ಉಗುರು ಸಿಕ್ಕಿದರೆ ದೇಹ ನುಂಗುವವರಿಗೆ ಈದ್ಗಾ ಮೈದಾನ ಉದಾಹರಣೆ!
ಬೆರಳು ನೀಡಿದರೆ ಹಸ್ತ ನುಂಗಿದರು ಎನ್ನುವ ಮಾತಿದೆ. ಕೆಲವರಿಗೆ ಉಗುರು ನೀಡಿದರೂ ಸಾಕಾಗುತ್ತದೆ. ಅವರು ಇಡೀ ದೇಹವನ್ನು ನುಂಗಲು ತಯಾರಾಗುತ್ತಾರೆ. ಅಂತವರು ಒಂದು ಕಾಲದಲ್ಲಿ ಭಾರತವನ್ನು ತಮ್ಮ ಸುಪರ್ದಿಗೆ ಎಳೆದುಕೊಳ್ಳಲು ಸತತ ಪ್ರಯತ್ನಿಸಿ ವಿಫಲರಾಗಿದ್ದರು. ಅವರಿಗೆ ಯಾವ ಪ್ರದೇಶದಲ್ಲಿ ಒಂದು ಮನೆ ಸಿಕ್ಕಿದರೂ ಸಾಕು, ನಂತರ ಅದೀಡಿ ಊರು ತಮ್ಮದು ಎಂದು ಸಾಧಿಸಲು ಹೊರಡುತ್ತಾರೆ. ಅವರು ಈಗ ಚಾಮರಾಜಪೇಟೆಯ ಮೈದಾನದ ಮೇಲೆ ತಮ್ಮ ಕಣ್ಣು ಹಾಕಿದ್ದಾರೆ. ಅವರಿಗೆ ಸರಿಯಾಗಿ ಅಲ್ಲಿ ದೊಣ್ಣೆ ನಾಯಕ ಜಮೀರ್ ಅಹ್ಮದ್ ಬೆಂಬಲಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಭಾರತೀಯ ಜನತಾ ಪಾರ್ಟಿ ಸರಕಾರ ರಾಜ್ಯದಲ್ಲಿ ಇದ್ದಾಗಲೇ ಜಮೀರ್ ಅಂತವರು ಆ ಮೈದಾನದಲ್ಲಿ ಹಿಂದೂಗಳಿಗೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳುತ್ತಾ ಮೊಗಲರ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುವುದು ಇದೆಯಲ್ಲ, ಅವರನ್ನು ನೋಡಿದರೆ ಥೇಟ್ ಮೊಹಮ್ಮದ್ ಘಜ್ನಿಯ ಅಪರಾವತಾರವೇನೋ ಎಂದೆನಿಸುತ್ತದೆ. ಗಣೇಶೋತ್ಸವ ಮಾಡಬಾರದು ಎಂದು ಹೇಳಲು ಅದು ಜಮೀರ್ ತಂದೆ, ಅಜ್ಜನ ಆಸ್ತಿ ಅಲ್ಲ ಎಂದು ಸಿಟಿ ರವಿ ಹೇಳಿರುವುದು ಸಮಂಜಸವಾಗಿದೆ. ಯಾಕೆಂದರೆ ಅದು ಯಾವ ಆಂಗಲ್ ನಲ್ಲಿ ನೋಡಿದರೂ ಜಮೀರ್ ಪಿತ್ರಾರ್ಜಿತ ಆಸ್ತಿ ಅಲ್ಲವೇ ಅಲ್ಲ. ಒಂದು ವೇಳೆ ಅದು ಜಮೀರ್ ತಂದೆಯ ಸ್ವತ್ತಾಗಿದ್ದರೆ ಅಲ್ಲಿ ಆ ಮನುಷ್ಯ ತನ್ನ ವಂಶಜರಿಗೆ ಮಾತ್ರ ನಮಾಜ್ ಸಲ್ಲಿಸಲು ಅನುಮತಿ ಕೊಡುತ್ತೇನೆ ಎಂದು ಹೇಳಬಹುದಿತ್ತು. ಆದರೆ ಕಂದಾಯ ಇಲಾಖೆಯ ಸ್ವತ್ತಾಗಿರುವಾಗ ಅಲ್ಲಿ ಏನು, ಯಾವಾಗ, ಹೇಗೆ ಮಾಡಬೇಕು ಎನ್ನುವುದನ್ನು ರಾಜ್ಯ ಸರಕಾರ ತೀರ್ಮಾನಿಸುತ್ತದೆ. ಸ್ವಾತಂತ್ರ್ಯ ದಿನ ಅಂದರೆ ಅಗಸ್ಟ್ 15 ರಂದು ಅದೇ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುತ್ತೇವೆ ಎಂದು ಸಚಿವ ಅಶೋಕ್ ಘೋಷಿಸಿದ್ದಾರೆ. ಇದು ಇಲ್ಲಿಯವರೆಗೆ ನಡೆದ ವಿದ್ಯಮಾನ.
ಈಗ ಒಂದಿಷ್ಟು ಇತಿಹಾಸಕ್ಕೆ ಹೋಗೋಣ. ಮೈಸೂರು ಮನೆತನದ ರಾಜರೊಬ್ಬರು ತಮ್ಮ ಅಜ್ಜನ ಹೆಸರಿನಲ್ಲಿ ಚಾಮರಾಜ ನಗರವನ್ನು ನಿರ್ಮಿಸಿದ್ದರು. ಅದು ಕ್ರಮೇಣ ಚಾಮರಾಜಪೇಟೆ ಎಂದು ಹೆಸರಾಯಿತು. ಮೈಸೂರು ಒಡೆಯರು ಎಂದ ಮೇಲೆ ಕೇಳಬೇಕಾ? ಅವರು ಯಾವಾಗಲೂ ಕಲೆ, ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಅದಕ್ಕೆ ಚಾಮರಾಜ ಪೇಟೆ ಕೂಡ ಹೊರತಾಗಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಅರಸರು ನಗರದ ನಟ್ಟನಡುವೆ ಒಂದು ಮೈದಾನವನ್ನು ನಿರ್ಮಿಸಿ ಅದರಲ್ಲಿ ಕಲಾವಿದರಿಂದ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದರು. ಆ ಕಾಲದಲ್ಲಿ ಸರ್ವಧರ್ಮ ಸಹಿಷ್ಣುಗಳಾಗಿದ್ದ ಒಡೆಯರು ಮುಸ್ಲಿಂ ಸಮುದಾಯದ ಕೋರಿಕೆಯ ಮೇರೆಗೆ ಅದೇ ಮೈದಾನದಲ್ಲಿ ವರ್ಷಕ್ಕೆ ಎರಡು ಸಲ ಮುಸಲ್ಮಾನರಿಗೆ ತಮ್ಮ ಹಬ್ಬದ ದಿನ ಸಾಮೂಹಿಕ ನಮಾಜ್ ಮಾಡಲು ಅವಕಾಶವನ್ನು ಬಹಳ ಉದಾರ ಮನಸ್ಸಿನಿಂದ ನೀಡಿದರು. ಅಷ್ಟು ಮುಸ್ಲಿಮರಿಗೆ ಸಾಕಾಗಿತ್ತು. ಅವರಿಗೆ ಬೆರಳು ಸಿಕ್ಕಿತ್ತು. ವರ್ಷಕ್ಕೆ ಕೇವಲ ಎರಡು ಸಲ ನಮಾಜ್ ಮಾಡಲು ಒಂದು ಗೋಡೆ ಕಟ್ಟಿಸಿಕೊಂಡರು. ಅದಕ್ಕೆ ಈದ್ಗಾ ಮೈದಾನ ಎಂದು ಕರೆಯಲು ಆರಂಭಿಸಿದರು. ಅದು ಆ ಸಮುದಾಯದ ಒಳಗೆ ಕೇವಲ ಗುರುತಿಸುವಿಕೆಯೆಂದು ಎಂದು ಇದ್ದದ್ದು ಕಾಲಕ್ರಮೇಣ ಎಲ್ಲರ ಬಾಯಿ ಮಾತಿನಂತೆ ಈದ್ಗಾ ಮೈದಾನ ಎಂದೇ ಕರೆಯಲ್ಪಟ್ಟಿತ್ತು. ಈಗ ಆ ಮೈದಾನವನ್ನೇ ತಮ್ಮದು ಎಂದು ಕರೆಸಿಕೊಳ್ಳುವ ಮಟ್ಟಿಗೆ ಆ ಸಮುದಾಯ ತನ್ನ ಹಕ್ಕು ಸ್ಥಾಪಿಸುತ್ತಿದೆ. ಒಂದು ಕಾಲದಲ್ಲಿ ಭಿಕ್ಷೆಯಂತೆ ಇದ್ದದ್ದನ್ನು ತಮ್ಮದೇ ಎಂದು ಕರೆಸಿಕೊಳ್ಳುವುದು ಮಾತ್ರವಲ್ಲ ಬೇರೆಯವರಿಗೆ ಅವರ ಉತ್ಸವ ಮಾಡಲು ನಿರಾಕರಿಸುವುದು ಎಂದರೆ ಆ ಮೈದಾನ ಭಾರತದ ಕರ್ನಾಟಕದಲ್ಲಿ ಇದೆಯೋ ಅಥವಾ ಪಾಕಿಸ್ತಾನದಲ್ಲಿ ಇದೆಯೋ ಎಂದು ಅಂದುಕೊಳ್ಳುವ ಮಟ್ಟಿಗೆ ಕುಖ್ಯಾತಿ ಪಡೆದುಕೊಂಡಿದೆ. ಆ ಮೈದಾನದ ಖಾತಾವನ್ನು ವಕ್ಫ್ ಬೋರ್ಡಿನ ಹೆಸರಿನಲ್ಲಿ ಹಸ್ತಾಂತರಿಸಬೇಕು ಎಂದು ಕೆಲವರು ಮುಸ್ಲಿಂ ಮುಖಂಡರು ಸುಪ್ರೀಂಕೋರ್ಟಿನ ತನಕವೂ ಹೋಗಿ ಬಂದಿದ್ದರು. ಆದರೆ ಸುಪ್ರೀಂಕೋರ್ಟ್ ಅದನ್ನು ನಿರಾಕರಿಸಿ ವರ್ಷಕ್ಕೆ ಎರಡು ಸಲ ಮಾತ್ರ ನಮಾಜ್ ಮಾಡಲು ಅವಕಾಶ ನೀಡಲಾಗಿದೆ ಬಿಟ್ಟರೆ ನಿಮಗೆ ಹಕ್ಕುಸ್ಥಾಪಿಸಲು ಅನುಮತಿ ಇಲ್ಲ ಎಂದು ಆದೇಶಿಸಿದೆ.
ಈದ್ಗಾ ಮೈದಾನ ತಮ್ಮ ಸ್ವತ್ತು ಎಂದು ಹೇಳಿಕೊಳ್ಳುತ್ತಿರುವ ಸೆಂಟ್ರಲ್ ಮುಸ್ಲಿಂ ಅಸೋಸಿಯೇಶನ್ ಆಫ್ ಕರ್ನಾಟಕ (ಸಿಎಂಎ) / ವಕ್ಫ್ ಬೋರ್ಡ್ ಮತ್ತು ಚಾಮರಾಜಪೇಟೆಯ ಪೊಲೀಸರ ಅನಗತ್ಯ ಮಧ್ಯ ಪ್ರವೇಶವೇ ವಿವಾದದ ಮೂಲ ಕಾರಣ. 2006 ರಲ್ಲಿ ಈದ್ಗಾ ಮೈದಾನದ ಗೋಡೆ ಅನಗತ್ಯ ಬಿರುಕು ಬಿಟ್ಟಿತ್ತು. ಆ ಬಗ್ಗೆ ಗಮನಹರಿಸಬೇಕಾಗಿದ್ದದ್ದು ಈದ್ಗಾ ತನ್ನ ಸ್ವತ್ತು ಎಂದು ಹೇಳಿಕೊಳ್ಳುವ ಸಿಎಂಎನವರು. ಆದರೆ ಅವರು ಗೋಡೆ ರಿಪೇರಿ ಮಾಡಿಕೊಂಡಿ ಎಂದು ಮನವಿ ಮಾಡಿಕೊಂಡಿದ್ದು ಆಗ ಚಾಮರಾಜಪೇಟೆ ಡಿಸಿಪಿಯಾಗಿದ್ದ ಅಲೋಕ್ ಕುಮಾರ್ ಅವರಿಗೆ. ಪೊಲೀಸರು ಇರುವುದು ಕಾನೂನು-ಸುವ್ಯವಸ್ಥೆ ನೋಡಿಕೊಳ್ಳುವುದಕ್ಕೋ ಅಥವಾ ಗೋಡೆ ಕಾಮಗಾರಿ ನೋಡಿಕೊಳ್ಳುವುದಕ್ಕೋ ಎಂದು ಜನರೇ ಪ್ರಶ್ನಿಸುವಂತಾಯಿತು. ಯಾಕೆಂದರೆ ಪೊಲೀಸರು ನಿಂತು ಗೋಡೆ ರಿಪೇರಿ ಮಾಡಿಸಿಕೊಡದಿದ್ದರೆ ಅಲ್ಲಿ ಶಾಂತಿ ಭಂಗವಾಗುವ ಸಾಧ್ಯತೆ ಇತ್ತು. ದೇಶದ ಎಷ್ಟೋ ಕಡೆ ನಮಾಜಿನ ಗೋಡೆ ಬಿರುಕು ಬಿಟ್ಟಿದ್ದರೆ ಪೊಲೀಸರು ನಿಂತು ಸರಿ ಮಾಡಿಕೊಡಬೇಕಾಗುತ್ತದೆಯಾ? ಹಾಗಾದರೆ ಇಲ್ಲಿ ಯಾಕೆ? ಯಾಕೆಂದರೆ ಇದು ಅಕ್ರಮವಾಗಿ ಒಳಗೆ ಹಾಕಲು ನೋಡಿಕೊಂಡಿರುವ ವ್ಯವಸ್ಥೆ ಆಗಿತ್ತು. ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ಮುಸ್ಲಿಂ ಕಮಿಟಿಯವರು ಪೊಲೀಸರ ನೆರವು ಕೇಳಿದ್ದರು. ಚಾಮರಾಜಪೇಟೆಯನ್ನು ಎಲ್ಲರೂ ಬಳಸಲು ಅನುಮತಿ ನೀಡಲು ಕೋರಿ ಈಗಾಗಲೇ ಸಾಕಷ್ಟು ಹೋರಾಟಗಳು ಆಗಿದೆ. ಚಾಮರಾಜಪೇಟೆ ಬಂದ್ ಆಗಿದೆ. ಪ್ರತಿಭಟನೆಗಳು, ಪರಸ್ಪರ ಆರೋಪ, ಪ್ರತ್ಯಾರೋಪಗಳು, ಶಾಂತಿಸಭೆಗಳು ಆಗಿವೆ. ಆದರೆ ಯಾವುದೇ ನಿರ್ಧಾರಕ್ಕೆ ಇನ್ನು ತಾಂತ್ರಿಕವಾಗಿ ಬರಲು ಯಾರಿಗೂ ಆಗಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ಏನಾದರೂ ಮಾಡದಿದ್ದರೆ ಮುಂದೆ ಅದು ಕಷ್ಟಸಾಧ್ಯ. ಆಗುತ್ತಾ, ಈದ್ಗಾ ಮೈದಾನ ಹೋಗಿ ಚಾಮರಾಜ ಮೈದಾನ ಎಂದು ಮೊದಲು ಆಗಲಿ. ಅಲ್ಲಿಗೆ ಅರ್ಧ ಸರಿಯಾಗುತ್ತೆ. ಉಳಿದದ್ದು ಸಾಮ್ರಾಟ್ ಅಶೋಕ್ ಮಾಡುತ್ತಾರಾ, ನೋಡಬೇಕು!
Leave A Reply