• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಉಡುಪಿ ಡಿಸಿ ತೆಗೆದುಕೊಂಡ ಕ್ರಮ ನಮ್ಮ ಪಾಲಿಕೆಗೆ ಮಾದರಿಯಾಗಲಿ!!

Hanumantha Kamath Posted On March 12, 2021
0


0
Shares
  • Share On Facebook
  • Tweet It

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಬಹಳ ಉತ್ತಮವಾಗಿರುವ ಹೆಜ್ಜೆ ಇಡಲು ಮುಂದಾಗಿದ್ದಾರೆ. ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ವಾಹನಗಳು ದಟ್ಟಣೆಗಳು ಹೆಚ್ಚಾಗಿದ್ದು, ಪಾದಚಾರಿಗಳಿಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ಅವರು ಖಡಕ್ ಕ್ರಮಗಳನ್ನು ಕೈಗೊಳ್ಳಲು ತಯಾರಾಗಿದ್ದಾರೆ. ಎಲ್ಲೆಲ್ಲಿ ಕಟ್ಟಡಗಳ ಮಾಲೀಕರು ಪಾರ್ಕಿಂಗ್ ಜಾಗದಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೋ ಅವರು ಆದಷ್ಟು ಬೇಗ ತೆರವುಗೊಳಿಸಬೇಕು. ನೋಟಿಸು ಸಿಕ್ಕಿದ ನಂತರವೂ ತೆರವುಗೊಳಿಸದೇ ಹೋದರೆ ಅಂತಹ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದು ಬಹಳ ಉತ್ತಮವಾದ ಯೋಜನೆ. ಇದನ್ನು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೂ ಯಥಾವತ್ತಾಗಿ ಜಾರಿಗೊಳಿಸಲು ಪಾಲಿಕೆ ಮುಂದಾಗಬೇಕು. ಹೀಗೆ ಮಾಡಲು ಪಾಲಿಕೆಗೆ ಸಾಧ್ಯವಿದೆ. ಯಾಕೆಂದರೆ ಟ್ರಾಫಿಕ್ ಸಮಸ್ಯೆ ನಮ್ಮಲ್ಲಿ ಅಲ್ಲಿಗಿಂತ ಜಾಸ್ತಿ ಇದೆ. ಇದನ್ನು ಪಾಲಿಕೆಯ ಪರಿಷತ್ ಸಭೆಯಲ್ಲಿ ಇಟ್ಟು ಅಲ್ಲಿ ಮಂಜೂರು ಮಾಡಿ ನಂತರ ಅದನ್ನು ಜಾರಿಗೊಳಿಸಬೇಕು. ಭಾರತೀಯ ಜನತಾ ಪಾರ್ಟಿಯ ಪಾಲಿಕೆಯ ಎರಡನೇ ಅವಧಿಯಲ್ಲಿ ಮೇಯರ್ ಆಗಿರುವ ಪ್ರೇಮಾನಂದ ಶೆಟ್ಟಿಯವರು ಐದನೇ ಬಾರಿ ಪಾಲಿಕೆಯ ಸದಸ್ಯರಾಗಿದ್ದಾರೆ. ಪಾಲಿಕೆಯ ನಗರ ಭಾಗದ ವಾರ್ಡಿನಿಂದಲೇ ಆಯ್ಕೆಯಾಗುತ್ತಾ ಬಂದಿರುವುದರಿಂದ ಅವರಿಗೆ ಟ್ರಾಫಿಕ್ ಸಮಸ್ಯೆ, ನಗರದ ಜಂಜಾಟದಲ್ಲಿ ಪಾದಚಾರಿಗಳು ಅನುಭವಿಸುತ್ತಿರುವ ಕಿರಿಕಿರಿ ಗೊತ್ತೆ ಇದೆ. ಅವರು ಈಗ ತಮ್ಮ ಅಧಿಕಾರಾವಧಿಯಲ್ಲಿ ಮುಖ್ಯವಾಗಿ ಏನಾದರೂ ಮೈಲುಗಲ್ಲು ಸಾಧಿಸಬೇಕೆಂದು ತೀರ್ಮಾನ ಮಾಡಿಯೇ ಕುಳಿತಿದ್ದರೆ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಮುಂದಾಗುವುದು ನಗರದ ಉತ್ತಮ ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದು. ಅಷ್ಟಕ್ಕೂ ಯಾವುದು ಅಕ್ರಮ ಎಂದು ಗೊತ್ತಿಲ್ಲ ಎಂದು ಹೇಳುವಷ್ಟು ಅಮಾಯಕರು ಪ್ರೇಮಾನಂದ ಶೆಟ್ಟಿ ಅಲ್ಲ. ಅವರಿಗೆ ಮಂಗಳೂರು ನಗರದ ನರನಾಡಿ ಗೊತ್ತಿದೆ. ಯಾವುದೇ ಕಟ್ಟಡವನ್ನು ನೋಡುವಾಗ ಇದರಲ್ಲಿ ಅನಧಿಕೃತ ಯಾವುದು ಎಂದು ಕಣ್ಣಂಚಿನಲ್ಲಿ ನೋಡಿಯೇ ನಿಖರವಾಗಿ ಹೇಳುವಷ್ಟು ಅನುಭವ ಅವರಿಗೆ ಎರಡೂವರೆ ದಶಕಗಳ ರಾಜಕೀಯ ಪ್ರಯಾಣದಲ್ಲಿ ಸಿದ್ದಿಸಿದೆ. ಅವರು ಈಗ ಮೇಯರ್ ಆಗಿ ತಮ್ಮ ಮೊದಲ ಪರಿಷತ್ ಸಭೆಯಲ್ಲಿ ಇದೇ ವಿಷಯವನ್ನು ಏಜೆಂಡಾದಲ್ಲಿ ಇಡಬೇಕು. ಆಗ ಕಾಂಗ್ರೆಸ್ ವಿರೋಧಿಸಿದರೆ ಆ ಪಕ್ಷದ ಬಂಡವಾಳ ಹೊರಗೆ ಬೀಳುತ್ತದೆ. ಒಂದು ವೇಳೆ ಇದು ಪಾಸಾದರೆ ಆಗ ಪಾರ್ಕಿಂಗ್ ಜಾಗದಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಿದವರಿಗೆ ನೋಟಿಸು ನೀಡಲು ಆರಂಭಿಸಬೇಕು. ಆಗ ಅವರಲ್ಲಿ ಕೆಲವರು ಖಂಡಿತವಾಗಿಯೂ ನ್ಯಾಯಾಲಯದ ಮೊರೆ ಹೋಗುತ್ತಾರೆ. ಆದರೆ ಪರಿಷತ್ ನಲ್ಲಿ ಮಂಜೂರು ಮಾಡಲಾಗಿತ್ತಲ್ಲ, ಆದ್ದರಿಂದ ಪಾಲಿಕೆ ನ್ಯಾಯಾಲಯದಲ್ಲಿ ಗೆಲ್ಲುವುದು ಸಾಧ್ಯ. ಮೊದಲನೇ ಪರಿಷತ್ ಸಭೆಯಲ್ಲಿ ಪಾಸು ಮಾಡಲು ಅನಧಿಕೃತ ನಿರ್ಮಾಣಗಳ ಲಿಸ್ಟ್ ಎಲ್ಲಿದೆ ಎಂದು ಮೇಯರ್ ಕೇಳುವ ಅಗತ್ಯವೇ ಇಲ್ಲ. ಈಗಲೇ ಪೊಲೀಸ್ ಇಲಾಖೆಯಿಂದ 55 ಅನಧಿಕೃತ ನಿರ್ಮಾಣಗಳ ಲಿಸ್ಟ್ ಪಾಲಿಕೆಗೆ ತಲುಪಿದೆ. ಆ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಕೊಟ್ಟರೆ ಮುಗಿಯಿತು. ನಂತರ ಮಾಲೀಕರು ಕ್ಯಾರ್ ಮಾಡದಿದ್ದರೆ ರೆವೆನ್ಯೂ ವಿಭಾಗ ಹಾಗೂ ನಗರ ಯೋಜನಾ ವಿಭಾಗದ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿ ಅಂತಹ ಮಾಲೀಕರಿಗೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲು ಮೇಯರ್ ಹಾಗೂ ಪಾಲಿಕೆಯ ಕಮೀಷನರ್ ಸೂಚಿಸಬಹುದು. ನಂತರ ಟ್ರೇಡ್ ಲೈಸೆನ್ಸ್ ಇಲ್ಲದ ಕಾರಣಕ್ಕೆ ಡೋರ್ ನಂಬ್ರ ಕೂಡ ರದ್ದು ಮಾಡಬಹುದು. ನಂತರ ವಿದ್ಯುತ್ ಸಂಪರ್ಕ ಕಟ್ ಮಾಡಬಹುದು. ನಂತರ ತೆರವು ಕಾರ್ಯಾಚರಣೆ ಮಾಡಲು ಆರಂಭಿಸಬಹುದು. ಹೀಗೆ ಮಾಡುವುದರಿಂದ ಮೂರು ಮುಖ್ಯ ಪ್ರಯೋಜನಗಳಿವೆ. ಮೊದಲನೇಯದಾಗಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಎರಡನೇಯದಾಗಿ ಬಿಜೆಪಿಯ ಬಗ್ಗೆ ಜನಸಾಮಾನ್ಯರಿಗೆ ಭರವಸೆ ಮೂಡುತ್ತದೆ. ಮೂರನೇಯದಾಗಿ ಯಾರಾದರೂ ಪಾರ್ಕಿಂಗ್ ಜಾಗದಲ್ಲಿ ಅನಧಿಕೃತ ಕಟ್ಟಡ ಕಟ್ಟಲು ಹಿಂದೆ ಮುಂದೆ ನೋಡುತ್ತಾರೆ ಮತ್ತು ಅಂತಹ ಕಟ್ಟಡಗಳ ಸಂಖ್ಯೆ ಕಡಿಮೆಯಾಗುತ್ತದೆ. ಪ್ರೇಮಾನಂದ ಶೆಟ್ಟಿಯವರು ತಮಗೆ ಸಿಕ್ಕಿದ ಅಪರೂಪವಾದ ಈ ಅವಕಾಶವನ್ನು ಈ ಮೂಲಕ ಬಳಸಿಕೊಳ್ಳಬೇಕು. ಈಗಲೂ ಮಂಗಳೂರಿನಲ್ಲಿ ರಸ್ತೆ ಅಗಲೀಕರಣ ಮಾಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು ಯಾರೆಂದು ಕೇಳಿದರೆ ಹಿರಿಯರು ಹೇಳುವ ಮೊದಲ ಹೆಸರು ಭರತ್ ಲಾಲ್ ಮೀನಾ. 1996 ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಮೀನಾ ಇವತ್ತಿಗೂ ನೆನಪಿನಲ್ಲಿ ಇದ್ದಾರೆಂದರೆ ಅದಕ್ಕೆ ಕಾರಣ ಅವರ ಕ್ರಾಂತಿಕಾರಿ ಅಭಿವೃದ್ಧಿಯತ್ತ ತೆಗೆದುಕೊಂಡ ನಿಖರ ಕ್ರಮ. ಪ್ರೇಮಾನಂದ ಶೆಟ್ಟಿಯವರಿಗೂ ಅಂತಹ ಗುರಿ ಇದೆಯಾ ಅಥವಾ ಹತ್ತರಲ್ಲಿ ಹನ್ನೊಂದು ಆಗುತ್ತಾರಾ ಎನ್ನುವುದು ಅವರಿಗೆ ಬಿಟ್ಟಿದ್ದು!!
0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Hanumantha Kamath July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Hanumantha Kamath July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search