ಕುಂಬಳಕಾಯಿ ಕಳ್ಳ ಎಂದ ಕೂಡಲೇ ಎಲ್ಲಾ ಕ್ರೈಸ್ತರು ಹೆಗಲು ಮುಟ್ಟಿ ನೋಡಬೇಕಿಲ್ಲವಲ್ಲ!!
ಮತಾಂತರ ನಿಷೇಧ ಮಸೂದೆ ಬೇಡಾ ಎಂದು ಕ್ರೈಸ್ತ ಧರ್ಮಗುರುಗಳು ಮತ್ತು ಕ್ರೈಸ್ತ ರಾಜಕಾರಣಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಈ ಪ್ರತಿಭಟನೆಯ ಕೆಲವು ತಿಂಗಳುಗಳ ಹಿಂದಿನಿಂದಲೂ ಕಾಂಗ್ರೆಸ್ ಮುಖಂಡರೊಡನೆ ವಿವಿಧ ಸಭೆಗಳನ್ನು ಇವರು ಮಾಡುತ್ತಾ ಬರುತ್ತಿದ್ದರು. ಇದಕ್ಕಿಂತ ಮೊದಲೊಮ್ಮೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕ್ರೈಸ್ತ ಧರ್ಮ ಪ್ರಮುಖರು ಸಭೆ ನಡೆಸಿದ್ದಾರೆ. ಅಂತಿಮವಾಗಿ ಈಗ ಪ್ರತಿಭಟನೆಯ ದಾರಿ ತುಳಿದಿದ್ದಾರೆ. ಈ ಮೂಲಕ ಕ್ರೈಸ್ತರ ಮೇಲೆ ರಾಜ್ಯ ಸರಕಾರ ಏನೋ ದಾಳಿ ಮಾಡುತ್ತಿದೆ ಎಂದು ತೋರಿಸಲು ಹೊರಟಿದ್ದಾರೆ. ಅಷ್ಟಕ್ಕೂ ಕುಂಬಳಕಾಯಿ ಕಳ್ಳ ಎಂದರೆ ಕ್ರೈಸ್ತರು ಹೆಗಲುಮುಟ್ಟಿ ನೋಡುವುದೇಕೆ ಎಂದು ಗೊತ್ತಾಗುವುದಿಲ್ಲ. ನಮ್ಮಲ್ಲಿ ಮತಾಂತರ ನಿಷೇಧ ಕಾಯ್ದೆ ಚಿಕ್ಕದಾಗಿ ಮೂಲೆಯಲ್ಲಿ ಮೊದಲಿನಿಂದಲೂ ಇದೆ. ಅದರ ಪ್ರಕಾರ ಬಲವಂತದಿಂದ ಮತಾಂತರ ಮಾಡುವ ಹಾಗಿಲ್ಲ. ಹಿಂದೆ 1530 ರಲ್ಲಿ ಪೋರ್ಚುಗೀಸರು ಗೋವಾದಲ್ಲಿ ಬಲವಂತದ ಮತಾಂತರ ಮಾಡುತ್ತಿದ್ದರು. ಮತಾಂತರಕ್ಕೆ ಒಪ್ಪದವರಿಗೆ ಅತೀ ಕ್ರೂರ ಹಿಂಸೆ ನೀಡಲಾಗುತ್ತಿತ್ತು. ಹಿಂದೂಗಳ ಮನೆಗೆ ಹೊಕ್ಕು ದೇವರ ಮೂರ್ತಿ, ಫೋಟೋಗಳನ್ನು ತುಳಿದು ಭಾವನೆಗಳ ಜೊತೆ ಆಟವಾಡಲಾಗುತ್ತಿತ್ತು. ಮತಾಂತರಕ್ಕೆ ಒಪ್ಪದವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿತ್ತು. ಕೆಲವರು ಇದರಿಂದ ಹೆದರಿ ಪ್ರಾಣ ಕಳೆದುಕೊಂಡರು. ಅನೇಕರು ಮತಾಂತರಕ್ಕೆ ಮನಸ್ಸು ಒಪ್ಪದೆ ಆತ್ಮಹತ್ಯೆ ಮಾಡಿಕೊಂಡರು. ಉಳಿದವರು ಗೋವಾ ಬಿಟ್ಟು ಕರ್ನಾಟಕಕ್ಕೆ ಓಡಿ ಬಂದರು. ಇದು ಇತಿಹಾಸ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಆದರೆ ಸ್ವತಂತ್ರಭಾರತದಲ್ಲಿ ಹೀಗೆ ಬಲವಂತದಿಂದ ಮತಾಂತರ ಮಾಡಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬದಲಾಗಿತ್ತು. ಹಾಗಂತ ಪೋರ್ಚುಗೀಸರ ಪಳೆಯುಳಿಕೆಗಳು ಇದ್ದವಲ್ಲ, ಅವು ಸುಲಭವಾಗಿ ಸೋಲು ಒಪ್ಪಿಕೊಳ್ಳುತ್ತವಾ? ಅವರು ಮತಾಂತರಕ್ಕೆ ಬೇರೆ ದಾರಿಯನ್ನು ಕಂಡುಕೊಂಡರು. ಅದೇ ಆಮಿಷದ ಮತಾಂತರ. ಇಲ್ಲಿ ನೀವು ಮತಾಂತರ ಆಗುವುದು ಗೊತ್ತೆ ಆಗುವುದಿಲ್ಲ. ಕೃಷ್ಣನ ಫೋಟೋ ಇದ್ರೆ ಕಡೆ ಕ್ರೈಸ್ತನ ಫೋಟೋ ಬರುತ್ತದೆ. ಓಂ ಇದ್ದ ಕಡೆ ಕ್ರಾಸ್ ಬರುತ್ತದೆ. ಜಾತ್ರೆಯೋ, ಹಬ್ಬದ ದಿನವೋ ದೇವಸ್ಥಾನಕ್ಕೆ ಹೋಗುತ್ತಿದ್ದವರು ಪ್ರತಿ ಆದಿತ್ಯವಾರ ಚರ್ಚ್ ಗೆ ಹೋಗಲಾರಂಭಿಸುತ್ತಾರೆ. ಕೆಲವರು ಹಿಂದಿನ ಸರ್ ನೇಮ್ ಜೊತೆ ಕ್ರೈಸ್ತ ಸರ್ ನೇಮ್ ಕೂಡ ಸೇರಿಸಿಕೊಂಡು ಪ್ರಭು ಡಿಸೋಜಾ ಆಗಿಬಿಡುತ್ತಾರೆ. ಒಂದು ಕಾಲದಲ್ಲಿ ಕಷ್ಟಪಟ್ಟು ದುಡಿದು ಎರಡು ಸಲ ನೆಮ್ಮದಿಯಿಂದ ಊಟ ಮಾಡುತ್ತಿದ್ದವರ ಮನೆಯಲ್ಲಿ ಏನೋ ಕಾಯಿಲೆ ಬಂದು ಆರೋಗ್ಯ ಹದಗೆಟ್ಟು ಅವರು ಆಸ್ಪತ್ರೆ ಸೇರಿದರೆ ಈ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗಲ್ಲ, ನಮ್ಮ ಆಸ್ಪತ್ರೆಗೆ ಬನ್ನಿ ಎಂದು ಮನೆಯವರನ್ನು ಪುಸಲಾಯಿಸಿ ಕ್ರೈಸ್ತರು ನಡೆಸುವ ಆಸ್ಪತ್ರೆಗೆ ಸೇರಿಸಿ ಅಲ್ಲಿ ಫೀಸ್ ಮಾಫಿ ಮಾಡಿ ನಂತರ ಅವರ ಮೈಂಡ್ ವಾಶ್ ಮಾಡುವುದರಿಂದ ಹಿಡಿದು ಗುಡ್ಡಕಾಡು ಜನರು ಮನೆಯಲ್ಲಿ ಫ್ರಿಜ್ಡ್ ನೋಡುವ ತನಕ ವಿವಿಧ ಆಮಿಷಗಳನ್ನು ಒಡ್ಡಲಾಗುತ್ತದೆ.
ಮಕ್ಕಳ ಸ್ಕೂಲ್ ಫೀ ಮನ್ನಾ ಮಾಡುತ್ತೇವೆ ನಮ್ಮ ಶಾಲೆಗೆ ಸೇರಿಸಿ ಎನ್ನುವುದರಿಂದ ಹಿಡಿದು ಉದ್ಯೋಗದ ತನಕ ಆಮಿಷಗಳು ವಿವಿಧ ತೆರನಾಗಿರುತ್ತವೆ. ಒಟ್ಟಿನಲ್ಲಿ ಪೋರ್ಚುಗೀಸರ ಸಮಯದಲ್ಲಿ ಚಾಟಿ, ಬೆತ್ತ, ಬಾರುಕೋಲುಗಳಿಂದ ಮತಾಂತರ ನಡೆಯುತ್ತಿದ್ದರೆ ಈಗ ಪ್ರೀತಿ, ಆಮಿಷ ಮತ್ತು ಸಹಾಯಹಸ್ತ ಚಾಚುವ ತನಕ ಮತಾಂತರ ನಡೆಯುತ್ತದೆ. ಈ ಎರಡು ಕೂಡ ತಪ್ಪು ಎಂದು ಎಲ್ಲರಿಗೂ ಗೊತ್ತಿರುವುದರಿಂದ ಇದನ್ನು ನಿಲ್ಲಿಸುವ ಅಗತ್ಯ ಸರಕಾರದ ಮುಂದೆ ಇದೆ. ಆದರೆ ಇದರಿಂದ ಮೊದಲು ಆತಂಕಕ್ಕೆ ಬಿದ್ದವರು ಕ್ರೈಸ್ತರು. ಆದರೆ ಮುಸಲ್ಮಾನರು ನೋಡಿ, ಅವರು ಬಿಂದಾಸ್ ಆಗಿ ಇದ್ದಾರೆ. ಅವರಲ್ಲಿ ಕೂಡ ಮತಾಂತರಗಳನ್ನು ಮಾಡುತ್ತಾರೆ. ಲವ್ ಜಿಹಾದ್ ಅದರ ಒಂದು ಭಾಗ. ಮದುವೆಯ ನೆಪದಲ್ಲಿ ಹುಡುಗಿಯನ್ನು ವರಸಿ ನಂತರ ಅವಳನ್ನು ಮುಸ್ಲಿಂ ಆಗಲು ಪ್ರೇರೆಪಿಸಿ ಕೊನೆಗೆ ಬಲವಂತವಾಗಿ ಮತಾಂತರ ಎಷ್ಟೋ ಕಡೆ ನಡೆಯುತ್ತದೆ. ಹಾಗಂತ ಮುಸ್ಲಿಮರು ಮತಾಂತರ ಕಾನೂನು ವಿರುದ್ಧ ಪ್ರತಿಭಟನೆಗೆ ಇಳಿದಿಲ್ಲ. ಕಾರಣ ಅವರ ಮತಾಂತರದಲ್ಲಿ ಯುವತಿಗೆ ಬೇರೆ ದಾರಿಯೇ ಇಲ್ಲದೆ ಚಕ್ರವ್ಯೂಹ ರಚಿಸಿ ಮತಾಂತರ ಮಾಡಲಾಗುತ್ತದೆ. ಬೇಡಾ ಎಂದು ಆಕೆ ಈಚೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಅವಳ ಕೈಯಲ್ಲಿ ಒಂದು ಮಗು ಬಂದಿರುತ್ತದೆ. ಅವಳ ಒಳಗೆ ಮುಸ್ಲಿಂ ರಕ್ತನಾಳ ಒಂದು ಹರಿಯುತ್ತಿರುತ್ತದೆ. ಅವಳು ಒಂದೊ ಅದನ್ನು ಅನುಭವಿಸಿ ಅಲ್ಲಿಯೇ ಇರಬೇಕಾಗುತ್ತದೆ ಅಥವಾ ಕೆಲವು ಕಾಲದ ಬಳಿಕ ಪ್ರಾಣ ಬಿಡಬೇಕಾಗುತ್ತದೆ. ಆದ್ದರಿಂದ ಕ್ರೈಸ್ತರೊಂದಿಗೆ ಈ ವಿಷಯದಲ್ಲಿ ಮುಸ್ಲಿಮರು ಪ್ರತಿಭಟನೆಯಲ್ಲಿ ಕೈ ಜೋಡಿಸಿಲ್ಲ. ಒಂದು ವೇಳೆ ಕ್ರೈಸ್ತರಿಗೆ ತಾವು ಮತಾಂತರ ಮಾಡುವುದಿಲ್ಲ ಎಂದು ಧೈರ್ಯ ಇದ್ದರೆ ಯಾವ ಕಾನೂನು ಬೇಕಾದರೆ ಬರಲಿ ತಮಗೆ ಹೆದರಿಕೆ ಇಲ್ಲ ಎಂದು ಆರಾಮವಾಗಿ ಹೇಳಬಹುದಲ್ಲ. ಒಂದು ವೇಳೆ ಕ್ರೈಸ್ತರಲ್ಲಿಯೇ ಒಂದು ಪಂಗಡ ಮಾತ್ರ ಮತಾಂತರ ಮಾಡುವವರಾದರೆ ಅವರು ಮಾತ್ರ ಪ್ರತಿಭಟಿಸಲಿ. ಆಗ ನಿಜವಾದ ಮತಾಂತರಿಗಳು ಯಾರು ಎಂದು ಜಗತ್ತಿಗೆ ಗೊತ್ತಾಗುತ್ತದೆ. ಅದು ಬಿಟ್ಟು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರುತ್ತದೆ ಎಂದ ಕೂಡಲೇ ಎಲ್ಲಾ ಕ್ರೈಸ್ತರು ಹೆಗಲು ಮುಟ್ಟಿ ನೋಡುವ ಅಗತ್ಯ ಇಲ್ಲವಲ್ಲ!!
Leave A Reply