• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೇರಳದಲ್ಲಿ ಪಂಚಾಯತ್ ಚುನಾವಣೆಗೆ ಯುವತಿಯರೇ ಕೇಸರಿ ಧ್ವಜ ಹಾರಿಸುತ್ತಿದ್ದಾರೆ!!

Hanumantha Kamath Posted On November 24, 2020
0


0
Shares
  • Share On Facebook
  • Tweet It

ಒಂದು ಮಹಾ ಸಮರಕ್ಕೆ ದೇವರ ನಾಡು ಸಜ್ಜಾಗಿದೆ. ಈ ಬಾರಿ ಆರ್ ಯಾ ಪಾರ್, ಬಿಜೆಪಿ ಸರ್ಕಾರ್ ಎನ್ನುವ ಹೋರಾಟ ಕೇರಳದಲ್ಲಿ ನಡೆಯುತ್ತಿದೆ. ಅಂತಿಮವಾಗಿ ದೇಶಪ್ರೇಮಿಗಳ ಮಾರಣ ಹೋಮ ನಡೆಯದಿರಲಿ ಎನ್ನುವ ಪ್ರಾರ್ಥನೆ ನಮ್ಮದು. ಯಾಕೆಂದರೆ ಕೇರಳ ಹೆಸರಿಗೆ ಮಾತ್ರ ದೇವರ ನಾಡು. ಆದರೆ ಅಲ್ಲಿ ಕಮ್ಯುನಿಷ್ಟರ ಹೆಸರಿನಲ್ಲಿ ಅಸುರರೇ ಆರ್ಭಟಿಸುತ್ತಾರೆ. ಅದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಇವೆ. ಈ ಬಾರಿ ಮತ್ತೇ ಯುದ್ಧ ಆರಂಭವಾಗಬಹುದು ಎಂದು ಹೇಳಲು ಏನು ಕಾರಣ ಎಂದರೆ ಕೇರಳದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ಘೋಷಣೆಯಾಗಿವೆ.

ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಯಾವುದೇ ರಾಜ್ಯದಲ್ಲಿ ಎಷ್ಟೇ ಸ್ಟ್ರಾಂಗ್ ಇರಲಿ, ಬಿಡಲಿ ಕೇರಳ ವಿಷಯಕ್ಕೆ ಬಂದಾಗ ಇಲ್ಲಿ ಚುನಾವಣೆ ನಡೆಯುವುದು ಕಮ್ಯೂನಿಸ್ಟರಿಗೆ, ಕಾಂಗ್ರೆಸ್ಸಿಗೆ ಮತ್ತು ಮುಸ್ಲಿಂ ಲೀಗ್ ನಡುವೆ ಮಾತ್ರ. ಒಂದು ಬಾರಿ ಯುಡಿಎಫ್ ಬಂದರೆ ಇನ್ನೊಮ್ಮೆ ಎಲ್ ಡಿಎಫ್. ಇದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಇಲ್ಲಿನ ಜನರಿಗೆ ಯೋಚಿಸಲು ಕೂಡ ಇಲ್ಲಿನ ಕಮ್ಯೂನಿಸ್ಟರು ಬಿಡುವುದಿಲ್ಲ. ಹಾಗೆ ಯಾರಾದರೂ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಸಣ್ಣ ಅನುಮಾನ ಬಂದರೂ ಅಂತವರನ್ನು ದೇವರ ನಾಡಿನಿಂದ ದೇವರ ಪಾದಕ್ಕೆ ಕಳುಹಿಸಲು ಇಲ್ಲಿನ ಕಮ್ಯೂನಿಸ್ಟರು ತಯಾರಾಗಿ ನಿಂತಿರುತ್ತಾರೆ. ಅದರೊಂದಿಗೆ ತಮ್ಮ ದುರಾಡಳಿತ, ಭ್ರಷ್ಟಾಚಾರದಿಂದ ಜಿಗುಪ್ಸೆಗೊಂಡು ಯಾರಾದರೂ ಕಾರ್ಯಕರ್ತರು ಬೇರೆ ಪಕ್ಷಕ್ಕೆ ಹೋಗಲು ತಯಾರಿ ನಡೆಸಿದ್ದರೆ ಅಂತವರ ಕೈಕಾಲು ಮುರಿದು ಅವರನ್ನು ನಡುಬೀದಿಯಲ್ಲಿ ಬಿಟ್ಟು ಹಾಗೆ ಬೇರೆ ಪಕ್ಷಕ್ಕೆ ಹೊರಟವರಿಗೆ ಎಚ್ಚರಿಕೆಯನ್ನು ಕೂಡ ಕಮ್ಮಿನಿಷ್ಟರು ಕೊಟ್ಟಿದ್ದಾರೆ.

ಇಡೀ ಪೊಲೀಸ್ ಇಲಾಖೆಯೇ ರಾಜ್ಯ ಸರಕಾರದ ಕೈಯಲ್ಲಿ ಇರುವುದರಿಂದ ರಕ್ತದ ಕೋಡಿ ಹರಿದರೂ ಅಂತವರಿಗೆ ಏನೂ ಆಗುವುದಿಲ್ಲ. ಅಂತಹ ಭಯಭೀತ ವಾತಾವರಣದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿದ್ದರೆ ಕಮ್ಯೂನಿಸ್ಟರೇ ಸಣ್ಣಗೆ ಕಂಪಿಸುತ್ತಿದ್ದಾರೆ. ಯಾಕೆಂದರೆ ಯುವ ಸಮೂಹ ಈ ಕಮ್ಮಿನಿಷ್ಟರ ಧೋರಣೆಗೆ ಬೇಸತ್ತು ಮೋದಿಯನ್ನು ಬಯಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಯುವಕ, ಯುವತಿಯರು ನೇರವಾಗಿ ಫೀಲ್ಡಿಗೆ ಇಳಿಯುತ್ತಿದ್ದಾರೆ. ನಿಮಗೆ ಗೊತ್ತಿರುವಂತೆ ಈಗಿನ ಯುವ ಸಮೂಹ ಹೆಚ್ಚಾಗಿ ನೆಚ್ಚಿಕೊಂಡಿರುವುದು ಸಾಮಾಜಿಕ ಜಾಲತಾಣಗಳನ್ನು. ಅದರಲ್ಲಿಯೇ ಚುನಾವಣಾ ಪ್ರಚಾರ ಮಾಡುವ ಶೈಲಿ ಹುಟ್ಟಿದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಪ್ರಕೋಷ್ಟ ಅಥವಾ ಮೋರ್ಚಾಗಳನ್ನು ಆರಂಭಿಸಿದವು. ಮೋದಿ ಕೂಡ ಇದೇ ತಾಣಗಳನ್ನು ಬಳಸಿ ಯುವಜನಾಂಗವನ್ನು ತಮ್ಮೆಡೆಗೆ ಸೆಳೆದುಕೊಂಡಿರುವುದು ಗೊತ್ತೇ ಇದೆ. ಆದರೆ ಕೇರಳ ವಿದ್ಯಾರ್ಹತೆ ಅಥವಾ ಸಾಕ್ಷರತೆಯಲ್ಲಿ ದೇಶದಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದರೂ ಅಲ್ಲಿನ ಚುನಾವಣೆಗಳು ಪಕ್ಕಾ ಸಾಂಪ್ರದಾಯಿಕ ಶೈಲಿಯಲ್ಲಿ ನಡೆಯುತ್ತವೆ. ಅಲ್ಲಿ ಇವತ್ತಿಗೂ ಗೋಡೆಬರಹವೇ ಚಾಲ್ತಿಯಲ್ಲಿದೆ. ನಮ್ಮಲ್ಲಿ ಗೋಡೆಗಳ ಮೇಲೆ “ನಿಮ್ಮ ಮತ ಬಿಜೆಪಿಗೆ” ಎಂದು ಬರೆದು ಕಮಲದ ಚಿನ್ನೆ ಬಿಡಿಸಿ ವೋಟ್ ಕೇಳುವ ಕಾಲ ಹೋಗಿದೆ. ಆದರೆ ಇವತ್ತು ನಾನು ಕೆಲವು ಫೋಟೋ ಪೋಸ್ಟ್ ಮಾಡುತ್ತಿದ್ದೇನೆ. ಅದರಲ್ಲಿ ತರುಣಿಯರು ಬಿಜೆಪಿಗೆ ಮತ ಪ್ರಚಾರ ಮಾಡುತ್ತಿರುವುದಕ್ಕೆ ತೋರಿಸುತ್ತಿರುವ ಆಸಕ್ತಿ, ಶ್ರದ್ಧೆ ಕಂಡುಬರುತ್ತಿದೆ. ಗೋಡೆ ಗೋಡೆಗಳಲ್ಲಿ ಬಿಜೆಪಿ ಅರಳುತ್ತಿದೆ. ನಿಮಗೆ ಗೊತ್ತಿರಲಿ, ಇದನ್ನೆಲ್ಲ ಕಮ್ಮೂನಿಸ್ಟರು ಸುಲಭವಾಗಿ ಅರಗಿಸಿಕೊಳ್ಳುವುದಿಲ್ಲ. ಅದರಲ್ಲಿಯೂ ಅವರು ಊಹೆಯೂ ಮಾಡಲು ಸಾಧ್ಯವಿಲ್ಲದ ಒಂದು ಘಟನೆ ನಡೆದಿದೆ. ಅದೇನೆಂದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಊರಾದ ಪಿಣರಾಯಿಯ ಧರ್ಮಡಂ ಎನ್ನುವ ಗ್ರಾಮದಲ್ಲಿ ಒಂದು ಯುವತಿ ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸುತ್ತಿದ್ದಾಳೆ. ಕಣ್ಣೂರಿನ ಈ ಭಾಗದಲ್ಲಿ ಕಮ್ಯೂನಿಸ್ಟರ ವಿರುದ್ಧ ಕಾಂಗ್ರೆಸ್ ಅಥವಾ ಮುಸ್ಲಿಂ ಲೀಗ್ ಅಭ್ಯರ್ಥಿಗಳೇ ಇಳಿಯಲು ಹಿಂಜರಿಯುತ್ತಾರೆ. ಅಲ್ಲಿ ಕಮ್ಯೂನಿಸ್ಟರನ್ನು ಬಿಟ್ಟು ಯಾರಾದರೂ ನಿಂತರೆ ಅವರ ಅಂತ್ಯಕ್ಕೆ ದಿನ ನಿಗದಿಯಾಯಿತು ಎಂದೇ ಲೆಕ್ಕ. ಪ್ರಾಣದ ಮೇಲೆ ಆಸೆ ಇರುವವರು ಒಂದು ಚುನಾವಣೆಗಾಗಿ ಜೀವ ಕಳೆದುಕೊಳ್ಳಲು ತಯಾರಿರುತ್ತಾರಾ? ಇಲ್ಲವೇ ಇಲ್ಲ. ಹಾಗಿರುವಾಗ ರಾಜಕೀಯದ ದೈತ್ಯ ಪಿಣರಾಯಿ ವಿಜಯನ್ ಪಕ್ಷದ ಅಭ್ಯರ್ಥಿಯ ವಿರುದ್ಧ ಬಿಜೆಪಿಯ ಅಮೃತಾ ಸುರೇಶ್ ಕಣಕ್ಕೆ ಇಳಿಯುತ್ತಿದ್ದಾರೆ. ನೋಡಲು ಪಕ್ಕಾ ಡಿಗ್ರಿ ವಿದ್ಯಾರ್ಥಿನಿಯಂತೆ ಕಾಣುವ ಅಮೃತಾ ಎಬಿವಿಪಿಯ ಮುಖಂಡೆ ಕೂಡ ಆಗಿದ್ದಾಳೆ. ಅವಳಿಗೆ ಇಲ್ಲಿನ ಪರಿಸ್ಥಿತಿ ಗೊತ್ತಿಲ್ಲ ಎಂದಲ್ಲ. ಆದರೆ ಯಾರಾದರೂ ಈ ಹೆಜ್ಜೆ ಇಡಲೇಬೇಕಿತ್ತು. ಅದಕ್ಕೆ ನಾನೇ ಇಟ್ಟಿದ್ದೀನಿ ಎಂದು ಹೇಳುವ ಅಮೃತಾ ಗೆಲ್ಲುತ್ತಾರೋ ಬಿಡುತ್ತಾರೋ ಬೇರೆ ವಿಷಯ ಆದರೆ ಬಿಜೆಪಿ ಪರವಾಗಿ ಅಭ್ಯರ್ಥಿಗಳಾದರೂ ಅಲ್ಲಿ ಕಣಕ್ಕೆ ಇಳಿಯುತ್ತಿದ್ದಾರಲ್ಲ, ಅದೇ ದೊಡ್ಡ ವಿಷಯ. ಹಾಗಾದರೆ ಒಟ್ಟಾಗಿ ನೋಡಿದರೆ ಈ ಬಾರಿ ಕೇರಳದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆಯಾ? ಗಾಳಿ ಬೀಸುತ್ತಿದ್ದರೂ ಅದು ಮತವಾಗಿ ಪರಿವರ್ತನೆ ಆಗುತ್ತದಾ ಎಂದು ನೋಡಬೇಕಾದದ್ದು ಮುಖ್ಯ. ಹೇಳಿಕೇಳಿ, ಕೇರಳದಲ್ಲಿ ಜನ ಮನಸ್ಸಿನಲ್ಲಿ ಹಿಂದೂತ್ವ ಎಂದು ಎಷ್ಟು ಪ್ರೀತಿ ಇಟ್ಟರೂ ಈ ಕಮ್ಯೂನಿಸ್ಟ್ ಗೂಂಡಾಗಳು ಅಷ್ಟು ಸುಲಭವಾಗಿ ಅವರಿಗೆ ಸುಲಭವಾಗಿ ಬಿಜೆಪಿಗೆ ವೋಟ್ ಹಾಕಲು ಬಿಡುವುದಿಲ್ಲ. ಕಳೆದ ವರ್ಷ ಕಮ್ಯೂನಿಸ್ಟ್ ಸರಕಾರ ವಯಸ್ಸಿನ ಭೇದವಿಲ್ಲದೆ ಮಹಿಳೆಯರಿಗೂ ಶಬರಿಮಲೆ ದೇವಳಕ್ಕೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಆ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸಾವಿರಾರು ಜನ ಕಿಲೋಮೀಟರ್ ಗಟ್ಟಲೆ ದೀಪ ಹಿಡಿದು ಗಂಟೆಗಳ ಕಾಲ ನಿಂತು ಮೌನ ಪ್ರತಿಭಟನೆ ನಡೆಸಿದ್ದರು. ಅದರ ನಂತರ ಅಲ್ಲಿ ಕೆಲವು ಸ್ಥಾನಗಳಿಗೆ ಉಪ ಚುನಾವಣೆಗಳು ಬಂದವು. ಅದರಲ್ಲಿ ಕೆಲವು ಬಿಜೆಪಿಗೆ ಒಲಿಯಬಹುದು ಎಂದು ಸಂಘದ ಮುಖಂಡರು ಲೆಕ್ಕ ಹಾಕಿದ್ದರು. ಅದು ಫಲಿಸಲಿಲ್ಲ. ಇವತ್ತಿಗೂ ಅಲ್ಲಿನ ವಿಧಾನಸಭೆಯಲ್ಲಿ ಬಿಜೆಪಿಗೆ ಒಂದೇ ಸ್ಥಾನ ಇರುವುದು. ಕಳೆದ ಬಾರಿ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಅಂಕೆಗಳಷ್ಟೇ ಅಂತರದಲ್ಲಿ ಸೋತಿತ್ತು. ಬಿಜೆಪಿ ಅಭ್ಯರ್ಥಿ ಕೋರ್ಟಿಗೆ ಹೋಗಿದ್ದರು. ಆದರೆ ನಂತರ ನಡೆದ ಉಪಚುನಾವಣೆಯಲ್ಲಿ ಸಾಕಷ್ಟು ಅಂತರದಿಂದ ಬಿಜೆಪಿ ಸೋತಿತ್ತು. ಒಟ್ಟಿನಲ್ಲಿ ನೋಡುವಾಗ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಶಕ್ತಿಯೊಂದಿಗೆ ಬಿಜೆಪಿ ಕಣಕ್ಕೆ ಇಳಿದಿದೆ. ಏನು ಆಗುತ್ತೋ ನೋಡಬೇಕು. ಇನ್ನು ಇತ್ತ ನಮ್ಮ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಜಾರಿಗೆ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಅಸಲಿ ವಿಷಯವನ್ನೇ ಮರೆತಿದೆ!

0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Hanumantha Kamath January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • 2
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 3
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 4
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!

  • Privacy Policy
  • Contact
© Tulunadu Infomedia.

Press enter/return to begin your search