• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?

Hanumantha Kamath Posted On June 27, 2022


  • Share On Facebook
  • Tweet It

ಕಾಂಗ್ರೆಸ್ಸಿನ ಅನಭಿಷೇಕ್ತ ದೊರೆ, ಭಾವಿ ಪ್ರಧಾನಿ ಅಭ್ಯರ್ಥಿ, ಕಾಂಗ್ರೆಸ್ಸಿನ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ, ಗಾಂಧಿ ಕುಟುಂಬದ ಕುಡಿ ರಾಹುಲ್ ಅವರ ವಯನಾಡಿನ ಸಂಸದರ ಕಚೇರಿಯ ಮೇಲೆ ದಾಳಿ ಮಾಡಲಾಗಿದೆ. ಆದರೆ ಕಾಂಗ್ರೆಸ್ ಮುಖಂಡರು ಯಾವುದೇ ರಾಜ್ಯದಲ್ಲಿಯೂ ಪ್ರತಿಭಟನೆ ಮಾಡುತ್ತಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೂ ಸುದ್ದಿಗೋಷ್ಟಿ ಕರೆದು ಮಾತನಾಡುವ ಕಾಂಗ್ರೆಸ್ ಮುಖಂಡರು ಈ ವಿಷಯದಲ್ಲಿ ಸಣ್ಣ ಕೆಮ್ಮು ಕೂಡ ತೆಗೆದಿಲ್ಲ. ಹಾಗಾದರೆ ತಮ್ಮ ಮಹಾನ್ ನಾಯಕನ ಅಧಿಕೃತ ಕಚೇರಿಯನ್ನು ಹುಡಿ ಮಾಡಿದರೂ ಮಾತನಾಡದಷ್ಟು ನೈತಿಕತೆ ಕೊರತೆ ಕಾಂಗ್ರೆಸ್ಸಿನಲ್ಲಿ ಕಾಣುತ್ತಿದೆಯಾ? ಹೌದು. ಅಂತಹ ಒಂದು ಇರಿಸುಮುರುಸಿನ ಪರಿಸ್ಥಿತಿಯನ್ನು ಕಾಂಗ್ರೆಸ್ ಎದುರಿಸುತ್ತಿದೆ.
ಈ ಮೌನ ಯಾಕೆ? ಇಲ್ಲ, ಇವರು ಮಾತನಾಡುವುದಿಲ್ಲ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದನೇಯದಾಗಿ ರಾಹುಲ್ ಅವರ ಲೋಕಸಭಾ ಕ್ಷೇತ್ರ ಇರುವುದು ಕೇರಳದಲ್ಲಿ. ಅಲ್ಲಿ ರಾಜ್ಯ ಸರಕಾರ ಇರುವುದು ಕಮ್ಯೂನಿಸ್ಟರದ್ದು. ಒಂದು ವೇಳೆ ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಗುಜರಾತಿನಂತಹ ರಾಜ್ಯದಿಂದ ರಾಹುಲ್ ಸಂಸದರಾಗಿದ್ದರೆ ಆ ರಾಜ್ಯಗಳ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಕಚೇರಿಯನ್ನು ಹೊಂದಿರುತ್ತಿದ್ದರು. ಆದರೆ ಯಾವಾಗ ತಮ್ಮ ಕುಟುಂಬ ತಲೆತಲಾಂತರದಿಂದ ಗೆದ್ದು ಬರುತ್ತಿರುವ ಅಮೇಠಿಯಿಂದ ತಾವು ಗೆಲ್ಲುವುದಿಲ್ಲ ಎಂದ ರಾಹುಲ್ ಗೆ ಸ್ಪಷ್ಟವಾಗಿ ಗೊತ್ತಾಯಿತೋ, ಅವರು ಯಾವುದಕ್ಕೂ ಸೇಫ್ ಆಗಿ ಇರಲಿ ಎನ್ನುವ ಕಾರಣಕ್ಕೆ ಕೇರಳದ ವಯನಾಡನ್ನು ಕೂಡ ಆಯ್ಕೆ ಮಾಡಿಕೊಂಡರು. ಒಬ್ಬ ರಾಷ್ಟ್ರೀಯ ನಾಯಕ ತಮ್ಮ ರಾಜ್ಯದಿಂದ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವ ಕಾರಣಕ್ಕೆ ಮತ್ತು ಕಾಂಗ್ರೆಸ್ ಒಂದು ರೀತಿಯಲ್ಲಿ ತಮ್ಮ ಸೋದರ ಸಂಬಂಧಿ ಪಕ್ಷವಾಗಿರುವುದರಿಂದ ಕಮ್ಯೂನಿಸ್ಟರು ಕೂಡ ಡಮ್ಮಿ ಅಭ್ಯರ್ಥಿ ಹಾಕಿ ಇವರನ್ನು ಗೆಲ್ಲಿಸಿ ಮರ್ಯಾದೆ ಉಳಿಸಿಬಿಟ್ಟರು. ಅಮೇಠಿಯ ಸೋಲು ರಾಹುಲ್ ರಾಜಕಾರಣದ ಕೊನೆಯ ಮೊಳೆ ಆಗಿತ್ತಾದರೂ ಆ ಬಗ್ಗೆ ನಿರೀಕ್ಷೆಯಂತೆ ಫಲಿತಾಂಶ ಬಂದ ಕಾರಣ ಅದನ್ನು ಸ್ವೀಕರಿಸದೇ ರಾಹುಲ್ ಗೆ ಬೇರೆ ದಾರಿ ಇರಲೇ ಇಲ್ಲ. ಹಾಗಂತ ಕ್ಷೇತ್ರ ಯಾವುದೇ ಇದ್ದರೂ ವರ್ಷದಲ್ಲಿ ಒಂದೆರಡು ಬಾರಿ ಹರಕೆ ತೀರಿಸಲು ಹೋಗುವಂತೆ ರಾಹುಲ್ ಕೂಡ ವರ್ಷದಲ್ಲಿ ಒಂದೆರಡು ದಿನ ವಯನಾಡಿಗೆ ಹೋಗಿ ರೋಡ್ ಶೋ ಮಾಡಿ ಕೈ ಬೀಸಿ ಬರುತ್ತಾರೆ. ಅವರು ಅಲ್ಲಿ ಎರಡು ದಿನ ಸ್ಥಳೀಯ ಮುಖಂಡರೊಂದಿಗೆ ಕಾಫಿ, ಚಾ ಕುಡಿದು ಮತ್ತೆ ದೆಹಲಿಗೆ ಹಿಂತಿರುಗಿದರೆ ಮುಂದಿನ ಬಾರಿ ವಯನಾಡಿಗೆ ಹೋಗುವುದು ಇನ್ಯಾವಾಗ ಎಂದು ಅವರಿಗೂ ಗೊತ್ತಿರುವುದಿಲ್ಲ. ಉತ್ತರ ಪ್ರದೇಶದ ಅಮೇಠಿಯಲ್ಲಿ ಹೀಗೆ ಮಾಡಿದ ಕಾರಣ ಅಲ್ಲಿನ ಜನ ಟಿಕೆಟ್ ಕೊಟ್ಟು ದೆಹಲಿಗೆ ಕಳುಹಿಸಿಕೊಟ್ಟು ಕೈ ತೊಳೆದುಕೊಂಡರು. ಅದೇ ಕೆಲಸವನ್ನು ಮುಂದಿನ ಬಾರಿ ವಯನಾಡಿನ ನಾಗರಿಕರು ಕೂಡ ಮಾಡಿದರೆ ಆಶ್ಚರ್ಯ ಇಲ್ಲ.
ಒಬ್ಬ ವ್ಯಕ್ತಿಯನ್ನು ಸಂಸದನಾಗಿ ಆಯ್ಕೆ ಮಾಡುವುದರ ಹಿಂದೆ ಆತ ನಮ್ಮ ದು:ಖ ದುಮ್ಮಾನಗಳನ್ನು ಕೇಳಬಲ್ಲ ಎನ್ನುವ ಕಾರಣ ಜನಸಾಮಾನ್ಯರಲ್ಲಿ ಪ್ರಮುಖವಾಗಿರುತ್ತದೆ. ಸಂಸದರ ಮುಖ್ಯ ಕರ್ತವ್ಯ ಎಂದರೆ ದೇಶಕ್ಕಾಗಿ ಶಾಸನಗಳನ್ನು ರೂಪಿಸುವುದು ಮತ್ತು ಅಂತಹ ಸಂದರ್ಭಗಳಲ್ಲಿ ಸಂಸತ್ತಿನ ಅಧಿವೇಶನದಲ್ಲಿ ಭಾಗವಹಿಸುವುದು ಎನ್ನುವುದೇ ನಿಜವಾದರೂ ಈಗ ಐನೂರು ಮೀಟರ್ ರಸ್ತೆಗೆ ಕಾಂಕ್ರೀಟ್ ಹಾಕಿಸಲು ಕೂಡ ಜನರು ಸಂಸದರ ಮೇಲೆ ಒತ್ತಡ ಹಾಕುವುದನ್ನು ನಾವು ನೋಡಿದ್ದೇವೆ. ನಾಲ್ಕೈದು ದಿನ ಸಂಸದರು ಭೇಟಿಗೆ ಸಿಗಲಿಲ್ಲ ಎಂದರೆ ಕಾರ್ಯಕರ್ತರ ವಲಯದಲ್ಲಿ ಗುಸುಗುಸು ಶುರುವಾಗುತ್ತದೆ. ಅವರು ಕೈಗೆ ಸಿಗುವುದಿಲ್ಲ ಎಂದು ಮಾತನಾಡಿಕೊಂಡಿರುತ್ತಾರೆ. ಅದರ ನಂತರ ಪರಿಣಾಮ ಬೀರುವುದು ಮತದಾರರ ಮೇಲೆ.
ಯಾಕೆಂದರೆ ಯಾವುದೇ ಅರ್ಜಿ, ಮನವಿ ತೆಗೆದುಕೊಂಡು ಬಂದಾಗ ಆ ಕೆಲಸ ಆಗುತ್ತೋ, ಬಿಡುತ್ತೋ ಅವರಿಗೆ ಸಂಸದರಿಂದಲೇ ಆ ಬಗ್ಗೆ ಭರವಸೆ ಸಿಕ್ಕಿದರೆ ಅದಕ್ಕಿಂತ ಸಮಾಧಾನ ಬೇರೆ ಇಲ್ಲ. ಆದರೆ ಸಂಸದರು ವರ್ಷಕ್ಕೊಮ್ಮೆ ಬರುವುದಾದರೆ ಅವರು ರಾಹುಲ್ ಗಾಂಧಿಯಾಗಲಿ, ಮನಮೋಹನ್ ಸಿಂಗ್ ಆಗಲಿ ಏನೂ ವ್ಯತ್ಯಾಸ ಇಲ್ಲ. ಹಾಗಂತ ಮೋದಿಯವರು ನಿತ್ಯ ವಾರಣಾಸಿಯ ತಮ್ಮ ಸಂಸದರ ಕಚೇರಿಯಲ್ಲಿ ಹೋಗಿ ಕುಳಿತುಕೊಳ್ಳುವುದಿಲ್ಲ. ಆದರೆ ಅವರು ಅಲ್ಲಿ ಬರದಿದ್ದರೂ ವಾರಣಾಸಿ ಹೇಗೆ ಅಭಿವೃದ್ಧಿಯಾಗಿದೆ ಎಂದು ಜನರಿಗೆ ವಾಸ್ತವ ಎದ್ದುಕಾಣುತ್ತಿದೆ.
ಆದ್ದರಿಂದ ರಾಹುಲ್ ಗಾಂಧಿಯವರ ಪಾಲಿಗೆ ಒಳ್ಳೆಯದು ಯಾವುದಾದರೆ ಅವರ ಮನೆ ಇರುವ ಲೋಕಸಭಾ ಕ್ಷೇತ್ರದಲ್ಲಿಯೇ ಚುನಾವಣೆಗೆ ಸ್ಪರ್ಧಿಸುವುದು. ಇಲ್ಲದಿದ್ದರೆ ಇವತ್ತಲ್ಲ ನಾಳೆ ಮತ್ತೆ ಅವರ ಕಚೇರಿ ಮೇಲೆ ಹೀಗೆ ದಾಳಿಯಾದರೆ ಅಚ್ಚರಿ ಏನಿಲ್ಲ. ಹಾಗಂತ ಇದನ್ನು ಖಂಡಿಸಿ ಒಂದು ಪ್ರತಿಭಟನೆ ಮಾಡುವ ಯೋಗ್ಯತೆ ಕೂಡ ಕಾಂಗ್ರೆಸ್ಸಿಗೆ ಇಲ್ಲ. ಯಾಕೆಂದರೆ ಹಾಗೆ ಮಾಡಿದರೆ ವಾಸ್ತವ ಹೊರಗೆ ಬೀಳುತ್ತದೆ. ಯಾಕೆ ದಾಳಿಯಾಯಿತು ಎಂದು ಮೀಡಿಯಾದವರು ವಯನಾಡಿಗೆ ಹೋಗಿ ಜನರ ಮುಂದೆ ಮೈಕ್ ಹಿಡಿದರೆ ರಾಹುಲ್ ಕೆಲಸ ಬಯಲಿಗೆ ಬರುತ್ತದೆ. ಆದರೆ ರಾಹುಲ್ ಅವರನ್ನು ಇ.ಡಿ ಕಚೇರಿಗೆ ಕರೆದು ವಿಚಾರಣೆ ಮಾಡಿದ್ದಕ್ಕೆ ವ್ಯಾಪಕ ಪ್ರತಿಭಟನೆ ಮಾಡಿದ ಕಾಂಗ್ರೆಸ್ಸಿಗರು ಇದಕ್ಕೆ ಮೌನ ವಹಿಸಿರುವುದು ಮಾತ್ರ ಅಚ್ಚರಿ. ಇದರ ಅರ್ಥ ಯಾವ ವಿಷಯಕ್ಕೆ ಪ್ರತಿಭಟನೆ ಮಾಡಬೇಕು ಎನ್ನುವುದಕ್ಕಿಂತ ವಿರೋಧ ವ್ಯಕ್ತಪಡಿಸಬೇಕು ಎನ್ನುವ ಒಂದೇ ಕಾರಣಕ್ಕೆ ಬೀದಿಗೆ ಇಳಿಯುವುದನ್ನು ನೋಡಿದಾಗ ಕಾಂಗ್ರೆಸ್ಸಿನ ರಾಜಕೀಯ ಜನರಿಗೆ ಅರ್ಥವಾಗುತ್ತದೆ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search