• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

1 ವರ್ಷ ವೇಸ್ಟಾದರೆ ಫೀಸ್ ಕಟ್ಟುವ ಭಕ್ರಾಗಳು ಸಿಕ್ಕಿ ಸಿಗುತ್ತಾರೆ!!

Hanumantha Kamath Posted On March 16, 2022
0


0
Shares
  • Share On Facebook
  • Tweet It

ಕರ್ನಾಟಕದ ಉಚ್ಚ ನ್ಯಾಯಾಲಯದ ಓರ್ವ ಮುಸ್ಲಿಂ ಮಹಿಳಾ ನ್ಯಾಯಾಧೀಶರನ್ನು ಒಳಗೊಂಡ ತ್ರಿಸದಸ್ಯ ಪೀಠ ಕೊಟ್ಟ ತೀರ್ಪು ತರಗತಿಯ ಒಳಗೂ ಹಿಜಾಬ್ ಪರ ಇರುವವರಿಗೆ ಹಿನ್ನಡೆ ತಂದಿದೆ. ಕಾನೂನು ಕ್ಷೇತ್ರದಲ್ಲಿ ಇರುವವರಿಗೆ ಚೆನ್ನಾಗಿ ಗೊತ್ತಿರುವಂತೆ ಯಾವುದೇ ನ್ಯಾಯಾಧೀಶರ ಧರ್ಮ ಇಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ನೋಡುವವರ ದೃಷ್ಟಿಯಲ್ಲಿ ತಪ್ಪು ಕಾಣಬಾರದು ಎನ್ನುವ ಕಾರಣಕ್ಕೆ ಅನುಪಾತವನ್ನು ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತದೆ. ಈ ತೀರ್ಪು ಬಂದ ಬಳಿಕ ನಾವು ಸುಪ್ರೀಂಕೋರ್ಟಿಗೆ ಹೋಗುತ್ತೇವೆ ಎಂದು ಹಟ ಹಿಡಿದ ಉಡುಪಿಯ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ತಾವು ಹೇಳಿದಂತೆ ನಡೆದುಕೊಂಡಿದ್ದಾರೆ. ತೀರ್ಪಿನ ಮೊದಲು ಈ ದೇಶದ ಸಂವಿಧಾನ ನಮಗೆ ಮುಖ್ಯ, ಉಡುಪಿಯ ಕಾಲೇಜಿನ ಆಡಳಿತ ಮಂಡಳಿಯವರು ಹೇಳಿದ್ದನ್ನು ನಾವು ಕೇಳುವ ಪ್ರಶ್ನೆಯೇ ಇಲ್ಲ. ನಮಗೆ ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ. ಸಂವಿಧಾನದಲ್ಲಿ ನಮಗೆ ವಿಶ್ವಾಸ ಇದೆ. ಸಂವಿಧಾನ ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ ಎಂದು ಐದು ನಿಮಿಷ ಮಾತನಾಡಿದರೆ ಹದಿನೈದು ಸಲ ಸಂವಿಧಾನ ಎಂದು ಹೇಳುತ್ತಿದ್ದವರು ಈಗ ಸಂವಿಧಾನದ ಬಗ್ಗೆ ಮಾತೇ ಆಡುತ್ತಿಲ್ಲ. ಯಾಕೆಂದರೆ ಸಂವಿಧಾನದ ಆಶಯದಂತೆ ರಚಿತವಾದ ಹೈ ಕೋರ್ಟ್ ಮತ್ತು ಸುಪ್ರೀಂಕೋರ್ಟ್ ಹೇಳಿದ್ದನ್ನು ಇವರು ಕೇಳುವುದಿಲ್ಲ ಎಂದಾದರೆ ಇವರು ಯಾರು ಹೇಳಿದ್ದನ್ನು ಕೇಳುತ್ತಾರೆ?

ಸದ್ಯ ಹೈಕೋರ್ಟ್ ತೀರ್ಪನ್ನು ನಾವು ತಿರಸ್ಕರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ರಾಜ್ಯ ಸರಕಾರದ ಆಶಯದಂತೆ ಹೈಕೋರ್ಟ್ ನಡೆದುಕೊಂಡಿದೆ ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟಿನಲ್ಲಿಯೂ ಇದೇ ರೀತಿಯ ಆದೇಶ ಬಂದರೆ ಆಗ ಮೋದಿ ಮತ್ತು ಅಮಿತ್ ಶಾ ಹೇಳಿದ ಹಾಗೆ ಸುಪ್ರೀಂಕೋರ್ಟ್ ನಡೆದುಕೊಂಡಿದೆ ಎಂದು ಹೇಳಲಿಕ್ಕೂ ಇವರು ಹೇಸುವುದಿಲ್ಲ. ನಮ್ಮ ವಿರುದ್ಧ ತೀರ್ಪು ಬಂದರೂ ನಾವು ಎಷ್ಟು ಶಾಂತತೆಯಿಂದ ನಡೆದುಕೊಂಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಶಾಂತತೆಯಿಂದ ನಡೆದುಕೊಳ್ಳದೇ ಬೇರೆ ಆಯ್ಕೆ ಇತ್ತಾ ಎಂದು ಕೇಳಿದರೆ ಇವರ ಬಳಿ ಉತ್ತರ ಇಲ್ಲ. ಅವಕಾಶ ಸಿಕ್ಕಿದರೆ ಎಲ್ಲಿಯಾದರೂ ಇನ್ನೊಂದು ಡಿಜೆ ಹಳ್ಳಿ, ಕೆಜಿ ಹಳ್ಳಿಯನ್ನಾಗಿ ಮಾಡಿದರೂ ಮಾಡಿಯಾರು? ಆದರೆ ಅಂತದ್ದಕ್ಕೆ ಕೈ ಹಾಕುವ ಧೈರ್ಯ ಯಾವ ಮೂಲಭೂತವಾದಿಯೂ ಮಾಡಲಿಲ್ಲ. ಈಗ ಇವರು ಹೇಳುವುದು ಏನೆಂದರೆ ಹೈಕೋರ್ಟ್ ಹೇಳಿದ ವಾಕ್ಯ. ” ಹಿಜಾಬ್ ಯಾವತ್ತೂ ಇಸ್ಲಾಂನ ಅವಿಭಾಜ್ಯ ಅಂಗವಾಗಿ ಇರಲಿಲ್ಲ” ಇದು ನೂರಕ್ಕೆ ನೂರರಷ್ಟು ನಿಜ. ಹಿಜಾಬ್ ಆಯ್ಕೆಯಾಗಿತ್ತು. ಹಾಕುವವರು ಹಾಕಬಹುದಿತ್ತು. ಹಾಕದವರು ಹಾಕುತ್ತಿರಲಿಲ್ಲ. ಹಾಗಾದರೆ ಹಾಕುತ್ತೇವೆ ಎಂದು ಹೇಳುವವರು ಎಲ್ಲಿ ಬೇಕಾದರೂ ಹಾಕಬಹುದಾ ಎಂದು ಪ್ರಶ್ನೆ ಬಂದರೆ ತರಗತಿಯೊಳಗೆ ಹಾಕಬಾರದು ಎಂದು ಶಿಕ್ಷಣ ಸಂಸ್ಥೆ ನಿಯಮ ಇದ್ದರೆ ಅದನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ಶಾಲೆ ಅಥವಾ ಕಾಲೇಜಿನ ಆಡಳಿತ ಮಂಡಳಿ ಹಿಜಾಬ್ ಧರಿಸಿ ಕ್ಲಾಸಿನೊಳಗೆ ಕುಳಿತುಕೊಳ್ಳಬಾರದು ಎಂದು ನಿಯಮ ತಂದರೆ ಅದನ್ನು ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ತಮ್ಮ ಧಾರ್ಮಿಕ ಹಕ್ಕಿನ ಉಲ್ಲಂಘನೆ ಎಂದು ಅಂದುಕೊಳ್ಳಬಾರದು ಎಂದು ಕೂಡ ತೀರ್ಪಿನಲ್ಲಿ ಹೇಳಿದೆ. ಇನ್ನು ಯಾವುದೇ ಸರಕಾರ ಇಂತಹ ವಿಷಯದಲ್ಲಿ ನಿಯಮಗಳನ್ನು ತರಲು ಸ್ವಾಯತ್ತತೆಯನ್ನು ಹೊಂದಿದ್ದು, ಸರಕಾರದ ನಿಯಮ ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಇಷ್ಟಾದ ನಂತರವೂ ಕೆಲವು ವಿದ್ಯಾರ್ಥಿನಿಯರು ತಾವು ಪರೀಕ್ಷೆ ಬರೆಯಲು ನಿರಾಕರಿಸಿ ಕಾಲೇಜಿನಿಂದ ಹೊರಗೆ ಹೋಗಿದ್ದಾರೆ.

ಹಿಜಾಬ್ ಧರಿಸಿಯೇ ಕ್ಲಾಸಿನೊಳಗೆ ಕುಳಿತುಕೊಳ್ಳುತ್ತೇನೆ ಎಂದು ಹಟ ಹಿಡಿದಿರುವ ವಿದ್ಯಾರ್ಥಿನಿಯರಿಗೆ ಚೆನ್ನಾಗಿ ಗೊತ್ತಿದೆ. ತಮ್ಮ ವೇಸ್ಟ್ ಆಯಿತು ಎಂದು ಅಂದುಕೊಂಡ ಒಂದು ವರ್ಷ ಯಾವುದಕ್ಕೂ ಲೆಕ್ಕಕ್ಕೆ ಇಲ್ಲ. ಅದರ ಬದಲು ತಾವು ಹಿಜಾಬ್ ಧರಿಸಿಯೇ ತರಗತಿಯೊಳಗೆ ಕುಳಿತುಕೊಳ್ಳುತ್ತೇವೆ ಎಂದು ಹಟಕ್ಕೆ ಕುಳಿತುಕೊಳ್ಳುವುದರಿಂದ ಮೂರು ಪ್ರಯೋಜನಗಳಿವೆ. ಒಂದನೇಯದಾಗಿ ಮುಸ್ಲಿಂ ಸಂಘಟನೆಗಳಿಗೆ ಖುಷಿಯಾಗುತ್ತದೆ. ಇವರ ಮನೆಯ ಸಂಕಷ್ಟಕ್ಕೆ ಸ್ಪಂದಿಸುವುದಾಗಿ ಅವರು ಭರವಸೆ ನೀಡುತ್ತಾರೆ. ವೇಸ್ಟ್ ಆದ ಒಂದು ವರ್ಷದ ಶಾಲೆ ಮತ್ತು ಕಾಲೇಜಿನ ಫೀಸನ್ನು ಮತ್ತು ಇತರ ಖರ್ಚನ್ನು ತುಂಬಲು ಕೆಲವರು ಧನವಂತರು ಗುಟ್ಟಾಗಿ ಮುಂದೆ ಬರುತ್ತಾರೆ. ತಮ್ಮ ದೊಡ್ಡ ಕುಟುಂಬಕ್ಕೆ ಆಸರೆಯಾಗುವಂತಹ ಸಹಾಯಹಸ್ತ ಚಾಚುವವರು ಸಿಗುತ್ತಾರೆ. ಇದೆಲ್ಲ ನೋಡಿಯೇ ಒಂದು ಹೆಣ್ಣುಮಗು ತನ್ನ ಮನೆಯವರ ಕಷ್ಟಕ್ಕೆ ಸ್ಪಂದಿಸಲು ಇಂತಹ ನಿರ್ಧಾರವನ್ನು ಕೈಗೊಳ್ಳುತ್ತಾಳೆ. ಅದು ಬಿಟ್ಟು ನೀವು ಸಾಕಷ್ಟು ಅನುಕೂಲಸ್ಥ ಮನೆತನದ ಮುಸ್ಲಿಂ ಹೆಣ್ಣುಮಕ್ಕಳನ್ನು ಗಮನಿಸಿ. ಅವರು ಹಿಜಾಬ್ ಬೇಡಾ ಎಂದು ಕಾಲೇಜಿನವರು ಹೇಳಿದರೆ ಓಕೆ ಎಂದು ತಕ್ಷಣ ಒಪ್ಪಿ ತೆಗೆದಿಟ್ಟು ತರಗತಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಯಾರ ಹಂಗೂ ಇಲ್ಲ. ಅವರ ಅಮ್ಮ, ಅಪ್ಪ ಕೂಡ ಇಂತಹ ಚಿಲ್ಲರೆ ವಿಷಯಗಳಿಗೆ ತಲೆ ಕೂಡ ಹಾಕುವುದಿಲ್ಲ. ಅವರಿಗೆ ಯಾವ ಮೂಲಭೂತ ಸಂಘಟನೆಗಳ ಅಗತ್ಯ ಕೂಡ ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವೇಸ್ಟಾಗುವುದು ತಮ್ಮ ಒಂದು ವರ್ಷದ ಅಮೂಲ್ಯ ದಿನಗಳನ್ನು ಎಂದು ಅವರು ನಿರ್ಧರಿಸಿಬಿಟ್ಟಿರುತ್ತಾರೆ.!!

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search