ಸಿ ವೋಟರ್ ಸಮೀಕ್ಷೆಯ 7ದಿನ ಮೊದಲೇ ಭವಿಷ್ಯ ನುಡಿದಿದ್ದ ಶಾ!

ನಿನ್ನೆ ಸಿವೋಟರ್ ಸಂಸ್ಥೆಯು ಈಗ ಕರ್ನಾಟಕದಲ್ಲಿ ಚುನಾವಣೆ ನಡೆದರೆ ಬಿಜೆಪಿ ಸುಮಾರು 75 ಸ್ಥಾನಗಳನ್ನು ಮಾತ್ರ ಗೆಲ್ಲುತ್ತದೆ ಎಂದು ಹೇಳಿತ್ತು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಲ್ಲಿ ಒಂದು ವಾರದ ಹಿಂದೆಯೇ ಅಮಿತ್ ಶಾ ಬಿಜೆಪಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಈ ಕ್ಷಣದಲ್ಲಿ ಚುನಾವಣೆ ನಡೆದರೆ 80 ಸೀಟು ಮಾತ್ರ ಗೆಲ್ಲಬಹುದು ಅಂತ ಹೇಳಿದ್ದರು.
ಸಮೀಕ್ಷೆ ಫಲಿತಾಂಶದಲ್ಲಿ ಪ್ರಮುಖವಾಗಿರಬಲ್ಲ ಅಂಶಗ-
1)ಆಂತರಿಕ ಜಗಳ:- ಕಳೆದ ವಿಧಾನ ಸಾಭಾ ಚುನಾವಣೆಯಲ್ಲಿ ಪಕ್ಷದ ಒಳಗಿನ ಭಿನ್ನಮತದಿಂದ ಬೇಸತ್ತು ಜನರು ಬಿಜೆಪಿಯ ವಿರುಧ್ಧ ಮತ ಹಾಕಿ ಕರ್ನಾಟಕದಲ್ಲಿ ಹೀನಾಯ ಸೋಲು ಕಂಡಿತ್ತು.ಈಗ ಮತ್ತದೇ ಚಾಳ್ತಿ ಮುಂದುವರೆಸಿ ಯಡಿಯೂರಪ್ಪ ಬಣ -ಈಶ್ವರಪ್ಪ ಬಣ,ಅತ್ರಪ್ತರ ಬಣ ಮುಂತಾದ ಚಟುವಟಿಕೆಗಳಿಂದ ಜನತೆಯಲ್ಲಿ ಅಸಮಾಧಾನ ಆಗಿರಬಹುದು.
2)ಪರಿಣಾಮಕಾರಿಯಾಗದ ಪ್ರತಿಭಟನೆಗಳು:- ಪ್ರತಿಭಟನೆಗಳನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯದೆ ಕೇವಲ ಹೆಸರಿಗಷ್ಟೇ ಮಾಡಿ ಯಾವ ವಿಚಾರದಿಂದ ಹೆಚ್ಚು ಪ್ರಚಾರ ಸಿಗುತ್ತದೆ ಅದರ ಬಗ್ಗೆ ಮಾತ್ರ ಪ್ರತಿಭಟಿಸುತ್ತಿದ್ದಾರೆ ಎಂಬ ಅಸಮಾಧಾನ ಜನತೆಯಲ್ಲಿ ಹುಟ್ಟಿರಬಹುದು.3-4 ದಿನ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿ ಬೇರೊಂದು ವಿಚಾರ ಸಿಕ್ಕಾಗ ಹಿಂದಿನ ವಿಚಾರ ಅರ್ಧದಲ್ಲಿಯೇ ಬಿಟ್ಟು ಬೇರೊಂದು ವಿಷಯದಲ್ಲಿ ತಾತ್ಕಾಲಿಕ ಪ್ರತಿಭಟನೆ ಮಾಡಿದರೆ ಜನರಿಗೆ ವಿಶ್ವಾಸ ಬರಲು ಅಸಾಧ್ಯ.
3) ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯ ಜನತೆಗೆ ಸಮರ್ಪಕವಾಗಿ ತಿಳಿಸಲು ವಿಫಲ:- ಸರಿಯಾಗಿ ನೋಡಿದರೆ ಸಿಧ್ಧರಾಮಯ್ಯ ಸರಕಾರದಲ್ಲಿ ಕೂಡ ಹಲವು ಹಗರಣಗಳು,ಭ್ರಷ್ಟಾಚಾರ,ಕಾನೂನು ಕುಸಿತ,ಅಧಿಕಾರ ದುರ್ಬಳಕೆ,ಓಲೈಕೆ ರಾಜಕಾರಣ ಮಂತಾದ ಹತ್ತು ಹಲವು ಪ್ರಕರಣಗಳು ನಡೆದಿವೆ ಆದರೆ ಬಿಜೆಪಿ ಸರಕಾರ ಇದ್ದಾಗ ಕಾಂಗ್ರೆಸ್ ನವರು ವೈಫಲ್ಯಗಳನ್ನು ಜನತೆಗೆ ಸಮರ್ಪಕವಾಗಿ ತಿಳಿಸಿದಂತೆ ಬಿಜೆಪಿ ಜನತೆಗೆ ಮನದಟ್ಟು ಮಾಡುವಲ್ಲಿ ವಿಫಲವಾಗಿರಬಹುದು.
4) ಭ್ರಷ್ಟಾಚಾರ ವಿಚಾರದಲ್ಲಿ ನೈತಿಕತೆ ಕೊರತೆ:- ಕಳೆದ ತಿಂಗಳು ನ ಡಿಕೆ ಶಿವಕುಮಾರ್ ಐ ಟಿ ದಾಳಿ ವಿಚಾರದಲ್ಲಿ ಕೆಲ ಬಿಜೆಪಿ ನಾಯಕರು ಮೌನ ವಹಿಸಿರುವುದು ಅಮಿತಾ ಶಾ ಗಮನಕ್ಕೆ ಕೂಡ ಬಂದಿತ್ತು.ಭ್ರಷ್ಟಾಚಾರ ವಿಚಾರದಲ್ಲಿ ಪ್ರತಿಭಟಿಸಿದಾಗ ಜನತೆಗೆ ಹಿಂದೆ ನಾವು ಮಾಡಿದ್ದು ಕೂಡ ನೆನಪಿಗೆ ಬರಬಹುದು ಅಥವಾ ಡಿಕೆಶಿ ನಮ್ಮ ಆಪ್ತರು ಅವರ ವಿರುದ್ಧ ಪ್ರತಿಭಟನೆ ಯಾಕೆ ಎಂಬ ಮನಸ್ಥಿತಿಯೋ ಎಂಬ ಸಂದೇಹ ಜನತೆಯಲ್ಲಿ ಮೂಡಿರಬಹುದು.
5) ನಾಯಕತ್ವ ವಿಚಾರ:- ಯಡಿಯೂರಪ್ಪನವರ ನಾಯಕತ್ವ ವಿಚಾರದಲ್ಲಿ ಒಳಗಿಂದ ಒಳಗೆ ಅಸಮಾಧಾನ ಇರುವುದು ಜನತೆಗೆ ತಿಳಿದಿರಬಹುದು.ಪಕ್ಷ ಮುಖ್ಯ ವ್ಯಕ್ತಿ ಅಲ್ಲ ಎಂದು ಅಮಿತಾ ಶಾ ಮೀಟಿಂಗ್ ನಲ್ಲಿ ಸಾರಿ ಸಾರಿ ಹೇಳಿದರು.ವ್ಯಕ್ತಿ ಆಧಾರಿತವಾಗಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಅಸಮಾಧಾನ ಹೊರಹಾಕಬೇಡಿ ಎಂದು ಕಾರ್ಯಕರ್ತರಲ್ಲಿ ವಿನಂತಿ ಮಾಡಿದರೂ ಸಾಮಾನ್ಯ ಜನತೆಗೆ ಕೂಡ ನಾತಕತ್ವ ವಿಚಾರದಲ್ಲಿ ಇರುವ ಗೊಂದಲದ ಬಗ್ಗೆ ಗಮನಕ್ಕೆ ಬಂದಿರಬಹುದು.
6) ಹಿಂದೆ ಮಾಡಿದ ತಪ್ಪು ಪುನರಾವರ್ತಿಯಾಗದು ಎಂಬ ವಿಶ್ವಾಸದ ಕೊರತೆ:- ಹಿಂದೆ ಬಿಜೆಪಿ ಸರಕಾರ ಬಹುಮತದೊಂದಿಗೆ ಕರ್ನಾಟಕದ ಚುಕ್ಕಾಣಿ ಹಿಡಿದಿತ್ತು.ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 40 ಸೀಟು ಗೆಲ್ಲಲು ಮಾತ್ರ ಶಕ್ತವಾಗಿತ್ತು.ಜನತೆಗೆ ಬಹುಶಃ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಅದೇ ತಪ್ಪುಗಳನ್ನು ಮಾಡಿದರೆ ಎಂಬ ಸಂದೇಹ ಇರಬಹುದು.
7) ಅತಿಯಾದ ಆತ್ಮವಿಶ್ವಾಸ:- ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 19 ಸೀಟುಗಳನ್ನು ಗೆದ್ದು ಅದ್ಭುತ ಫಲಿತಾಂಶ ನೀಡಿತ್ತು ಅದೇ ಮೋದಿ ಹೆಸರಿನಲ್ಲಿ ನಾವು ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ರಾಜ್ಯನಾಯಕರಲ್ಲಿ ಜನತೆ ಕಂಡಿರ ಬಹುದು.
8) ಸಿದ್ಧರಾಮಯ್ಯ ಜನಪ್ರಿಯ ಯೋಜನೆಗಳು :- ಒಂದು ಕಡೆ ಬಿಜೆಪಿ ಬಗ್ಗೆ ಅಸಮಾಧಾನ ಇರಬಹುದಾದರೆ ಮತ್ತೊಂದು ಕಡೆ ಸಿಧ್ಧರಾಮಯ್ಯನವರ ಕೆಲವು ಜನಪ್ರಿಯ ಯೋಜನೆಗಳು ತನ್ನ ಸರಾಕಾರದ ವೈಫಲ್ಯಗಳನ್ನು ಮರೆಮಾಚಲು ಯಶಸ್ವಿಯಾಗಿರಬಹುದು.
ಇಂತಹ ಕೆಲ ಪ್ರಮುಖ ಅಂಶಗಳನ್ನು ನಿರ್ಧರಿಸಿ ಜನತೆ ಅಭಿಪ್ರಾಯ ತಿಳಿಸಿರಬಹುದು.ಆದರೆ ಚುನಾವಣೆಗೆ ಇನ್ನೂ ಸುಮಾರು 7 ತಿಂಗಳುಗಳಿವೆ.ಚುನಾವಣೆ ಹತ್ತಿರ ಬಂದಾಗ ಹಲವಾರು ರಾಜಕೀಯ ಪ್ರಹಸನ ನಡೆಯಲಿಕ್ಕಿವೆ.ಮೋದಿ-ಶಾ ಮೋಡಿ ನಡೆಯಲೂ ಬಹುದು.ಮೋದಿ ಪ್ರಚಾರ ಈಗಿನ ಸಮೀಕ್ಷೆಯನ್ನು ಬುಡಮೇಲು ಮಾಡಲೂ ಬಹುದು.ಈಗಲೂ ಬಿಜೆಪಿಗೆ ಕಾಲಾವಕಾಶ ಇದೆ.ಈಗ ನಡೆದದ್ದು ಸಮೀಕ್ಷೆ ಚುನಾವಣೆ ಫಲಿತಾಂಶ ಅಲ್ಲ.ಯಾವ ರೀತಿ ಬಿಜೆಪಿ ರಾಜ್ಯ ನಾಯಕರು ಕರುನಾಡ ಜನತೆಯ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರೆ ಕಾದು ನೋಡಬೇಕಿದೆ.
Leave A Reply