• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಮ ಮಂದಿರಕ್ಕೆ ನಮ್ಮ ಬೆಂಬಲ ಎನ್ನುವ ಕಾಂಗ್ರೆಸ್ಸಿಗರೇ ಆತ್ಮಾವಲೋಕನ ಮಾಡಿಕೊಳ್ಳಿ!!

Hanumantha Kamath Posted On August 5, 2020


  • Share On Facebook
  • Tweet It

500 ವರ್ಷಗಳ ಹೋರಾಟ, ಕದನ ಮತ್ತು ಕಾತರಕ್ಕೆ ಇವತ್ತು ಅಗಸ್ಟ್ 5 ರಂದು ಅಂತ್ಯ ಸಿಕ್ಕಿದೆ. ಭಾರತೀಯ ಜನತಾ ಪಾರ್ಟಿ ರಾಮ ಮಂದಿರ ನಿರ್ಮಿಸುವುದಿಲ್ಲ. ಅದನ್ನು ಕೇವಲ ಚುನಾವಣಾ ವಿಷಯವಾಗಿ ಮಾತ್ರ ಇಟ್ಟುಕೊಳ್ಳುತ್ತದೆ ಎನ್ನುವ ಕೆಲವರ ವ್ಯಂಗ್ಯಕ್ಕೆ ಇನ್ನು ಜಾಗವಿಲ್ಲ. ನ್ಯಾಯಾಲಯ ಕೊಡುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ಹೇಳುತ್ತಾ ಬಂದು ಜನಾಭಿಪ್ರಾಯವನ್ನು ಮೂಡಿಸುತ್ತಾ, ಪ್ರಬಲ ಇಚ್ಚಾಶಕ್ತಿಯ ಮೂಲಕ ಸಾಕ್ಷ್ಯಗಳನ್ನು ಒದಗಿಸುತ್ತಾ ಕೊನೆಗೆ ಹೌದು ಅಲ್ಲಿ ರಾಮಚಂದ್ರನ ಜನ್ಮವಾಗಿತ್ತು. ಅಲ್ಲಿ ರಾಮದೇವರ ಮಂದಿರ ನಿರ್ಮಾಣವಾಗಲಿ ಎಂದು ಅಂತಿಮ ತೀರ್ಪು ಬರುವ ತನಕ ನಡೆದ ಒಂದೊಂದು ಹೋರಾಟವೂ ಒಂದೊಂದು ಕಥೆಯನ್ನು ಹೇಳುತ್ತದೆ. ಪ್ರಾರಂಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ, ನಂತರ ಕಾಂಗ್ರೆಸ್ಸಿಗರ ವಿರುದ್ಧ ಹೋರಾಟ, ಬುದ್ಧಿಜೀವಿಗಳ ವಿರುದ್ಧ ಹೋರಾಟ ನಡೆದು ಸತ್ಯಕ್ಕೆ ಕೊನೆಗೆ ಜಯ ಸಿಗುವಾಗ ಇಷ್ಟು ತಡವಾಗಿತ್ತು. ಯಾವಾಗ ರಾಮ ದೇವರ ಭವ್ಯ ದೇಗುಲ ನಿರ್ಮಾಣವಾಗುತ್ತದೆ ಎಂದ ಕೂಡಲೇ ಇಲ್ಲಿಯ ತನಕ ಇದರ ವಿರುದ್ಧವೇ ಇದ್ದ ಕಾಂಗ್ರೆಸ್ ಈಗ ಇನ್ನು ಉಪಾಯವಿಲ್ಲ ಎಂದು ರಾಮ ಮಂದಿರಕ್ಕೆ ತನ್ನ ಪರೋಕ್ಷ ಬೆಂಬಲ ಘೋಷಿಸಿದೆ. ಪ್ರಿಯಾಂಕಾ ವಾದ್ರಾ ಅವರಿಂದ ಹಿಡಿದು ರಾಜ್ಯ ಕಾಂಗ್ರೆಸ್ಸಿನ ಮುಖಂಡರು ನಾವು ವಿರುದ್ಧ ಇಲ್ಲ ಎಂದು ಹೇಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಎಲ್ಲಿಯ ತನಕ ಅಂದರೆ ಕಾಂಗ್ರೆಸ್ಸಿಗೆ ಈಗ ವಿರೋಧಿಸುವ ಎಲ್ಲಾ ಮಾರ್ಗಗಳು ಮುಗಿದು ಹೋಗಿ ಬೆಂಬಲ ಕೊಡದೇ ಬೇರೆ ದಾರಿ ಇಲ್ಲವಾಗಿದೆ. ಸರಿಯಾಗಿ ನೋಡಿದರೆ ರಾಮಜನ್ಮಭೂಮಿಯ ವಿವಾದ ಇಷ್ಟು ದಶಕಗಳ ಕಾಲ ತೆವಳಿಕೊಂಡು ಸಾಗಬೇಕಾದರೆ ಅದಕ್ಕೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್ ಸರಕಾರಗಳ ಇಚ್ಚಾಶಕ್ತಿಯ ಕೊರತೆಯೇ ಕಾರಣ. ಎಷ್ಟು ಆಗುತ್ತೋ ಅಷ್ಟು ನಿಧಾನವಾಗಿ ಈ ಪ್ರಕರಣ ಸಾಗುವಂತೆ ಕಾಂಗ್ರೆಸ್ ಬಯಸಿರುವುದಕ್ಕೆ ಅನೇಕ ದೃಷ್ಣಾಂತಗಳಿವೆ. ಎಲ್ಲಿಯಾದರೂ ರಾಮ ಮಂದಿರ ಆದ್ರೆ ಅಲ್ಪಸಂಖ್ಯಾತರಿಗೆ ಬೇಸರವಾಗುತ್ತದೆಯೆನೋ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ರಾಮ ಮಂದಿರದ ವಿರುದ್ಧ ಇದ್ದರು. ಅದರೊಂದಿಗೆ ವಿವಿಧ ಮುಸ್ಲಿಂ ಸಂಘಟನೆಗಳ ಒತ್ತಡ ಮತ್ತು ಸರಕಾರ ಕಳೆದುಕೊಳ್ಳುವ ಭಯ ಕಾಂಗ್ರೆಸ್ ನ ಉನ್ನತ ನಾಯಕರಿಗೆ ತಾವು ಎಷ್ಟೋ ವರುಷ ಹಿಂದೂ ಎನ್ನುವುದೇ ಮರೆತುಹೋಗಿತ್ತು. ಯಾವಾಗ ಮೋದಿ ಬಂದು ಈ ಪ್ರಕರಣಕ್ಕೆ ವೇಗ ಸಿಕ್ಕಿತೋ ಅದರ ನಂತರವೇ ರಾಹುಲ್ ಪಂಚೆ ಉಟ್ಟು ರುದ್ರಾಕ್ಷಿ ಮಾಲೆ ಹಾಕಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದು. ರಾಮ ಎನ್ನುವುದೇ ಕಾಲ್ಪನಿಕ ಎಂದು ಒಂದು ಕಾಲದಲ್ಲಿ ಕಾಂಗ್ರೆಸ್ ವಾದಿಸಿತು. ಈಗ ಅದೇ ಕಾಂಗ್ರೆಸ್ ರಾಮ ಮಂದಿರಕ್ಕೆ ತಮ್ಮ ವಿರೋಧ ಇಲ್ಲ ಎನ್ನುತ್ತಿದೆ.
ಅಷ್ಟಕ್ಕೂ ರಾಮ ದೇವರು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ಇತಿಹಾಸದಲ್ಲಿ ಸಿಕ್ಕಿರುವ ಕಥೆಗಳು ಹೇಳುತ್ತವೆ. ಕಾಂಬೋಡಿಯಾ, ಇಂಡೋನೇಶಿಯಾ, ಫಿಲಿಫೈನ್ಸ್ ನಂತಹ ರಾಷ್ಟ್ರಗಳಲ್ಲಿ ನಡೆದ ಉತ್ಖನನದಲ್ಲಿ ಅದನ್ನು ಅಲ್ಲಿನ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಅವರ್ಯಾರು ಬಿಜೆಪಿಯವರಲ್ಲವಲ್ಲ. ಆದರೂ ಅವರು ಶ್ರೀರಾಮ ಅಲ್ಲಿಗೆ ಬಂದಿದ್ದ ಕುರುಹುಗಳನ್ನು ಯಾಕೆ ಜಾಗತಿಕವಾಗಿ ಬಹಿರಂಗಪಡಿಸಿದರು. ಯಾಕೆಂದರೆ ಶ್ರೀರಾಮ ತಮ್ಮ ನೆಲದಲ್ಲಿಯೂ ಕಾಲಿಟ್ಟ ಎನ್ನುವ ಬಗ್ಗೆ ಅವರಿಗೆ ಹೆಮ್ಮೆ ಇದೆ. ಆದರೆ ಶ್ರೀರಾಮ ನಮ್ಮ ದೇಶದ ಅತ್ಯಂತ ದೊಡ್ಡ ರಾಜ್ಯದ ಒಂದು ಪುಣ್ಯ ನೆಲದಲ್ಲಿ ಹುಟ್ಟಿದ ಬಗ್ಗೆ ಕಾಂಗ್ರೆಸ್ಸಿಗರಿಗೆ ಅಭಿಮಾನವಿಲ್ಲ. ಶ್ರೀಲಂಕಾದಲ್ಲಿ ಶ್ರೀರಾಮ ಸೀತಾಮಾತೆಯನ್ನು ಕರೆದುಕೊಂಡು ಬರಲು ಹೋದ ಅವಶೇಷಗಳಿವೆ. ರಾಮಸೇತು ಇದೆ ಎನ್ನುವುದನ್ನು ಅಂತರಾಷ್ಟ್ರೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೂ ಕಾಂಗ್ರೆಸ್ಸಿಗರು ಇದನ್ನು ತುಂಬು ಮನಸ್ಸಿನಿಂದ ಒಪ್ಪುತ್ತಿಲ್ಲ. ರಾಮ ಮಂದಿರ ಆದ್ರೆ ಕೊರೋನಾ ಕಡಿಮೆ ಆಗುತ್ತಾ ಎಂದು ಕೇಳುತ್ತಿದ್ದಾರೆ. ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅಸಾಧ್ಯವಾದದ್ದು ಏನೂ ಇಲ್ಲ ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ಮೂರ್ನಾಕು ದಿನಗಳಿಂದ 1992 ರಲ್ಲಿ ಕರಸೇವೆಗೆ ಹೋದ ಕಾರ್ಯಕರ್ತರ ವಿವಿಧ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ವಿವಿಧ ಮಾಧ್ಯಮಗಳಲ್ಲಿ ಕುಳಿತು ಅನೇಕ ಕರಸೇವಕರು ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಅವರನ್ನು ಕರೆಯಬೇಕಿತ್ತು, ಇವರನ್ನು ಕರೆಯಬೇಕಿತ್ತು ಎಂದು ಕೆಲವರು ಹಾಲಿಗೆ ಹುಳಿ ಹಿಂಡುತ್ತಿದ್ದಾರೆ. ಅಡ್ವಾಣಿ, ಜೋಷಿಯವರ ಅನುಭವದಷ್ಟು ವಯಸ್ಸಾಗಿಲ್ಲದವರೂ ಕೂಡ ಮೋದಿ, ಯೋಗಿ ಸೇರಿ ಅಡ್ವಾಣಿ, ಜೋಷಿ, ಪ್ರವೀಣ್ ಬಾಯ್ ತೊಗಾಡಿಯಾ ಅವರನ್ನು ಕರೆದಿಲ್ಲ ಎಂದು ಸಂಭ್ರಮದಲ್ಲಿ ಕೊಂಕು ನುಡಿಯುತ್ತಿದ್ದಾರೆ. ಯಾರೆಲ್ಲ ರಾಮ ಮಂದಿರಕ್ಕಾಗಿ ಹೋರಾಡಿದರೋ ಅವರು ರಾಮನ ಪ್ರೇರಣೆಯಿಂದ ಹೋರಾಡಿದ್ದಾರೆ. ಯಾರೊಬ್ಬರ ಹೋರಾಟದಿಂದ ರಾಮ ಮಂದಿರ ಆಗುತ್ತಿಲ್ಲ. ನಾವು ಮಾಡಿದ ಕೆಲಸದ ಬಗ್ಗೆ ತೃಪ್ತಿ ಇದ್ದರೆ ಸಾಕು. ನನ್ನಿಂದಲೇ ಆದದ್ದು ಎನ್ನುವ ಅಹಂಕಾರ ಯಾರಿಗೂ ಇರಬಾರದು. ಅಡ್ವಾಣಿ, ಜೋಷಿಯವರಿಗೆ ಆ ಅಹಂಕಾರ ಇಲ್ಲ. ಆದರೆ ಕೆಲವರು ಮಾತ್ರ ಪಿಟೀಲು ಕೊಯ್ಯುತ್ತಿದ್ದಾರೆ, ಅತೃಪ್ತ ಆತ್ಮಗಳಂತೆ!

  • Share On Facebook
  • Tweet It


- Advertisement -


Trending Now
ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
Hanumantha Kamath March 26, 2023
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Hanumantha Kamath March 25, 2023
Leave A Reply

  • Recent Posts

    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
  • Popular Posts

    • 1
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 2
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 3
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 4
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 5
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search