬಹುತೇಕ ಏಳು ತಿಂಗಳು ಮುಗಿಯುತ್ತಿವೆ. ಹಿಂದಿನ ಬಾರಿ ಪಾಲಿಕೆಯಲ್ಲಿ ಆಡಳಿತದಲ್ಲಿ ಇದ್ದ ಕಾಂಗ್ರೆಸ್ ಮಾಡಿದ ಅವೈಜ್ಞಾನಿಕ ಅವ್ಯವಸ್ಥೆಯಿಂದ ಪಚ್ಚನಾಡಿ ಡಂಪಿಂಗ್ ಯಾರ್ಡ್ ತನ್ನ ಇವತ್ತಿನ ಪರಿಸ್ಥಿತಿಗೆ ಬಂದು ತಲುಪಿದೆ. ಆರೋಗ್ಯ ಸಚಿವ ಶ್ರೀರಾಮುಲು ಬಂದು ನೋಡಿದರು, ಈಗ ಭೈರತಿ ಬಸವರಾಜ್.

ಅಷ್ಟಕ್ಕೂ ನಾನು ಹೇಳುವುದೇನೆಂದರೆ ಈ ಸಚಿವರು ಅಧಿಕಾರಿಗಳ ಮಾತುಗಳನ್ನು ಕೇಳಿ ಅದನ್ನೇ ನಂಬಬಾರದು. ನಂಬಿ ಅದನ್ನೇ ಮಾಧ್ಯಮಗಳ ಮುಂದೆ ಹೇಳಬಾರದು. ಇನ್ನು ಮಾಧ್ಯಮಗಳು ಅದನ್ನೇ ಶಂಖದಿಂದ ಬಂದ ತೀರ್ಥ ಎಂದು ನಂಬಿ ಬರೆಯಬಾರದು. ನಾನು ಹಿಂದಿನ ಬಾರಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಅವರು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಕರೆದಿದ್ದ ಜನಸಂಪರ್ಕ ಸಭೆಯಲ್ಲಿಯೂ ಜನಪರವಾಗಿ ನನ್ನ ಅಭಿಪ್ರಾಯ ಮಂಡಿಸಿದ್ದೆ. ನಂತರ ನಗರಾಭಿವೃದ್ಧಿ ಸಚಿವರಾಗಿ ಯುಟಿ ಖಾದರ್ ಇದ್ದರು. ಅದಕ್ಕಿಂತ ತುಂಬಾ ಸಮಯದ ಹಿಂದೆ ರೋಶನ್ ಬೇಗ್ ನಗರಾಭಿವೃದ್ಧಿ ಸಚಿವರಾಗಿದ್ದರು. ನಗರಾಭಿವೃದ್ಧಿ ಇಲಾಖೆ ಎಂದರೆ ಅದು ಜನರ ಸಮಸ್ಯೆಗಳಿಗೆ, ಅಗತ್ಯಗಳಿಗೆ ನೇರ ಸಂಪರ್ಕವನ್ನು ಹೊಂದಿರುವ ಇಲಾಖೆ. ಪಾಲಿಕೆಯ ಅಷ್ಟೂ ವ್ಯವಹಾರಗಳ ಮೇಲೆ ಹಿಡಿತ ಇರುವ ಇಲಾಖೆ ಅದು. ಅಂತಹ ಇಲಾಖೆಯ ಸಚಿವರು ಪಾಲಿಕೆಯ ಚೇಂಬರ್ ನಲ್ಲಿ ನಾಲ್ಕು ಅಧಿಕಾರಿಗಳನ್ನು ಕೂರಿಸಿ ಇಬ್ಬರು ಶಾಸಕರನ್ನು ಪಕ್ಕದಲ್ಲಿ ಇಟ್ಟು ಮಾಡುವ ಸಭೆ ಸಂಪೂರ್ಣ ವ್ಯರ್ಥ. ಮೊದಲನೇಯದಾಗಿ ಅಧಿಕಾರಿಗಳು ನೂರಕ್ಕೆ ತೊಂಭತ್ತೊಂಭತ್ತು ಶೇಕಡಾ ಅಪ್ಪಟ ಸುಳ್ಳುಗಳನ್ನೇ ದಾರ ಕಟ್ಟಿ ಪೋಣಿಸಿ ಸಚಿವರ ಕುತ್ತಿಗೆಗೆ ಹಾಕಿಸಿ ಅಂದಚೆಂದ ಎಂದು ಭ್ರಮೆ ಮೂಡಿಸುತ್ತಾರೆ. ಇನ್ನು ಇಬ್ಬರು ಶಾಸಕರು ಅಧಿಕಾರಿಗಳು ಹೇಳುತ್ತಿರುವುದು ಅಪ್ಪಟ ಸುಳ್ಳು ಎಂದು ಸಾಬೀತು ಪಡಿಸುವಷ್ಟು ಜ್ಞಾನವನ್ನು ಇನ್ನಷ್ಟೇ ಪಡೆಯಬೇಕಾಗಿದೆ. ಅಧಿಕಾರಿಗಳೊಂದಿಗೆ ಸಭೆ ಮಾಡಬೇಡಿ ಎಂದು ನಾನು ಹೇಳುವುದಿಲ್ಲ. ಅಧಿಕಾರಿಗಳು ಕೊಡುವ ದಾಖಲೆ ಹಿಡಿದು ಪರಿಷತ್ ಸಭಾಂಗಣದಲ್ಲಿ ಜನ ಸಂಪರ್ಕ ಸಭೆ ಮಾಡಿ. ಒಳಗೆ ನೀವು ಮಾಡುವ ಪ್ರಗತಿ ಪರಿಶೀಲನಾ ಸಭೆ ಅಧಿಕಾರಿಗಳ ಪ್ರಗತಿ ಸಭೆ ಆಗಿರುತ್ತೇ ವಿನ: ನಗರದ್ದು ಅಲ್ಲ. ನೀವು ನಮ್ಮೊಂದಿಗೆ ಸಭೆ ಮಾಡಿದರೆ ಅದೇ ಅಧಿಕಾರಿಗಳ ಮುಂದೆ, ಇದೇ ಶಾಸಕರ ಮುಂದೆ ನಾವು ವಾಸ್ತವವನ್ನು ನಿಮಗೆ ತೋರಿಸುತ್ತೇವೆ. ಆ ಉಮ್ಮೇದು ನಗರಾಭಿವೃದ್ಧಿ ಸಚಿವರಿಗೆ ಇದೆಯಾ?

ಇನ್ನು ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ, ವಿರೋಧ ಗಲಭೆಗಳು ನಿಯಂತ್ರಣಕ್ಕೆ ಬರುತ್ತಿವೆ. ಸದ್ಯ ಎಲ್ಲವೂ ಬೂದಿ ಮುಚ್ಚಿದ ಕೆಂಡ. ದೆಹಲಿಯ ಹಲವೆಡೆ ಅನೇಕ ಮನೆಗಳನ್ನು, ಅಂಗಡಿಗಳನ್ನು ಸುಟ್ಟಿರುವ ದೃಶ್ಯ ಪತ್ರಿಕೆ, ಟಿವಿಯಲ್ಲಿ ನೀವು ಕಾಣ್ತಾ ಇರಬಹುದು. ಈ ಎಲ್ಲಾ ಕರಾಳತೆ ಆದಷ್ಟು ಬೇಗ ಮುಗಿಯಬೇಕಾದರೆ ಸಿಎಎ ವಿರೋಧಿಸುವವರು ಆ ಬಗ್ಗೆ ಅಧ್ಯಯನ ನಡೆಸಬೇಕು. ಯಾಕೆಂದರೆ ಪಾಕಿಸ್ತಾನದಲ್ಲಿರುವ ಹಿಂದೂಗಳು ಅಲ್ಲಿನ ಮುಸ್ಲಿಮರಿಗಿಂತ ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಿತ್ತು. ಆ ತೆರಿಗೆಯ ಪ್ರಮಾಣ ಎಷ್ಟು ದುಪ್ಪಟ್ಟಾಗಿರುತ್ತಿತ್ತು ಎಂದರೆ ಅಸಹಾಯಕ ಹಿಂದೂಗಳು ಅದನ್ನು ಕಟ್ಟಲಾಗದೇ ಒದ್ದಾಡುತ್ತಿದ್ದರು. ತೆರಿಗೆ ಕಟ್ಟದವರ ಮನೆಗಳನ್ನು ಲೂಟಿ ಹೊಡೆಯಲಾಗುತ್ತಿತ್ತು ನಂತರ ಸುಟ್ಟುಹಾಕಲಾಗುತ್ತಿತ್ತು. 1965 ರಲ್ಲಿ ಪಾಕಿಸ್ತಾನದಲ್ಲಿ “ಎನಿಮಿ ಪ್ರಾಪರ್ಟಿ ಆಕ್ಟ್” ಎನ್ನುವುದು ಜಾರಿಯಾಗಿತ್ತು. ಅದರ ಮುಖ್ಯ ಉದ್ದೇಶ ಹಿಂದೂಗಳ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕುವುದು. 1971 ರಲ್ಲಿ ಬಾಂಗ್ಲಾದ ಜನನದ ನಂತರ ಬಾಂಗ್ಲಾದಲ್ಲಿಯೂ “ವೆಸ್ಟೆಡ್ ಪ್ರಾಪರ್ಟಿ ಆಕ್ಟ್” ಎನ್ನುವ ಕಾನೂನು ಜಾರಿಗೆ ತರಲಾಯಿತು. ಇದರ ಮುಖ್ಯ ಉದ್ದೇಶ ಕೂಡ ಹಿಂದೂಗಳ ಭೂಮಿಯನ್ನು ಮುಟ್ಟುಗೋಲು ಹಾಕುವುದು. ಹಿಂದೂಗಳ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿ ಅದನ್ನು ತಮ್ಮ ದೇಶದ ಮುಸ್ಲಿಮರಿಗೆ ಹಂಚುವ ನಿಯಮ ಹಿಂದೂಗಳ ಪಾಲಿಗೆ ಮರಣಶಾಸನವೇ ಆಗಿತ್ತು. ಹೀಗೆ ತೆರಿಗೆಯ ಭಾರ, ಜೀತದಾಳುಗಳಾಗಿ ದುಡಿಯುವ ಒತ್ತಡ, ಆಸ್ತಿಮುಟ್ಟುಗೋಲು ಒಂದೆಡೆಯಾದರೆ ಮತಾಂತರ, ಅತ್ಯಾಚಾರ, ಕೊಲೆ, ಬಲವಂತದ ಮದುವೆ ಮತ್ತೊಂದೆಡೆ ಪಾಕ್ ನಲ್ಲಿರುವ ಹಿಂದೂಗಳಿಗೆ ಅಲ್ಲಿ ಇರುವ ಒಂದೊಂದು ದಿನ ಕೂಡ ಅಕ್ಷರಶ: ನರಕದಂತೆ ಆಗಿತ್ತು.

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search