ಜಾಹೀರಾತು ಏಜೆನ್ಸಿಗಳು ಪಾಲಿಕೆಯಿಂದ ಅನುಮತಿ ಪಡೆಯದೆ,ಸುಳ್ಳು ದಾಖಲೆ ಸಷ್ಟಿಸಿ ಪಾಲಿಕೆಗೆ ಕೊಟ್ಯಂತರ ರೂಪಾಯಿ ಹಿಡಿಸುತ್ತಾರೆ ಹೊಸ ಸರಕಾರಕ್ಕೆ ಕ್ರಮ ಕೈಗೊಳ್ಳಲು ಧೈರ್ಯ ಇದೆಯಾ?
ಹೊಸ ರಾಜ್ಯ ಸರಕಾರ ಬಂದಿದೆ ಹೊರ್ಡಿಂಗ್ ಗೊಲ್ಮಲ್ ನಿಂದ ಮಂಗಳೂರು ಮಹಾನಗರ ಪಾಲಿಕೆಗೆ ಕೊಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಹೊಸ ರಾಜ್ಯ ಸರಕಾರ ಮನಸ್ಸು ಮಾಡಿ ತನಿಖೆ ನಡಿಸಬೇಕು. ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು ತನಿಖೆ ನಡೆಸುವಂತೆ ಸರಕಾರದಿಂದ ಆದೇಶ ಮಾಡಿಸಿ ಪಾಲಿಕೆಯ ಸೋರಿ ಹೋಗುತ್ತಿರುವ ಆದಾಯವನ್ನು ಉಳಿಸುವಂತಹ ಹತ್ತು ಹಲವು ಜವಾಬ್ದಾರಿಗಳು ಇವರುಗಳ ಮುಂದೆ ಇದೆ. ಇಬ್ಬರೂ ಪಾಲಿಕೆ ಕಚೇರಿಯಲ್ಲೇ ತಮ್ಮ ಕಚೇರಿ ಮಾಡಿರುವುದರಿಂದ ಮನಸ್ಸು ಮಾಡಿದರೆ ಪಾಲಿಕೆಯ ಹೊರ್ಡಿಂಗ್ ನಲ್ಲಿ ಅಗುತ್ತಿರುವ ಕೊಟ್ಯಂತರ ರೂಪಾಯಿ ಸೊರಿಕೆಯನ್ನು ತಡೆಗಟ್ಟಬಹುದು ಮೊದಲಾದರೆ ಇವರ ಸರಕಾರ ಇರಲ್ಲಿಲ್ಲ ಇವರದೇ ಸರಕಾರ ಬಂದು ಒಂದು ವರ್ಷ ಕಳೆಯಿತು ಏನು ಮಾಡುತ್ತಿದ್ದಾರೆ ಶಾಸಕದ್ವರುಇಚ್ಚಾಶ
ಮೊದಲನೇಯದಾಗಿ ನೀವು ಮಂಗಳೂರು ವಿಮಾನ ನಿಲ್ದಾಣದಿಂದ ಮನಪಾ ಕಚೇರಿಗೆ ಬರುವ ದಾರಿಯಲ್ಲಿ ಕಾವೂರು ರಸ್ತೆಯಲ್ಲಿ ಅತೀ ಹೆಚ್ಚು ಹೋರ್ಡಿಂಗ್ಸ್ ನೋಡಿರಬಹುದು. ಅದರಲ್ಲಿ 90% ಹೋರ್ಡಿಂಗ್ಸ್ CILA. ಅಂದರೆ ಅತೀ ಹೆಚ್ಚು ಅನಧಿಕ್ರತ ಹೋರ್ಡಿಂಗ್ ಇವರದ್ದು ಇವರ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳಲು ಏನು ಹೆದರಿಕೆ ಎಂದು ಕೇಳಬಹುದು. ಸ್ವಾಮಿ, ಕಥೆ ಅಷ್ಟೇ ಅಲ್ಲ. ಇವರು ಮಂಗಳೂರು ನಗರ ಕಾಂಗ್ರೆಸ್ನ ಮಾಜಿ ಶಾಸಕರ ಹತ್ತಿರದ ಸಂಬಂದಿ ಈಗ ಹೇಳಿ, ಕ್ರಮ ತೆಗೆದುಕೊಳ್ಳಲು ಸಾಧ್ಯಾನಾ? ಯಾಕೆಂದರೆ ನೀವು ಕೈ ಹಾಕಲು ಹೊರಡುವ ಹೋರ್ಡಿಂಗ್ ಗೋಲ್ ಮಾಲ್ ವಿಷಯ ಚಿಕ್ಕದಲ್ಲವೇ ಅಲ್ಲ. ಬೇಕಾದರೆ ಒಂದು ಉದಾಹರಣೆ ಕೊಡುತ್ತೇನೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಮೂರು ಸಾವಿರ ಕೋಟಿ ಹೋರ್ಡಿಂಗ್ಸ್ ಗೋಲ್ ಮಾಲ್ ಆಗಿದೆ ಎನ್ನುವ ದೂರು ಈ ಹಿಂದೆ ಲೋಕಾಯುಕ್ತರಿಗೆ ಹೋಗಿತ್ತು. ಲೋಕಾಯುಕ್ತರು ಆ ಕಡತಗಳನ್ನು ತರಿಸಿ ಪರಿಶೀಲಿಸಿದರು. ಆದರೆ ಆ ಬಗ್ಗೆ ತನಿಖೆ ಯಾಕೋ ಪ್ರಾರಂಭವಾಗಲು ತಡವಾಗುತ್ತಿತ್ತು.
Leave A Reply