ರಶ್ಮಿಯಿಂದ ಪರಂ ತನಕ ಧ್ವನಿ ಎತ್ತಿದವರಿಗೆ ಲಗಾಡಿ ಸರಕಾರ ಬಿಟ್ಟಿಲ್ಲ!!
Posted On March 25, 2021

- Advertisement -
ಒಂದು ಗೃಹಸಚಿವರಾಗಿದ್ದವರು ರಾಜ್ಯದಲ್ಲಿ ಅದರಲ್ಲಿಯೂ ಮಹಾರಾಷ್ಟ್ರದಂತಹ ರಾಜ್ಯದಲ್ಲಿ ಮಾಡಲು ತುಂಬಾ ಕೆಲಸಗಳಿವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿರುತ್ತವೆ. ಅದು ಬಿಟ್ಟು ನೂರು ಕೋಟಿ ಒಟ್ಟು ಮಾಡಿ ಕೊಡಿ. ವರ್ಗಾವಣೆಯಲ್ಲಿ ಹೇಗೆ ಹಣ ಮಾಡಬಹುದು ಎಂದು ನೋಡಿ ಎಂದು ಅಧಿಕಾರಿಗಳಿಗೆ ಹೇಳುವುದು ನಿಜಕ್ಕೂ ಅಸಹ್ಯದ ಪರಮಾಧಿಕಾರಿ. ಪರಂಬೀರ್ ಸಿಂಗ್ ಏನೋ ತಮಗೆ ಕೊಟ್ಟ ಟಾರ್ಗೆಟ್ ಬಗ್ಗೆ ಸಿಎಂ ಅವರಿಗೆ ಮತ್ತು ಅವರು ಕೂಡ ಕೇಳಿಸಿಕೊಳ್ಳುವುದಿಲ್ಲ ಎಂದು ಗೊತ್ತಾದ ನಂತರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಲು ಸಿಬಿಐಗೆ ಸೂಚನೆ ಕೊಡಿ ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ. ಆದರೆ ಎಲ್ಲಾ ಅಧಿಕಾರಿಗಳು ಹಾಗೆ ಮಾಡುತ್ತಾರಾ? ಗೃಹಸಚಿವರು ಹೇಳಿದ್ದನ್ನು ಚಾಚೂತಪ್ಪದೆ ಮಾಡುತ್ತಾರೆ. ಹಾಗಾದರೆ ಇದನ್ನು ನಿಲ್ಲಿಸುವುದು ಹೇಗೆ? ಯಾರಾದರೂ ಒಬ್ಬ ಗಟ್ಟಿ ಧ್ವನಿಯ ಅಧಿಕಾರಿ ಬಾಯಿಬಿಟ್ಟು ಹೇಳಿದ್ರೆ ಈ ಶರದ್ ಪವಾರ್ ಅವರ ಸಮಜಾಯಿಷಿಕೆ ಏನು ಗೊತ್ತಾ? ನಮ್ಮ ಅನಿಲ್ ದೇಶಮುಖ್ ಅಪ್ಪಟ ಅಮಾಯಕ. ಮುಗ್ಧ. ಅವರಿಗೆ ಬಾಯಿಗೆ ಬೆರಳು ಇಟ್ಟರೆ ಕಚ್ಚಲು ಕೂಡ ಬರಲ್ಲ. ಅವರು ಕೊರೊನಾ ಪಾಸಿಟಿವ್ ಆಗಿ ಮಲಗಿದ್ದರು. ಅವರು ಹಣ ಒಟ್ಟು ಮಾಡಲು ಸೂಚನೆ ಕೊಡಲು ಸಾಧ್ಯವಿಲ್ಲ. ಆದರೆ ವೃದ್ಧ ಪವಾರ್ ಗೆ ಗೊತ್ತಿಲ್ಲದ ಸಂಗತಿ ಎಂದರೆ ಇದೇ ಅನಿಲ್ ದೇಶಮುಖ್ ಇದೇ ಫೆಬ್ರವರಿಯಲ್ಲಿ ಸುದ್ದಿಗೋಷ್ಟಿ ಮಾಡಿದ್ದಾರೆ. ಪಾಸಿಟಿವ್ ಇದ್ದರೆ ಯಾಕೆ ಹಾಗೆ ಮಾಡಿದರು. ವಿಮಾನದ ಮೂಲಕ ಪುಣೆಗೋ, ಎಲ್ಲಿಯೋ ಹೋಗಿದ್ದಾರೆ. ಇನ್ನು ನಾನು ಕಳೆದ ಜಾಗೃತ ಅಂಕಣದಲ್ಲಿ ಬರೆದ ಹಾಗೆ ಪರಂಬೀರ್ ಸಿಂಗ್ ಹೇಳಿರುವ ಸಿಸಿಟಿವಿ ಫೂಟೇಜ್ ಗಳನ್ನು ಪರೀಕ್ಷಿಸಿದರೆ ಮುಗಿಯಿತು. ಅನಿಲ್ ದೇಶಮುಖ್ ನಿಜ ಬಣ್ಣ ಬಯಲಾಗುತ್ತದೆ. ನಾನು ಹೇಳುವುದಾದರೆ ಇಂತಹ ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲೇಬಾರದು. ಅವರು ನಿಂತರೆ ಜನ ವೋಟ್ ಹಾಕಲೇಬಾರದು. ಆದರೆ ನಮ್ಮ ದೇಶದ ದುರಂತ ಏನೆಂದರೆ ಇಲ್ಲಿ ಗೆಲ್ಲಬೇಕಾದವರು ನಿಲ್ಲಲ್ಲ. ಹಣ ಸುರಿಯದಿದ್ದರೆ ಗೆಲ್ಲಲ್ಲ. ನೈತಿಕತೆ ಇಲ್ಲದವರಿಗೆ ಸೋಲುವ ಭಯವಿಲ್ಲ. ಇನ್ನು ಅಧಿಕಾರಕ್ಕೆ ಬರುವ ಮೊದಲು ಚೆಲ್ಲುವ ಹಣವನ್ನು ಇವರು ಮಾಡಲು ನಿಂತರೆ ಜನಸಾಮಾನ್ಯರು ಮಾತನಾಡಲ್ಲ!!!
Leave A Reply