• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗಾಜಿನ ಕೋಣೆಯಲ್ಲಿ ಕುಳಿತು ಕಲ್ಲು ಹೊಡೆದ ನಲಪಾಡ್!!

Hanumantha Kamath Posted On September 15, 2022


  • Share On Facebook
  • Tweet It

ನಲಪಾಡಿಗೆ ಯೂತ್ ಕಾಂಗ್ರೆಸ್ಸಿನ ರಾಜ್ಯಾಧ್ಯಕ್ಷನ ಪವರ್ ತೋರಿಸಬೇಕೆಂಬ ಹಪಾಹಪಿ ಇದೆ. ಆದಷ್ಟು ಬೇಗ ತನ್ನ ತಂದೆಯ ಉತ್ತರಾಧಿಕಾರಿಯಾಗಬೇಕು ಎಂಬ ಹಂಬಲವಿದೆ. ತನ್ನ ಮೇಲಿನ ಕಳಂಕ ತೊಡೆದು ಹೋಗಿ ಸ್ವಚ್ಚ ರಾಜಕಾರಣಿಯಾಗಬೇಕೆಂಬ ಗುರಿ ಇದೆ. ಆದರೆ ಸಮಸ್ಯೆ ಇರುವುದು ತಾನು ಒಬ್ಬನೇ ಬುದ್ಧಿವಂತ ಎಂದು ಅಂದುಕೊಂಡಿರುವುದು ಮತ್ತು ತನಗೊಬ್ಬನಿಗೆ ಮಾತ್ರ ನಾಯಕ ಎನ್ನುವ ಹಣೆಪಟ್ಟಿ ಸಿಗಬೇಕೆಂಬ ಆಸೆ ಇದೆ. ಗಾಜಿನ ಕೋಣೆಯಲ್ಲಿ ಕುಳಿತುಕೊಂಡವರು ಬೇರೆಯವರ ಮನೆಗೆ ಕಲ್ಲು ಹೊಡೆಯಬಾರದು ಎಂಬುವುದು ಗಾದೆ ಮಾತು. ಆದರೆ ನಲಪಾಡಿಗೆ ಏನು ಅಂದುಕೊಂಡಿದ್ದಾರೆ ಎಂದರೆ ತನ್ನ ತಂದೆ ಬೆಂಗಳೂರಿನ ಶಾಂತಿನಗರದಿಂದ ಮಂಗಳೂರಿನ ಬಾವುಟಗುಡ್ಡೆಯ ತನಕ ಮಾಡಿರುವ ಆಸ್ತಿ ಶ್ರಮದ ದುಡಿಮೆ ಎಂದು ಭಾವಿಸಿದಂತಿದೆ. ಆದ್ದರಿಂದ ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆ ಆಗಿ ಅನೇಕ ಕಡೆ ಸಮಸ್ಯೆಗಳು ಉದ್ಭವವಾದಾಗ ನಲಪಾಡು ಏನೇನೋ ನಾಟಕ ಮಾಡಿ ಪಕ್ಷದ ನಾಯಕರ ಗಮನ ಸೆಳೆಯಲು ಹೊರಟರು. ರಬ್ಬರ್ ಟ್ಯೂಬಿನಿಂದ ಹಿಡಿದು ಬೇರೆ ಬೇರೆ ಸಾಧನಗಳ ಮೂಲಕ ನೀರಿನಲ್ಲಿ ಆಟವಾಡಿ ಸರಕಾರವನ್ನು ಟೀಕಿಸಲು ನಿಂತರು. ಬೆಂಗಳೂರಿನಲ್ಲಿ ಎಲ್ಲಿ ನೀರು ನಿಂತಿದೆ ಎಂದು ಗೊತ್ತಾಯಿತೋ ಅಲ್ಲಿ ಹೋಗಿ ಬೊಬ್ಬೆ ಹೊಡೆದು ಜನರ ಗಮನ ಸೆಳೆಯಲು ಶುರು ಮಾಡಿದರು. ಯಾವಾಗ ರಾಜಕಾಲುವೆಗಳ ಒತ್ತುವರಿ ಮತ್ತು ಕೆರೆಗಳ ಅತಿಕ್ರಮಣ ಮಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ ಎಂದು ವರದಿ ಬಂತೋ ತೆರವು ಮಾಡಿ ಎಂದು ಹೇಳುತ್ತಾ ತಾನು ಮಹಾ ಸೋಬಗ ಎನ್ನುವ ಪೋಸು ಕೊಡಲು ಶುರು ಮಾಡಿದರು. ಸರಕಾರ 640 ಅಕ್ರಮ ಕಟ್ಟಡಗಳ ಪಟ್ಟಿ ರೆಡಿ ಮಾಡಿ ತೆರವಿಗೆ ಹೊರಡುವ ತನಕ ನಲಪಾಡಿಗೆ ತನ್ನ ತಂದೆಯ ಮಾಲೀಕತ್ವದ ಶಿಕ್ಷಣ ಸಂಸ್ಥೆಯೊಂದು ಕೂಡ ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಟ್ಟಲಾಗಿದೆ ಎಂದು ಗೊತ್ತೇ ಇರಲಿಲ್ಲ. ಇಲ್ಲಿಯವರೆಗೆ ದಶಕಗಳಿಂದ ಅತಿಕ್ರಮಣದ ಜಾಗದಲ್ಲಿ ಕಟ್ಟಡಗಳನ್ನು ಕಟ್ಟಿರುವ ನಲಪಾಡ್ ಕುಟುಂಬ ಈಗ ನೀರು ತಮ್ಮ ಬುಡಕ್ಕೆ ಬರುತ್ತಿದ್ದಂತೆ ಇದು ತಪ್ಪು ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದೆ.

ಈಗ ಬೆಂಗಳೂರಿನ ಬ್ರಾಂಡ್ ಉಳಿಯಬೇಕಾದರೆ ಮುಂದಿನ ಬಾರಿ ಇಂತಹ ಮಳೆ ಬಂದಾಗ ಈಗ ಆಗಿರುವ ಪರಿಸ್ಥಿತಿ ಮರುಕಳಿಸಬಾರದು. ಇದೇ ಪರಿಸ್ಥಿತಿ ಅಲ್ಲಿ ಮತ್ತೆ ಕಾಣಿಸಿಕೊಂಡರೆ ಮೊದಲೇ ರಸ್ತೆಗಳ ಹೊಂಡಗುಂಡಿಗಳ ಕಾರಣದಿಂದ ಬೆಂಗಳೂರಿನ ಇಮೇಜಿಗೆ ದಕ್ಕೆ ಬಂದಿದೆ. ಈಗ ನೆರೆಯು ಸೇರಿದರೆ ಬೆಂಗಳೂರಿನಲ್ಲಿ ನಮ್ಮ ಕಂಪೆನಿಗಳನ್ನು ತೆರೆಯುವುದು ಬೇಡಾ ಎಂದು ಐಟಿಬಿಟಿ ಕಂಪೆನಿಗಳು ಒಂದೊಂದಾಗಿ ನಿರ್ಧರಿಸುತ್ತವೆ. ಅವು ಒಂದೊಂದೇ ಪಕ್ಕದ ತೆಲಂಗಾಣದ ಕಡೆ ಮುಖ ಮಾಡಿದರೆ ರಾಜ್ಯದ ದೃಷ್ಟಿಯಿಂದ ಅದು ಒಳ್ಳೆಯ ಬೆಳವಣಿಗೆ ಅಲ್ಲ. ಈಗ 30 ಕ್ಕೂ ಹೆಚ್ಚು ಐಟಿಬಿಟಿ ಕಂಪೆನಿಗಳು ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿಯನ್ನು ಮಾಡಿ ಕುಳಿತುಕೊಂಡಿವೆ. ಅದನ್ನು ತೆರವು ಮಾಡಲು ಬುಲ್ಡೋಜರ್ ಕಳುಹಿಸಿದರೆ ಅವು ಬೆಂಗಳೂರಿನಿಂದ ಎದ್ದು ಹೋಗಲು ಪ್ಲಾನ್ ಮಾಡುತ್ತವೆ. ಅದೇ ಬಿಟ್ಟರೆ ನೀವು ಜನಸಾಮಾನ್ಯರಿಗೆ ಮಾತ್ರ ಅನ್ಯಾಯ ಮಾಡುತ್ತೀರಿ ಎನ್ನುವ ಧ್ವನಿ ಮೊಳಗುತ್ತದೆ. ಇದರೊಂದಿಗೆ 640 ಕಟ್ಟಡಗಳಲ್ಲಿ ಹೆಚ್ಚಿನವು ಪ್ರಭಾವಿಗಳ ಕಟ್ಟಡಗಳಾಗಿವೆ. ಅದಕ್ಕೆ ಕೈ ಹಾಕಿದರೆ ಇನ್ ಫ್ಲೂಯೆನ್ಸ್ ಮಾಡಿಸಲು ಅವರು ಸಚಿವರುಗಳಿಗೆ, ಶಾಸಕರುಗಳಿಗೆ, ಕಾರ್ಪೊರೇಟರ್ ಗಳಿಗೆ ಫೋನ್ ಮಾಡುತ್ತಾರೆ. ಪಾರ್ಟಿ ಫಂಡ್, ಚುನಾವಣಾ ಖರ್ಚು, ಆ ಕಾರ್ಯಕ್ರಮ, ಈ ಕಾರ್ಯಕ್ರಮ ಎಂದು ಹಣ ಕೊಡುವ ವ್ಯಕ್ತಿಗಳು, ಕಂಪೆನಿಗಳು ಈಗ ಸರಕಾರ ನಿಮ್ಮ ಒತ್ತುವರಿ ತೆಗೆಯುತ್ತೇವೆ ಎಂದರೆ ಸುಮ್ಮನಿರುತ್ತವಾ? ಉಲ್ಟಾ ಹೊಡೆಯುತ್ತವೆ. ಸರಕಾರ ಬಾಗದಿದ್ದರೆ ಸೀದಾ ನ್ಯಾಯಾಲಯದ ಮೆಟ್ಟಿಲು ಹತ್ತುತ್ತವೆ. ಅಲ್ಲಿ ಒಬ್ಬರಿಗೆ ಕೋರ್ಟ್ ಸ್ಟೇ ಕೊಟ್ಟರೆ ಉಳಿದವರು ಕೂಡ ಅದನ್ನೇ ವಿನಂತಿಸುತ್ತಾರೆ. ಹೀಗೆ ಸ್ಟೇ ಕೊಡುತ್ತಾ ಹೋದರೆ ನಂತರ ತೆರವು ಹೇಗೆ ಮಾಡುವುದು? ತೆರವು ಮಾಡದಿದ್ದರೆ ಬೆಂಗಳೂರಿನ ಗತಿ ಏನು? ಅದಕ್ಕಾಗಿ ನ್ಯಾಯಾಲಯಕ್ಕೆ ಕೇವಿಯಟ್ ಅರ್ಜಿ ಸಲ್ಲಿಸಲು ಸರಕಾರ ಮುಂದಾಗಿದೆ. ಕೇವಿಯಟ್ ಇದು ಕಾನೂನಾತ್ಮಕ ವಿಷಯವಾಗಿದ್ದು, ಇದರ ಅರ್ಥ ಏನೆಂದರೆ ಒಂದು ವಿಚಾರದಲ್ಲಿ ಮತ್ತೊಂದು ಪಾರ್ಟಿಯ ಅಹವಾಲು ಕೇಳಿ ತೀರ್ಪು ಅಥವಾ ಆದೇಶ ನೀಡಿ ಎನ್ನುವುದೇ ಆಗಿದೆ. ಉದಾಹರಣೆಗೆ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತದೆ ಮತ್ತು ನ್ಯಾಯಾಲಯ ಅದರ ವಾದಿಯ ಅಹವಾಲನ್ನು ಕೇಳಿ ತೀರ್ಪು ಕೊಡುತ್ತದೆ ಎನ್ನುವುದು ಆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿವಾದಿಗೋ ಅಥವಾ ಸಂಬಂಧಪಟ್ಟವರಿಗೋ ಗೊತ್ತಾದಾಗ ಅವರು ತಮ್ಮ ಅಹವಾಲನ್ನು ಕೂಡ ಕೇಳಿ ನಂತರ ತೀರ್ಪು ಕೊಡಬೇಕು ಎಂದು ಪ್ರಾರ್ಥಿಸುವುದೇ ಕೇವಿಯಟ್ ಎನ್ನುವ ಕಾನೂನಿನ ಅವಕಾಶ. ಒಂದು ವೇಳೆ ಬೆಂಗಳೂರಿನಲ್ಲಿ ಅತಿಕ್ರಮಣ ತೆರವಿಗೆ ಸರಕಾರ ಮುಂದಾದಾಗ ಯಾರಾದರೂ ಕೋರ್ಟಿಗೆ ಹೋಗಿ ಸ್ಟೇ ತಂದರೆ ಕಾರ್ಯಾಚರಣೆಗೆ ತಡೆ ತರುವುದನ್ನು ತಪ್ಪಿಸಲು ಸರಕಾರ ಕೇವಿಯಟ್ ಸಲ್ಲಿಸಬೇಕು. ಆಗ ನ್ಯಾಯಾಲಯ ಏಕಾಏಕಿ ಸ್ಟೇ ಕೊಡದೇ ಸರಕಾರದ ಕಡೆಯ ವಾದವನ್ನು ಕೂಡ ಆಲಿಸುತ್ತದೆ. ಆಗ ಸರಕಾರದ ವಾದದಲ್ಲಿ ಸತ್ಯಾಂಶ ಇದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಆದರೆ ಕೋರ್ಟ್ ಸ್ಟೇ ಕೊಡಲೇಬೇಕು ಎಂದೆನಿಲ್ಲ. ಹೀಗೆ ಮಾಡುವ ಮೂಲಕ ಸರಕಾರ ತನ್ನ ಇಚ್ಚಾಶಕ್ತಿಯನ್ನು ತೋರಿಸಬೇಕು. ಇಲ್ಲದಿದ್ದರೆ ಬುಲ್ಡೋಜರ್ ಉದ್ದೇಶವೇ ವ್ಯರ್ಥವಾಗುತ್ತೆ. ಬೆಂಗಳೂರು ಹೀಗೆ ಇರುತ್ತದೆ. ನಲಪಾಡಿನ ನಾಟಕ ಮುಂದುವರೆಯುತ್ತದೆ!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search