• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಲಾಕ್ ಡೌನ್ ನಿಯಮ ಮೀರಿದ ಖಾದರ್ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿ!!

Hanumantha Kamath Posted On April 14, 2020
0


0
Shares
  • Share On Facebook
  • Tweet It

ಮಂಗಳೂರು ಅಂದರೆ ಉಳ್ಳಾಲ ಶಾಸಕ ಯುಟಿ ಖಾದರ್ ಅವರು ಕಾನೂನಿಗೆ ವಿರುದ್ಧವಾಗಿ ನಡೆದು ಶಹಬ್ಬಾಶ್ ಗಿರಿ ಪಡೆದುಕೊಳ್ಳುತ್ತಿದ್ದಾರೆ. ಸಣ್ಣಪುಟ್ಟ ವಿಷಯಗಳಲ್ಲಿ ಹೇಗೆ ಪಬ್ಲಿಸಿಟಿ ಪಡೆದುಕೊಳ್ಳಬಹುದು ಎಂದು ಬೇರೆ ಜನಪ್ರತಿನಿಧಿಗಳಿಗೆ ತೋರಿಸಿಕೊಟ್ಟದ್ದೇ ಖಾದರ್ ರವರ ಇವರೆಗಿನ ಹೆಗ್ಗಳಿಕೆ. ರಸ್ತೆಯಲ್ಲಿ ಬಿದ್ದವರನ್ನು ಎತ್ತಿ ಕಾರಿನಲ್ಲಿ ಕೂರಿಸಿದೆ, ರಸ್ತೆ ಬದಿ ಅಂಗಡಿಯಲ್ಲಿ ಚಾ ಕುಡಿದೆ, ಹೀಗೆ ಒಬ್ಬ ಶಾಸಕನಾಗಿ ಏನೋ ದೊಡ್ಡದು ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿಂಬಿಸಿಕೊಳ್ಳುವುದು ಖಾದರ್ ಜಾಯಮಾನ. ಅಭಿವೃದ್ಧಿ ದೃಷ್ಟಿಯಲ್ಲಿ ಕ್ಷೇತ್ರದಲ್ಲಿ ಏನೂ ಮಾಡದಿದ್ದರೂ ಹೀಗೆ ಯಾರೂ ಮಾಡದ್ದಂತಹ ಸಾಧನೆ (1) ಮಾಡಿ ಚಪ್ಪಾಳೆ ತಟ್ಟಿಸಿಕೊಂಡು ಕೆಲದಿನ ಮಿಂಚುವುದು ಖಾದರ್ ರೂಢಿ. ಅಂತಹ ಮಾನ್ಯ ಶಾಸಕರು ಈಗ ಬೆಂಗಳೂರಿನಿಂದ ಒರ್ವ ವಿದ್ಯಾರ್ಥಿನಿಯನ್ನು ಮಂಗಳೂರಿಗೆ ಕರೆ ತಂದು ಕೊಡುತ್ತಿರುವ ಫೋಸ್ ನೋಡಿದರೆ ಇವರೇ ಇಟಲಿಯಿಂದ ಆಕೆಯನ್ನು ಕರೆದುಕೊಂಡು ಬಂದರೇನೋ ಎಂದು ಎಲ್ಲರೂ ಅಂದುಕೊಳ್ಳಬೇಕು, ಹಾಗೆ ಮಾಡುತ್ತಿದ್ದಾರೆ.
ವಿಷಯ ಏನೆಂದರೆ ಕುಳಾಯಿ ನಿವಾಸಿ ಮಧು ಭಟ್ ಎನ್ನುವ ಹುಡುಗಿ. ಇಟಲಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಹೋಗಿದ್ದಳು. ಅಲ್ಲಿನ ಪ್ರಸ್ತುತ ಪರಿಸ್ಥಿತಿ ಎಲ್ಲರಿಗೂ ಗೊತ್ತು. ನಮ್ಮ ಕೇಂದ್ರ ಸರಕಾರ ಏರ್ ಲಿಫ್ಟ್ ಮಾಡಿ ಅಲ್ಲಿನ ಭಾರತೀಯರನ್ನು ತಂದು ದೆಹಲಿಯ ಆರ್ಮಿ ಕ್ಯಾಂಪ್ ನಲ್ಲಿ ಇಟ್ಟಿತ್ತು. ಅಲ್ಲಿ ಎಲ್ಲರನ್ನು 14 ದಿನ ಕ್ವಾರಂಟೈನ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿದ್ದವರನ್ನು ಅತ್ಯುತ್ತಮ ರೀತಿಯಲ್ಲಿ ಉಪಚಾರ ಮಾಡಲಾಗಿದೆ. ಅದರ ಬಳಿಕ ಕರ್ನಾಟಕದ 21 ಜನರನ್ನು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ, ದೆಹಲಿಯಿಂದ  ವಿಶೇಷ ಬಸ್ ಮಾಡಿ   ಬೆಂಗಳೂರಿಗೆ ಕರೆ ತರಲಾಗಿತ್ತು.  ಬಳಿಕ ಮಂಗಳೂರಿಗೆ ಬರಲು ಜಿಲ್ಲೆಗಳ ಗಡಿಯಲ್ಲಿ ನಿರ್ಬಂಧ ಇರುವುದರಿಂದ ಅಷ್ಟು ಸುಲಭವಾಗಿ ಜಿಲ್ಲಾಡಳಿತಗಳಿಂದ ಅನುಮತಿ ಸಿಕ್ಕಿರಲಿಲ್ಲ.
ಈ ಸಂದರ್ಭದಲ್ಲಿ ಕಾನೂನು ಕೈಗೆ ತೆಗೆದುಕೊಂಡದ್ದು ಕಾನೂನು ಪದವಿಧರ, ಮಾಜಿ ಆರೋಗ್ಯ ಸಚಿವರೂ ಆದ ಖಾದರ್. ಖಾದರ್ ಅವರು ಆಕೆಯನ್ನು ತಮ್ಮ ಕಾರಿನಲ್ಲಿ ಎಲ್ಲ ಗಡಿ ನಿಯಮಗಳನ್ನು ಮೀರಿ ಮನೆಗೆ ಬಿಟ್ಟು ಕ್ಯಾಮೆರಾಗಳಿಗೆ ಫೋಸ್ ಕೊಟ್ಟು ಮಿಂಚಿದ್ದಾರೆ. ಅವರು ಮಿಂಚುವುದೇ ಆಗಿದ್ದರೆ ಜ್ವರದಿಂದ ಬಳಲಿ ಚಿಕಿತ್ಸೆ ಸಿಗದೇ ಮೃತಪಟ್ಟ 13 ವರ್ಷದ ಬಾಲಕಿ ಸ್ನೇಹಾ ಅವಳಿಗೆ ಚಿಕಿತ್ಸೆ ಕೊಡಿಸಿ ಮಿಂಚಬಹುದಿತ್ತು, ವಾಹನ ಇಲ್ಲದೇ ನೂರಾರು ಕಿ.ಮೀ ನಡೆದುಕೊಂಡು ಹೋಗಿ ಮೃತಪಟ್ಟ ಗರ್ಭಿಣಿಗೆ ಕಾರಿನ ವ್ಯವಸ್ಥೆ ಮಾಡಿ ಮಿಂಚಬಹುದಿತ್ತು, ಹೀಗೆ ಉದಾಹರಣೆಗಳು ಸಾಕಷ್ಟಿವೆ. ಅಷ್ಟೇ ಏಕೆ, ನನ್ನ ಮಗಳಂತೆ ನಮ್ಮ ಮಂಗಳೂರಿನ ಎಷ್ಟೋ ಹೆತ್ತವರ ಹೆಣ್ಣುಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಮನಸ್ಸು ಮಾಡಿದರೆ ನಾವು ಕೂಡ ಯಾವುದಾದರೂ ಶಾಸಕರ ಶಿಫಾರಸ್ಸು ಮಾಡಿ ನಮ್ಮ ನಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಹೊರಟರೆ ಲಾಕ್ ಡೌನ್, ಗಡಿ ನಿರ್ಭಂದ ಏಕೆ? ಅನುಕೂಲಸ್ಥರು ನಿಯಮಗಳನ್ನು ಗಾಳಿಗೆ ತೂರಿ ಬರುವುದಾದರೆ ಎಷ್ಟೋ ಜನರು ತಮ್ಮ ರಾಜ್ಯಗಳಿಗೆ ಹೋಗಲು ಅಲ್ಲಲ್ಲಿ ನಡೆದುಕೊಂಡು ಹೋಗುತ್ತಿದ್ದಾರಲ್ಲ, ಅವರನ್ನು ಯಾಕೆ ಪೊಲೀಸರು ತಡೆದು ನಿಲ್ಲಿಸಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಯಾಕೆ, ಅವರು ಬಡವರೆನ್ನುವ ಕಾರಣಕ್ಕಾ? ಖಾದರ್ ಆದರೆ ಯಾವುದೇ ನಿಯಮಗಳನ್ನು ಮುರಿಯಬಹುದಾ? ಅಷ್ಟಕ್ಕೂ ಖಾದರ್ ಏನು ಮೇಲಿನಿಂದ ಇಳಿದು ಬಂದಿದ್ದಾರಾ?
ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ನಮ್ಮ ರಾಜ್ಯದವರನ್ನು   ದೆಹಲಿಯಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಕರೆ ತಂದ ಬಗ್ಗೆ ಹೆಚ್ಚಿನ ಮಾಹಿತಿಯೇ ಹೊರ ಬರಲಿಲ್ಲ ಆದರೆ ಖಾದರ್ ಬೆಂಗಳೂರಿನಿಂದ ಕರೆ ತಂದದ್ದು ಮಾತ್ರ ಬಹಳಷ್ಟು ಪ್ರಚಾರ ಪಡೆದಿದೆ. ಮತ್ತು ಶಾಸಕ ಖಾದರ್ ರವರು ಕಾನೂನು ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೋಗಿರುವುದು ಹೇಗೆ? ಇವರಿಗೆ ಅಂತರ್ ಜಿಲ್ಲಾ ಗಡಿ ನಿರ್ಬಂಧದ ಅನ್ವಯವಾಗುವುದಿಲ್ಲ?
ಅವಳನ್ನು ಇಟಲಿಯಿಂದ ಕರೆದುಕೊಂಡು ಬರಲು ಏನಾದರೂ ಸಹಾಯ ಮಾಡಿದ್ರಾ? ಬೆಂಗಳೂರಿನಲ್ಲಿ ಆಕೆ ಕೆಲವು ದಿನ ಇದ್ದರೆ ಏನು ತೊಂದರೆ ಆಗುತ್ತಿತ್ತು. ಅವಳ ಪೋಷಕರಿಗೆ ಅವಳು ಹೇಗೂ ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಇದ್ದಾಳೆ ಎಂದು ಗೊತ್ತಿತ್ತು. ಹಾಗಿರುವಾಗ ಅವರು ಜಿಲ್ಲಾಡಳಿತದಿಂದ ಅನುಮತಿ ಸಿಗಲಿಲ್ಲ ಎಂದು ಈ ರೀತಿ ಕರೆದುಕೊಂಡು ಬಂದದ್ದು ತಪ್ಪು. ಮಗಳನ್ನು ಇಟಲಿಗೆ ಕಳುಹಿಸಲು ಧೈರ್ಯ ತೋರುವ ಪೋಷಕರು ಕಾನೂನು ಉಲ್ಲಂಘಿಸಿ ಬೆಂಗಳೂರಿನಿಂದ ಕರೆ ತರಲು ಮುಂದಾದದ್ದು ಜಿಲ್ಲಾಡಳಿತಕ್ಕೆ ಮಂಕುಬೂದಿ ಎರಚಿದಂತೆ ಆಗಿದೆ.
ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಖಾದರ್ ಅಂತವರು ಇಂತಹ ಸಮಯದಲ್ಲಿ ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗಿ ಬರುವವರಾದರೆ ಅದನ್ನು ಫೇಸ್ ಬುಕ್ ನಲ್ಲಿ ಹಾಕಲಿ. ಯಾರಾದರೂ ಬೆಂಗಳೂರಿಗೆ ಹೋಗುವವರಿದ್ದರೆ, ಅಲ್ಲಿಂದ ಬರುವವರಿದ್ದರೆ ಹೇಳಲು ತಿಳಿಸಲಿ. ಆಗ ಬಹಿರಂಗವಾಗಿ ಕಾನೂನು ಉಲ್ಲಂಘಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಗೊತ್ತಾಗುತ್ತದೆ. ಒಂದು ವೇಳೆ ಜಿಲ್ಲಾಡಳಿತ ಮೌನವಾಗಿದ್ದರೆ ಬೇರೆಯವರ ಮಕ್ಕಳು ಮನೆಗೆ ಬರಲು ಅನುಕೂಲವಾಗುತ್ತದೆ. ಶ್ರೀಮಂತರಿಗೆ ಒಂದು ಕಾನೂನು, ಬಡವರಿಗೆ ಒಂದು ಕಾನೂನು. ಅದರ ಮೇಲೆ ಸೆಲ್ಫಿ ಬೇರೆ. ಪತ್ರಿಕೆಗಳಲ್ಲಿ ಸುದ್ದಿ ಬೇರೆ. ಯಾಕೋ ಲಾಕ್ ಡೌನ್ ಬಡವರಿಗೆ ಮಾತ್ರನಾ ಎಂದು ಅನಿಸುವುದು ಇಂತವರನ್ನು ಕಂಡಾಗಲೇ!
0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search