• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಏನೂ ಕೆಲಸವಿಲ್ಲದ ಕಾಂಗ್ರೆಸ್ ಸಿಂಹಗಳ ಹಲ್ಲು ಎಣಿಸುತ್ತಿದೆ!

Hanumantha Kamath Posted On July 16, 2022
0


0
Shares
  • Share On Facebook
  • Tweet It

ಅಜ್ಜ ನೆಟ್ಟ ಆಲದ ಮರ ಎಂದು ಹಗ್ಗ ತೆಗೆದುಕೊಳ್ಳಲು ಆಗುತ್ತಾ ಎಂದು ಒಂದು ಗಾದೆ ಮಾತಿದೆ. ಆದರೆ ಈಗ ದೇಶದಲ್ಲಿ ಕಾಂಗ್ರೆಸ್ ಎಲ್ಲಾ ಆಯಾಮಗಳಲ್ಲಿ ಈ ಗಾದೆಯನ್ನು ತನ್ನ ಅಸ್ತಿತ್ವದೊಂದಿಗೆ ಉಳಿಸಲು ಬಯಸುತ್ತಿದೆ. ಹಾಗಂತ ಗಾಂಧಿ ಕುಟುಂಬಕ್ಕೆ ಅರ್ಥಾತ್ ಈ ಸೋನಿಯಾ, ರಾಹುಲ್ ಎನ್ನುವ ಗಾಂಧಿಗಳ ಕುಟುಂಬದೊಂದಿಗೆ ಕಾಂಗ್ರೆಸ್ಸಿಗರು ನೇತಾಡಿದರೆ ಏನೂ ತೊಂದರೆ ಇಲ್ಲ. ಆದರೆ ಇವರು ನಮ್ಮ ಅಶೋಕಸ್ತಂಭಕ್ಕೆ ನೇತಾಡುವುದರಿಂದ ನಷ್ಟ ಇವರಿಗೆ ವಿನ: ದೇಶಕ್ಕೆ ಅಲ್ಲ. ಈಗ ಏನೂ ಕೆಲಸವಿಲ್ಲದೆ ರಾಹುಲ್ ಎಲ್ಲೋ ಯೂರೋಪ್ ಪ್ರವಾಸಕ್ಕೆ ಹೊರಟಿದ್ದಾರೆ. ಆದರೆ ಎಲ್ಲರೂ ಹೀಗೆ ಎಲ್ಲೆಲ್ಲೋ ಹೋಗಲು ಆಗುವುದಿಲ್ಲವಲ್ಲ. ಅವರೆಲ್ಲ ಇಲ್ಲಿಯೇ ಕುಳಿತು ನಮ್ಮ ಅಶೋಕಸ್ತಂಭದಲ್ಲಿರುವ ಸಿಂಹಗಳ ಹಲ್ಲುಗಳನ್ನು ಎಣಿಸುತ್ತಿದ್ದಾರೆ. ಸಿಂಹಗಳು ನಮ್ಮ ಅವಧಿಯಲ್ಲಿ ಬಾಯಿ ಮುಚ್ಚಿಕೊಂಡಿದ್ದವು. ಈಗ ತೆರೆದಂತೆ ತೋರುತ್ತಿದೆ. ಹಲ್ಲುಗಳು ಕಾಣಿಸುತ್ತಿವೆ ಎಂದು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಇನ್ನು ಸಿಂಹಗಳು ಘರ್ಜಿಸಿದಂತೆ ಕಾಣುತ್ತದೆ, ಒರಿಜಿನಲ್ ಆಗಿ ಸಿಂಹಗಳು ಶಾಂತಸ್ವರೂಪಿಯಾಗಿದ್ದವು ಎಂದು ಹೇಳುತ್ತಿದ್ದಾರೆ. ಮೋದಿಯವರ ಲೋಕಸಭಾ ಕ್ಷೇತ್ರದಿಂದ 20 ಕಿ.ಮೀ ದೂರದಲ್ಲಿರುವ ಸಾರನಾಥದಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಹೋಗಿ ಯಾರಾದರೂ ನೋಡಿದರೆ ಅಲ್ಲಿ ಅಶೋಕ ಚಕ್ರವರ್ತಿಯೇ ಕೆತ್ತಿಸಿದ ನಾಲ್ಕು ಸಿಂಹಗಳು ಅಶೋಕಚಕ್ರದ ಮೇಲೆ ನಿಂತಿದೆ. ಎಲ್ಲಾ ಸಿಂಹಗಳ ಬಾಯಿ ತೆರೆದಿದೆ. ಎಲ್ಲವೂ ಯುವ ಸಿಂಹಗಳಂತೆ ಕಾಣುತ್ತಿವೆ ಹೊರತು ಹಲ್ಲು ಹೋದ ಮುದಿ ಸಿಂಹಗಳಂತೆ ಕಾಣುತ್ತಿಲ್ಲ. ಯಾಕೆಂದರೆ ಅಶೋಕ ಚಕ್ರವರ್ತಿಯ ಕಲ್ಪನೆಯೇ ಹಾಗೆ ಇದ್ದಿರಬಹುದು. ಕಾಲಾಂತರದಲ್ಲಿ ಬೇರೆ ಬೇರೆ ಶಿಲ್ಪಿಗಳು ಬೇರೆ ಬೇರೆ ಕಡೆ ಸಿಂಹಗಳನ್ನು ಕೆತ್ತುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿದ್ದಾರೆ. ಅದನ್ನು ನೋಡಿದವರಿಗೆ ಅದೇ ಅಶೋಕ ಚಕ್ರವರ್ತಿ ಕಲ್ಪಿಸಿದ ಸಿಂಹಗಳು ಎಂದು ಅನಿಸಿರಬಹುದು. ಹಾಗಂತ ಅದೇ ನಿಜವಾಗಿರಬೇಕಿಲ್ಲ. ಈಗ ಹೊಸ ಸಂಸತ್ತು ನಿರ್ಮಾಣವಾಗುವಾಗ ಶಿಲ್ಪಿಗಳು ಸಾಕಷ್ಟು ಅಧ್ಯಯನ ನಡೆಸಿಯೇ ಸಿಂಹಗಳನ್ನು ಕೆತ್ತಿರುತ್ತಾರೆ. ಯಾಕೆಂದರೆ ಅವರು ಕೆತ್ತುತ್ತಿರುವುದು ಯಾವುದೋ ಗ್ರಾಮ ಪಂಚಾಯತ್ ಅಥವಾ ಯಾವುದೋ ಗ್ರಾಮದ ಸರಕಾರಿ ಶಾಲೆಯ ಧ್ವಜಸ್ತಂಭದ ಚಿನ್ನೆ ಅಲ್ಲ ಎನ್ನುವುದು ಅವರಿಗೆ ಗೊತ್ತಿದೆ. ವಿಶ್ವವೇ ತಲೆ ಎತ್ತಿ ನೋಡುವಂತಹ ಸಂಸತ್ತಿನ ನಿರ್ಮಾಣವಾಗುವಾಗ ಅಲ್ಲಿ ಎತ್ತರ ಜಾಗದಲ್ಲಿ ಸ್ಥಾಪಿತವಾಗುವ ಸ್ತಂಭ ಹೇಗಿರಬೇಕು ಎಂದು ಅವರು ವರ್ಷಗಳ ತನಕ ಸಂಶೋಧನೆ ಮಾಡಿಯೇ ಇಂಚಿಂಚು ಎಚ್ಚರಿಕೆಯಿಂದ ನಿರ್ಮಿಸಿರುತ್ತಾರೆ. ಯಾಕೆಂದರೆ ನಾಳೆ ವಿರೋಧ ಬಂತು ಎಂದ ಕೂಡಲೇ ಇಳಿಸಿ ಬೇರೆ ಮಾಡೋಣ ಎನ್ನಲು ಅದು ನಗರದ ಪುರಭವನದ ಧ್ವಜಸ್ತಂಭ ಅಲ್ಲ. ಆದ್ದರಿಂದ ಅವರು ಬಹಳ ಜಾಗರೂಕತೆಯಿಂದ ಮಾಡಿರುತ್ತಾರೆ. ಆದರೆ ಕಾಂಗ್ರೆಸ್ ಅದರಲ್ಲಿ ಸಿಂಹಗಳು ಆಕ್ರೋಶಭರಿತವಾಗಿವೆ ಎಂದು ಇಡೀ ರಾಷ್ಟ್ರದಲ್ಲಿ ರಾಡಿ ಎಬ್ಬಿಸುತ್ತಿವೆ. ಈಗ ಒಂದು ವೇಳೆ ಸಿಂಹದ ಹಲ್ಲುಗಳು ಕಂಡು ಬಂದರೂ ಅದರಲ್ಲಿ ದೇಶಕ್ಕೆ ಆಗುವಂತಹ ತೊಂದರೆ ಏನಿದೆ. ನಮ್ಮ ಶತ್ರು ರಾಷ್ಟ್ರಗಳು ಎಲ್ಲಿಯಾದರೂ ಈ ಬಗ್ಗೆ ಗಮನಿಸಿದರೆ ಅವರಿಗೆ ಸೂಕ್ತ ಸಂದೇಶ ಹೋಗುತ್ತದೆ. ಇನ್ನು ಪಾಕಿಸ್ತಾನದಂತಹ ರಾಷ್ಟ್ರಗಳು ಈ ಸಿಂಹಗಳನ್ನು ನೋಡಿ ಹೆದರಿ ಕಿಟಾರನೆ ಕಿರುಚಿ ನಮಗೆ ಹೆದರಿಸಲು ಮೋದಿ ಹೀಗೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಗೆ ದೂರು ನೀಡಬಹುದು. ಅದು ಬಿಟ್ಟು ಕಾಂಗ್ರೆಸ್ಸಿನಂತಹ ವಿಪಕ್ಷಗಳು ಹೆದರುವಂತಹ ಅಗತ್ಯವಾದರೂ ಏನು?
ಕಾಂಗ್ರೆಸ್ ಸೋಲುತ್ತಿರುವುದು ಇಲ್ಲಿಯೇ. ಅದಕ್ಕೆ ಈಗ ಯಾವ ವಿಷಯವನ್ನು ಜನರ ಮುಂದೆ ಇಡಬೇಕು ಎನ್ನುವುದರ ಬಗ್ಗೆ ಗೊಂದಲ ಇದೆ. ಇಂತಹ ವಿಷಯವನ್ನು ದೊಡ್ಡದು ಮಾಡುವ ಮೂಲಕ ತಾನು ಭಾರತೀಯ ಜನತಾ ಪಾರ್ಟಿಗೆ ಇನ್ನಷ್ಟು ಮೈಲೇಜ್ ದೊರಕಿಸಿಕೊಡಲಿದ್ದೇನೆ ಎನ್ನುವ ಸ್ವಲ್ಪ ಜ್ಞಾನ ಕೂಡ ಅವರಿಗೆ ಇಲ್ಲ. ಇತ್ತ ದೇಶದಲ್ಲಿ ವಿಪಕ್ಷಗಳು ಮಾಡಬೇಕಾದ ಅನೇಕ ಕೆಲಸಗಳಿವೆ. ನೆರೆ ಇದೆ, ಪ್ರಕೃತಿ ವಿಕೋಪದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕರ್ನಾಟಕದಲ್ಲಿ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ಕನಸು ಕಾಣುತ್ತಿರುವ ಸಿದ್ಧರಾಮಯ್ಯ ಹಾಗೂ ಅವರ ತಂಡ ಸಿದ್ಧರಾಮೋತ್ಸವ ಮಾಡುವುದರಲ್ಲಿ ಬಿಝಿಯಾಗಿದೆ. ಇವರಿಗೆ ಅಧಿಕಾರ ಬಂದ ನಂತರ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಟೆನ್ಷನ್ ಕಾಣುತ್ತಿದೆ. ಇನ್ನು ವಿಪಕ್ಷಗಳನ್ನು ಕರೆಯದೇ ಮೋದಿ ಅದ್ಯಾವುದೋ ಪೂಜೆ ಮಾಡುತ್ತಿದ್ದಾರೆ ಎಂದು ಓವೈಸಿಯಂತವರು ಕಿರಿಕ್ ಮಾಡುತ್ತಿದ್ದಾರೆ. ಹಿಂದೂ ದೇವರನ್ನು ಒಪ್ಪದವರು ಪೂಜೆಯ ಬಗ್ಗೆ ಹೇಳುತ್ತಿರುವುದೇ ಆಶ್ಚರ್ಯ.

0
Shares
  • Share On Facebook
  • Tweet It




Trending Now
ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
Hanumantha Kamath August 26, 2025
ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
Hanumantha Kamath August 26, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
    • ಬೀದಿನಾಯಿಗಳ ದಾಳಿ! ವಿದ್ಯಾರ್ಥಿನಿಯ ಮುಖಕ್ಕೆ 17 ಹೊಲಿಗೆ
    • 'ಕುಡ್ಲದ ಪಿಲಿ ಪರ್ಬ-ಸೀಸನ್ 4' ಆಮಂತ್ರಣ ಪತ್ರಿಕೆ ಬಿಡುಗಡೆ
    • ರಸ್ತೆಗೆ ಅಡ್ಡಬಂದ ನಾಯಿ- ತಪ್ಪಿಸಲು ಹೋಗಿ ಕಾರು ಪಲ್ಟಿ -ಖ್ಯಾತ ಡಿಜೆ ಮಾರ್ಮಿನ್ ಮೆಂಡೋನ್ಸಾ ನಿಧನ
    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
  • Popular Posts

    • 1
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • 2
      ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • 3
      ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • 4
      ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • 5
      ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!

  • Privacy Policy
  • Contact
© Tulunadu Infomedia.

Press enter/return to begin your search