ರೋಹಿಣಿ ಸಿಂಧೂರಿ ಮುಜರಾಯಿ ಇಲಾಖೆಯಿಂದ ಮಸೀದಿಗೆ ಹೋಗುವ ಹಣ ನಿಲ್ಲಿಸಲಿ!

ಯಾರದ್ದೋ ಹಣವನ್ನು ಯಾರಿಗೋ ನೀಡಬೇಕು ಮತ್ತು ಎಲ್ಲರೂ ನಮಗೆ ಜೈಕಾರ ಹಾಕಬೇಕು ಎನ್ನುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯದ ಕೊನೆ ಇನ್ಸಿಂಗ್ಸ್ ನ ಕೊನೆಯ ಸ್ಲಾಗ್ ಒವರ್ ಗಳ ಅಭಿಲಾಷೆ. ಅದರ ಹಾಗೆ ಅವರು ನಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಅವರು 41 ಮಸೀದಿಗಳಿಗೆ ತಲಾ 48 ಸಾವಿರದಂತೆ 32 ಕೋಟಿ 33 ಲಕ್ಷ 19 ಸಾವಿರ ರೂಪಾಯಿಯನ್ನು ಹಂಚುತ್ತಿರುವುದೇ ಸಾಕ್ಷಿ. ಅಲ್ಲಿ ಎಷ್ಟೋ ಬಿ, ಸಿ ಗ್ರೇಡ್ ದೇವಸ್ಥಾನಗಳಲ್ಲಿ ಅಸಂಖ್ಯಾತ ಅರ್ಚಕರು ಸರಿಯಾದ ಆದಾಯ ಇಲ್ಲದೆ, ದೇವಸ್ಥಾನವನ್ನು ನಿರ್ವಹಣೆ ಮಾಡಲು ಕಷ್ಟಪಡಬೇಕಾದ ಹೊತ್ತಿನಲ್ಲಿಯೇ ಯಡ್ಡಿ ಹೀಗೆ ಮಸೀದಿಗಳಿಗೆ ಕೋಟ್ಯಾಂತರ ರೂಪಾಯಿ ಹಂಚಲು ಹೊರಟಿದ್ದಾರೆ. ಸಿ ಗ್ರೇಡಿನ ದೇವಸ್ಥಾನಗಳ ಅರ್ಚಕರಿಗೆ ಕೇವಲ ಮೂರು ಸಾವಿರ ರೂಪಾಯಿ ಕೊಟ್ಟಿರುವ ಯಡ್ಡಿ ಮಸೀದಿಗಳಿಗೆ ತಲಾ 48 ಸಾವಿರ ರೂಪಾಯಿ ನೀಡುತ್ತಾ ಹೋಗಿದ್ದಾರೆ. ಯಡ್ಡಿ ತಮ್ಮ ಅಥವಾ ಮಗನ ಕಿಸೆಯಿಂದ ಮಸೀದಿಗಳಿಗೆ ಹಣ ಕೊಟ್ಟರೆ ನಮ್ಮ ಅಭ್ಯಂತರ ಏನಿಲ್ಲ. ಶಿಕಾರಿಪುರದ ಯಡ್ಡಿಗೂ ಈಗ ಸಿಎಂ ಆಗಿರುವ ಯಡ್ಡಿಗೂ ಆರ್ಥಿಕ ಬಲದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಮಸೀದಿಗಳ ಮೇಲೆ ತುಂಬಾ ಪ್ರೀತಿ ಇದ್ದರೆ ಮನೆಯಿಂದ ತಂದು ಹಣ ನೀಡಬಹುದಿತ್ತು. ಆದರೆ ಯಡ್ಡಿ ಕೊಡುತ್ತಿರುವುದು ಧಾರ್ಮಿಕ ದತ್ತಿ ಇಲಾಖೆ ಅಥವಾ ಮುಜುರಾಯಿ ಇಲಾಖೆಯ ಹಣ. ಇಲ್ಲಿ ಇರುವ ಮುಖ್ಯ ವಿಚಾರ ಎಂದರೆ ಯಾವತ್ತೋ ರಾಜ್ಯದ ಶ್ರೀಮಂತ ದೇವಾಲಯಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಅಂತಹ ದೇವಸ್ಥಾನಗಳ ಕೋಟ್ಯಾಂತರ ರೂಪಾಯಿ ಆದಾಯ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಈ ದೇವಸ್ಥಾನಗಳನ್ನು ನಿರ್ವಹಿಸಲು ಸರಕಾರ ಧಾರ್ಮಿಕ ದತ್ತಿ ಇಲಾಖೆ ಎಂದು ಮಾಡಿದೆ. ಈ ದೇವಸ್ಥಾನಗಳಲ್ಲಿ ಏನಾದರೂ ಅಭಿವೃದ್ಧಿ ಆಗಬೇಕಾದರೆ ಅದು ಒಂದು ರೀತಿಯ ಗಜಪ್ರಸವ ಇದ್ದ ಹಾಗೆ. ಅಷ್ಟು ಕಠಿಣ. ಗಂಗೆಯನ್ನು ಭೂಮಿಗೆ ತಂದಂತೆ ಭಗೀರಥ ತಪಸ್ಸು ಮಾಡಬೇಕಾಗುತ್ತದೆ. ಅದೇ ಆ ದೇವಸ್ಥಾನಗಳಲ್ಲಿ ಭಕ್ತರು ಬಹಳ ವಿಶ್ವಾಸದಿಂದ ಹಾಕುವ ಹಣ ಆರಾಮವಾಗಿ ಮಸೀದಿಗಳಿಗೆ ಹೋಗುತ್ತದೆ ಎಂದಾಗ ಭಕ್ತರಿಗೆ ಇದು ಒಂದು ರೀತಿಯ ಬಿಸಿತುಪ್ಪದಂತೆ ಆಗುತ್ತದೆ. ಹಾಗಾದರೆ ಇಲ್ಲಿ ಏನು ಮಾಡಬೇಕು ಎಂದರೆ ಮೊದಲನೇಯದಾಗಿ ದೇವಸ್ಥಾನಗಳಿಂದ ಬರುವ ಆದಾಯವನ್ನು ದೇವಸ್ಥಾನಗಳಿಗೆ ಉಪಯೋಗಿಸುವಂತೆ ಆಗಬೇಕು. ಅದೇ ದೇವಸ್ಥಾನದ ಆದಾಯವನ್ನು ಅದೇ ದೇವಸ್ಥಾನಕ್ಕೆ ಖರ್ಚು ಮಾಡಬೇಕಾಗಿಲ್ಲ. ಎಷ್ಟೋ ದೇವಸ್ಥಾನಗಳು ಸುಣ್ಣಬಣ್ಣ ನೋಡದೆ, ಅಭಿವೃದ್ಧಿ ಕಾಣದೆ ಸೊರಗಿವೆ. ಅಂತಹ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬಹುದಲ್ಲ? ಇನ್ನು ಎಷ್ಟೋ ದೇವಸ್ಥಾನಗಳಿಗೆ ಹೋಗುವ ರಸ್ತೆ ಸರಿಯಿಲ್ಲ, ಎಷ್ಟೋ ದೇವಸ್ಥಾನಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಅದನ್ನು ಸರಿ ಮಾಡಬಹುದಲ್ಲ. ಇದರೊಂದಿಗೆ ಹಿಂದೂಗಳಲ್ಲಿ ಎಷ್ಟೋ ಜನ ಮುರುಕಲು ಮನೆಗಳಲ್ಲಿ ಇದ್ದಾರೆ. ಅಂತವರಿಗೆ ಮನೆ ಕಟ್ಟಿಸಿಕೊಡಬಹುದು. ಇದೆಲ್ಲವನ್ನು ಮಾಡಿದ್ರೆ ನಾವು ಹಣ ಡಬ್ಬಿಯಲ್ಲಿ ಹಾಕಿದ್ದಕ್ಕೆ ಸಾರ್ಥಕವಾಗುತ್ತದೆ. ಇಷ್ಟೆಲ್ಲ ಆದ ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ತಮ್ಮ ವಿರೋಧವನ್ನು ಟ್ವಿಟರ್ ನಲ್ಲಿ ಬರೆದು ಹಾಕಿ ರಾಜ್ಯ ಸರಕಾರ ಮಾಡುತ್ತಿರುವುದು ಸರಿಯಲ್ಲ ಎನ್ನುತ್ತಿದ್ದಾರೆ. ಅಷ್ಟು ಸಾಕಾ? ಇಷ್ಟು ಮಾಡಿದ್ರೆ ರಾಜ್ಯ ಸರಕಾರ ನಾವು ಹಾಗೆ ಮಾಡಲ್ಲ ಎನ್ನುತ್ತದಾ? ಅಷ್ಟಕ್ಕೂ ಈಗ ಇರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ. ಕಾಂಗ್ರೆಸ್ ಪಕ್ಷದ್ದು ಅಲ್ಲ. ಈಗ ಕಾಂಗ್ರೆಸ್ ಸರಕಾರ ಇದ್ದಿದ್ದರೆ ಇಷ್ಟೊತ್ತಿಗೆ ಸಂಘ ಪರಿವಾರದ ಅಂಗಸಂಸ್ಥೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದವು. ಆದರೆ ಈಗ ಅವರದ್ದೇ ಸರಕಾರ ಇರುವುದರಿಂದ ಕೇವಲ ಟ್ವೀಟ್. ಈಗ ಪ್ರತಿಭಟನೆ ಮಾಡುವ ಸಮಯ ಅಲ್ಲ ಎನ್ನುವುದು ಹೌದಾದರೂ ಸರಕಾರದಲ್ಲಿ ಒಳಗೆ ಹೊರಗೆ ಇರುವವರು ಇದೇ ವಿಷಯವನ್ನು ಹಿಡಿದುಕೊಂಡು ತಾನೆ ಅಧಿಕಾರಕ್ಕೆ ಬಂದಿರುವುದು. ಬೇರೆಯವರು ಬಿಡಿ, ಸಿಟಿ ರವಿ, ಈಗ ಶಾಸಕರು ಮಾತ್ರವಲ್ಲ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರು ಇದೇ ಹಿಂದೂತ್ವ ಹಿಡಿದುಕೊಂಡು ಬಾಬಾ ಬುಡನಗಿರಿ ಮೂಲಕವೇ ವಿಧಾನಸೌಧವನ್ನು ತಲುಪಿದ್ದು. ಅವರು ಕೂಡ ಮೌನವಾಗಿದ್ದಾರೆ. ತಮಿಳುನಾಡಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಜುರಾಯಿ ಇಲಾಖೆಗಳ ಅಧೀನದಲ್ಲಿರುವ ದೇವಸ್ಥಾನಗಳನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಲಾಗುವುದು ಎಂದು ಹೇಳಿದ್ದರು. ಅವರ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಆದ್ದರಿಂದ ಪಾಪ ಸಿಟಿ ರವಿ ಕನಸು ಹಾಗೆ ಉಳಿಯಿತು. ಆದರೆ ಸಿಟಿ ರವಿಯವರು ಬೇಸರಪಡಬೇಕಾಗಿಲ್ಲ. ಅವರದ್ದೇ ಪಕ್ಷದ ಸರಕಾರ ತಮಿಳುನಾಡಿನ ಪಕ್ಕದ ಕರ್ನಾಟಕದಲ್ಲಿದೆ. ಇಲ್ಲಿ ಅವರು ತಮ್ಮ ಆಶಯವನ್ನು ಅನುಷ್ಟಾನಕ್ಕೆ ತರಬಹುದಲ್ಲ. ಮಾತನಾಡಿದ್ರೆ ಕೇಸರಿ ಶಾಲು ಫೋಟೋಗೆ ಕಾಣುವಂತೆ ಹಾಕುವ ಬಿಜೆಪಿ ಶಾಸಕರು ತಮ್ಮ ಕ್ಷೇತ್ರದ ಸಿ ಗ್ರೇಡಿನ ದೇವಸ್ಥಾನಕ್ಕೆ ಎ ಗ್ರೇಡಿನ ದೇವಸ್ಥಾನಗಳ ಹಣ ಕೊಡಿ ಎಂದು ಕೇಳಿ ಅದನ್ನು ಸಿ ಗ್ರೇಡಿನ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬಹುದಲ್ಲ. ಇನ್ನು ಈಗ ರಾಜ್ಯದ ನಿಷ್ಕಲಂಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಧಾರ್ಮಿಕ ದತ್ತಿ ಇಲಾಖೆಯ ಸಚಿವರೂ ಆಗಿದ್ದಾರೆ. ಅವರಿಗೆ ಮುಕ್ತವಾದ ಅವಕಾಶ ಕೊಟ್ಟರೆ ಅವರು ಪಟ್ಟಾಗಿ ಕುಳಿತು ರೂಪುರೇಶೆ ತಯಾರಿಸಿ ಹೇಗೆ ದೇವಸ್ಥಾನಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಏನಾದರೂ ಮಾಡಬಹುದು ಎಂದು ಯೋಜನೆ ಹಾಕುತ್ತಾರೆ. ಅದರೊಂದಿಗೆ ದೇವರ ಇಲಾಖೆ ಎಂದೇ ಕರೆಯಲಾಗುವ ಇಲಾಖೆಗೆ ರೋಹಿಣಿ ಸಿಂಧೂರಿ ಆಯುಕ್ತರಾಗಿ ಬಂದಿದ್ದಾರೆ. ಈಗ ನಿಜವಾದ ಕಥೆ ಆರಂಭವಾಗಿರುವುದು. ಇಲ್ಲಿಯ ತನಕ ಈ ಇಲಾಖೆ ತಣ್ಣಗೆ ಇತ್ತು. ಇನ್ನು ಅಲ್ಲಿ ಕೂಡ ಸಂಚಲನ ಮೂಡಲಿದೆ. ರೋಹಿಣಿ ಜಾತಕದಲ್ಲಿಯೇ ವಿವಾದ ಮಾಡದೇ ಎದ್ದು ಹೋದ ಉದಾಹರಣೆ ಇಲ್ಲ. ಹಾಗಿರುವಾಗ ಮಸೀದಿಗೆ ಹೋಗುವ ಆ ಕೋಟ್ಯಾಂತರ ರೂಪಾಯಿ ಹಣವನ್ನು ಅವರು ತಡೆದು ನಿಲ್ಲಿಸಿದರೆ ಸಾಕು. ನಂತರ ಯಡ್ಡಿಗೆ ಮತ್ತು ಮಾಧ್ಯಮಗಳಿಗೆ ಪುರುಸೊತ್ತು ಇಲ್ಲದಂತೆ ಆಗುತ್ತದೆ. ಕೋಟಾ ಹಾಗೂ ಸಿಂಧೂರಿ ಒಟ್ಟಿಗೆ ಕುಳಿತು ಕೆಲಸ ಮಾಡಿದರೆ ಇಬ್ಬರಲ್ಲಿಯೂ ಏನಾದರೂ ಉತ್ತಮ ಮಾಡಬೇಕೆಂಬ ಆಶಾವಾದ ಇದೆ. ಇರಬೇಕಾದದ್ದು ಯಡ್ಡಿಗೆ!!
Leave A Reply